ಆಕ್ರೋಶಗೊಂಡ ನಾಗರಿಕರಿಂದ ಮಸೀದಿ ಮೇಲೆ ಕಲ್ಲು ತೂರಾಟ
ಹಾಥರಸ (ಉತ್ತರ ಪ್ರದೇಶ) – ಹಾಥರಸ ಜಿಲ್ಲೆಯ ಬಿಸಾವರ ಪಟ್ಟಣದಲ್ಲಿ 7 ವರ್ಷದ ಬಾಲಕಿಯ ಮೇಲೆ ಮುಸ್ಲಿಂ ಯುವಕ ಅತ್ಯಾಚಾರ ಎಸಗಿದ್ದರಿಂದ ಆಕ್ರೋಶಗೊಂಡ ಜನರು ಇಲ್ಲಿನ ಮಸೀದಿಗೆ ಮುತ್ತಿಗೆ ಹಾಕಿ ಕಲ್ಲು ತೂರಾಟ ನಡೆಸಿದ್ದಾರೆ. ಆರೋಪಿ ಅಮನ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 15 ರ ರಾತ್ರಿ ಬಾಲಕಿ ಇತರ ಮಕ್ಕಳೊಂದಿಗೆ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದಳು. ಅಲ್ಲಿಂದ ಮುಸ್ಲಿಂ ಯುವಕನೊಬ್ಬ ಆಕೆಯನ್ನು ಅಪಹರಿಸಿದ್ದಾನೆ. ಆತ 200 ಮೀಟರ್ ದೂರದ ಕೆರೆಯ ಬಳಿ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಬಾಲಕಿ ಪ್ರಜ್ಞಾಹೀನಳಾಗಿದ್ದಾಳೆ. ನಂತರ ಆತ ಪರಾರಿಯಾಗಿದ್ದಾನೆ. ಈ ಘಟನೆಯ ಬಗ್ಗೆ ಸ್ಥಳೀಯ ಮಕ್ಕಳು ಬಾಲಕಿಯ ಕುಟುಂಬಕ್ಕೆ ತಿಳಿಸಿದ್ದಾರೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅವರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರ ನಂತರ ಆಕ್ರೋಶಗೊಂಡ ಜನರು ಮಾರುಕಟ್ಟೆಯನ್ನು ಮುಚ್ಚಿ ಇಲ್ಲಿನ ಮಸೀದಿಗೆ ಮುತ್ತಿಗೆ ಹಾಕಿ ಕಲ್ಲು ತೂರಾಟ ನಡೆಸಿದ್ದಾರೆ.
ಸಂಪಾದಕೀಯ ನಿಲುವುಇಂತಹ ಘಟನೆಗಳ ಬಗ್ಗೆ ಜಾತ್ಯತೀತವಾದಿಗಳು, ಪ್ರಗತಿ(ಅಧೋಗತಿ)ಪರರು ಎಂದಿಗೂ ಬಾಯಿ ತೆರೆಯುವುದಿಲ್ಲ; ಏಕೆಂದರೆ ಆರೋಪಿ ಮುಸಲ್ಮಾನನಾಗಿದ್ದಾನೆ! |