ಅಕ್ಷಯ ತದಿಗೆಯನ್ನು ಆಚರಿಸುವ ಪದ್ಧತಿ

ಕಾಲದ ಪ್ರಾರಂಭದ ದಿನವು ಭಾರತೀಯರಿಗೆ ಪವಿತ್ರವಾಗಿದೆ; ಆದುದರಿಂದ ಇಂತಹ ತಿಥಿಗಳಂದು ಸ್ನಾನದಾನಾದಿ ಧರ್ಮಕಾರ್ಯಗಳನ್ನು ಹೇಳಲಾಗಿದೆ. ಈ ದಿನದ ವಿಧಿಯೆಂದರೆ ಪವಿತ್ರ ನೀರಿನಲ್ಲಿ ಸ್ನಾನ, ಶ್ರೀವಿಷ್ಣುವಿನ ಪೂಜೆ, ಜಪ, ಹೋಮ, ದಾನ ಮತ್ತು ಪಿತೃತರ್ಪಣ. ಈ ದಿನ ಅಪಿಂಡಕ ಶ್ರಾದ್ಧ ಮಾಡಬೇಕು, ಅದು ಸಾಧ್ಯವಿಲ್ಲದಿದ್ದರೆ ಕಡಿಮೆಪಕ್ಷ ಎಳ್ಳಿನ ತರ್ಪಣವನ್ನಾದರೂ ಕೊಡಬೇಕು.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

೧. ಉದಕಕುಂಭ ದಾನ

ಈ ದಿನ ದೇವರು ಮತ್ತು ಪಿತೃಗಳನ್ನು ಉದ್ದೇಶಿಸಿ ಬ್ರಾಹ್ಮಣರಿಗೆ ಉದಕಕುಂಭದ ದಾನ ಮಾಡಬೇಕು.

೨. ಮಹತ್ವ

ಉದಕಕುಂಭವನ್ನೇ ಸರ್ವಸಮಾವೇಶಕ ಸ್ತರದ ‘ನಿರ್ಗುಣ ಪಾತ್ರ’ ಎಂದು ಸಂಬೋಧಿಸಲಾಗುತ್ತದೆ.

೩. ಉದ್ದೇಶ

ಅ. ಉದಕಕುಂಭದ ದಾನ ಮಾಡುವುದು, ಅಂದರೆ ತನ್ನ ಎಲ್ಲ ರೀತಿಯ ದೇಹಸದೃಶ್ಯ, ಹಾಗೆಯೇ ಕರ್ಮಸದೃಶ್ಯ ವಾಸನೆಗಳ ಸ್ಥೂಲ ಹಾಗೂ ಸೂಕ್ಷ್ಮ ಲಹರಿಗಳು ಕುಂಭದಲ್ಲಿನ ಜಲವನ್ನು ಪವಿತ್ರವೆಂದು ತಿಳಿದು ಅದರಲ್ಲಿ ವಿಸರ್ಜಿಸುವುದು ಮತ್ತು ಈ ರೀತಿ ತನ್ನ ದೇಹ ಆಸಕ್ತಿರಹಿತ ಕರ್ಮದಿಂದ ಶುದ್ಧಗೊಳಿಸಿ ಬಳಿಕ ಉದಕ ಕುಂಭಯೋಗದಿಂದ ಈ ಸಕಲ ವಾಸನೆಗಳನ್ನು ಪಿತೃಗಳು ಮತ್ತು ದೇವರ ಚರಣಗಳಿಗೆ ಬ್ರಾಹ್ಮಣನೆಂದು ಗ್ರಹಿಸಿ ಅರ್ಪಣೆ ಮಾಡಬೇಕು.

ಆ. ಪಿತೃಗಳ ಚರಣಗಳಲ್ಲಿ ಉದಕಕುಂಭವನ್ನು ದಾನ ಮಾಡುವುದರಿಂದ ಪಿತರರು ಮಾನವಯೋನಿಗೆ ಸಂಬಂಧಪಟ್ಟಿದ್ದರಿಂದ ಅವರು ನಮ್ಮ ಸ್ಥೂಲ ವಾಸನೆಗಳನ್ನು ನಾಶಗೊಳಿಸುತ್ತಾರೆ.

ಇ. ದೇವರ ಕೃಪಾಶೀರ್ವಾದವು ನಮ್ಮ ಪ್ರಾರಬ್ಧ ಜನ್ಯ ಸೂಕ್ಷ್ಮ ಕರ್ಮದಲ್ಲಿನ ಪಾಪವನ್ನು ನಾಶಗೊಳಿಸುತ್ತಿರುವುದರಿಂದ ಸೂಕ್ಷ್ಮ ಕರ್ಮಜನ್ಯ ವಾಸನೆಗಳನ್ನು ದೇವರ ಚರಣಗಳಲ್ಲಿ ಈ ದಾನದ ಮೂಲಕ ಅರ್ಪಣೆ ಮಾಡಲಾಗುತ್ತದೆ.

೪. ಉದಕ ಕುಂಭದಾನದ ಮಂತ್ರ

ಬ್ರಾಹ್ಮಣನಿಗೆ ಉದಕ ಕುಂಭದ ದಾನ ಕೊಡುವಾಗ ಮುಂದಿನ ಮಂತ್ರ ಹೇಳಬೇಕು.

ಏಷ ಧರ್ಮಘಟೋ ದತ್ತೋ ಬ್ರಹ್ಮವಿಷ್ಣುಶಿವಾತ್ಮಕಃ |

ಅಸ್ಯ ಪ್ರದಾನಾತ್‌ ತೃಪ್ಯನ್ತು ಪಿತರೋಽಪಿ ಪಿತಾಮಹಾಃ |೧|

ಗನ್ಧೋದಕತಿಲೈರ್ಮಿಶ್ರಂ ಸಾನ್ನಂ ಕುಮ್ಭಂ ಫಲಾನ್ವಿತಮ್‌ |

ಪಿತೃಭ್ಯಃ ಸಮ್ಪ್ರದಾಸ್ಯಾಮಿ ಅಕ್ಷಯ್ಯಮುಪತಿಷ್ಠತು || – ಧರ್ಮಸಿನ್ಧು

ಅರ್ಥ : ಯಾವುದರಲ್ಲಿ ಬ್ರಹ್ಮ, ವಿಷ್ಣು ಮತ್ತು ಶಿವ ಇವರು ಸಮಾವೇಶಗೊಂಡಿರುವರೋ ಅಂತಹ ಈ ಧರ್ಮಘಟವನ್ನು ನಾನು ಬ್ರಾಹ್ಮಣನಿಗೆ ದಾನ ಮಾಡಿದ್ದೇನೆ. ಈ ದಾನದಿಂದಾಗಿ ನನ್ನ ಪಿತೃಗಳು ಮತ್ತು ದೇವತೆಗಳು ತೃಪ್ತರಾಗಲಿ. ಗಂಧ, ಉದಕ, ಎಳ್ಳು, ಯವ ಮತ್ತು ಫಲ ಇವುಗಳಿಂದ ಕೂಡಿದಂತಹ ಈ ಕುಂಭವನ್ನು ನಾನು ಪಿತೃಗಳಿಗೆ ಕೊಡುತ್ತಿದ್ದೇನೆ. ಈ ಕುಂಭವು ನನಗಾಗಿ ಸದಾ ಅಕ್ಷಯ (ಕ್ಷೀಣವಾಗದಂತಹ) ವಾಗಿರಲಿ.

೫. ಶಾಸ್ತ್ರ

ಅಕ್ಷಯ ತದಿಗೆಯ ದಿನದಂದು ಬ್ರಹ್ಮಾಂಡದಲ್ಲಿ ಅಖಂಡವಾದ, ಹಾಗೆಯೆ ಒಂದೇ ಸಮನಾದ ವೇಗವನ್ನು ತೋರಿಸುವ ಸತ್ತ್ವ-ರಜ ಲಹರಿಗಳ ಪ್ರಭಾವ ಅಧಿಕ ಪ್ರಮಾಣದಲ್ಲಿರುವು ದರಿಂದ ಈ ಲಹರಿಗಳ ಪ್ರವಾಹದ ಮೂಲಕ ಪಿತೃಗಳು ಮತ್ತು ದೇವತೆಗಳನ್ನು ಉದ್ದೇಶಿಸಿ ಬ್ರಾಹ್ಮಣನಿಗೆ ಮಾಡಿದ ದಾನವು ಪುಣ್ಯಪ್ರದ ಮತ್ತು ಹಿಂದಿನ ಜನ್ಮದ ಕೊಡುಕೊಳ್ಳುವ ಲೆಕ್ಕಕ್ಕನು ಸಾರ ಕರ್ಮ-ಅಕರ್ಮವನ್ನುಂಟು ಮಾಡುವಂತಹದ್ದಾಗಿದೆ. ಇದು ಯಾವತ್ತೂ ಕ್ಷಯಗೊಳ್ಳದ ಲಹರಿಗಳ ಪ್ರಭಾವದ ಸಹಾಯದಿಂದ ಮಾಡಿದ ದಾನವಾಗಿದ್ದರಿಂದ ಶ್ರೇಷ್ಠವಾಗಿರುತ್ತದೆ.’

೬. ಪೂರ್ವಜರು

೬ ಅ. ಮಹತ್ವ : ಅಕ್ಷಯ ತದಿಗೆಯಂದು ಪೂರ್ವಜರು ಪೃಥ್ವಿಯ ಸಮೀಪಕ್ಕೆ ಬರುವುದರಿಂದ ಮಾನವನಿಗೆ ಅಧಿಕ ತೊಂದರೆ ಯಾಗುವ ಸಾಧ್ಯತೆಯಿದೆ. ಮಾನವನು ತನಗಿರುವ ಪೂರ್ವಜರ ಋಣ ತೀರಿಸುವುದು ಅಪೇಕ್ಷಿತವಿರುತ್ತದೆ. ಇದಕ್ಕಾಗಿ ಅಕ್ಷಯ ತದಿಗೆಯಂದು ಪೂರ್ವಜರಿಗೆ ಗತಿ ದೊರಕಬೇಕೆಂದು ಎಳ್ಳುತರ್ಪಣೆ ಮಾಡಬೇಕು.

೬ ಆ. ಪದ್ಧತಿ : ಪೂರ್ವಜರಿಗೆ ಎಳ್ಳು ಅರ್ಪಣೆ ಮಾಡುವ ಮೊದಲು ಎಳ್ಳಿನಲ್ಲಿ ಶ್ರೀವಿಷ್ಣು ಮತ್ತು ಬ್ರಹ್ಮ ಇವರ ತತ್ತ್ವ ಬರಲು ದೇವರಿಗೆ ಪ್ರಾರ್ಥನೆ ಮಾಡಬೇಕು. ಅನಂತರ ಪೂರ್ವಜರು ಸೂಕ್ಷ್ಮದಲ್ಲಿ ಬಂದಿರುತ್ತಾರೆ ಮತ್ತು ನಾವು ಅವರ ಚರಣಗಳಲ್ಲಿ ಎಳ್ಳು ಮತ್ತು ಜಲ ಅರ್ಪಣೆ ಮಾಡುತ್ತಿದ್ದೇವೆ’, ಎಂಬ ಭಾವ ಇಡಬೇಕು. ಎರಡು ನಿಮಿಷಗಳ ನಂತರ ದೇವತೆಗಳ ತತ್ತ್ವದಿಂದ ಭರಿತವಾಗಿದ್ದ ಎಳ್ಳು ಮತ್ತು ಅಕ್ಷತೆಯನ್ನು ಪೂರ್ವಜರಿಗೆ ಅರ್ಪಣೆ ಮಾಡಬೇಕು. ಸಾತ್ತ್ವಿಕವಾಗಿರುವ ಎಳ್ಳು ಕೈಯಲ್ಲಿ ತೆಗೆದುಕೊಂಡು ಅದರ ಮೇಲೆ ತಟ್ಟೆಯಲ್ಲಿ ನಿಧಾನವಾಗಿ ನೀರು ಬಿಡಬೇಕು. ಆಗ ದತ್ತ ಅಥವಾ ಬ್ರಹ್ಮ ಅಥವಾ ವಿಷ್ಣು ಇವರಿಗೆ ಪೂರ್ವಜರಿಗೆ ಗತಿ ನೀಡಲು ಪ್ರಾರ್ಥನೆ ಮಾಡಬೇಕು.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.