ದೈವೀ ಮಕ್ಕಳ ಜಾತಕಗಳಲ್ಲಿ ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಯೋಗ !

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಜ್ಯೋತಿಷ್ಯ ಶಾಸ್ತ್ರೀಯ ಸಂಶೋಧನೆ

‘ಸನಾತನ ಸಂಸ್ಥೆ’  ಸ್ವರ್ಗ, ಮಹರ, ಜನ ಮುಂತಾದ ಉಚ್ಚ ಲೋಕಗಳಿಂದ ಪೃಥ್ವಿಯ ಮೇಲೆ ಜನಿಸಿರುವ ೧ ಸಾವಿರಕ್ಕಿಂತ ಹೆಚ್ಚು ಮಕ್ಕಳನ್ನು ಸೂಕ್ಷ್ಮ ಪರೀಕ್ಷಣೆಯ ಮೂಲಕ (ಟಿಪ್ಪಣಿ) ಗುರುತಿಸಿದೆ. ಅವರಿಗೆ ‘ದೈವೀ ಬಾಲಕರು’ ಎಂದು ಕರೆಯಲಾಗುತ್ತದೆ. ಈ ಮಕ್ಕಳು ಜನ್ಮದಿಂದಲೇ ಆಧ್ಮಾತ್ಮಿಕ ದೃಷ್ಟಿಯಿಂದ ಪ್ರಬುದ್ಧರಾಗಿರುತ್ತಾರೆ. ‘ದೈವೀ ಬಾಲಕರ ಜಾತಕದಲ್ಲಿನ ಆಧ್ಮಾತ್ಮಿಕ ಗ್ರಹಯೋಗಗಳ ಅಧ್ಯಯನ ಮಾಡುವುದು’, ಪ್ರಸ್ತುತ ಸಂಶೋಧನೆಯ ಉದ್ದೇಶವಾಗಿದೆ. ಈ ಸಂಶೋಧನೆಯನ್ನು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಜ್ಯೋತಿಷ್ಯ ವಿಭಾಗದ ವತಿಯಿಂದ ಮಾಡಲಾಗಿದೆ.    

(ಭಾಗ ೧)

ಶ್ರೀ. ಯಶವಂತ ಕಣಗಲೇಕರ

೧. ದೈವೀ ಮಕ್ಕಳು ಅಂದರೇನು ?

ದೈವೀ ಮಕ್ಕಳು ಎಂದರೆ ಸ್ವರ್ಗ, ಮಹರ್, ಜನ ಮುಂತಾದ ಉಚ್ಚ ಲೋಕಗಳಿಂದ ಜನಿಸಿರುವ ಜೀವಗಳು (ಮಕ್ಕಳು). ಸನಾತನ ಧರ್ಮವು ‘ಭೂ, ಭುವ, ಸ್ವರ್ಗ, ಮಹರ್, ಜನ, ತಪ ಮತ್ತು ಸತ್ಯ’ ಈ ಸಪ್ತಲೋಕಗಳ ಸಂಕಲ್ಪನೆಯನ್ನು ಹೇಳಿದೆ. ಅದರಲ್ಲಿ ಭೂಲೋಕವೆಂದರೆ ಗೋಚರಿಸುವ (ಕಣ್ಣುಗಳಿಗೆ ಕಾಣಿಸುವ) ಲೋಕವಾಗಿದ್ದು, ಇತರ ಲೋಕಗಳು ಅಗೋಚರ ಅಂದರೆ ಸೂಕ್ಷ್ಮವಾಗಿವೆ. ಜೀವದ ಅಂತಃಕರಣ (ಮನಸ್ಸು, ಬುದ್ಧಿ ಮತ್ತು ಚಿತ್ತ) ಸಾತ್ತ್ವಿಕ (ಶುದ್ಧ) ಆಗಿದ್ದರೆ, ಜೀವವು ಮರಣದ ನಂತರ ಉಚ್ಚ ಲೋಕ ಪಡೆಯುತ್ತದೆ. ತದ್ವಿರುದ್ಧ ಅಂತಃಕರಣ ತಾಮಸಿಕ (ಅಶುದ್ಧ) ಆಗಿದ್ದರೆ ಜೀವಕ್ಕೆ ಕನಿಷ್ಠ (ಕೆಳಗಿನ) ಲೋಕಗಳು ಪ್ರಾಪ್ತವಾಗುತ್ತವೆ.

ಈ ವಿಷಯದಲ್ಲಿ ಶ್ರೀಮದ್ಭಗವದ್ಗೀತೆಯ ಮುಂದಿನ ಶ್ಲೋಕವು ಮಾರ್ಗದರ್ಶಿಯಾಗಿದೆ. ಗೀತೆಯ ‘ಗುಣತ್ರಯವಿಭಾಗಯೋಗ’ ಈ ಅಧ್ಯಾಯದ ೧೮ ನೇ ಶ್ಲೋಕದಲ್ಲಿ, ಶ್ರೀಕೃಷ್ಣನು ಹೇಳುತ್ತಾನೆ,  ಮರಣದ ನಂತರ ಸತ್ವಗುಣ-ಅಧಿಕವಿರುವ ವ್ಯಕ್ತಿಯ ಲಿಂಗದೇಹಕ್ಕೆ  ಉಚ್ಚ ಲೋಕದಲ್ಲಿ (ಸ್ವರ್ಗ, ಮಹರ್, ಜನ, ತಪ ಇತ್ಯಾದಿ) ಸ್ಥಾನ ಪ್ರಾಪ್ತವಾಗುತ್ತದೆ;  ಮರಣದ ನಂತರ ರಜೋಗುಣ ಹೆಚ್ಚಿರುವ ವ್ಯಕ್ತಿಯ ಲಿಂಗದೇಹವು, ಪುನಃ ಮನುಷ್ಯಯೋನಿಯಲ್ಲಿ ಜನಿಸುತ್ತದೆ; ಹಾಗೆಯೇ ಮರಣದ ನಂತರ ತಮೋಗುಣ  ಪ್ರಾಬಲ್ಯ ವಿರುವ  ವ್ಯಕ್ತಿಯ ಲಿಂಗ ದೇಹವು, ಪ್ರಾಣಿ, ಕೀಟ ಇತ್ಯಾದಿ ಕನಿಷ್ಠ ಯೋನಿಯಲ್ಲಿ ಜನಿಸುತ್ತದೆ.

‘ಅಂತಃಕರಣ ಶುದ್ಧವಾಗಿರುವುದು, ಅಂದರೆ ಸಾತ್ತ್ವಿಕವಾಗಿರುವುದು’, ಇದು ವ್ಯಕ್ತಿಯ ಸಾಧನೆಯನ್ನು ಅವಲಂಬಿಸಿರುತ್ತದೆ. ದೈವೀ ಮಕ್ಕಳ ಪೂರ್ವಜನ್ಮದ ಸಾಧನೆಯಿಂದ ಅವರ ಅಂತಃ ಕರಣ ಸಾತ್ತ್ವಿಕವಾಗಿರುತ್ತದೆ, ಆದುದರಿಂದ, ಅವರಿಗೆ ಉಚ್ಚಲೋಕ ಪ್ರಾಪ್ತವಾಗಿರುತ್ತದೆ. ಇಂತಹ ದೈವೀ ಮಕ್ಕಳು ಮುಂದಿನ ಕಾರಣಗಳಿಗೆ ಉಚ್ಚ ಲೋಕಗಳಿಂದ ಭೂಮಿಯಲ್ಲಿ ಜನಿಸುತ್ತಾರೆ.

ಅ. ವ್ಯಷ್ಟಿ ಸಾಧನೆ : ತಮ್ಮ ಮುಂದಿನ ಆಧ್ಯಾತ್ಮಿಕ ಉನ್ನತಿಗಾಗಿ.

ಆ. ಸಮಷ್ಟಿ ಸಾಧನೆ : ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಸಹಕರಿಸಲು.

ಶ್ರೀ. ರಾಜ ಕರ್ವೆ

೨. ದೈವೀ ಮಕ್ಕಳ ವೈಶಿಷ್ಟ್ಯಗಳು

ದೈವೀ ಮಕ್ಕಳ ಮುಖ್ಯ ವೈಶಿಷ್ಟ್ಯವೆಂದರೆ, ಅವರಿಗೆ ಜನ್ಮದಿಂದಲೇ ಸಾಧನೆ ಮಾಡಲು ಅನುಕೂಲ ಪರಿಸ್ಥಿತಿ ಲಭಿಸುತ್ತದೆ. ಈ  ವಿಷಯದ ಹೆಚ್ಚಿನ ಮಾಹಿತಿಯನ್ನು ಮುಂದೆ ನೀಡಲಾಗಿದೆ.

೨ ಅ. ಸಾಧನೆಯ ತಳಮಳ ಇರುವುದು :  ದೈವೀ ಮಕ್ಕಳ ಆಸಕ್ತಿ ಮೂಲತಃ ಅಧ್ಯಾತ್ಮದ ಕಡೆಗೆ ಇರುತ್ತದೆ. ಪೂರ್ವಜನ್ಮಗಳಲ್ಲಿ ಮಾಡಿರುವ ಸಾಧನೆಯಿಂದ ಅವರ ಚಿತ್ತದ ಮೇಲೆ  ಸಾಧನೆಯ ಸಂಸ್ಕಾರ ದೃಢವಾಗಿರುತ್ತದೆ. ಅವರಿಗೆ ಮಾಯೆಯ ಸುಖ-ದುಃಖ ಮತ್ತು ಅಧ್ಯಾತ್ಮದ ಆನಂದ ಇವುಗಳ ನಡುವಿನ ವ್ಯತ್ಯಾಸ ತಿಳಿಯುತ್ತದೆ. ಆದುದರಿಂದ ಮಾಯೆಯ ವಿಷಯಗಳನ್ನು ಪಡೆಯುವುದಕ್ಕಿಂತ ಅವರು ಸಾಧನೆಯನ್ನು ಮಾಡಲು ಹೆಚ್ಚೆಚ್ಚು ಆದ್ಯತೆಯನ್ನು ನೀಡುತ್ತಾರೆ.

೨ ಆ. ಆಧ್ಯಾತ್ಮಿಕ  ಗುಣಗಳು ಇರುವುದು : ದೈವೀ ಮಕ್ಕಳಲ್ಲಿ ಕೇಳುವ ವೃತ್ತಿ, ಇತರರ ವಿಚಾರ ಮಾಡುವುದು, ಕಲಿಯುವ ವೃತ್ತಿ, ನಮ್ರತೆ, ಪ್ರಾಮಾಣಿಕತೆ ಮುಂತಾದ ಆಧ್ಯಾತ್ಮಿಕ ಗುಣಗಳಿರುತ್ತವೆ. ಈ ಗುಣಗಳಿಂದ ಅವರಲ್ಲಿ ಸಾಧನೆ ಮಾಡುವ ಕ್ಷಮತೆ ಚೆನ್ನಾಗಿರುತ್ತದೆ.

೨ ಇ. ಸಾಧನೆಗಾಗಿ  ಕುಟುಂಬದಲ್ಲಿನ ಸದಸ್ಯರ ಬೆಂಬಲ ಇರುತ್ತದೆ : ಸಾಮಾನ್ಯವಾಗಿ ದೈವೀ ಮಕ್ಕಳ ಜನ್ಮ ಸಾತ್ತ್ವ್ವಿಕ ತಾಯಿ-ತಂದೆಯರ ಉದರದಿಂದಲೇ ಆಗುತ್ತದೆ. ಇದರಿಂದ, ಮಕ್ಕಳ ಮೇಲೆ ಬಾಲ್ಯದಿಂದಲೇ ಸಾತ್ತ್ವ್ವಿಕತೆಯ ಸಂಸ್ಕಾರಗಳು ಆಗುತ್ತವೆ, ಹಾಗೆಯೇ ಅವರಿಗೆ ಸಾಧನೆ ಮಾಡಲು ತಾಯಿ-ತಂದೆಯವರಿಂದ ಪ್ರೋತ್ಸಾಹ ಸಿಗುತ್ತದೆ.

೨ ಇ. ಪ್ರಾರಬ್ಧ ಸಹನೀಯವಾಗಿರುತ್ತದೆ : ಸಾಧಾರಣ, ದೈವೀ ಮಕ್ಕಳು ಪ್ರಾರಬ್ಧ ಸಹನೀಯವಾಗಿರುತ್ತದೆ. ಆದ್ದರಿಂದ, ತಮ್ಮ ಪ್ರಾರಬ್ಧವನ್ನು ಎದುರಿಸಲುಬೇಕಾದ ಶಕ್ತಿ, ಸಮಯ ಮತ್ತು ಊರ್ಜೆಯನ್ನು ಅವರು ಸಾಧನೆಗಾಗಿ ಉಪಯೋಗಿಸುತ್ತಾರೆ.

೨ ಉ. ಗುರುಕೃಪೆ ಮತ್ತು ಗುರುಪ್ರಾಪ್ತಿಯಾಗುವುದು : ‘ಮೋಕ್ಷಪ್ರಾಪ್ತಿ’ಯು ದೈವೀ ಮಕ್ಕಳ ಜನನದ ಉದ್ದೇಶವಾಗಿರುವುದರಿಂದ ಅವರಿಗೆ ಈಶ್ವರನ ನಿಯೋಜನೆಯಂತೆ ಗುರುಪ್ರಾಪ್ತಿಯಾಗುತ್ತದೆ. ಗುರುಗಳ ಮಾರ್ಗದರ್ಶನ ದೊರೆಯುವುದರಿಂದ ಅವರಿಗೆ ಸಾಧನೆಯ ಯೋಗ್ಯ ಮಾರ್ಗದರ್ಶನ ಪ್ರಾಪ್ತವಾಗುತ್ತದೆ ಮತ್ತು ಗುರುಕೃಪೆಯಿಂದ ಅವರ ಆಧ್ಯಾತ್ಮಿಕ ಪ್ರಗತಿ ಬೇಗನೆ ಆಗುತ್ತದೆ.

೩. ದೈವೀ ಮಕ್ಕಳ ಇತರ ವೈಶಿಷ್ಟ್ಯಗಳು

೩ ಎ. ಸಾತ್ತ್ವಿಕತೆಯ ಆಸಕ್ತಿ ಇರುವುದು : ದೈವೀ ಮಕ್ಕಳಲ್ಲಿ ಜನ್ಮದಿಂದಲೇ ಸತ್ವಗುಣ ಅಧಿಕವಿರುತ್ತದೆ. ಇದರಿಂದ ಅವರು ಸಾತ್ತ್ವ್ವಿಕ ವ್ಯಕ್ತಿಗಳ ಕಡೆಗೆ ಮತ್ತು ಸಂತರ ಕಡೆಗೆ ಹಾಗೆಯೇ ಸಾತ್ತ್ವಿಕ ವಿಷಯಗಳ ಕಡೆಗೆ ಉದಾ. ದೇವತೆಗಳ ಚಿತ್ರ ಸಂತರು ಉಪಯೋಗಿಸಿದ ವಸ್ತುಗಳು ಮುಂತಾದವುಗಳ ಕಡೆಗೆ ಆಕರ್ಷಿತರಾಗುತ್ತಾರೆ.

೩ ಆ. ದೇವರ ಬಗ್ಗೆ ಭಾವ ಇರುವುದು : ದೈವೀ ಮಕ್ಕಳು ದೇವರ ಮೂರ್ತಿಗಳೊಂದಿಗೆ ಮಾತನಾಡುವುದು, ದೇವರ ಚಿತ್ರವನ್ನು ತಮ್ಮೊಂದಿಗೆ ಇಟ್ಟುಕೊಂಡಿರುವುದು, ದೇವರಿಗೆ ಸಂಬಂಧಿಸಿದ ಆಟಗಳನ್ನು ಆಡುವುದು ಮುಂತಾದ ಚಟುವಟಿಕೆಗಳನ್ನು ಮಾಡಿ ದೇವರ ಅನುಸಂಧಾನವನ್ನು ಸಾಧಿಸುತ್ತಾರೆ.

೩ ಇ. ಪ್ರಬುದ್ಧ ಬುದ್ಧಿ ಇರುವುದು : ಗ್ರಹಿಕೆಯ (ಆಕಲನ) ಕ್ಷಮತೆ ಚೆನ್ನಾಗಿರುವುದು, ನಿಯೋಜನೆ ಮಾಡುವುದು, ಬರವಣಿಗೆ, ಯೋಗ್ಯ-ಅಯೋಗ್ಯ ಅರಿವಾಗುವುದು, ಆಧ್ಯಾತ್ಮಿಕ ದೃಷ್ಟಿಕೋನದಿಂದ ವಿಚಾರ ಮಾಡುವುದು ಇತ್ಯಾದಿ ವೈಶಿಷ್ಟ್ಯಗಳು ದೈವೀ ಮಕ್ಕಳ ಬುದ್ಧಿಯು ಪ್ರಬುದ್ಧ ಇರುವುದನ್ನು ಸೂಚಿಸುತ್ತದೆ.

೩ ಇ. ಪ್ರತಿಭೆ ಜಾಗೃತವಾಗಿರುವುದು : ಅನೇಕ ಮಕ್ಕಳಲ್ಲಿ, ಸ್ವಾಭಾವಿಕವಾಗಿ ಹಾಡುಗಳನ್ನು ಬರೆಯುವುದು, ಭಾವಮಯ ಚಿತ್ರಗಳನ್ನು ಬಿಡಿಸುವುದು, ಭಾವಪೂರ್ಣ ಹಾಡುವುದು, ವಾದ್ಯಗಳನ್ನು ನುಡಿಸುವುದು,  ನೃತ್ಯ ಮಾಡುವುದು  ಮುಂತಾದ ವೈಶಿಷ್ಟ್ಯಗಳೂ ಅವರ ಪ್ರತಿಭೆ ಜಾಗೃತವಾಗಿದೆಯೆನ್ನುವುದನ್ನು ತೋರಿಸುತ್ತದೆ.

೩ ಎ. ಸೂಕ್ಷ್ಮದಲ್ಲಿನ ವಿಷಯ ತಿಳಿಯುವುದು : ದೈವೀ ಮಕ್ಕಳಿಗೆ ಪಂಚಜ್ಞಾನೇಂದ್ರಿಯಗಳು (ಕಿವಿ, ಚರ್ಮ, ಕಣ್ಣು, ನಾಲಿಗೆ ಮತ್ತು ಮೂಗು), ಮನಸ್ಸು ಮತ್ತು ಬುದ್ಧಿಯಾಚೆಗಿನ ಅಂದರೆ ಸೂಕ್ಷ್ಮದಲ್ಲಿನ ವಿಷಯ ತಿಳಿಯುತ್ತದೆ.

– ಶ್ರೀ. ರಾಜ ಕರ್ವೆ (ಜ್ಯೋತಿಷ್ಯ ವಿಶಾರದ) ಮತ್ತು ಶ್ರೀ. ಯಶವಂತ ಕಣಗಲೇಕರ (ಜ್ಯೋತಿಷ್ಯ ವಿಶಾರದ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ

(ಮುಂದುವರಿಯುವುದು)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.