ಋತುಸ್ರಾವಕ್ಕೆ (ಮುಟ್ಟಿಗೆ) ಸಂಬಂಧಿಸಿದ ಸಮಸ್ಯೆಗಳಿಗೆÉ (Ailments related to menses) ಹೋಮಿಯೋಪಥಿ ಔಷಧಗಳ ಮಾಹಿತಿ

‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ ಉಪಚಾರ !’ (ಲೇಖನಮಾಲೆ ೨೧) !

ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯ ದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ. ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿಯೇ ಈ ಚಿಕಿತ್ಸೆ ಯನ್ನು ಹೇಗೆ ಮಾಡಬಹುದು ? ಹೋಮಿಯೋಪಥಿ ಔಷಧಿಗಳನ್ನು ಯಾವ ರೀತಿ ತಯಾರಿಸಬೇಕು ? ಅವುಗಳನ್ನು ಹೇಗೆ ಸಂಗ್ರಹಿಸಬೇಕು ? ಇಂತಹ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇವೆ.

ಡಾ. ಪ್ರವೀಣ ಮೆಹತಾ

ಸಂಚಿಕೆ ೨೫/೯ ರಿಂದ ನಾವು ಪ್ರತ್ಯಕ್ಷ ರೋಗಗಳಿಗೆ ಸ್ವಯಂಚಿಕಿತ್ಸೆ ಪದ್ಧತಿಯನ್ನು ತಿಳಿದುಕೊಳ್ಳುತ್ತಿದ್ದೇವೆ. ಅದರ ಅಡಿಯಲ್ಲಿ ೨೫/೨೪ ನೇ ಸಂಚಿಕೆಯಲ್ಲಿ ನಾವು ಮೂಗೇಟು (ಒಳಪೆಟ್ಟು) / ಗಾಯ (Bruise/injury)’ ಮತ್ತು ಮತ್ತು ಉಳುಕುವುದು (Sprain)’ ಈ ಕಾಯಿಲೆಗಳಾದಾಗ ತೆಗೆದುಕೊಳ್ಳುವ ಕಾಳಜಿ ಮತ್ತು ಅವುಗಳಿಗೆ ತೆಗೆದುಕೊಳ್ಳುವ ಔಷಧಿಗಳು’, ಇವುಗಳ ಮಾಹಿತಿಯನ್ನು ಓದಿದೆವು. ಕಾಯಿಲೆಗಳಿಗೆ ನೇರವಾಗಿ ಸ್ವಯಂಚಿಕಿತ್ಸೆ ಮಾಡುವ ಮೊದಲು ೨೫/೧, ೨೫/೨ ಮತ್ತು ೨೫/೩ ನೇ ‘ಸನಾತನ ಪ್ರಭಾತ’ ಪತ್ರಿಕೆಯಲ್ಲಿ ಪ್ರಕಾಶಿಸಲಾದ ಲೇಖನಗಳಲ್ಲಿನ ‘ಹೋಮಿಯೋಪತಿ ಸ್ವಯಂಚಿಕಿತ್ಸೆಯ ಬಗ್ಗೆ ಇರುವ ಮಾರ್ಗದರ್ಶನದ ಅಂಶಗಳು ಮತ್ತು ಪ್ರತ್ಯಕ್ಷ ಔಷಧಿಗಳನ್ನು ಹೇಗೆ ಆಯ್ಕೆ ಮಾಡಬೇಕು ?’, ಎಂಬುದರ ಮಾಹಿತಿಯನ್ನು ವಾಚಕರು ಈ ಮೊದಲು ಓದಬೇಕೆಂದು ವಿನಂತಿ !

ಮಹಿಳೆಯರು ಋತುಸ್ರಾವಕ್ಕೆ (ಮುಟ್ಟಿಗೆ) ಸಂಬಂಧಿಸಿದ ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇವುಗಳಲ್ಲಿನ ಕೆಲವು ಪ್ರಮುಖ ಸಮಸ್ಯೆಗಳ ಉಪಚಾರದ ಸಂದರ್ಭದಲ್ಲಿನ ಮಾಹಿತಿಯನ್ನು ಮುಂದೆ ಕೊಡಲಾಗಿದೆ. ವಿಶಿಷ್ಟವಾದ ಲಕ್ಷಣಗಳಿಗೆ ಯಾವ ಔಷಧಿಯನ್ನು ತೆಗೆದುಕೊಳ್ಳಬೇಕು, ಎಂಬುದನ್ನು  ಔಷಧಗಳ ಹೆಸರುಗಳ ಮುಂದೆ ಕೊಡಲಾಗಿದೆ.

ಡಾ. ಸೌ. ಸಂಗೀತಾ

೧. ಋತುಸ್ರಾವದ ಮೊದಲಿನ ಸಮಸ್ಯೆಗಳು 

೧ ಅ. ಫಾಸ್ಫೊರಮ್‌ ಎಸಿಡಮ್‌ (Phosphorum Acidum)

೧ ಅ ೧. ಹೊಟ್ಟೆನೋವು ಬರುವುದು, ದೇಹದಿಂದ ಬಿಳಿಮುಟ್ಟು ಹೋಗುವುದು ಮತ್ತು ಮನಸ್ಸಿನ ಸ್ಥಿತಿ ಅಳುವಂತೆ ಇರುವುದು

೧ ಅ ೨. ಒಸಡು, ಹಾಗೆಯೇ ಗಲ್ಲ್ಲಗಳಿಗೆ ಬಾವು ಬರುವುದು

ಡಾ.ಅಜಿತ ಭರಮಕುಡೆ

೧ ಅ ೩. ಶರೀರದ ಮೇಲಿರುವ ಹುಣ್ಣುಗಳಿಂದ (Ulcerss) ರಕ್ತಸ್ರಾವವಾಗುವುದು

೧ ಆ. ಕಲ್ಕೇರಿಯಾ ಕಾರ್ಬೋನಿಕಮ್‌ (Calcarea Carbonicum)

೧ ಆ ೧. ತಲೆ ಸುತ್ತುವುದು

೧ ಆ ೨. ನಾಲಿಗೆಗೆ ಹುಳಿ ರುಚಿ ಬರುವುದು

೧ ಆ ೩. ಉಗುಳಿನಲ್ಲಿ ಸ್ವಲ್ಪ ರಕ್ತ ಬೀಳುವುದು

೧ ಇ. ನೆಟ್ರಮ್‌ ಮ್ಯುರಿಯಾಟಿಕಮ್‌ (Natrum Muriaticum)

೧ ಇ ೧. ಸ್ತನಗಳಲ್ಲಿ ವೇದನೆಗಳಾಗುವುದು

೧ ಇ ೨. ರಕ್ತಸ್ರಾವ ಬೇಗ ಮತ್ತು ಹೆಚ್ಚು ಪ್ರಮಾಣದಲ್ಲಾಗುವುದು

೧ ಈ. ಕೊನಿಯಮ್‌ ಮ್ಯಾಕ್ಯುಲೆಟಮ್‌ (Conium Maculatum): ಸ್ತನಗಳಲ್ಲಿ ವೇದನೆಗಳಾಗುವುದು ಮತ್ತು ಅತ್ಯಂತ ಕಡಿಮೆ ಪ್ರಮಾಣದಲ್ಲಿ ರಕ್ತಸ್ರಾವ ಆಗುವುದು

೧ ಉ. ಗ್ರಾಫೈಟಿಸ್‌ (Graphites) : ಯೋನಿಮಾರ್ಗದಲ್ಲಿ ತುರಿಸುವುದು

೧ ಊ. ವ್ಯಾರಾಟ್ರಮ್‌ ಆಲ್ಬಮ್‌ (Veratrum Album) : ಮುಟ್ಟು ಪ್ರಾರಂಭವಾಗುವ ಮೊದಲು ಹೊಟ್ಟೆ ತೊಳೆಸಿದಂತಾಗುವುದು ಅಥವಾ ಭೇದಿಯಾಗುವುದು

೧ ಎ. ಕ್ರಿಯೊಸೊಟಮ್‌ (Kreosotum)  : ಋತುಸ್ರಾವ ಪ್ರಾರಂಭವಾಗುವ ಕೆಲವು ದಿನಗಳ ಮೊದಲು ಅಸ್ವಸ್ಥತೆ ಮತ್ತು ಕಿರಿಕಿರಿ ಆಗುವುದು

೧ ಐ. ಮ್ಯಾಗ್ನೇಶಿಯಮ್‌ ಮ್ಯುರಿಯಾಟಿಕಮ್‌ (Magnesium Muriaticum)  : ಮುಟ್ಟಿನ ಸ್ರಾವ ಪ್ರಾರಂಭವಾಗುವ ಒಂದು ದಿನ ಮೊದಲು ತುಂಬಾ ಕಿರಿಕಿರಿ ಆಗುವುದು

೧ ಓ. ಸೆಪಿಯಾ ಆಫಿಸಿನಾಲಿಸ್‌ (Sepia Officinalis) : ಮುಟ್ಟಿನ ಸ್ರಾವ ಪ್ರಾರಂಭವಾಗುವ ಮೊದಲು ನಿರಾಶೆ ಬರುವುದು

೧ ಔ. ಲೈಕೊಪೊಡಿಯಮ್‌ ಕ್ಲಾವೆಟಮ್‌ (Lycopodium Clavatum) : ಮುಟ್ಟಿನ ಸ್ರಾವ ಪ್ರಾರಂಭವಾಗುವ ಮೊದಲು ಖಿನ್ನತೆ ಬಂದು ಪ್ರತಿಯೊಂದು ವಿಷಯವನ್ನು ವಿರೋಧಿಸುವುದು

೧ ಅಂ. ಕಾಸ್ಟಿಕಮ್‌ (Causticum) : ಮುಟ್ಟಿನ ಸ್ರಾವ ಪ್ರಾರಂಭ ವಾಗುವ ಮೊದಲು ಪ್ರತಿಯೊಂದು ವಿಷಯದ ನಕಾರಾತ್ಮಕ ಪಕ್ಷವನ್ನು ನೋಡುವುದು

೧ ಕ. ಕಾಮೊಮಿಲ್ಲಾ (Chamomilla) : ಮುಟ್ಟಿನ ಸ್ರಾವ ಪ್ರಾರಂಭವಾಗುವ ಮೊದಲು ವಿಚಿತ್ರವಾಗಿ ವರ್ತಿಸುವುದು

೨. ಮಾಸಿಕ ಸರದಿಯ ಮೊದಲು ಮತ್ತು ಸರದಿಯಿರುವಾಗಿನ ಸಮಸ್ಯೆಗಳು

೨ ಅ. ಗ್ರಾಫೈಟಿಸ್‌ (Graphites) : ಒಣ ಕೆಮ್ಮು, ಹಾಗೆಯೇ ಬೆವರು ಬರುವುದು

೨ ಆ. ಲಿಥಿಯಮ್‌ ಕಾರ್ಬೋನಿಕಮ್‌ (Lithium Carbonicum) : ಹೃದಯದ ಜಾಗದಲ್ಲಿ ವೇದನೆಗಳು ಆಗುವುದು

೩. ಮಾಸಿಕ ಸರದಿ ಪ್ರಾರಂಭವಿದ್ದಾಗಿನ ಸಮಸ್ಯೆಗಳು

೩ ಅ. ಗ್ರಾಫೈಟಿಸ್‌ (Graphites)

೩ ಅ ೧. ಸರದಿಯ ಸಮಯದಲ್ಲಿ ಧ್ವನಿ ಬದಲಾಗುವುದು ಮತ್ತು ನೆಗಡಿ ಮತ್ತು ಜ್ವರ ಬರುವುದು

೩ ಅ ೨. ಮೈ ನಡುಗುವುದು

೩ ಆ. ಬೊರ್ಯಾಕ್ಸ್ (Borax) : ಋತುಸ್ರಾವ ನಡೆಯುತ್ತಿರುವಾಗ ಎರಡೂ ತೊಡೆಗಳ ಸಂದಿಗಳಲ್ಲಿ (groin ನಲ್ಲಿ) ನೋಯುವುದು.

(ಮುಂದುವರೆಯುವುದು)