ಪಾಕಿಸ್ತಾನದಲ್ಲಿ ಅಪರಿಚಿತರಿಂದ ಭಯೋತ್ಪಾದಕ ಹಾಫಿಜ್ ಸಯೀದ್ ನ ಸಹೋದರ ಸಂಬಂಧಿಯ ಹತ್ಯೆ

ಗುಂಡಿನ ದಾಳಿಯಲ್ಲಿ ಹಾಫಿಜ್ ಸಯಿದ್ ನಿಗೂ ಗಾಯ

ಇಸ್ಲಾಮಾಬಾದ(ಪಾಕಿಸ್ತಾನ್) – ಲಷ್ಕರ್-ಏ-ತೋಯ್ಬಾದ ಸಂಸ್ಥಾಪಕ ಭಯೋತ್ಪಾದಕ ಹಾಫೀಸ್ ಸಯೀದ್ ಇವನ ಸಹೋದರ ಸಂಬಂಧಿ ಅಬೂ ಕತಾಲ್ ಅಲಿಯಾಸ್ ಕತಾಲ್ ಸಿಂಧಿ ಇವನನ್ನು ಮಾರ್ಚ್ ೧೫ ರಂದು ಅಪರಿಚಿತರು ಗುಂಡ ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಹತ್ಯೆ ಯಾರು ನಡೆಸಿದ್ದಾರೆ ? ಇದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಕತಾಲ್ ಇವನು ಜಮ್ಮು-ಕಾಶ್ಮೀರದಲ್ಲಿನ ಅನೇಕ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದನು. ಝೆಲಮದಲ್ಲಿ ಅಬೂ ಕತಾಲನ ಮೇಲೆ ಗುಂಡುಗಳು ಹಾರಿಸಲಾಯಿತು, ಆ ಸಮಯದಲ್ಲಿ ಹಾಫಿಜ್ ಸಯಿದ ಕೂಡ ಅವನ ಜೊತೆಗೆ ಇದ್ದನು. ಈ ಗುಂಡಿನ ದಾಳಿಯಲ್ಲಿ ಅವನು ಕೂಡ ಗಾಯಗೊಂಡಿದ್ದು ಅವನಿಗೆ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.

ಕಳೆದ ವರ್ಷ ಜೂನ್ ೯ ರಂದು ಜಮ್ಮು-ಕಾಶ್ಮೀರದಲ್ಲಿನ ಹರಿಯಾಸಿ ಜಿಲ್ಲೆಯಲ್ಲಿನ ಶಿವ ಖೊಡಿ ದೇವಸ್ಥಾನದಿಂದ ಹಿಂತಿರುಗುತ್ತಿರುವ ಭಕ್ತರ ಬಸ್ಸಿನ ಮೇಲೆ ಕತಾಲ್ ನೇ ಭಯೋತ್ಪಾದಕ ದಾಳಿ ನಡೆಸಿದ್ದನು. ಇದರಲ್ಲಿ ಕೆಲವು ಭಕ್ತರು ಸಾವನ್ನಪ್ಪಿದ್ದರು. ಈ ಹಿಂದೆ ಜನವರಿ ೧, ೨೦೨೩ ರಂದು ರಾಜೌರಿ ಜಿಲ್ಲೆಯಲ್ಲಿನ ಧನಗರಿ ಗ್ರಾಮದಲ್ಲಿ ನಡೆಸಲಾದ ದಾಳಿಯಲ್ಲಿ ಕತಾಲ್ ಸಹಭಾಗಿ ಆಗಿದ್ದನು. ಅಬೂಕತಾಲ್ ಲಷ್ಕರ್-ಏ-ತೊಯ್ಬಾದಲ್ಲಿ ಭರ್ತಿ ಮಾಡುವ ಕೆಲಸ ಮಾಡುತ್ತಿದ್ದನು.