ದೇಶದಲ್ಲಿ ಸಮಾಜ ಮತ್ತು ಸಂಸ್ಕೃತಿ ಉಳಿಯಲು ದೇವಸ್ಥಾನಗಳ ರಕ್ಷಣೆ ಅತ್ಯಾವಶ್ಯಕ ! – ಡಾ. ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷರು, ಕೆ.ಎಲ್.ಇ. ಸಂಸ್ಥೆ, ಬೆಳಗಾವಿ

ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಚಿಕ್ಕೋಡಿಯಲ್ಲಿ ತಾಲೂಕು ಮಟ್ಟದ ಪರಿಷತ್ತು

ದೀಪ ಪ್ರಜ್ವಲಿಸುತ್ತಿರುವಾಗ (ಎಡಗಡೆಯಿಂದ) ಶ್ರೀ. ಮಲ್ಲಿಕಾರ್ಜುನ ಕೋರೆ, ಶ್ರೀ ಬಾಬಾಸಾಹೇಬ ಬಿಸಲೆ ಮಹಾರಾಜರು, ಶ್ರೀ ಶ್ರೀ ಶ್ರೀ ಶಿವಶಂಕರ ಸ್ವಾಮೀಜಿ, ಶ್ರೀ. ಪ್ರಭಾಕರ ಕೋರೆ, ಶ್ರೀ. ಭರತೇಶ ಬನವನಿ, ಶ್ರೀ. ಮೋಹನ ಗೌಡ.

ಚಿಕ್ಕೋಡಿ : ‘ದೇವಸ್ಥಾನಗಳಿಂದ ಮಾತ್ರ ಇವತ್ತು ದೇಶದಲ್ಲಿ ಅಲ್ಪಸ್ವಲ್ಪ ಪರಂಪರೆ ಮತ್ತು ಸಂಸ್ಕೃತಿ ಉಳಿದುಕೊಂಡಿದೆ, ಹಾಗಾಗಿ ದೇಶ, ಸಮಾಜ, ಪರಂಪರೆ ಮತ್ತು ಸಂಸ್ಕೃತಿ ಉಳಿಯಲು ದೇವಸ್ಥಾನಗಳ ರಕ್ಷಣೆ ಅತ್ಯಾವಶ್ಯಕವಾಗಿದೆ. ಇವತ್ತಿನ ಸರಕಾರ ದೇವಸ್ಥಾನಗಳ ದೇಣಿಗೆ ಹಣದ ಮೇಲೆ ಕಣ್ಣಿಟ್ಟಿರುವುದು ಒಳ್ಳೆಯದಲ್ಲ, ದೇವರ ದುಡ್ಡೆಂದರೆ ಅದು ಬೆಂಕಿ. ಅದನ್ನು ದೇವರ ಸೇವೆಗಾಗಿಯೇ ಉಪಯೋಗಿಸಬೇಕು ಎಂದು ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರು ಹೇಳಿದರು. ಅವರು ‘ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಮಾರ್ಚ ೬ ರಂದು ಚಿಕ್ಕೋಡಿಯ ಅಂಕಲಿಯ ಅನುಭವ ಮಂಟಪದಲ್ಲಿ ಆಯೋಜಿಸಿದ ದೇವಸ್ಥಾನಗಳ ತಾಲೂಕು ಮಟ್ಟದ ಪರಿಷತ್ತಿನ ಕಾರ್ಯಕ್ರಮವನ್ನು ದೀಪಪ್ರಜ್ವಲನೆ ಮಾಡಿ ಮಾತನಾಡುತ್ತಿದ್ದರು.

ದೇವಸ್ಥಾನಗಳೆಂದರೆ ಚೈತನ್ಯಮಯ ಕೇಂದ್ರಗಳು – ಶ್ರೀ ಶ್ರೀ ಶ್ರೀ ಶಿವಶಂಕರ ಸ್ವಾಮೀಜಿ, ಬಾವನಸವದತ್ತಿ

ದೇವಸ್ಥಾನಗಳೆಂದರೆ ಮಹಾತ್ಮರು, ಸತ್ಪುರುಷರ ಸಂಕಲ್ಪದಿಂದ ಪ್ರತಿಷ್ಠಾಪನೆ ಮಾಡಿದ ಚೈತನ್ಯಮಯ ಕೇಂದ್ರಗಳಾಗಿವೆ. ದೇವಸ್ಥಾನಗಳಲ್ಲಿ ಮಾಡುವ ಪಂಚಾ ಮೃತ ಅಭಿಷೇಕ, ಕಾಯಿ-ಕರ್ಪೂರ ಇತರ ಹಲವಾರು ಪೂಜೆಗಳನ್ನು ಮಾಡುವುದರ ಹಿಂದೆ ಅನನ್ಯವಾದ ಶಕ್ತಿ ಅಡಗಿದೆ. ಇದನ್ನೆಲ್ಲ ಧರ್ಮಶಿಕ್ಷಣದ ಮೂಲಕ ಸಮಾಜಕ್ಕೆ ತಿಳಿಸಿ ಹಿಂದೂ ಸಮಾಜವನ್ನು ಸಂಘಟಿಸುವ ಕಾರ್ಯವನ್ನು ನಾವು ನೀವೆಲ್ಲರೂ ಸೇರಿ ಪ್ರಯತ್ನ ಮಾಡಬೇಕಾಗಿದೆ.

ದೇವಸ್ಥಾನಗಳ ಸಂಸ್ಕೃತಿಯ ರಕ್ಷಣೆಯು ನಮ್ಮೆಲ್ಲರ ಕರ್ತವ್ಯ ! –  ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

 ದೇವಸ್ಥಾನಗಳ ಸಂಸ್ಕೃತಿಯ ರಕ್ಷಣೆಯು ನಮ್ಮೆಲ್ಲರ ಕರ್ತವ್ಯವಾಗಿದೆ. ಒಂದು ವೇಳೆ ನಾವು ಸಂಘಟಿತರಾಗಿ ಹೋರಾಟ ಮಾಡದಿದ್ದರೆ, ಹೇಗೆ ಮೊಗಲರು ದೇವಸ್ಥಾನ ಲೂಟಿ ಮಾಡಿ ನಾಶ ಮಾಡಿದರು ಮತ್ತು ಬ್ರಿಟಿಷರು ಕಾನೂನಿನ ಮೂಲಕ ದೇವಸ್ಥಾನಗಳ ನಿಯಂತ್ರಣ ಮಾಡಿದರೋ, ಅದೇ ರೀತಿ ನಮ್ಮ ಮೇಲಿನ ಆಕ್ರಮಣಗಳು ಮುಂದುವರೆಯಲಿವೆ.