ಪರಾತ್ಪರ ಗುರು ಡಾ. ಆಠವಲೆಯವರು ವಿವಿಧ ಪ್ರಸಂಗಗಳಿಂದ ‘ಆಜ್ಞಾಪಾಲನೆ’ ಮತ್ತು ‘ಕೇಳುವುದು’, ಈ ಗುಣಗಳ ಮಹತ್ವವನ್ನು ಬಿಂಬಿಸುವುದು !

ಸದ್ಗುರು ರಾಜೇಂದ್ರ ಶಿಂದೆ

೨೫/೨೩ ರಲ್ಲಿ ಮುದ್ರಿಸಿದ ಸದ್ಗುರು ರಾಜೇಂದ್ರ ಶಿಂದೆ ಇವರ ಲೇಖನದಲ್ಲಿ ‘ಪರಾತ್ಪರ ಗುರುದೇವರು ಸಮಷ್ಟಿ ಸಾಧನೆಯನ್ನು ಯಾವ ರೀತಿ ಮಾಡಬೇಕು ? ಮತ್ತು ಯಾವ ರೀತಿ ಮಾಡಿಸಿಕೊಳ್ಳಬೇಕು’, ಈ ಬಗ್ಗೆ ಓದಿದೆವು. ಇಂದಿನ ಲೇಖನದಲ್ಲಿ ‘ಪರಾತ್ಪರ ಗುರುದೇವರು ವಿವಿಧ ಪ್ರಸಂಗಗಳಿಂದ ‘ಆಜ್ಞಾಪಾಲನೆ ಮತ್ತು ‘ಕೇಳಿಕೊಳ್ಳುವುದು’, ಈ ಗುಣಗಳ ಮಹತ್ವವನ್ನು ಮನಸ್ಸಿನಲ್ಲಿ ಹೇಗೆ ಬಿಂಬಿಸಿದರು’, ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ. (ಭಾಗ ೬)

೧. ಪರಾತ್ಪರ ಗುರು ಡಾ. ಆಠವಲೆಯವರು ನಾನು ದೊಡ್ಡ ಕಾರ್ಯಕ್ರಮಗಳ ಆಯೋಜನೆಯಲ್ಲಿ ನಿರತನಾಗಿದ್ದರೂ ಪ್ರತಿದಿನ ೩ ಗಂಟೆ ನಾಮಜಪವನ್ನು ಮಾಡಲು ಹೇಳಿ ಸಾಧಕನ ಕ್ಷಮತೆಯನ್ನು ಹೆಚ್ಚಿಸುವುದು ಮತ್ತು ೩ ಗಂಟೆ ನಾಮಜಪವನ್ನು ಮಾಡಿಸಿಕೊಳ್ಳುವುದು

೧ ಅ. ದೊಡ್ಡ ಕಾರ್ಯಕ್ರಮಗಳ ಆಯೋಜನೆಯ ಸೇವೆಯ ಕಾರ್ಯವ್ಯಸ್ತತೆ : ೨೦೦೮ ರಲ್ಲಿ ನಾನು ಉತ್ತರಭಾರತದ ಪ್ರವಾಸದಲ್ಲಿದ್ದಾಗ ಅಲ್ಲಿ ದೊಡ್ಡ ಕಾರ್ಯಕ್ರಮಗಳ ಆಯೋಜನೆ ಯನ್ನು ಮಾಡುವುದಿತ್ತು. ಆದ್ದರಿಂದ ದಿನಪೂರ್ತಿ ನಾನು ಆಯೋಜನೆಗಳಲ್ಲಿ ಕಾರ್ಯನಿರತನಾಗಿರುತ್ತಿದ್ದೆ. ೮-೧೦ ದಿನಗಳಲ್ಲಿ ಒಂದು ದೊಡ್ಡ ಕಾರ್ಯಕ್ರಮ ಇರುತ್ತಿತ್ತು. ಆದ್ದರಿಂದ ಕಾರ್ಯಕ್ರಮಗಳ ಸೇವೆಯ ಆಯೋಜನೆಯನ್ನು ಮಾಡುವುದು, ‘ಸಾಧಕರ ಸತ್ಸಂಗವನ್ನು ತೆಗೆದುಕೊಳ್ಳುವುದು, ವಿವಿಧ ಸೇವಾಸಮಿತಿಗಳನ್ನು ಸ್ಥಾಪಿಸಿ ಸೇವೆಗಳ ಪೂರ್ವಸಿದ್ಧತೆ, ಕಾರ್ಯಕ್ರಮದ ಪ್ರಚಾರದ ಆಯೋಜನೆಯನ್ನು ಮಾಡುವುದು ಮತ್ತು ಅದರ ವರದಿಯನ್ನು ತೆಗೆದುಕೊಳ್ಳುವುದು, ವಕ್ತಾರರ ಮತ್ತು ನಿವೇದಕರರ ಅಭ್ಯಾಸವನ್ನು ಮಾಡಿಸಿಕೊಳ್ಳುವುದು, ಕಾರ್ಯಕ್ರಮದ ಪ್ರಸಿದ್ಧಿ ಮತ್ತು ಸಾಧಕರ ನಿವಾಸ-ಭೋಜನ ಇತ್ಯಾದಿಗಳ ವ್ಯವಸ್ಥೆಯನ್ನು ನೋಡುವುದು’, ಇಂತಹ ಬಹಳಷ್ಟು ಸೇವೆಗಳು ಸತತವಾಗಿ ನಡೆಯುತ್ತಿದ್ದವು. ನನಗೆ ವೈಯಕ್ತಿಕ ಸಮಯವೇ ಇರುತ್ತಿರಲಿಲ್ಲ.

೧ ಆ. ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ೩ ಗಂಟೆ ನಾಮಜಪವನ್ನು ಮಾಡಲು ಸಂದೇಶವನ್ನು ಕಳುಹಿಸಿದ ನಂತರ ಅವರ ಕೃಪೆಯಿಂದ ಎಲ್ಲಿ ಸಮಯ ಸಿಗುತ್ತದೆಯೋ, ಆ ಸಮಯವನ್ನು ನಾಮಜಪಕ್ಕಾಗಿ ಉಪಯೋಗಿಸಿದ್ದರಿಂದ ೩ ಗಂಟೆ ನಾಮಜಪ ಮಾಡಲು ಸಾಧ್ಯವಾಗುವುದು : ಇದೇ ಸಮಯದಲ್ಲಿ ನಾನು ಮಧ್ಯಪ್ರದೇಶದ ಇಂದೂರನಲ್ಲಿ ಒಂದು ದೊಡ್ಡ ಕಾರ್ಯಕ್ರಮದ ಆಯೋಜನೆಗಾಗಿ ಹೋಗಿದ್ದೆನು. ಆಗ ಪ.ಪೂ. ಡಾಕ್ಟರರು ನನಗೆ ಪ್ರತಿದಿನ ೩ ಗಂಟೆ ನಾಮಜಪವನ್ನು ಮಾಡುವಂತೆ ಸಂದೇಶವನ್ನು ಕಳುಹಿಸಿದರು. ನನಗೆ ಒಂದೇ ಸಮಯದಲ್ಲಿ ಒಂದು ಗಂಟೆ ನಾಮಜಪಕ್ಕಾಗಿ ಕುಳಿತುಕೊಳ್ಳಲು ಸಾಧ್ಯವಿರಲಿಲ್ಲ, ಅಷ್ಟೊಂದು ಸೇವೆಯಲ್ಲಿ ತೊಡಗಿರುತ್ತಿದ್ದೆನು; ಆದರೆ ‘ಪ.ಪೂ. ಡಾಕ್ಟರರು ಹೇಳಿದ್ದಾರೆಂದರೆ ಅವರ ಆಜ್ಞಾಪಾಲನೆಯೇ’, ನಮ್ಮ ಮೊದಲನೇ ಕರ್ತವ್ಯವಾಗಿದೆ. ಆದ್ದರಿಂದ ನಾನು ‘ನಾಮಜಪÀ ಮಾಡಲು ಎಲ್ಲಿ ಸಮಯ ಸಿಗಬಹುದು ?’, ಎಂಬ ವಿಚಾರವನ್ನು ಮಾಡುತ್ತಿದ್ದೆನು. ಅಧ್ಯಯನ ಮಾಡಿದಾಗ ನನ್ನ ಗಮನಕ್ಕೆ ಬಂದುದೇನೆಂದರೆ, ‘ಬೆಳಗ್ಗೆ ವೈಯಕ್ತಿಕ ವಿಷಯಗಳನ್ನು ಬೇಗ ಮಾಡಿ ಮುಗಿಸಿ ಉಪಾಹಾರದ ವರೆಗಿನ ಸಮಯ, ಉಪಹಾರ ಮತ್ತು ಊಟವನ್ನು ಬೇಗ ಮುಗಿಸಿ ಸಭೆಗೆ (ಬೈಠಕ) ಪ್ರಾರಂಭವಾಗುವ ಮೊದಲಿನ ಸಮಯ, ೨ ಬೈಠಕಗಳ ನಡುವಿನ ಸಮಯ (ಮೊದಲನೇ ಬೈಠಕದಲ್ಲಿನ ಸಾಧಕರು ಹೋದ ನಂತರ ಮುಂದಿನ ಬೈಠಕಕ್ಕೆ ಸಾಧಕರೆಲ್ಲರೂ ಸೇರುವವರೆಗೆ ೧೦ – ೧೫ ನಿಮಿಷಗಳ ಸಮಯ)’, ಈ ಸಮಯದಲ್ಲಿ ನಾಮಜಪವನ್ನು ಮಾಡಬಹುದು. ಎಂದು ಗಮನಕ್ಕೆ ಬಂದಿತು. ಪ.ಪೂ. ಡಾಕ್ಟರರ ಕೃಪೆಯಿಂದ ಈ ರೀತಿ ಸ್ವಲ್ಪ ಸ್ವಲ್ಪ ಸಮಯದಲ್ಲಿ ನಾಮಜಪವನ್ನು ಮಾಡಿ ದಿನವಿಡಿ ೩ ಗಂಟೆಗಳ ನಾಮಜಪವು ಪೂರ್ಣಗೊಳ್ಳುತ್ತಿತ್ತು.

೧ ಇ. ಪ್ರತಿದಿನ ೩ ಗಂಟೆ ನಾಮಜಪ ಮಾಡಿದ ನಂತರ ಅರಿವಾದ ಮತ್ತು ಕಲಿಯಲು ಸಿಕ್ಕಿದ ಅಂಶಗಳು

೧. ‘ಪ್ರತಿದಿನ ೩ ಗಂಟೆ ನಾಮಜಪವನ್ನು ಮಾಡಿದರೂ ನನ್ನ ಯಾವುದೇ ದೈನಂದಿನದ ಆಯೋಜನೆಯ ಮೇಲೆ ಪರಿಣಾಮ ವಾಗಲಿಲ್ಲ’, ಇದು ಪ.ಪೂ. ಗುರುದೇವರ ಕೃಪೆಯೇ ಆಗಿತ್ತು.

೨. ನಾಮಜಪದಿಂದ ದಿನದ ಸಂಪೂರ್ಣ ಸಮಯವು ಸಾಧನೆ ಗಾಗಿ ಉಪಯೋಗಿಸಲ್ಪಟ್ಟಿತು. ‘ನಾನು ಜಪಕ್ಕೆ ಬಳಸುವ ಸಮಯ ವನ್ನು ಸೇವೆಗಾಗಿ ಬಳಸಬಹುದು’, ಎಂಬುದು ನನ್ನ ಗಮನಕ್ಕೆ ಎಂದಿಗೂ ಬರುತ್ತಿರಲಿಲ್ಲ.

೩. ‘ಶ್ರೀ ಗುರುಗಳ ಸಂಕಲ್ಪದಿಂದ ಕಠಿಣ ವಿಷಯಗಳು ಎಷ್ಟು ಸಹಜವಾಗಿ ಆಗುತ್ತವೆ ?’, ‘ಶ್ರೀ ಗುರುಗಳು ಸಾಧಕರ ಕ್ಷಮತೆಯನ್ನು ಹೇಗೆ ಹೆಚ್ಚಿಸುತ್ತಾರೆ ? ಮತ್ತು ಅವನನ್ನು ಸಾಧನೆಯಲ್ಲಿ ಹೇಗೆ ಮುಂದೆ ಮುಂದೆ ಕರೆದುಕೊಂಡು ಹೋಗುತ್ತಾರೆ ?’, ಎಂಬುದು ನನಗೆ ಕಲಿಯಲು ಸಿಕ್ಕಿತು.

೪. ಪ.ಪೂ. ಗುರುದೇವರು ೩ ಗಂಟೆ ನಾಮಜಪಿಸಲು ಹೇಳಿದ್ದ ರಿಂದ ಅನಿಷ್ಟ ಶಕ್ತಿಗಳ ಆಕ್ರಮಣದಿಂದ ನನ್ನ ರಕ್ಷಣೆ ಆಯಿತು.

೫. ನಾಮಜಪದಿಂದ ನನ್ನ ಉತ್ಸಾಹ ಮತ್ತು ಕಾರ್ಯಕ್ಷಮತೆ ಹೆಚ್ಚಾಗಲು ಸಹಾಯವಾಯಿತು ಮುಂದೆ ಸೇವೆಗಳ ಜವಾಬ್ದಾರಿ ಹೆಚ್ಚಾದಾಗ ‘ಗುರುಕೃಪೆಯಿಂದ ತಮ್ಮ ಕ್ಷಮತೆ ಹೇಗೆ ಹೆಚ್ಚಾಗುತ್ತಾ ಹೋಗುತ್ತದೆ ?’, ಎಂಬುದು ಕಲಿಯಲು ಸಿಕ್ಕಿತು. ಆದ್ದರಿಂದ ಸಮಷ್ಟಿ ಸೇವೆಯು ಎಷ್ಟೇ ಹೆಚ್ಚಾದರೂ, ವ್ಯಷ್ಟಿ ಸಾಧನೆಯು ನಿಯಮಿತವಾಗಿ ನಡೆಯುತ್ತದೆ.

೨. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕನಿಗೆ ಮಾನಸಿಕ ಸ್ತರದಲ್ಲಿ ವಿಚಾರ ಮಾಡದೇ ಆಧ್ಯಾತ್ಮಿಕ ಸ್ತರದಲ್ಲಿ ವಿಚಾರ ಮಾಡಲು ಕಲಿಸುವುದು

೨ ಅ. ಕರ್ಣಾವತಿಯಲ್ಲಿ ದೊಡ್ಡ ಕಾರ್ಯಕ್ರಮದ ಸೇವೆ ನಡೆಯುತ್ತಿರುವಾಗ ‘ಸಾಧಕರು ಮರಾಠಿ ಭಾಷೆಯ ಬದಲು ಹಿಂದಿಯಲ್ಲಿ ಆರತಿಯನ್ನು ಹೇಳಬೇಕು’, ಎಂದು ನನಗೆ ಅನಿಸುವುದು. ಪರಾತ್ಪರ ಗುರು ಡಾ. ಆಠವಲೆ ಯವರು ‘ಅದನ್ನು ಮರಾಠಿಯಲ್ಲಿಯೇ ಹೇಳಲಿ’, ಎಂದು ತಿಳಿಸುವುದು : ೨೦೦೮ ರಲ್ಲಿ ನಾನು ಕರ್ಣಾವತಿ (ಅಹಮದಾಬಾದ್‌)ಗೆ ಹೋಗಿದ್ದೆನು. ಅಲ್ಲಿನ ಹೆಚ್ಚಿನ ಸಾಧಕರು ಮರಾಠಿ ಮಾತನಾಡುವವರಾಗಿದ್ದರು ಮತ್ತು ಕೆಲವು ಸಾಧಕರು ಗುಜರಾತಿ ಭಾಷೆ ಮಾತನಾಡುತ್ತಿದ್ದರು. ಸೇವೆಗಾಗಿ ನಾವು ಒಟ್ಟಿಗಿದ್ದಾಗ ಅಲ್ಲಿನ ಸಾಧಕರು ಬೆಳಗ್ಗೆ-ಸಾಯಂಕಾಲ ಮರಾಠಿ ಭಾಷೆಯಲ್ಲಿ ಆರತಿ ಯನ್ನು ಮಾಡುತ್ತಿದ್ದರು. ಆಗ ನನ್ನ ಮನಸ್ಸಿನಲ್ಲಿ, ‘ನಾವು ಗುಜರಾತನಲ್ಲಿದ್ದೇವೆ, ಹಿಂದಿ ಇದು ಸಮಾನ ಭಾಷೆಯಾಗಿದ್ದು, ಹಿಂದಿ ಭಾಷೆಯಲ್ಲಿ ಆರತಿಯನ್ನು ಮಾಡಬೇಕು’ ಎಂದೆನಿಸಿತು. ಈ ಕುರಿತು ನಾನು ಪ.ಪೂ. ಡಾಕ್ಟರರಿಗೆ ಸಾಧಕನ ಮೂಲಕ ತಿಳಿಸಿದಾಗ ಆ ಸಾಧಕನು, ”ಮರಾಠಿ ಭಾಷೆಯಲ್ಲಿ ತುಂಬಾ ಚೈತನ್ಯವಿದೆ. ಆದ್ದರಿಂದ ಸಾಧಕರು ಆರತಿಯನ್ನು ಮರಾಠಿಯಲ್ಲಿ ಮಾಡುತ್ತಿದ್ದು ಹಾಗೆಯೇ ಮುಂದುವರೆಯಲಿ’’ ಎಂದು ತಿಳಿಸಿದರು.

೨ ಆ. ಇತರ ಭಾಷೆಗಳ ತುಲನೆಯಲ್ಲಿ ಸಂಸ್ಕೃತ ಭಾಷೆ ಮತ್ತು ಮರಾಠಿ ಭಾಷೆಯಲ್ಲಿ ಹೆಚ್ಚು ಚೈತನ್ಯವಿರುವುದು : ಎಲ್ಲೆಡೆಯಲ್ಲಿ ಪುರೋಹಿತರು ಪೂಜಾವಿಧಿಗಳ ಮಂತ್ರಗಳನ್ನು ಸಂಸ್ಕೃತ ಭಾಷೆಯಲ್ಲಿಯೇ ಹೇಳುತ್ತಾರೆ. ಎಲ್ಲ ಶ್ಲೋಕಗಳು, ಪುರಾಣಗಳು, ಅನೇಕ ಗ್ರಂಥಗಳು, ವೇದ ಇತ್ಯಾದಿಗಳು ಸಂಸ್ಕೃತದಲ್ಲಿವೆ; ಏಕೆಂದರೆ ಸಂಸ್ಕೃತವು ದೇವಭಾಷೆಯಾಗಿದ್ದು ಅದರಲ್ಲಿ ಶೇ. ೧೦೦ ರಷ್ಟು ಚೈತನ್ಯವಿದೆ. ಮಂತ್ರಪಠಣವನ್ನು ಮಾಡುವಾಗ ಅದರ ಲಾಭ ಸಮಾಜಕ್ಕೆ ಸಿಗಬೇಕು; ಎಂದು ಲಕ್ಷಗಟ್ಟಲೆ ವರ್ಷ ಗಳ ನಂತರವೂ ಅವುಗಳನ್ನು ಸಂಸ್ಕೃತದಲ್ಲಿಯೇ ಹೇಳಲಾಗುತ್ತದೆ. ಸಾಮಾನ್ಯ ವ್ಯಕ್ತಿಗೆ ಸಂಸ್ಕೃತವು ಕಠಿಣವೆನಿಸುತ್ತದೆ. ಸಂಸ್ಕೃತದ ನಂತರ ಮರಾಠಿ ಭಾಷೆಯಲ್ಲಿ ಹೆಚ್ಚು ಪ್ರಮಾಣದಲ್ಲಿ, ಅಂದರೆ ಶೇ. ೬೦ ರಷ್ಟು ಚೈತನ್ಯವಿದೆ. ಆದ್ದರಿಂದ ಗುಜರಾತಿ ಅಥವಾ ಹಿಂದಿ ಭಾಷೆಗಳಿಗಿಂತ ‘ಮರಾಠಿಯಲ್ಲಿ ಆರತಿಗಳನ್ನು ಹೇಳಿದರೆ ಅದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಎಲ್ಲ ಸಾಧಕರಿಗೆ ಹೆಚ್ಚು ಲಾಭ ವಾಗುವುದು’, ಇದು ಪ.ಪೂ. ಗುರುದೇವರ ಕೃಪೆಯಿಂದ ನನ್ನ ಗಮನಕ್ಕೆ ಬಂದಿತು.

ಹಿಂದಿ ಭಾಷೆಯಲ್ಲಿ ಆರತಿ ಮಾಡುವ ನನ್ನ ವಿಚಾರವು ಮಾನಸಿಕ ಸ್ತರದ್ದಾಗಿತ್ತು. ಮೇಲಿನ ಪ್ರಸಂಗದಿಂದ ‘ಪ.ಪೂ. ಡಾಕ್ಟರರು ಆಧ್ಯಾತ್ಮಿಕ ಸ್ತರದಲ್ಲಿ ವಿಚಾರ ಮಾಡಬೇಕು ?’, ಎಂಬು ದನ್ನು ನನಗೆ ಕಲಿಸಿದರು. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಪುಷ್ಪಗಳನ್ನು ಕೃತಜ್ಞತೆಯ ಭಾವದಿಂದ ಅವರ ಚರಣಗಳಲ್ಲಿಯೇ ಅರ್ಪಿಸುತ್ತೇನೆ ! (೩೧.೭.೨೦೨೩)

ಇದಂ ನ ಮಮ |’

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (ಮುಂದುವರಿಯುವುದು)