ಸಾಧಕರೇ, ‘ಊಟ ಮಾಡಿ ಬರುತ್ತೇನೆ’ ಎನ್ನದೇ, ‘ಮಹಾಪ್ರಸಾದ ಸೇವಿಸಿ ಬರುತ್ತೇನೆ’, ಎಂದು ಹೇಳಿ !

ಸಾಧಕರಿಗೆ ಸೂಚನೆ ! 

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಕೆಲವು ಸಾಧಕರು ‘ನಾನು ಊಟ ಮಾಡಿ ಬರುತ್ತೇನೆ’, ಎಂದು ಹೇಳುತ್ತಾರೆ. ಕೆಲವು ಸಾಧಕರು ಇತರ ಸಾಧಕರಿಗೆ ‘ನಿಮ್ಮ ಊಟ ಆಯಿತೇ ?’ ಎಂದು ಕೇಳುತ್ತಾರೆ. ಸಾಧಕರು, ಇದರ ಬದಲು ‘ನಾನು ಮಹಾಪ್ರಸಾದ ಸೇವಿಸಿ ಬರುತ್ತೇನೆ’, ಎಂದು ಹೇಳಬೇಕು ಅಥವಾ ‘ನೀವು ಮಹಾಪ್ರಸಾದವನ್ನು ಸೇವಿಸಿದ್ದೀರಾ ?’, ಎಂದು ಕೇಳಬೇಕು. ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ ಮತ್ತು ಅವುಗಳೊಂದಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ. ಈ ಅಧ್ಯಾತ್ಮದಲ್ಲಿನ ಸಿದ್ಧಾಂತಕ್ಕನುಸಾರ ನಮ್ಮ ಮನಸ್ಸಿನಲ್ಲಿ ಯಾವ ರೀತಿಯ ಭಾವವಿರುತ್ತದೆಯೋ, ಅದಕ್ಕನುಸಾರ ನಮಗೆ ಅದರ ಲಾಭವಾಗುತ್ತಿರುತ್ತದೆ. ಅನ್ನವು ಪೂರ್ಣಬ್ರಹ್ಮವಾಗಿದೆ. ‘ಮಹಾಪ್ರಸಾದವನ್ನು ಸೇವಿಸಿ ಬರುತ್ತೇನೆ’, ಎಂದು ಹೇಳುವುದರಿಂದ ನಮ್ಮ ಮನಸ್ಸಿನಲ್ಲಿ ಆಹಾರದ ಬಗ್ಗೆ ಭಾವ ಉತ್ಪನ್ನವಾಗಿ ನಮಗೆ ಅದರ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಗುತ್ತದೆ. ಇದಕ್ಕಾಗಿ ಸಾಧಕರು ‘ಉಪಾಹಾರ ಅಥವಾ ಊಟ’, ಎಂದು ಹೇಳದೇ ‘ಪ್ರಸಾದ-ಮಹಾಪ್ರಸಾದ’ ಎಂದು ಹೇಳಬೇಕು.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ