ಸಹಕಾರ, ಸಮರ್ಪಣೆ, ಸಂಯಮ ಹಾಗೂ ಅಧ್ಯಾತ್ಮ ಇವುಗಳ ಮಾಧ್ಯಮದಿಂದ ಹಿಂದೂ ರಾಷ್ಟ್ರವಾದವನ್ನು ಪ್ರಾಪ್ತಮಾಡಬಹುದು ಎನ್ನುವ ಸಂದೇಶ ನೀಡುವ ಪರಾತ್ಪರ ಗುರು ಡಾ. ಆಠವಲೆಯವರು !
‘ಭಾರತೀಯ ಗಣರಾಜ್ಯದ ಕ್ಷಿತಿಜದ ಮೇಲೆ ಅಂಧಃಕಾರ ಹರಡಿತ್ತು. ಇಂತಹ ಸಮಯದಲ್ಲಿ ಸೂರ್ಯನ ಕಿರಣ ಕಾಣಿಸುವಂತೆ ೧೯೯೦ ರಲ್ಲಿ ಯುಗದ್ರಷ್ಟಾರ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ದೇಶದ ಕಲುಷಿತ ಧರ್ಮನಿರಪೇಕ್ಷತೆಯ (ಜಾತ್ಯತೀತವಾದ) ವಿರುದ್ಧ ಜನರಿಗೆ ಹಿಂದೂ ರಾಷ್ಟ್ರವಾದವನ್ನು ತೋರಿಸುವ ಕಾರ್ಯವನ್ನು ಮಾಡಿದರು. ಅವರು ನೀಡಿದಂತಹ ‘ಹಿಂದೂ ರಾಷ್ಟ್ರವನ್ನು ರೂಪಿಸಿದರೆ, ದೇಶದ ಅಭೀಷ್ಟ (ಬಯಕೆ) ಈಡೇರಬಹುದು ಹಾಗೂ ಧರ್ಮನಿರಪೇಕ್ಷತೆಯ ರಾಜಕಾರಣ ಕೇವಲ ಧನಪ್ರಾಪ್ತಿ, ಅಧಿಕಾರಪ್ರಾಪ್ತಿ ಹಾಗೂ ಕಲುಷಿತ ರಾಜಕೀಯ ವಿಚಾರಶೈಲಿಯನ್ನೇ ಪೋಷಣೆ ಮಾಡಬಹುದು. ಈ ೨೪ ವರ್ಷಗಳಲ್ಲಿ ಸಹಕಾರ, ಸಮರ್ಪಣೆ, ಸಂಯಮ ಹಾಗೂ ಅಧ್ಯಾತ್ಮ ಇವುಗಳ ಮಾಧ್ಯಮದಿಂದ ಹಿಂದೂ ರಾಷ್ಟ್ರವಾದವನ್ನು ಪ್ರಾಪ್ತ ಮಾಡಬಹುದು’ ಎನ್ನುವ ಸಂದೇಶವು ಪರಾತ್ಪರ ಗುರು ಡಾ. ಆಠವಲೆಯವರ ವಿಚಾರ ಮತ್ತು ತೇಜಸ್ವಿ ಹೇಳಿಕೆಗಳ ಮೂಲಕ ಜನಸಾಮಾನ್ಯರಿಗೆ ತಲುಪಿತು.
ಪರಾತ್ಪರ ಗುರು ಡಾ. ಆಠವಲೆಯವರ ಕೃತಿ ಮತ್ತು ವ್ಯಕ್ತಿತ್ವದ ಮೂಲಕ ‘ಹಿಂದೂ ರಾಷ್ಟ್ರ’ ನಿರ್ಮಾಣ ಮಾಡುವ ಆಧಾರಶಿಲೆಗೆ ಮೂರ್ತ ಸ್ವರೂಪ ನೀಡಲು ದೇಶದ ಜನತೆ ವಿಶೇಷವಾಗಿ ಯುವ ಶಕ್ತಿ ಹೊಸ ಚೇತನದೊಂದಿಗೆ ಸಿದ್ಧವಾಗುತ್ತಿದೆ. ಭಕ್ತಿಯೋಗ, ಜ್ಞಾನ ಯೋಗ, ಧ್ಯಾನಯೋಗ ಇತ್ಯಾದಿ ವಿವಿಧ ಯೋಗಮಾರ್ಗಗಳಲ್ಲಿನ ಸಾಧಕರಿಗೆ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾರ್ಗ ದರ್ಶನ ಮಾಡುವುದು ಸನಾತನದ ಕಾರ್ಯದ ಕೇಂದ್ರಬಿಂದು ಆಗಿದೆ. ಇಷ್ಟು ಮಾತ್ರವಲ್ಲ, ಹಿಂದೂ ಧರ್ಮದಲ್ಲಿನ ಅಧ್ಯಾತ್ಮಶಾಸ್ತ್ರ ವನ್ನು ಶಾಸ್ತ್ರೀಯ ಪರಿಭಾಷೆಯಲ್ಲಿ ಪ್ರಸಾರ ಮಾಡುವುದು, ಇದು ಸನಾತನ ಸಂಸ್ಥೆಯ ಸ್ಥಾಪನೆಯ ಮುಖ್ಯ ಉದ್ದೇಶವಾಗಿದೆ. ದೇಶದ ಸಂವಿಧಾನದಲ್ಲಿ ‘ಭಾರತ ಹಿಂದೂ ರಾಷ್ಟ್ರವೆಂದು ಘೋಷಣೆಯಾಗಬೇಕು’, ಅದಕ್ಕಾಗಿ ಸನಾತನ ಸಂಸ್ಥೆ ಸಮಾಜದಲ್ಲಿ ಜಾಗೃತಿ ನಿರ್ಮಾಣ ಮಾಡಲು ಅಖಂಡವಾಗಿ ಪ್ರಯತ್ನಿಸುತ್ತಿದೆ.
ಋಷಿಮುನಿಗಳು ಮತ್ತು ಸಂತಮಹಾತ್ಮರಿಂದ ಮನ್ನಣೆ ಪಡೆದಿರುವ ಧರ್ಮಶಾಸ್ತ್ರವನ್ನು ಆಧಾರವಾಗಿಟ್ಟು ಸಮಾಜ, ರಾಷ್ಟ್ರ ಮತ್ತು ಧರ್ಮದ ಉನ್ನತಿಗಾಗಿ ಕಾರ್ಯವನ್ನು ಮಾಡುವ ಸನಾತನ ಸಂಸ್ಥೆಯು ಪ್ರಮುಖ ಸಂಸ್ಥೆಯಾಗಿದೆ. ಸನಾತನ ಧರ್ಮವನ್ನು ಜೋಪಾನ ಮಾಡುವುದು, ಅದೇ| ರೀತಿ ಸನಾತನ ಸಮಾನತೆ, ಧರ್ಮವಾದಿ, ಪ್ರಬಲ ಹಾಗೂ ಪ್ರಖರ ಅಖಂಡ ಹಿಂದೂ ರಾಷ್ಟ್ರ ಸ್ಥಾಪಿಸುವುದೇ ಈ ಸಂಸ್ಥೆಯ ಉದ್ದೇಶವಾಗಿದೆ. ನನಗೆ ಪರಾತ್ಪರ ಗುರು ಡಾ. ಆಠವಲೆಯವರ ಶ್ರೀವಚನವನ್ನು ಪಾಲನೆ ಮಾಡುವಾಗ ನಾವು ಅತೀ ಶೀಘ್ರದಲ್ಲಿಯೇ ಪ್ರಖರ ಹಾಗೂ ಪ್ರಚಂಡ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಯಶಸ್ವಿ ಆಗುವೆವು, ಎಂದು ಅನಿಸುತ್ತದೆ.’
– (ಪೂ.) ನ್ಯಾಯವಾದಿ ಹರಿಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ