‘ಪ್ರತಿ ವ್ಯವಸಾಯದಲ್ಲಿ, ಪ್ರತಿ ಕ್ಷೇತ್ರದಲ್ಲಿ ಮೋಸ ಮಾಡುವ ಜನರು ನುಗ್ಗಿ ತಮ್ಮ ಸ್ವಾರ್ಥ ಸಾಧಿಸಲು ಯಾವುದೇ ವೇಷವನ್ನು ಧರಿಸುತ್ತಾರೆ. ರಾವಣನೂ ಸಾಧುವಿನ ವೇಷದಲ್ಲಿ ಸೀತೆಯನ್ನು ಅಪಹರಿಸಿದ್ದನು. ಆದ್ದರಿಂದ ನಿಜವಾದ ಸಾಧುಗಳು ನಿಂದನೀಯರಾಗುವುದಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿಯೂ ಕೆಲವರು ತಮ್ಮ ಯೋಗ್ಯತೆ ಇಲ್ಲದಿದ್ದಾಗಲೂ ವೈದ್ಯಕೀಯ ವೃತ್ತಿ ಮಾಡಿ ಜನರ ಶೋಷಣೆ ಮಾಡುತ್ತಿದ್ದಾರೆ; ಆದರೆ ಇಂತಹ ಕಪಟ ವೈದ್ಯರಿಂದ ಒಳ್ಳೆಯ ವೈದ್ಯರು ನಿಂದನೀಯರಾಗುವುದಿಲ್ಲ. ರಾಜಕೀಯ ಕ್ಷೇತ್ರದಲ್ಲಿಯೂ ಕೆಲವು ಅಸಾಮಾಜಿಕ ಘಟಕಗಳು ನುಗ್ಗಿವೆ. ಆದ್ದರಿಂದ ನಿಜವಾದ ರಾಜಕಾರಣಿಗಳು ನಿಂದನೀಯರಾಗುವುದಿಲ್ಲ. ಇದೇ ರೀತಿ ಕೆಲವು ಧೂರ್ತ, ಕಪಟ ಮತ್ತು ವಂಚಕರು ಹಿಂದೂ ಸಂತರ ರೂಪ ಧರಿಸಿ ಮತ್ತು ಸಂತರ ಹೆಸರುಗಳನ್ನು ಇಟ್ಟುಕೊಂಡು ಆಶ್ರಮವನ್ನು ನಡೆಸಿದರೆ, ನಿಜವಾದ ಸಂತರು ಅಥವಾ ಅವರ ಆಶ್ರಮಗಳು ನಿಂದನೀಯರಾಗುವುದಿಲ್ಲ. ಆದರೂ ಪಾಶ್ಚಾತ್ಯ ಮೆಕಾಲೆ ಪದ್ಧತಿಯಿಂದ ಕಲಿತವರು ಈ ರೀತಿಯ ಒಂದಲ್ಲ ಒಂದು ಘಟನೆಗಳ ಆಧಾರದಲ್ಲಿ ಹಿಂದೂ ಧರ್ಮಕ್ಕೆ ಕಳಂಕ ತರುತ್ತಿದ್ದರೆ ಅವರನ್ನು ತಡೆಯುವುದು ನಮ್ಮ ಕರ್ತವ್ಯವಾಗಿದೆ. ಹಿಂದೂ ಧರ್ಮದ ಬಗ್ಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಿಂದಿಸುವ ಕಪಟ ಸಂತರ ದುರ್ವರ್ತನೆ ತಡೆಯಲು ಪ್ರಯತ್ನಿಸಬೇಕು. (ಆಧಾರ : ಮಾಸಿಕ ‘ಋಷಿ ಪ್ರಸಾರ’, ಆಗಸ್ಟ್ ೨೦೦೬)