ಕೇದಾರನಾಥದಲ್ಲಿ ಅಹಿಂದೂಗಳಿಗೆ ಪ್ರವೇಶ ನಿಷೇಧಕ್ಕೆ ಸಿದ್ಧತೆ!

ಕೇದಾರನಾಥ (ಉತ್ತರಾಖಂಡ) – ಕೆಲವು ಅಹಿಂದೂ ಅಂಶಗಳು ಕೇದಾರನಾಥ ಧಾಮದ ಪಾವಿತ್ರ್ಯತೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿವೆ. ಈ ಜನರು ಮಾಂಸ, ಮೀನು ಮತ್ತು ಮದ್ಯವನ್ನು ನೀಡುವಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಇದರಿಂದ ಧಾಮದ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ. ಅಂತಹ ಅಂಶಗಳನ್ನು ಗುರುತಿಸಿ ಅವರ ಪ್ರವೇಶವನ್ನು ನಿಷೇಧಿಸುವ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಇಲ್ಲಿನ ಭಾಜಪ ಶಾಸಕಿ ಆಶಾ ನೌಟಿಯಾಲ್ ಮಾಹಿತಿ ನೀಡಿದ್ದಾರೆ. ರಾಜ್ಯ ಸಚಿವ ಸೌರಭ ಬಹುಗುಣ ಅವರು ಈ ವಿಷಯದ ಬಗ್ಗೆ ಅಧಿಕಾರಿಗಳು ಮತ್ತು ಸ್ಥಳೀಯ ಜನರೊಂದಿಗೆ ಇತ್ತೀಚೆಗೆ ಸಭೆ ನಡೆಸಿದ್ದು, ಅದರಲ್ಲಿ ನಿಷೇಧದ ಬೇಡಿಕೆ ಇಡಲಾಗಿತ್ತು ಎಂದು ನೌಟಿಯಾಲ್ ಹೇಳಿದ್ದಾರೆ. ಉತ್ತರಾಖಂಡದ ಕಾಂಗ್ರೆಸ್ ನಾಯಕ ಹರೀಶ ರಾವತ್ ಈ ನಿಷೇಧವನ್ನು ವಿರೋಧಿಸಿದ್ದಾರೆ.