೨೫/೨೪ ರಲ್ಲಿ ಮುದ್ರಿಸಿದ ಸದ್ಗುರು ರಾಜೇಂದ್ರ ಶಿಂದೆ ಇವರ ಲೇಖನದಲ್ಲಿ ‘ಪರಾತ್ಪರ ಗುರುದೇವರು ಸಮಷ್ಟಿ ಸಾಧನೆಯನ್ನು ಯಾವ ರೀತಿ ಮಾಡಬೇಕು ? ಮತ್ತು ಯಾವ ರೀತಿ ಮಾಡಿಸಿಕೊಳ್ಳಬೇಕು’, ಈ ಬಗ್ಗೆ ಓದಿದೆವು. ಇಂದಿನ ಲೇಖನದಲ್ಲಿ ‘ಪರಾತ್ಪರ ಗುರುದೇವರು ವಿವಿಧ ಪ್ರಸಂಗಗಳಿಂದ ‘ಆಜ್ಞಾಪಾಲನೆ ಮತ್ತು ‘ಕೇಳಿಕೊಳ್ಳುವುದು’, ಈ ಗುಣಗಳ ಮಹತ್ವವನ್ನು ಮನಸ್ಸಿನಲ್ಲಿ ಹೇಗೆ ಬಿಂಬಿಸಿದರು’, ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ.
ಹಿಂದಿನ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/109356.html |
ಭಾಗ ೬
೩. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕನಿಂದ ಆಜ್ಞಾಪಾಲನೆಯನ್ನು ಮಾಡಿಸಿಕೊಂಡು ‘ಅವನ ಅಹಂ ಹೆಚ್ಚಾಗಬಾರದು’, ಎಂಬುದರ ಕಾಳಜಿ ತೆಗೆದುಕೊಳ್ಳುವುದು
೩ ಅ. ವಿಜಾಪುರದಲ್ಲಿ ಸಾಧನೆಯ ಸಭೆಯ ಪ್ರಚಾರಕ್ಕೆ ಉತ್ತಮ ಬೆಂಬಲ ಸಿಗುವುದು ಮತ್ತು ತುಂಬಾ ವಿರೋಧವೂ ಆಗುವುದು : ನವೆಂಬರ್ ೨೦೦೯ ರಲ್ಲಿ ಕರ್ನಾಟಕದಲ್ಲಿನ ವಿಜಾಪುರದಲ್ಲಿ ಸಾಧನೆಯ ಬಗೆಗಿನ ಮೊದಲನೇ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಪ್ರಚಾರಕ್ಕೆ ಉತ್ತಮ ಬೆಂಬಲ ಸಿಕ್ಕಿತ್ತು ಮತ್ತು ಹೆಚ್ಚು ಪ್ರಮಾಣದಲ್ಲಿ ವಿರೋಧವೂ ಆಗುತ್ತಿತ್ತು. ಆದ್ದರಿಂದ ಪ್ರತಿದಿನ ಏನಾದರೊಂದು ಹೊಸ ಘಟನೆ ಘಟಿಸುತ್ತಿತ್ತು. ವಿಜಾಪುರದಲ್ಲಿ ಇತರ ಧರ್ಮೀಯರು ಹೆಚ್ಚು ಪ್ರಮಾಣದಲ್ಲಿದ್ದಾರೆ. ಆದ್ದರಿಂದ ಪ್ರಚಾರವನ್ನು ಮಾಡುವಾಗ ಕಾಳಜಿ ತೆಗೆದುಕೊಳ್ಳಬೇಕಾಗುತ್ತಿತ್ತು.
೩ ಆ. ಸಭೆಯ ೨ ದಿನ ಮೊದಲು ಪರಾತ್ಪರ ಗುರು ಡಾ. ಆಠವಲೆಯವರು ನನಗೆ ವಿಜಾಪುರದಿಂದ ಮುಲ್ಕಿಗೆ ಹೋಗುವ ವಿಚಾರ ಕೊಡುವುದು : ಸಭೆಯ ಪ್ರಚಾರಕ್ಕೆ ಸಮಾಜದಿಂದ ಒಳ್ಳೆಯ ಬೆಂಬಲ ಸಿಗುತ್ತಿರುವುದರಿಂದ ಸಾಧಕರಲ್ಲಿಯೂ ಉತ್ಸಾಹವಿತ್ತು.ಎಲ್ಲರಿಗೂ ‘ಸಭೆಗೆ ಒಳ್ಳೆಯ ಉಪಸ್ಥಿತಿ ಇರುವುದು’, ಎಂದು ಅನಿಸುತ್ತಿತ್ತು. ಸಭೆಗೆ ೨ ದಿನ ಇರುವಾಗ ನನ್ನ ಮನಸ್ಸಿನಲ್ಲಿ ಪ.ಪೂ. ಗುರುದೇವರ ಕೃಪೆಯಿಂದ ಇದ್ದಕ್ಕಿದ್ದಂತೆ, ‘ಸಭೆಯ ಸೇವೆಯನ್ನು ಬಿಟ್ಟು ಬೇರೆ ಒಂದು ಸೇವೆಗಾಗಿ ಮಂಗಳೂರಿನ ಸಮೀಪದ ಮುಲ್ಕಿಗೆ ಹೋಗಬೇಕು’ ಎಂಬ ವಿಚಾರ ಬರತೊಡಗಿತು; ಆದರೆ ‘ಸಭೆಗೆ ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಂಬಲವಿದೆ ಮತ್ತು ವಿರೋಧವೂ ಅಷ್ಟೇ ಇದೆ. ಸಾಧಕರಿಗೆ ಎಲ್ಲವನ್ನು ನಿರ್ವಹಿಸಲು ಸಾಧ್ಯವಾಗುತ್ತದೆಯೇ ? ನಾವು ಸ್ವಲ್ಪ ಆಯೋಜನೆಯನ್ನು ನೋಡಿ ನಂತರ ಅಥವಾ ನಾಳೆ ಬೆಳಗ್ಗೆ ಹೋಗೋಣ’, ಎಂಬ ವಿಚಾರ ಬಂದಿತು; ಆದರೆ ಮನಸ್ಸಿನಲ್ಲಿ ಬಂದ ವಿಚಾರವು ಪುನಃ ಹೆಚ್ಚಾಗತೊಡಗಿತು. ಆಗ ‘ನನ್ನಿಂದ ಆಜ್ಞಾಪಾಲನೆ ಆಗಲಿಲ್ಲ’, ಈ ತಪ್ಪು ನನ್ನ ಗಮನಕ್ಕೆ ಬಂದಿತು ಮತ್ತು ನಾನು ತಕ್ಷಣ ಅಲ್ಲಿಂದ ಮುಲ್ಕಿಗೆ ಹೋದೆನು.
೩ ಇ. ವಿಜಾಪುರದ ಸಭೆಗೆ ಜಿಜ್ಞಾಸುಗಳ ತುಂಬಾ ಉಪಸ್ಥಿತಿ ಇರುವುದರಿಂದ ‘ಸಾಧಕನ ಅಹಂ ಹೆಚ್ಚಾಗಬಾರದು’, ಎಂದು ಪರಾತ್ಪರ ಗುರು ಡಾ. ಆಠವಲೆಯವರು ಅವನನ್ನು ಮುಲ್ಕಿಗೆ ಕಳುಹಿಸುವುದು : ವಿಜಾಪುರದ ಸಭೆಯು ತುಂಬಾ ಚೆನ್ನಾಗಿ ಆಯಿತು. ವಿಜಾಪುರದಲ್ಲಿ ಆದ ಸಭೆಗೆ ಇದುವರೆಗೆ ಕರ್ನಾಟಕದಲ್ಲಿ ಆಗಿರುವ ಎಲ್ಲ ಕಾರ್ಯಕ್ರಮಗಳಿಗಿಂತ ಹೆಚ್ಚು, ಅಂದರೆ ೧೬ ಸಾವಿರದಷ್ಟು ಉಪಸ್ಥಿತಿ ಇತ್ತು. ನಾನು ಅಲ್ಲಿ ಇದ್ದಿದ್ದರೆ, ನನ್ನ ಮನಸ್ಸಿನಲ್ಲಿ, ‘ನಾನು ಇಷ್ಟೊಂದು ಒಳ್ಳೆಯ ಆಯೋಜನೆ ಮಾಡಿದ್ದರಿಂದ ಹೀಗಾಯಿತು’, ಎಂದು ಅಹಂಯುಕ್ತ ವಿಚಾರಗಳು ಖಂಡಿತ ಬರುತ್ತಿದ್ದವು. ನಾನು ಇಲ್ಲದಿರುವಾಗಲೂ ಎಷ್ಟೊಂದು ದೊಡ್ಡ ಕಾರ್ಯಕ್ರಮದ ಆಯೋಜನೆಯನ್ನು ಸಾಧಕರು ಒಳ್ಳೆಯ ರೀತಿಯಲ್ಲಿ ಮಾಡಿದ್ದರು. ಆದ್ದರಿಂದ ನನ್ನ ಕರ್ತೃತ್ವದ ವಿಚಾರವು ಎಷ್ಟು ತಪ್ಪಾಗಿತ್ತು, ಹಾಗೆಯೇ ‘ಮಾಡುವವನು-ಮಾಡಿಸಿಕೊಳ್ಳುವವನು ಭಗವಂತನೇ ಆಗಿದ್ದು ಅವನಿಗೆ ಅಸಾಧ್ಯವಾಗಿರುವುದು ಏನೂ ಇಲ್ಲ’, ಎಂಬ ಭಾವವು ನನ್ನಲ್ಲಿ ಕಡಿಮೆ ಬಿದ್ದಿತು’, ಇದನ್ನು ಗುರುದೇವರು ನನಗೆ ತೋರಿಸಿಕೊಟ್ಟರು.
ಶ್ರೀ ಗುರುಗಳ ಆಜ್ಞಾಪಾಲನೆಯನ್ನು ಮಾಡುವುದಕ್ಕಿಂತ ಬುದ್ಧಿಯಿಂದ ವಿಚಾರ ಮಾಡಿ ‘ಇಲ್ಲಿನ ಸೇವೆಗಳ ಆಯೋಜನೆ ಯನ್ನು ಒಳ್ಳೆಯ ರೀತಿಯಿಂದ ಮಾಡಿ ಹೋಗೋಣ’ ಅಥವಾ ‘ಸಾಧಕರಿಗೆ ಇದೆಲ್ಲವನ್ನು ನಿಭಾಯಿಸಲು ಆಗಲಿಕ್ಕಿಲ್ಲ’, ಇಂತಹ ಅಯೋಗ್ಯ ಮತ್ತು ಅಹಂಯುಕ್ತ ವಿಚಾರಗಳು ನನ್ನ ಮನಸ್ಸಿ ನಲ್ಲಿದ್ದವು. ಈ ಪ್ರಸಂಗದಿಂದ ಗುರುದೇವರು ನನಗೆ ಅದನ್ನು ಪರೋಕ್ಷವಾಗಿ ಅರಿವು ಮಾಡಿಕೊಟ್ಟರು. ಅದಕ್ಕಾಗಿ ನಾನು ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.
೩ ಈ. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕನ ಮನಸ್ಸಿನ ಅತೀ ಸೂಕ್ಷ್ಮವಾಗಿರುವ ಅಹಂನ ವಿಚಾರಗಳನ್ನು ಗುರುತಿಸಿ ಅವನನ್ನು ಆಧ್ಯಾತ್ಮಿಕ ಅಧಃಪತನದಿಂದ (ಅವನತಿಯಿಂದ) ರಕ್ಷಿಸುವುದು : ‘ಸಾಧನೆಯಲ್ಲಿ ಬುದ್ಧಿಯ ಅಡತಡೆಯು ಹೇಗೆ ಕಾರ್ಯ ಮಾಡುತ್ತದೆ ? ಮತ್ತು ನಮ್ಮ ಅಹಂನ್ನು ಹೇಗೆ ಹೆಚ್ಚಿಸುತ್ತದೆ ?’, ಎಂಬುದು ಸಾಧಕರಿಗೆ ತಿಳಿಯುವುದಿಲ್ಲ; ಆದರೆ ಸರ್ವಶಕ್ತಿವಂತ ಮತ್ತು ಸರ್ವಜ್ಞರಾಗಿರುವ ಶ್ರೀ ಗುರುಗಳು ಸಾಧಕನ ಮನಸ್ಸಿನಲ್ಲಿನ ಪ್ರತಿಯೊಂದು ಸೂಕ್ಷ್ಮಾತೀಸೂಕ್ಷ್ಮ ವಿಚಾರಗಳನ್ನು ಗುರುತಿಸಿ ‘ಅವನ ಆಧ್ಯಾತ್ಮಿಕ ಅಧೋಗತಿಯಾಗದಂತೆ ಅವನನ್ನು ಹೇಗೆ ರಕ್ಷಿಸುತ್ತಾರೆ ? ಎಂಬುದು ಇದೊಂದು ಉತ್ತಮ ಉದಾಹರಣೆಯಾಗಿದೆ’, ಎಂದು ನನಗೆ ಅನಿಸುತ್ತದೆ.
೪. ಪರಾತ್ಪರ ಗುರು ಡಾಕ್ಟರರು ‘ಯಾವುದೇ ಹೊಸ ಆಯೋಜನೆಯನ್ನು ಮಾಡುವಾಗ ಅದನ್ನು ಕೇಳಿಕೊಂಡು ಮಾಡಬೇಕು’, ಎಂಬುದನ್ನು ಕಲಿಸುವುದು
೪ ಅ. ಕರ್ನಾಟಕದ ಗದಗದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಇತರ ಜಿಲ್ಲೆಗಳ ಸಾಧಕರನ್ನು ಕಲಿಯಲು ಸ್ವಂತ ಮನಸ್ಸಿನಿಂದ ಕರೆಯುವುದು : ಏಪ್ರಿಲ್ ೨೦೦೮ ರಲ್ಲಿ ಕರ್ನಾಟಕದ ಗದಗನಲ್ಲಿ ದೊಡ್ಡ ಕಾರ್ಯಕ್ರಮದ ಆಯೋಜನೆಯನ್ನು ಮಾಡಲಾಗಿತ್ತು. ಅದು ಕರ್ನಾಟಕದಲ್ಲಿನ ಮೊದಲನೇ ದೊಡ್ಡ ಕಾರ್ಯಕ್ರಮವಾಗಿತ್ತು. ಈ ಕಾರ್ಯಕ್ರಮದ ನಂತರ ಕರ್ನಾಟಕದಲ್ಲಿನ ಅನೇಕ ಜಿಲ್ಲೆಗಳಲ್ಲಿ ಇಂತಹ ದೊಡ್ಡ ಕಾರ್ಯಕ್ರಮಗಳನ್ನು ಮಾಡುವ ಆಯೋಜನೆ ಮಾಡಲಿಕ್ಕಿತ್ತು. ಮೊದಲನೇ ಕಾರ್ಯಕ್ರಮಕ್ಕೆ ಇತರ ಜಿಲ್ಲೆಗಳಿಂದ ಸಾಧಕರನ್ನು ಕರೆಯುವ ಕಾರಣವೆಂದರೆ ಅವರಿಗೆ ‘ದೊಡ್ಡ ಕಾರ್ಯಕ್ರಮ ಹೇಗಿರುತ್ತದೆ ?’ ಮತ್ತು ಇಂತಹ ಕಾರ್ಯಕ್ರಮಗಳ ಆಯೋಜನೆಯನ್ನು ಹೇಗೆ ಮಾಡಬೇಕು ?’, ಎಂಬುದನ್ನೆಲ್ಲ ಕಲಿಯಲು ಸಿಗುವುದು. ಆದ್ದರಿಂದ ‘ಅವರ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡಲು ಸ್ವಲ್ಪ ಸುಲಭವಾಗುವುದು’, ಈ ವಿಚಾರದಿಂದ ನಾವು (ನಾನು ಮತ್ತು ಕರ್ನಾಟಕದ ಜವಾಬ್ದಾರ ಸಾಧಕರು) ಕರ್ನಾಟಕದಲ್ಲಿನ ಕೆಲವು ಸಾಧಕರನ್ನು ಹಿಂದಿನ ದಿನವೇ ಗದಗಕ್ಕೆ ಕರೆಯುವ ಆಯೋಜನೆಯನ್ನು ಮಾಡಿದೆವು.
೪ ಆ. ಪರಾತ್ಪರ ಗುರು ಡಾ. ಆಠವಲೆ ಯವರು ‘ಇಷ್ಟೊಂದು (೧೫೦) ಸಾಧಕರನ್ನು ಕಲಿಯಲು ಕರೆಸುವುದು’, ಇದು ತಪ್ಪಾಗಿದೆ’, ಎಂದು ಸಾಧಕರ ಮೂಲಕ ತಿಳಿಸುವುದು : ಕರ್ನಾಟಕ ರಾಜ್ಯದಿಂದ ಸುಮಾರು ೧೫೦ ಸಾಧಕರು ಕಲಿಯಲು ಬಂದಿದ್ದರು. ಈ ಕುರಿತು ನಾನು ಓರ್ವ ಸಾಧಕನ ಮಾಧ್ಯಮದಿಂದ ”ನಾವು ಕರ್ನಾಟಕದಲ್ಲಿನ ಮೊದಲನೇ ದೊಡ್ಡ ಕಾರ್ಯಕ್ರಮದ ಆಯೋಜನೆಗಾಗಿ ಇತರ ಜಿಲ್ಲೆಗಳಲ್ಲಿನ ಸಾಧಕರನ್ನು ಕಲಿಯಲು ಕರೆಸಿದ್ದೆವು. ಅವರಿಗೆ ತುಂಬಾ ಕಲಿಯಲು ಸಿಕ್ಕಿತು’’ ಎಂದು ಗುರುದೇವರಿಗೆ ತಿಳಿಸಿದೆನು. ಆಗ ಅವರು ನನಗೆ ”ಇದು ತುಂಬಾ ದೊಡ್ಡ ತಪ್ಪಾಗಿದೆ. ಇಷ್ಟೊಂದು ದೊಡ್ಡ ಆಯೋಜನೆಯನ್ನು ಮಾಡುವ ಮೊದಲು ಕೇಳಬೇಕಿತ್ತು. ಆ ಎಲ್ಲರೂ ಬಂದು-ಹೋಗುವುದರಲ್ಲಿ ತುಂಬಾ ಸಮಯ ಮತ್ತು ಹಣ ಖರ್ಚಾಯಿತು. ಈ ತಪ್ಪನ್ನು ಸತ್ಸಂಗದಲ್ಲಿ ಹೇಳಬೇಕು’’ ಎಂದು ತಿಳಿಸಿದರು. ಮೊದಲು ನನಗೆ ‘ನಾನು ಒಳ್ಳೆಯ ಆಯೋಜನೆಯನ್ನು ಮಾಡಿದ್ದೇನೆ’, ಎಂದು ಅನಿಸುತ್ತಿತ್ತು; ಆದರೆ ಅದು ಸಂಪೂರ್ಣ ತಪ್ಪಾಗಿತ್ತು.
೪ ಇ. ಕಲಿಯಲು ಸಿಕ್ಕಿದ ಅಂಶಗಳು
೧. ಯಾವುದಾದರೊಂದು ಬೇರೆ (ಹೊಸ) ಆಯೋಜನೆಯನ್ನು ಮಾಡುವಾಗ ಅದನ್ನು ಕೇಳಿಕೊಂಡು ಮಾಡಿದರೆ ‘ಯೋಗ್ಯ ಯಾವುದು ?’ ಎಂಬುದು ಗೊತ್ತಾಗುತ್ತದೆ.
೨. ತನ್ನದೇ ಸ್ತರದಲ್ಲಿ ಬೇರೆ ಆಯೋಜನೆ ಮಾಡಿದ್ದರಿಂದ ಅಹಂ ಹೆಚ್ಚಾಗುತ್ತದೆ ಮತ್ತು ಕೇಳಿಕೊಳ್ಳುವ ವೃತ್ತಿ ಕಡಿಮೆಯಾಗುತ್ತದೆ.
೩. ದೊಡ್ಡ ತಪ್ಪುಗಳಿಂದ ಸಾಧನೆಯೂ ಹೆಚ್ಚು ಖರ್ಚಾಗುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಗುರುದೇವಾ, ಸಾಧಕರನ್ನು ಸಾಧನೆಯಲ್ಲಿ ಮುಂದೆ ಕರೆದುಕೊಂಡು ಹೋಗಲು ನೀವು ಅನೇಕ ಮಾಧ್ಯಮಗಳಿಂದ ನಿರಂತರವಾಗಿ ಕಲಿಸುತ್ತೀರಿ. ಪ್ರತಿಯೊಬ್ಬ ಸಾಧಕನ ಪ್ರಕೃತಿಗನುಸಾರ ಮತ್ತು ಅವನ ಸಾಧನೆಯ ಮಾರ್ಗಕ್ಕನುಸಾರ ಅವನ ಜೀವನದಲ್ಲಿ ಪ್ರಸಂಗವನ್ನು ನಿರ್ಮಾಣ ಮಾಡುತ್ತೀರಿ. ಅವನಿಗೆ ಅಗತ್ಯವಿದ್ದಷ್ಟು ಜ್ಞಾನವನ್ನು ನೀಡಿ ಅದನ್ನು ಪ್ರತ್ಯಕ್ಷ ಕೃತಿಯಲ್ಲಿ ತರಲು ನೀವೇ ಸಾಧಕರಿಗೆ ಸ್ಫೂರ್ತಿ ನೀಡುತ್ತೀರಿ. ಅದಕ್ಕಾಗಿ ನಿಮ್ಮ ಚರಣಗಳಲ್ಲಿ ಅದೆಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಅದು ಕಡಿಮೆಯೇ ಆಗಿದೆ.
ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದ ಪುಷ್ಪಗಳನ್ನು ಕೃತಜ್ಞತೆಯ ಭಾವದಿಂದ ಅವರ ಚರಣಗಳಲ್ಲಿಯೇ ಅರ್ಪಿಸುತ್ತೇನೆ ! (೩೧.೭.೨೦೨೩)
ಇದಂ ನ ಮಮ |’
– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ.