ಬೆಂಗಳೂರಿನ ಖ್ಯಾತ ರಾಮೇಶ್ವರಮ್ ಕೆಫೆಯಲ್ಲಿ ಮಾರ್ಚ್ ೧ ರಂದು ಬಾಂಬ್‌ಸ್ಫೋಟವಾಯಿತು. ಈ ಘಟನೆಯಲ್ಲಿ ಒಟ್ಟು ೯ ಜನರು ಗಾಯಗೊಂಡರು. ಈ ಪರಿಸರದಲ್ಲಿ ಐ.ಬಿ.ಎಮ್. ‘ಎಸ್.ಎ.ಪಿ.’ಯಂತಹ ಮಾಹಿತಿ ತಂತ್ರಜ್ಞಾನದ ಕಂಪನಿಗಳು ಹಾಗೂ ಸ್ಟಾರ್ಟ್ಪ್ಸ್ (ಹೊಸ ಉದ್ಯೋಗ)ಗಳಿವೆ. ಇದು ದೇಶದ ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ವ್ಯವಸಾಯ ಮಾಡಲು ಇದು ಜನಪ್ರಿಯ ಸ್ಥಾನವಾಗಿದೆ. ಈ ಸ್ಫೋಟದಿಂದ ಬೆಂಗಳೂರಿನ ‘ಟೆಕ್‌ಸಿಟಿ’ (ತಂತ್ರಜ್ಞಾನ ನಗರ) ರಾಷ್ಟ್ರವಿರೋಧಿ ಶಕ್ತಿಗಳ ಕಪ್ಪು ಪಟ್ಟಿಯಲ್ಲಿ (ಹಿಟ್‌ಲಿಸ್ಟ್‌ನಲ್ಲಿ) ಇದ್ದಂತೆ ಕಾಣಿಸುತ್ತದೆ. ಕೆಲವೇ ದಿನಗಳ ಹಿಂದೆ ರಾಜ್ಯದ ವಿಧಾನಸಭೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ನೀಡಿರುವುದರಿಂದ ರಾಜ್ಯದ ವಾತಾವರಣ ಬಿಸಿಯಾಗಿರುವಾಗಲೇ ಮಾರ್ಚ್ ೧ ರಂದು ರಾಮೇಶ್ವರಮ್ ಕೆಫೆಯಲ್ಲಿ ಸ್ಫೋಟ ನಡೆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ‘ಈ ಸ್ಫೋಟದಲ್ಲಿ ಅಜ್ಞಾತ ವ್ಯಕ್ತಿ ಸುಧಾರಿತ ಸ್ಫೋಟಕ ಯಂತ್ರ (ಐಇಡಿ) ಉಪಯೋಗಿಸಿರುವುದು ಕಾಣಿಸುತ್ತದೆ. ಈ ಘಟನೆಯಲ್ಲಿನ ಆರೋಪಿಗಳಿಗೆ ಶಿಕ್ಷೆಯಾಗುವುದು. ಈ ಹಿಂದಿನ ಸರಕಾರ ಇರುವಾಗಲೂ ಅನೇಕ ಸ್ಫೋಟಗಳಾಗಿದ್ದವು”, ಎಂದು ಹೇಳಿದ್ದಾರೆ.
ಈ ಘಟನೆಯನ್ನು ಗಾಂಭೀರ್ಯದಿಂದ ತನಿಖೆ ಮಾಡುವ ಬದಲು ಸಿದ್ಧರಾಮಯ್ಯರಂತಹ ಮುಖ್ಯಮಂತ್ರಿಗಳು ಇಂತಹ ಹೇಳಿಕೆಗಳನ್ನು ನೀಡಿ ರಾಜಕಾರಣ ಮಾಡುತ್ತಿದ್ದಾರೆ, ಇದು ಜನರ ದುರ್ಭಾಗ್ಯ ! ಸಿದ್ಧರಾಮಯ್ಯನವರು ಜನರ ಮನಸ್ಸನ್ನು ವಿಚಲಿತಗೊಳಿಸುತ್ತಿರುವುದು ಕಾಣಿಸುತ್ತದೆ. ಆದ್ದರಿಂದ ಇಂತಹ ರಾಜಕಾರಣಿಗಳು ರಾಜ್ಯವನ್ನು ಯಾವ ರೀತಿಯಲ್ಲಿ ಆಳುತ್ತಿರ ಬಹುದೆಂದು ಇದರಿಂದ ಬಹಿರಂಗವಾಗುತ್ತದೆ.
ಕಾಂಗ್ರೆಸ್ಸಿನ ರಾಜ್ಯದಲ್ಲಿ ಹೆಚ್ಚು ಘಟನೆಗಳು !
ಭಾಜಪದ ಆಡಳಿತ ಬಂದ ನಂತರ ದೇಶದಲ್ಲಿನ ಬಾಂಬ್ ಸ್ಫೋಟಗಳ ಘಟನೆಗಳಲ್ಲಿ ತುಂಬಾ ಇಳಿಕೆಯಾಗಿದೆ; ಆದರೆ ಎಲ್ಲೆಲ್ಲಿ ಕಾಂಗ್ರೆಸ್ಸಿನ ಆಡಳಿತವಿದೆಯೋ, ಅಲ್ಲಿ ಬಾಂಬ್‌ಸ್ಫೋಟಗಳ ಘಟನೆ ಹೆಚ್ಚಾಗುತ್ತಿದೆ; ಏಕೆಂದರೆ ಕಾಂಗ್ರೆಸ್ ಸರಕಾರವು ಈ ಅಪರಾಧಗಳಲ್ಲಿರುವ ಮತಾಂಧರ ಬೆಂಬಲಕ್ಕೆ ಇರುವುದರಿಂದ ‘ನಮಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ’, ಎನ್ನುವ ದರ್ಪದಲ್ಲಿರುವ ಮತಾಂಧರು ಮತ್ತು ಭಯೋತ್ಪಾದಕರು ಮನಬಂದಂತೆ ಬಾಂಬ್‌ಸ್ಫೋಟ ನಡೆಸುತ್ತಾರೆ. ನವೆಂಬರ್ ೨೦೨೨ ರಲ್ಲಿ ಮಂಗಳೂರಿನಲ್ಲಿ ಮೊಹಮ್ಮದ ಶರೀಕ್ ಎಂಬ ಮತಾಂಧನು ಪ್ರೆಶರ್ ಕುಕ್ಕರ್‌ನಲ್ಲಿ ಐಇಡಿ ಸ್ಫೋಟಕವನ್ನು ಅಡಗಿಸಿಕೊಂಡು ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಒಯ್ಯುತ್ತಿರುವಾಗ ಅದು ದಾರಿಯಲ್ಲಿಯೇ ಸ್ಫೋಟವಾಯಿತು. ತನಿಖಾ ದಳದ ಅಭಿಪ್ರಾಯಕ್ಕನುಸಾರ ಇಸ್ಲಾಮಿಕ್ ಸ್ಟೇಟ್‌ನ ಭಯೋತ್ಪಾದಕರು ಮಂಗಳೂರಿನಲ್ಲಿ ಪ್ರೆಶರ್ ಕುಕ್ಕರ್ ಸ್ಫೋಟ ನಡೆಸಿದ್ದರು. ಇದರಲ್ಲಿ ಲಷ್ಕರ್-ಎ-ತೊಯಬಾ ಈ ಸಂಘಟನೆಯ ಭಯೋತ್ಪಾದಕರ ಕೈವಾಡವಿತ್ತು. ಈ ಪ್ರಕರಣದ ತನಿಖೆ ಮಾಡುವವರು ಅನೇಕ ಆಘಾತಕಾರಿ ವಿಷಯಗಳನ್ನು ಬಯಲಿಗೆಳೆದಿದ್ದರು.
ಭಯೋತ್ಪಾದಕರ ಮುಖ್ಯ ನೆಲೆ ಪುಣೆಯೆ ?
ಶಂಕಿತ ಭಯೋತ್ಪಾದಕರಿಂದಾದ ಬೆಂಗಳೂರಿನ ಸ್ಫೋಟದ ನಂತರ ತನಿಖಾ ದಳದವರು ಅನೇಕ ಆಯಾಮಗಳಿಂದ ತನಿಖೆ ಆರಂಭಿಸಿದ್ದಾರೆ. ಆದರೂ ಇದರಲ್ಲಿ ನಗರದಲ್ಲಿನ ಉಪಾಹಾರ ಗೃಹಗಳ ಹಾಗೂ ಜನಪ್ರಿಯ ಸ್ಥಳಗಳ ಭದ್ರತೆಯಲ್ಲಿ ಅನೇಕ ಕೊರತೆಗಳು ಕಂಡುಬಂದಿವೆ. ಇದೇ ವೇಳೆಗೆ ಇಂತಹ ಸ್ಥಳಗಳು ಭಯೋತ್ಪಾದಕರಿಗೆ ‘ಸಾಫ್ಟ್ ಟಾರ್ಗೇಟ್’ (ಸಹಜವಾದ ಗುರಿ) ಆಗಿರುತ್ತವೆ. ರಾಮೇಶ್ವರಮ್ ಕೆಫೆ ಸ್ಫೋಟಕ್ಕೆ ಸಂಬಂಧಿಸಿದ ಒಬ್ಬ ಶಂಕಿತ ವ್ಯಕ್ತಿಯ ಛಾಯಾಚಿತ್ರವನ್ನು ರಾಷ್ಟ್ರೀಯ ತನಿಖಾ ದಳದವರು (ಎನ್.ಐ.ಎ.) ಜ್ಯಾರಿಗೊಳಿಸಿ ಆ ವ್ಯಕ್ತಿಯ ಮಾಹಿತಿ ನೀಡುವವರಿಗೆ ೧೦ ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಣೆ ಮಾಡಿದ್ದಾರೆ. ಸ್ಫೋಟದ ನಂತರ ಆ ವ್ಯಕ್ತಿ ಬಸ್‌ನೊಳಗೆ ಪ್ರವೇಶ ಮಾಡುತ್ತಿರುವುದರ ಚಿತ್ರೀಕರಣ ಸಿಸಿಟಿವಿಯಲ್ಲಿದೆ. ಈ ಭಯೋತ್ಪಾದಕನು ಬಸ್‌ನಲ್ಲಿ ಪ್ರವಾಸ ಮಾಡಿ ಪುಣೆಗೆ ಹೋಗಿರಬಹುದೆಂದು ಪೊಲೀಸರು ಸಂದೇಹ ವ್ಯಕ್ತಪಡಿಸಿದ್ದಾರೆ. ಇದರಿಂದ ಪುಣೆ ‘ಭಯೋತ್ಪಾದಕರ ನೆಲೆಬೀಡಾಗುತ್ತಿದೆಯೇ ?’, ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಕರಣದಲ್ಲಿ ಬಳ್ಳಾರಿ ಜಿಲ್ಲೆಯ ಕೌಲಬಾಜಾರ್‌ನಲ್ಲಿನ ಬಟ್ಟೆಯ ವ್ಯಾಪಾರಿ ಹಾಗೂ ನಿಷೇಧಿತ ‘ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ಗೆ ಸಂಬಂಧಿಸಿದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಮುಸಲ್ಮಾನರಿಂದ ಭಯೋತ್ಪಾದಕರಿಗೆ ಆಶ್ರಯ !
‘ಕೆಲವು ತಿಂಗಳ ಹಿಂದೆ ಪುಣೆ ನಗರದಿಂದ ವಶಪಡಿಸಿಕೊಂಡ ಭಯೋತ್ಪಾದಕರು ದೇಶದ ಪ್ರಮುಖ ನಗರಗಳಲ್ಲಿ ಬಾಂಬ್‌ಸ್ಫೋಟ ನಡೆಸುವ ಒಳಸಂಚು ರಚಿಸಿದ್ದರು’, ಎನ್ನುವ ಮಾಹಿತಿ ಮಹಾರಾಷ್ಟ್ರ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ (ಎ.ಟಿ.ಎಸ್.ನ.) ತನಿಖೆ ಯಲ್ಲಿ ಬೆಳಕಿಗೆ ಬಂದಿದೆ. ‘ಇಸ್ಲಾಮಿಕ್ ಸ್ಟೇಟ್’ (ಐ.ಎಸ್.) ಮತ್ತು ‘ಅಲ್ ಸುಫಾ’ ಈ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಈ ಭಯೋತ್ಪಾದಕರು ಜಗತ್ತಿನಾದ್ಯಂತ ನಡೆಯುವ ಭಯೋತ್ಪಾದಕ ಆಕ್ರಮಣಗಳ ಮಾಹಿತಿ ಪಡೆದು ಭಾರತದಲ್ಲಿನ ಪ್ರಮುಖ ನಗರಗಳಲ್ಲಿ ಬಾಂಬ್‌ಸ್ಫೋಟ ನಡೆಸುವ ಸಿದ್ಧತೆ ನಡೆಸಿದ್ದರು’, ಎಂದು ಎ.ಟಿ.ಎಸ್. ನ್ಯಾಯಾಲಯದಲ್ಲಿ ಸಲ್ಲಿಸಿದ ವರದಿಯಲ್ಲಿ ಹೇಳಿದೆ. ಪುಣೆಯಲ್ಲಿನ ಕೊಂಡವಾ ಪರಿಸರದಲ್ಲಿನ ಇಸ್ಲಾಮಿಕ್ ಸ್ಟೇಟ್‌ನ ಮಹಾರಾಷ್ಟ್ರದಲ್ಲಿನ ಕೇಂದ್ರವನ್ನು ‘ಎಟಿಎಸ್’ ಧ್ವಂಸಗೊಳಿಸಿತ್ತು. ಮೂಲತಃ ಪುಣೆಯಲ್ಲಿ ಭಯೋತ್ಪಾದಕರಿಗೆ ಆಶ್ರಯವನ್ನು ನೀಡುವವರು ಮುಸಲ್ಮಾನರೇ ಆಗಿದ್ದರು, ಎಂಬುದೂ ತನಿಖೆಯಲ್ಲಿ ಸಿದ್ಧವಾಗಿದೆ. ಆದ್ದರಿಂದ ‘ದೇಶದಲ್ಲಿನ ಮುಸಲ್ಮಾನರ ಮೇಲೆ ಹೇಗೆ ವಿಶ್ವಾಸವಿಡಬಹುದು ?’, ಎನ್ನುವ ಪ್ರಶ್ನೆಯು ಇಲ್ಲಿ ಉದ್ಭವಿಸುತ್ತದೆ.
ಭಯೋತ್ಪಾದಕ ಆಕ್ರಮಣಗಳ ಬಗ್ಗೆ ನಿಷ್ಕಾಳಜಿ !
ದೇಶದಲ್ಲಿನ ಎಲ್ಲ ರಾಜ್ಯಗಳಲ್ಲಿನ ತನಿಖಾ ದಳಗಳು ಬಾಂಬ್‌ಸ್ಫೋಟ ಪ್ರಕರಣಗಳನ್ನು ಗಾಂಭೀರ್ಯದಿಂದ ತನಿಖೆ ಮಾಡುವ ಅವಶ್ಯಕತೆಯಿದೆ. ತನಿಖಾ ದಳದ ಪೊಲೀಸರಲ್ಲಿ ಎಲ್ಲ ಸೌಲಭ್ಯಗಳಿರಬೇಕು. ಪುಣೆಯಲ್ಲಿನ ಜಂಗಲೀ ಮಹಾರಾಜ ರಸ್ತೆಯಲ್ಲಿ ೧ ಆಗಸ್ಟ್ ೨೦೧೨ ರಂದು ನಡೆದಿರುವ ಸರಣಿ ಬಾಂಬ್‌ಸ್ಫೋಟವಾಗಿ ಒಂದು ವರ್ಷ ಕಳೆದರೂ ಸ್ಫೋಟದ ತನಿಖೆಯ ವಿಷಯದಲ್ಲಿ ಮಹಾರಾಷ್ಟ್ರ ರಾಜ್ಯದ ಸುರಕ್ಷಾ ವ್ಯವಸ್ಥೆಯ ರಿಕಾರ್ಡ್ ಪುಸ್ತಕವು ಖಾಲಿಯಿತ್ತು. ಪುಣೆಯಲ್ಲಿ ೧ ತಿಂಗಳಲ್ಲಿ ಸಿಸಿಟಿವಿ ಅಳವಡಿಸುವೆವು ಎನ್ನುವ ಮಹಾರಾಷ್ಟ್ರದ ಅಂದಿನ ಕಾಂಗ್ರೆಸ್ ಸರಕಾರಕ್ಕೆ ಒಂದು ವರ್ಷವಾದರೂ ಸಿಸಿಟಿವಿ ಅಳವಡಿಸಲು ಸಾಧ್ಯವಾಗಲಿಲ್ಲ. ಅದೇ ರೀತಿ ಬಾಂಬ್ ನಿಷ್ಕ್ರಿಯ ಗೊಳಿಸುವ ಹೊಣೆಯಿರುವ ಪುಣೆಯ ತಂಡದವರಿಗೆ ‘ಬಾಂಬ್‌ಸೂಟ್’ ಸಿಕ್ಕಿರಲಿಲ್ಲ. ಆ ಸ್ಫೋಟಗಳ ಪ್ರಕರಣದಲ್ಲಿ ೭ ಆರೋಪಿಗಳನ್ನು ಬಂಧಿಸಲಾಗಿತ್ತು; ಆದರೆ ಈ ಎಲ್ಲ ಆರೋಪಿ ಗಳನ್ನು ರಾಜ್ಯದ ಭಯೋತ್ಪಾದಕ ವಿರೋಧಿ ದಳ ಬಂಧಿಸಿರಲಿಲ್ಲ, ದೆಹಲಿ ಪೊಲೀಸರು ಅವರನ್ನು ಬಂಧಿಸಿದ್ದರು. ಆಗ ಎ.ಟಿ.ಎಸ್.ನ ಪ್ರಮುಖ ಪುಣೆಯಲ್ಲಿ ಕುಳಿತು ಪ್ರತಿದಿನ ಸಭೆಯ ಮೇಲೆ ಸಭೆ ತೆಗೆದುಕೊಳ್ಳುತ್ತಿದ್ದರು. ದೆಹಲಿ ಪೊಲೀಸರು ಪತ್ರಕರ್ತರ ಪರಿಷತ್ತು ನಡೆಸಿದ ನಂತರ ಪುಣೆ ಪೊಲೀಸರು ಮತ್ತು ಮಹಾರಾಷ್ಟ್ರದ ‘ಎ.ಟಿಎಸ್.’ಗೆ ಆರೋಪಿಗಳ ಬಂಧನದ ಮಾಹಿತಿ ತಿಳಿಯಿತು. ಆದ್ದರಿಂದ ತನಿಖಾದಳದಲ್ಲಿನ ನಿಷ್ಕ್ರಿಯ ಸಿಬ್ಬಂದಿಗಳನ್ನು ಹಾಗೂ ಅಧಿಕಾರಿಗಳನ್ನು ಬದಿಗೆ ಸರಿಸಿ ಸಕ್ಷಮ ಅಧಿಕಾರಿಗಳನ್ನು ನೇಮಕ ಮಾಡುವ ಅವಶ್ಯಕತೆಯಿದೆ.
ಭಯೋತ್ಪಾದನೆಯು ಈಗ ಯಾವುದೇ ಒಂದು ದೇಶದ ಸಮಸ್ಯೆಯಾಗಿ ಉಳಿದಿಲ್ಲ, ಅದು ಜಾಗತಿಕ ಸಮಸ್ಯೆಯಾಗಿದೆ. ಜಗತ್ತಿನಲ್ಲಿ ಭಯೋತ್ಪಾದನೆಯ ಆಘಾತವಾಗಿರದ ದೇಶಗಳು ಬಹಳ ಕಡಿಮೆಯಿರಬಹುದು, ಆದ್ದರಿಂದ ಭಯೋತ್ಪಾದನೆಯ ವಿಷಯ ದಲ್ಲಿ ಜಗತ್ತಿನ ಎಲ್ಲ ದೇಶಗಳು ಒಗ್ಗಟ್ಟಾಗುವ ಅವಶ್ಯಕತೆಯಿದೆ.