‘ಔರಂಗಜೇಬನು ನಾಥೂರಾಮ್ ಗೋಡ್ಸೆಗಿಂತ ಒಳ್ಳೆಯವನಾಗಿದ್ದ’ ! – ಸ್ವಾಮಿ ಪ್ರಸಾದ್ ಮೌರ್ಯ

ಬಹುಜನ ಸಮಾಜ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ಹೇಳಿಕೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಔರಂಗಜೇಬ್ ಇತಿಹಾಸದಲ್ಲಿ ಅತ್ಯಂತ ಕ್ರೂರ ಮತ್ತು ಕೆಟ್ಟ ಬಾದಶಹ ಎಂದು ಪರಿಗಣಿಸಲ್ಪಟ್ಟಿದ್ದಾನೆ. ಅವನು ಕೆಟ್ಟವನಾಗಿದ್ದನು; ಆದರೆ ಅವನು ನಾಥೂರಾಮ್ ಗೋಡ್ಸೆಗಿಂತ ಒಳ್ಳೆಯವನಾಗಿದ್ದನು ಎಂದು ನನ್ನ ಅಭಿಪ್ರಾಯವಾಗಿದೆ. ನಾಥೂರಾಮ್ ಗೋಡ್ಸೆ ರಾಷ್ಟ್ರಪಿತ ಮ. ಗಾಂಧಿಯವರನ್ನು ಹತ್ಯೆ ಮಾಡಿದನು. ಇತರರ ಕಡೆ ಬೆರಳು ತೋರಿಸುವವರು ಮೊದಲು ತಮ್ಮ ವ್ಯಕ್ತಿಯನ್ನು ನೋಡಿಕೊಳ್ಳಬೇಕು ಎಂದು ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಹೇಳಿದ್ದಾರೆ.

ಭಾಜಪ ದೇಶದಲ್ಲಿ ದ್ವೇಷವನ್ನು ಹರಡುತ್ತಿರುವುದರಿಂದ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು ನಡೆಯುತ್ತಿವೆ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದರು.

ಸಂಪಾದಕೀಯ ನಿಲುವು

  • ಈ ಹೇಳಿಕೆಯಿಂದ ಮೌರ್ಯ ಅವರ ಬುದ್ಧಿಯ ಬಗ್ಗೆ ಅಸಹ್ಯವೆನಿಸಿದಷ್ಟೂ ಕಡಿಮೆ
  • ಮುಸ್ಲಿಂ ಮತಗಳ ಲಾಭಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡಿ ಹಾಸ್ಯಾಸ್ಪದರಾಗುವ ಮೌರ್ಯ!