ಪುರುಷರು ಹಣೆಗೆ ಗಂಧ ಮತ್ತು ಸ್ತ್ರೀಯರು ಅರಿಶಿಣ-ಕುಂಕುಮ ಹಚ್ಚುವುದರ ಶಾಸ್ತ್ರೀಯ ಕಾರಣ

ನಮ್ಮಲ್ಲಿ ಪುರುಷರು ಹಣೆಗೆ ಗಂಧ ಮತ್ತು ಸ್ತ್ರೀಯರು ಹಣೆಗೆ ಅರಿಶಿಣ-ಕುಂಕುಮವನ್ನು ಹಚ್ಚುತ್ತಾರೆ, ಅದರ ಹಿಂದಿನ ಶಾಸ್ತ್ರೀಯ ಕಾರಣವನ್ನು ಇಂದು ತಿಳಿದುಕೊಳ್ಳೋಣ.

ನಮ್ಮ ದೇಶವು ಉಷ್ಣವಲಯದಲ್ಲಿದೆ. ಆದ್ದರಿಂದ ಗಾಳಿಯಲ್ಲಿನ ಉಷ್ಣತೆಯ ತೊಂದರೆ ಕಡಿಮೆ ಮಾಡಲು ತಂಪಾಗಿರುವ ಶ್ರೀಗಂಧವನ್ನು ಬಳಸುವ ಅಭ್ಯಾಸ ಪ್ರಾರಂಭವಾಯಿತು. ದಕ್ಷಿಣ ಭಾರತದಲ್ಲಿನ ರಾಜ್ಯಗಳಲ್ಲಿ ಎಲ್ಲಿ ಹೆಚ್ಚು ಉಷ್ಣತೆ ಇರುತ್ತದೆಯೋ, ಅಲ್ಲಿ ಈ ಪದ್ಧತಿಯು ನಮಗೆ ಹೆಚ್ಚು ಕಂಡುಬರುತ್ತದೆ. ಕೈ ಮತ್ತು ಹಣೆಯ ಮೇಲೆ ಶ್ರೀಗಂಧದ ಲೇಪವನ್ನು ಹಚ್ಚಿ ಮೈಯಲ್ಲಿನ ಉಷ್ಣತೆ ಕಡಿಮೆ ಮಾಡಲಾಗುತ್ತದೆ. ಕೆಲವು ದೇವಸ್ಥಾನಗಳಲ್ಲಿನ ಅರ್ಚಕರು ಮತ್ತು ಇತರ ಸೇವಕರು ಇಂದಿಗೂ ಗಂಧದ ಲೇಪವನ್ನು ಹಣೆಯ ಮೇಲೆ, ಕೈಗಳಿಗೆ ಹಚ್ಚುವುದು ಕಂಡುಬರು ತ್ತದೆ; ಆದರೆ ವ್ಯಾವಹಾರಿಕ ದೃಷ್ಟಿಯಲ್ಲಿ ಉಪಾಯವೆಂದು ಹಣೆಗೆ ಗಂಧದ ಲೇಪವನ್ನು ಹಚ್ಚುವ ಪದ್ಧತಿಯಾಗಿದೆ.

ಹುಬ್ಬುಗಳ ಮಧ್ಯಭಾಗದಲ್ಲಿ ಆಜ್ಞಾಚಕ್ರವಿರುತ್ತದೆ. ಅದಕ್ಕೆ ‘ಮೂರನೇ ಕಣ್ಣು’ ಎಂದೂ ನಮ್ಮ ಯೋಗಶಾಸ್ತ್ರವು ಹೇಳುತ್ತದೆ. ಈ ಚಕ್ರವು ಅಂತರ್ಜ್ಞಾನ, ಆಂತರಿಕ ಬುದ್ಧಿವಂತಿಕೆಯೊಂದಿಗೆ ಸಂಬಂಧಿಸಿದೆ. ಆದ್ದರಿಂದ ಇದರೊಳಗಿನ ಶಕ್ತಿಯು ಹೊರಗೆ ಬರಬಾರದು, ಎಂದು ಅದನ್ನು ಮುಚ್ಚಿಡುವುದು ಆವಶ್ಯಕವಾಗಿ ರುತ್ತದೆ. ಅದಕ್ಕಾಗಿ ಅದಕ್ಕೆ ಗಂಧ ಅಥವಾ ಕುಂಕುಮವನ್ನು ಹಚ್ಚಿ ಅದನ್ನು ಮುಚ್ಚಲಾಗುತ್ತದೆ. ಇದರ ಹೊರತು ಸ್ತ್ರೀಯರು ಅಥವಾ ಸುವಾಸಿನಿಯರು ಅರಿಶಿಣ-ಕುಂಕುಮವನ್ನು ಹಚ್ಚಬೇಕು, ಎಂದು ಹೇಳಲಾಗುತ್ತದೆÉ. ಇದರ ಹಿಂದಿನ ವಿಚಾರವು ಎಷ್ಟು ಆಳವಾಗಿದೆ ಯೆಂದರೆ, ಅದನ್ನು ಓದಿ ಆಶ್ಚರ್ಯವೆನಿಸುವುದು. ನಮಗೆಲ್ಲರಿಗೂ ಗೊತ್ತಿರುವ ವಿಷಯವೆಂದರೆ, ಅರಿಶಿಣವು ತುಂಬಾ ಔಷಧಿಯ ಗುಣಹೊಂದಿದೆ. ಹಾಗೆಯೇ ಗಾಯಕ್ಕೆ ಹಚ್ಚಲಾಗತ್ತದೆ. ನೆಗಡಿ, ಕೆಮ್ಮು ಇವುಗಳಿಗೂ ಅರಿಶಿಣ ಉಪಯುಕ್ತ ವಾಗಿದೆ, ಹಾಗೆಯೇ ಕುಂಕುಮವನ್ನು ಹಾವುಕಡಿತ ಮತ್ತು ಚೇಳು ಕಡಿತಕ್ಕೆ ಪ್ರಥಮೋಪಚಾರವೆಂದು ಬಳಸಬಹುದು. ಆದ್ದರಿಂದ ಅರಿಶಿಣ-ಕುಂಕುಮವು ಯಾವುದೇ ಪ್ರಸಂಗದಲ್ಲಿ ನಮ್ಮ ಕೈಯಲ್ಲಿರಬೇಕು, ಎಂಬ ದೃಷ್ಟಿಯಿಂದ ಅದನ್ನು ಪ್ರತಿದಿನ ಬಳಸುವುದು ಒಂದು ಪದ್ಧತಿಯಾಗಿದೆ. ಈ ಹಿಂದೆ ಮದುವೆಯಾದ ಸ್ತ್ರೀಯರ ಸೌಭಾಗ್ಯದ ಗುರುತು ಎಂದು ಹಣೆತುಂಬ ಕುಂಕುಮ ಅಥವಾ ದೊಡ್ಡ ಕುಂಕುಮವನ್ನು ಹಚ್ಚುತ್ತಿದ್ದರು. ಈ ಹಿಂದಿನ ಕಾರಣ ಹೀಗೂ ಇರಬಹುದು, ಮಹಿಳೆಯ ಗಂಡನಿಗೆ ಹಾವು ಕಡಿದರೆ ಅಥವಾ ಚೇಳು ಕಡಿದರೆ, ಹೆಂಡತಿಯು ತನ್ನ ಹಣೆಯ ಮೇಲಿನ ಕುಂಕುಮ ಉಪಯೋಗಿಸಿ ತನ್ನ ಗಂಡನ ಜೀವವನ್ನು ಉಳಿಸಬಹುದು.

(ಆಧಾರ : ‘ಪದ್ಧತಿಯ ಹಿಂದಿನ ವಿಜ್ಞಾನ’, ಲೇಖಕರು : ತನ್ಮಯ ಕೇಳಕರ ಮತ್ತು ಸಾಪ್ತಾಹಿಕ ‘ಸಾಂಸ್ಕೃತಿಕ ವಾರ್ತಾಪತ್ರ’)