‘ಇಸ್ಲಾಮಿಕ್ ಸ್ಟೇಟ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಣೆ ಮಾಡುವುದನ್ನು ರದ್ದು ಮಾಡಬೇಕು ! – ಜಿಹಾದಿ ಭಯೋತ್ಪಾದಕ ಸಾಕಿಬ್ ನಾಚನ್

ಸರ್ವೋಚ್ಚ ನ್ಯಾಯಾಲಯದಲ್ಲಿ ಜಿಹಾದಿ ಭಯೋತ್ಪಾದಕ ಸಾಕಿಬ್ ನಾಚನ್ ನಿಂದ ಅರ್ಜಿ

ನವ ದೆಹಲಿ – 2002 ಮತ್ತು 2023ರಲ್ಲಿ ಮುಂಬಯಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಮುಖ್ಯ ಸೂತ್ರಧಾರ (ಮಾಸ್ಟರ್ ಮೈಂಡ್) ಸಾಕಿಬ್ ನಾಚನ್ ಇವನು, ‘ಇಸ್ಲಾಮಿಕ್ ಸ್ಟೇಟ್’ ಈ ಭಯೋತ್ಪಾದಕ ಸಂಘಟನೆಗೆ ‘ಭಯೋತ್ಪಾದಕ ಸಂಘಟನೆ’ ಎಂದು ಹೇಳಬೇಡಿ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಇಸ್ಲಾಮಿಕ್ ಸ್ಟೇಟ್ ಮತ್ತು ಇತರ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸುವ ಸರಕಾರದ ಅಧಿಸೂಚನೆಗಳನ್ನು ರದ್ದುಗೊಳಿಸಬೇಕೆಂದು ನಾಚನ್ ಒತ್ತಾಯಿಸಿದ್ದಾನೆ. ನಾಚನ್ ಸದ್ಯ ತಿಹಾರ್ ಜೈಲಿನಲ್ಲಿದ್ದಾನೆ.

ನಾಚನ್ ಇವನು ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಸ್ಥಳೀಯ ಗುಂಪನ್ನು ನಡೆಸುತ್ತಿದ್ದನು ಮತ್ತು ಅದರಲ್ಲಿ ಮುಸ್ಲಿಂ ಯುವಕರನ್ನು ನೇಮಿಸಿಕೊಳ್ಳುತ್ತಿದ್ದನು. ಈ ಮೊದಲು ಅವನು ನಿಷೇಧಿತ ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (‘ಸಿಮೀ’ಯ) ಸದಸ್ಯನಾಗಿದ್ದನು. ಆತನಿಗೆ ಮುಂಬಯಿನ ವಿಲೆಪಾರ್ಲೆ ಮತ್ತು ಮುಲುಂಡ್ ರೈಲ್ವೆ ನಿಲ್ದಾಣಗಳಲ್ಲಿ ಬಾಂಬ್ ಸ್ಫೋಟ ನಡೆಸಿದ ಪ್ರಕರಣದಲ್ಲಿ ದೋಷಿ ಎಂದು ನಿರ್ಧರಿಸಲಾಗಿತ್ತು. 2016 ರಲ್ಲಿ ಅವನಿಗೆ ಶಿಕ್ಷೆ ಆಗಿತ್ತು. 2017 ರಲ್ಲಿ ಅವನನ್ನು ಬಿಡುಗಡೆ ಮಾಡಲಾಯಿತು. ಜೈಲಿನಿಂದ ಹೊರಗಡೆ ಬಂದ ನಂತರ ಅವನು ಇಸ್ಲಾಮಿಕ್ ಸ್ಟೇಟ್ ಸೇರಿದನು. ಅವನನ್ನು ಭಾರತದ ಶಾಖೆಯ ಮುಖ್ಯಸ್ಥನಾಗಿ ಮಾಡಲಾಯಿತು. ಭಯೋತ್ಪಾದನೆಯ ತರಬೇತಿಗಾಗಿ ಭಾರತೀಯ ಮುಸಲ್ಮಾನರನ್ನು ಪಾಕಿಸ್ತಾನಕ್ಕೆ ಕಳುಹಿಸಿದ ಆರೋಪವೂ ಅವನ ಮೇಲಿದೆ.

ಸಂಪಾದಕೀಯ ನಿಲುವು

ಒಬ್ಬ ಭಯೋತ್ಪಾದಕನಿಗೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ನ್ಯಾಯವ್ಯವಸ್ಥೆಯಲ್ಲಿ ಈ ರೀತಿಯ ಅರ್ಜಿ ಸಲ್ಲಿಸಲು ಅನುಮತಿ ನೀಡುತ್ತದೆ ಅಥವಾ ಅಧಿಕಾರ ನೀಡುತ್ತದೆ, ಇದರಿಂದ ಇದು ಹೇಗೆ ತಪ್ಪಾಗಿದೆ, ಎಂಬುದು ಗಮನಕ್ಕೆ ಬರುತ್ತದೆ !