ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿನ ಬಲೂಚಿಸ್ತಾನದಲ್ಲಿ ಬಲೂಜ್ ಲಿಬ್ರೇಶನ್ ಆರ್ಮಿಯಿಂದ ಮತ್ತೊಮ್ಮೆ ಪಾಕಿಸ್ತಾನದ ಸೈನ್ಯದ ಮೇಲೆ ದಾಳಿ ನಡೆದಿದೆ. ಈ ದಾಳಿಯಲ್ಲಿ ಪಾಕಿಸ್ತಾನಿ ಸೈನ್ಯದ ವಾಹನಗಳನ್ನು ಗುರಿ ಮಾಡಲಾಗಿತ್ತು. ಆತ್ಮಾಹುತಿ ದಾಳಿಯ ಮೂಲಕ ೨ ವಾಹನಗಳು ಸ್ಪೋಟಿಸಲಾಗಿವೆ. ಇದರಲ್ಲಿ ಪಾಕಿಸ್ತಾನದ ೯೦ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಆರ್ಮಿಯಿಂದ ದಾವೆ ಮಾಡಲಾಗಿದೆ. ಭಾರತದಲ್ಲಿ ೨೦೧೯ ರಂದು ಪುಲುವಾಮದಲ್ಲಿ ಕೇಂದ್ರ ಮೀಸಲು ಪೊಲೀಸ ಪಡೆಯ ಬಸ್ಸಿನ ಮೇಲೆ ನಡೆದ ದಾಳಿಯಂತೆ ಈ ದಾಳಿ ನಡೆದಿತ್ತು.
೧. ಬಲೂಚಿಸ್ತಾನದಲ್ಲಿ ನೋಶ್ಕಿ ಇಲ್ಲಿ ಸುರಕ್ಷಾ ಪಡೆಯ ೭ ವಾಹನಗಳು ಮತ್ತು ೨ ಗಾಡಿಗಳ ಮೇಲೆ ದಾಳಿ ನಡೆಸಲಾಗಿದೆ. ಪಾಕಿಸ್ತಾನಿ ಅಧಿಕಾರಿ ನೀಡಿರುವ ಮಾಹಿತಿಯ ಪ್ರಕಾರ, ಈ ದಾಳಿಯಲ್ಲಿ ೫ ಸೈನಿಕರು ಸಾವನ್ನಪ್ಪಿದ್ದು ೧೩ ಸೈನಿಕರು ಗಾಯಗೊಂಡಿದ್ದಾರೆ.
೨. ದಾಳಿಯ ನಂತರ ಬಲೂಜ್ ಲಿಬ್ರೇಶನ್ ಆರ್ಮಿ, ನಮ್ಮ ಮಜೀದ್ ಬ್ರಿಗೇಡ್ ಕೆಲವು ಗಂಟೆಗಳ ಹಿಂದೆ ನೋಶ್ಕಿ ಇಲ್ಲಿಯ ಆಸಿಡಿ ಹೆದ್ದಾರಿಯಲ್ಲಿ ರಖಶಾನಾ ಹತ್ತಿರ ಸೈನ್ಯದ ಬಸ್ಸಿನ ಮೇಲೆ ಆತ್ಮಹುತಿ ದಾಳಿ ನಡೆಸಿದೆ. ಈ ಪಡೆಯಲ್ಲಿ ೮ ವಾಹನಗಳಿದ್ದವು. ಅದರಲ್ಲಿನ ಒಂದು ಬಸ್ಸು ಸ್ಪೋಟದಲ್ಲಿ ಸಂಪೂರ್ಣವಾಗಿ ನಾಶಗೊಂಡಿದೆ. ಅದರ ನಂತರ ನಮ್ಮ ಸದಸ್ಯರು ತಕ್ಷಣ ಒಂದು ಬಸ್ಸನ್ನು ಸಂಪೂರ್ಣವಾಗಿ ಸುತ್ತುವರೆದರು ಮತ್ತು ಬಸ್ಸಿನಲ್ಲಿನ ಎಲ್ಲಾ ಸೈನಿಕರನ್ನು ಒಬ್ಬೊಬ್ಬರನ್ನಾಗಿ ಹತ್ಯೆಗೈದರು. ಆದ್ದರಿಂದ ಪಾಕಿಸ್ತಾನಿ ಸೈನ್ಯದಲ್ಲಿನ ಮೃತರ ಸಂಖ್ಯೆ ೯೦ ಆಗಿದೆ.