ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ನಿರರ್ಥಕ ಬುದ್ಧಿವಾದಿಗಳು !

‘ಭಾರತದ ಹಿಂದೂಗಳಿಗಷ್ಟೇ ಅಲ್ಲ, ಜಗತ್ತಿನ ಮನುಕುಲಕ್ಕೆ ಹಿಂದೂ ಧರ್ಮವು ಆಧಾರವೆನಿಸುತ್ತದೆ. ಆದ್ದರಿಂದ ಇಡೀ ಜಗತ್ತಿನ ಜಿಜ್ಞಾಸುಗಳು ಅಧ್ಯಾತ್ಮವನ್ನು ಕಲಿಯಲು ಭಾರತಕ್ಕೆ ಬರುತ್ತಾರೆ. ಬುದ್ಧಿವಾದಿಗಳು, ಧರ್ಮವಿರೋಧಿಗಳು ಮತ್ತು ಕಮ್ಯೂನಿಸ್ಟರ ತತ್ತ್ವಜ್ಞಾನಗಳನ್ನು ಕಲಿಯಲು ಯಾರೂ ಭಾರತಕ್ಕೆ ಬರುವುದಿಲ್ಲ; ಆದರೆ ಇದು ಕೂಡ ಅವರಿಗೆ ತಿಳಿಯುವುದಿಲ್ಲ !’

ಸರಕಾರಿ ನೌಕರರು ಮತ್ತು ಅಧಿಕಾರಿಗಳು ಇದನ್ನು ಗಮನದಲ್ಲಿಡಬೇಕು !

‘ಕೆಲಸ ಮಾಡದಿರುವುದು, ಭ್ರಷ್ಟಾಚಾರ ಮಾಡುವುದು ಇತ್ಯಾದಿಗಳ ಅಭ್ಯಾಸವಾಗಿರುವ ಬಹುಪಾಲು ಪೊಲೀಸರು, ಸರಕಾರಿ ನೌಕರರು ಮತ್ತು ಅಧಿಕಾರಿಗಳು ಇವರನ್ನು ಒಂದೇ ಒಂದು ಖಾಸಗಿ ಸಂಸ್ಥೆಯೂ, ಒಂದು ದಿನಕ್ಕಾಗಿ ಕೂಡ ನೌಕರಿಯಲ್ಲಿಟ್ಟುಕೊಳ್ಳದು.

ಭಾರತದ ಸ್ಥಿತಿಯು ದಯನೀಯವಾಗಲು ಕಾರಣ !

‘ಬ್ರಾಹ್ಮಣರು-ಬ್ರಾಹ್ಮಣೇತರರು ಎಂಬ ವಿವಾದವನ್ನು ನಿರ್ಮಿಸಿದವರು ಹಿಂದೂಗಳಲ್ಲಿ ಭೇದಭಾವವನ್ನುಂಟು ಮಾಡಿದರು. ಇದರಿಂದಾಗಿ ಹಿಂದೂಗಳ ಮತ್ತು ಭಾರತದ ಸ್ಥಿತಿ ದಯನೀಯ ವಾಗಿದೆ; ಆದ್ದರಿಂದ ಬೇಧಭಾವವನ್ನುಂಟು ಮಾಡುವವರು ರಾಷ್ಟ್ರದ್ರೋಹಿ ಮತ್ತು ಧರ್ಮದ್ರೋಹಿ ಆಗಿದ್ದಾರೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ