‘ನವೆಂಬರ್ ೨೦೨೩ ರಲ್ಲಿ ನಾನು ‘ಗಿರ್‌ನಾರ್ ಪ್ರದಕ್ಷಿಣೆ’ ಮಾಡಿದೆ. ಈ ಹಿಂದೆ ನಾನು ಯಾವತ್ತೂ ಗಿರ್‌ನಾರ್‌ಗೆ ಹೋಗಿರಲಿಲ್ಲ ಅಥವಾ ಪ್ರದಕ್ಷಿಣೆಯನ್ನೂ ಹಾಕಿರಲಿಲ್ಲ. ಆ ಸಂದರ್ಭದಲ್ಲಿ ನನಗೆ ಏನೆಲ್ಲ ತಿಳಿಯಿತೋ ಹಾಗೂ ಏನು ಅರಿವಾಯಿತೋ, ‘ಅದೆಲ್ಲವೂ ಬುದ್ಧಿಯ ಆಚೆಗಿನದ್ದಾಗಿದೆ’, ಎಂದು ನನಗೆ ಅನಿಸುತ್ತದೆ. ‘ಯಾವ ಪರಿಕ್ರಮದಲ್ಲಿ ೫ ದಿನಗಳ ಪ್ರತ್ಯಕ್ಷ ದೇವತೆಗಳ ಸಂಚಾರವಿರುತ್ತದೆಯೋ, ಅಂತಹ ಅದ್ಭುತ ಪ್ರದಕ್ಷಿಣೆಯಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿತು. ಇದು ನಿಜವಾಗಿಯೂ ದತ್ತಗುರುಗಳ ಇಚ್ಚೆಯೇ ಆಗಿತ್ತು. ಪ್ರದಕ್ಷಿಣೆಯ ಸಮಯದಲ್ಲಿ ನನಗೆ ಕಲಿಯಲು ಸಿಕ್ಕಿದ ಅಂಶಗಳನ್ನು ಮತ್ತು ಬಂದಿರುವ ಅನುಭೂತಿಗಳನ್ನು ಇಲ್ಲಿ ಕೊಟ್ಟಿದ್ದೇನೆ. (ಗಿರಿನಾರ ಪ್ರದಕ್ಷಿಣೆ ಎಂದರೆ ಗಿರಿನಾರ ಪರ್ವತವನ್ನು ಏರುವುದು ಮತ್ತು ಇಳಿಯುವುದು. – ಸಂಕಲನಕಾರರು)
೧. ‘ಗಿರ್‌ನಾರ್ ಪ್ರದಕ್ಷಿಣೆ’ ಮತ್ತು ಅದರ ಮಹತ್ವ !
‘ಗಿರ್‌ನಾರ್ ಪರ್ವತಕ್ಕೆ ಎಡದಿಂದ ಬಲಕ್ಕೆ (ಪ್ರದಕ್ಷಿಣೆ ಹಾಕು ವಾಗ ಪರ್ವತ ಬಲಬದಿಯಲ್ಲಿರುತ್ತದೆ) ಪ್ರದಕ್ಷಿಣೆ ಹಾಕುವುದು’, ಇದಕ್ಕೆ ‘ಪರಿಕ್ರಮ ಮಾಡುವುದು ಎಂದು ಹೇಳುತ್ತಾರೆ. ಪುರಾತನ ಕಾಲದಿಂದಲೂ ಗಿರ್‌ನಾರ್ ಪರ್ವತದ ಪ್ರದಕ್ಷಿಣೆ ನಡೆಯುತ್ತಿದೆ. ‘ಕಾರ್ತಿಕ ಏಕಾದಶಿಯಿಂದ ತ್ರಿಪುರಾರಿ ಹುಣ್ಣಿಮೆ’ ಈ ೫ ದಿನಗಳಲ್ಲಿ ಗಿರ್‌ನಾರ್ ಪ್ರದಕ್ಷಿಣೆ’ ಮಾಡುತ್ತಾರೆ. ಈ ಅವಧಿಯಲ್ಲಿ ‘ದೇವತೆಗಳು ಮತ್ತು ಅವರ ಗಣಗಳೂ ಪ್ರದಕ್ಷಿಣೆಗೆ ಬರುತ್ತಾರೆ’, ಎನ್ನುವ ನಂಬಿಕೆಯಿದೆ. ಈ ಪ್ರದಕ್ಷಿಣೆಯಿಂದ ಮಾನವನು ತಿಳಿದು ಅಥವಾ ತಿಳಿಯದೆ ಮಾಡಿದ ಪಾಪಗಳಿಂದ ಮುಕ್ತಿ ಸಿಗುತ್ತದೆ. ಆದ್ದರಿಂದ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಈ ಪ್ರದಕ್ಷಿಣೆ ಹಾಕುತ್ತಾರೆ.
೨. ಪರಿಕ್ರಮಕ್ಕೆ ಹೋಗಲು ‘ಟ್ರಾವಲ್ಸ್’ನ ಟಿಕೇಟ್ ಸಿಗದಿರುವಾಗ ಒಂದು ಕಾಯ್ದಿರಿಸುವಿಕೆ ರದ್ದಾದ ಕಾರಣ ಪರಿಕ್ರಮದ ಅದ್ಭುತ ಅನುಭವವನ್ನು
ಪಡೆಯಲು ಸಾಧ್ಯವಾಯಿತು
ನಾನು ಒಮ್ಮೆ ಪೀಠಾಪುರಕ್ಕೆ (ಆಂಧ್ರಪ್ರದೇಶ) ಹೋಗಿದ್ದೆ. ಅಲ್ಲಿ ನನಗೆ ಗುಜರಾತ್ ರಾಜ್ಯದ ‘ಗಿರ್‌ನಾರ್ ಪರಿಕ್ರಮ’ದ ಮಾಹಿತಿ ಸಿಕ್ಕಿತು. ಆಗ ನನಗೆ ‘ಗಿರ್‌ನಾರ್ ಪರಿಕ್ರಮಕ್ಕೆ ಹೋಗಲೇ ಬೇಕು’, ಎಂಬ ವಿಚಾರ ಬಂತು. ಪರಿಕ್ರಮಕ್ಕೆ ಹೋಗಲು ನನಗೆ ಯಾವುದೇ ಟ್ರಾವೆಲ್ಸ್‌ನಲ್ಲಿ ಟಿಕೇಟ್ ಸಿಗುತ್ತಿರಲಿಲ್ಲ. ಕೆಲವು ದಿನಗಳ ನಂತರ ಒಂದು ಕಾಯ್ದಿರಿಸುವಿಕೆ ರದ್ದಾದ ಕಾರಣ ನನಗೆ ಪ್ರದಕ್ಷಿಣೆಗೆ ಹೋಗಲು ಸಾಧ್ಯವಾಯಿತು. ‘ಪ್ರದಕ್ಷಿಣೆಗೆ ಹೋಗಲು ಸಾಧ್ಯವಾಗುವುದು’, ಅಂದರೆ ನನಗೆ ಇದೊಂದು ಚಮತ್ಕಾರ ವೆಂದೇ ಅನಿಸಿತು ! ನನಗೆ ಈ ಪ್ರದಕ್ಷಿಣೆಯÀನ್ನು ಸುಖವಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು. ದುಃಖದ ಪರ್ವತವನ್ನು ದಾಟುವಾಗ ಸಹಜವಾದ ಸುಖ ಸಿಗುತ್ತದೆ, ಅದೇ ರೀತಿ ನನ್ನ ಜೀವನದಲ್ಲಿ ಈ ಪ್ರದಕ್ಷಿಣೆಗೆ ಮಹತ್ವವಿದೆ.
ಮಾನವ ಜೀವನದಲ್ಲಿನ ಪ್ರತಿಯೊಂದು ಹಂತದ ಸಂಕೇತವೆಂದರೆ ಗಿರ್‌ನಾರ್ ಪ್ರದಕ್ಷಿಣೆಯಾಗಿದೆ ! ಪ್ರದಕ್ಷಿಣೆ ಹಾಕುವಾಗ ಆಯಾಸ ಅಥವಾ ಉಬ್ಬಸ ಯಾವುದೂ ಇಲ್ಲ. ದೇಹಭಾವವನ್ನು ಮರೆತು ಕೇವಲ ಧ್ಯಾಸದಿಂದ, ಭಕ್ತಿಯಿಂದ ಗುರುಕೃಪೆಯ ಅನುಭವವಾಗುತ್ತದೆ.
೩. ಶ್ರೀ ದತ್ತಪಾದುಕೆಗಳ ದರ್ಶನ
೩ ಅ. ಪರಾತ್ಪರ ಗುರು ಡಾಕ್ಟರರಿಗೆ ಪ್ರಾರ್ಥನೆಯನ್ನು ಮಾಡಿ ಪ್ರದಕ್ಷಿಣೆಯನ್ನು ಆರಂಭಿಸಿದೆ ಹಾಗೂ ೧೦ ಸಾವಿರ ಮೆಟ್ಟಿಲುಗಳನ್ನು ಹತ್ತಿದರೂ ಆಯಾಸವಾಗದೆ ೫ ಗಂಟೆಗಳಲ್ಲಿ ‘ಗುರುಶಿಖರ’ವನ್ನು ತಲುಪಿದೆ : ೨೬.೧೧.೨೦೨೩ ರಂದು ಮುಂಜಾನೆ ೩ ಗಂಟೆಗೆ ನಾನು ಪರಾತ್ಪರ ಗುರು ಡಾಕ್ಟರರಿಗೆ (ಶ್ರೀ ಗುರುದೇವರಿಗೆ) ಪ್ರಾರ್ಥನೆ ಮಾಡಿ ನನ್ನ ಗಿರ್‌ನಾರ್ ಪ್ರದಕ್ಷಿಣೆಯನ್ನು ಆರಂಭಿಸಿದೆ. ನಾನು ‘ಬೆನ್ನಿಗೆ ಸಿಕ್ಕಿಸುವ ನನ್ನ ಒಂದು ಬ್ಯಾಗ್’ಗೆ ಬ್ರಹ್ಮೋತ್ಸವದಲ್ಲಿ ಸಿಕ್ಕಿದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಛಾಯಾಚಿತ್ರವಿರುವ ‘ಬ್ಯಾಜ್’ ಸಿಕ್ಕಿಸಿದ್ದೆ ಹಾಗೂ ನಾನು ಅಖಂಡ ‘ಶ್ರೀಗುರುದೇವ ದತ್ತ |’ ಈ ನಾಮಜಪಿಸುತ್ತಿದ್ದೆನು. ೧೦ ಸಾವಿರ ಮೆಟ್ಟಿಲುಗಳನ್ನು ಹತ್ತಿ ಹೋಗುವುದು, ಇದು ಶಾರೀರಿಕ ಹಾಗೂ ಮಾನಸಿಕ ಕ್ಷಮತೆಯ ಸತ್ತ್ವಪರೀಕ್ಷೆಯಾಗಿದ್ದರೂ ‘ಜೀವನದಲ್ಲಿ ಒಮ್ಮೆಯಾದರೂ ಅಲ್ಲಿ ಹೋಗಲೇಬೇಕು. ಗಿರ್‌ನಾರ್ ಎಂದರೆ ‘ಭಗವಾನ ದತ್ತಾತ್ರೇಯರು ಶಾಶ್ವತ ವಾಸವಿದ್ದು ಪುನೀತಗೊಳಿಸಿದ ಹಾಗೂ ೧೨ ಸಾವಿರ ವರ್ಷ ತಪಶ್ಚರ್ಯ ಮಾಡಿದ ಸ್ಥಾನವಾಗಿದೆ’, ಎಂಬುದು ದತ್ತಭಕ್ತರ ಶ್ರದ್ಧೆಯಾಗಿದೆ. ೫ ಗಂಟೆಯಲ್ಲಿ ನಾವು ‘ಗುರುಶಿಖರ’ವನ್ನು ತಲುಪಿದೆವು.
೩ ಆ. ಪರ್ವತದ ಮೇಲೆ ಹೋಗಿ ಭಗವಾನ ದತ್ತಾತ್ರೇಯರು ೧೨,೦೦೦ ವರ್ಷ ತಪಶ್ಚರ್ಯ ಮಾಡಿದ ಸ್ಥಾನ ಹಾಗೂ ದತ್ತಪಾದುಕೆಗಳ ದರ್ಶನ ಪಡೆಯುವುದು : ಶ್ರೀ ದತ್ತಾತ್ರೇಯರ ಚರಣಪಾದುಕೆಗಳು ಮೂಡಿರುವ ಈ ಶಿಖರದ ಮೇಲೇರುವಾಗ ಚಳಿ, ಗಾಳಿ ಹಾಗೂ ಮಳೆಯ ಬೇರೆಯೆ ಒಂದು ಅನುಭವವಾಗುತ್ತದೆ. ಇದೇ ಸ್ಥಾನದಲ್ಲಿ ಭಗವಾನ ದತ್ತಾತ್ರೇಯರು ೧೨,೦೦೦ ವರ್ಷ ತಪಶ್ಚರ್ಯ ಮಾಡಿದರು. ಇದು ಅವರ ಅಕ್ಷಯ್ಯ ನಿವಾಸಸ್ಥಾನವಾಗಿದೆ. ೧೦ ೧೨ ಚದರಡಿ ಇರುವ ಈ ಮಂದಿರದಲ್ಲಿ ಭಗವಾನ ದತ್ತಾತ್ರೇಯರ ಪಾದುಕೆ, ಒಂದು ಸುಂದರ ಮೂರ್ತಿ ಮತ್ತು ಒಬ್ಬ ಪೂಜಾರಿ ಕುಳಿತುಕೊಳ್ಳುವಷ್ಟೆ ಸ್ಥಳವಿದೆ. ಪಕ್ಕದಲ್ಲಿರುವ ಪ್ರಾಚೀನ ಗಣೇಶ ಮತ್ತು ಹನುಮಂತನ ಮೂರ್ತಿ ಗಮನ ಸೆಳೆಯುತ್ತವೆ.
೩ ಇ. ಮಂದಿರದಲ್ಲಿರುವ ಪ್ರಾಚೀನ ಶಿವಲಿಂಗ ಮತ್ತು ಪ್ರಾಚೀನ ಘಂಟೆ : ಮಂದಿರದಲ್ಲಿಯೆ ಪಾದುಕೆಗಳ ಹಿಂದೆ ಭೂಮಿಯ ಕೆಳಗೆ ಒಂದು ಪ್ರಾಚೀನ ಶಿವಲಿಂಗವಿದೆ. ಅಲ್ಲಿ ಒಂದು ಪ್ರಾಚೀನ ಘಂಟೆಯೂ ಇದೆ. ‘ನಮ್ಮ ಪೂರ್ವಜರ ಹೆಸರನ್ನು ಹೇಳಿ ಘಂಟೆ ಬಾರಿಸಿದರೆ ಪೂರ್ವಜರಿಗೆ ಮುಕ್ತಿ ಸಿಗುತ್ತದೆ’, ಎಂಬುದು ಭಕ್ತರ ಶ್ರದ್ಧೆಯಾಗಿದೆ. ಶ್ರೀ ದತ್ತಪಾದುಕೆಗಳ ದರ್ಶನ ಪಡೆದು ಮಂದಿರದಿಂದ ಹೊರಗೆ ಬಂದ ತಕ್ಷಣ ನನಗೆ ಹಗುರ ಹಾಗೂ ಪ್ರಸನ್ನವೆನಿಸಿತು. ೧೦ ಸಾವಿರ ಮೆಟ್ಟಿಲು ಹತ್ತಿ ಬಂದರೂ ನನಗೆ ಆಯಾಸವಾಗಲಿಲ್ಲ.
೪. ನಾಲ್ಕೂ ಬದಿಗಳಲ್ಲಿ ದಟ್ಟವಾದ ಅರಣ್ಯ, ದೊಡ್ಡ ದೊಡ್ಡ ಮರಗಳು, ತಾಳೆಮರಗಳು ಮತ್ತು ದೊಡ್ಡ ದೊಡ್ಡ ವೃಕ್ಷಗಳಿರುವ ದಟ್ಟವಾದ ಅರಣ್ಯದಲ್ಲಿ ಹೋಗುವ ಹಾಗೂ ಕ್ರೂರ ಪ್ರಾಣಿಗಳಿರುವ ಪ್ರದಕ್ಷಿಣೆ ಮಾರ್ಗ !
ಗಿರ್‌ನಾರ್ ಪರ್ವತದ ಪರಿಸರದಲ್ಲಿರುವ ಪ್ರಸಿದ್ಧ ‘ಗೀರ್ ಅಭಯಾರಣ್ಯ’ ಸದ್ಯ ಅರಣ್ಯ ಇಲಾಖೆಯ ಅಧೀನದಲ್ಲಿದೆ. ಪ್ರದಕ್ಷಿಣೆಯ ಮಾರ್ಗವು ಪೂರ್ಣ ಅರಣ್ಯದಿಂದ ಸಾಗುತ್ತದೆ. ಬೇರೆ ದಿನಗಳಲ್ಲಿ ಈ ಅರಣ್ಯದಲ್ಲಿ ಎಲ್ಲರಿಗೂ ಪ್ರವೇಶವಿರುವುದಿಲ್ಲ. ಕೇವಲ ಪ್ರದಕ್ಷಿಣೆಯ ಅವಧಿಯಲ್ಲಿ ೫ ದಿನ ಭಕ್ತರಿಗೆ ಪ್ರವೇಶ ಸಿಗುತ್ತದೆ. ಈ ಅರಣ್ಯದಲ್ಲಿ ಇರುವೆ, ಚೇಳು ಹಾಗೆಯೇ ಸಿಂಹದಂತಹ ಪ್ರಾಣಿಗಳಿವೆ; ಆದರೆ ಪ್ರದಕ್ಷಿಣೆ ಮಾಡುವಾಗ ಅವು ಭಕ್ತರಿಗೆ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ. ಇದು ಶ್ರೀ ದತ್ತಗುರುಗಳ ಕೃಪೆಯಾಗಿದೆ. ನಾಲ್ಕೂ ದಿಕ್ಕುಗಳಲ್ಲಿ ದಟ್ಟವಾದ ಅರಣ್ಯ, ದೊಡ್ಡ ದೊಡ್ಡ ಮರಗಳು, ತಾಳೆಮರಗಳು ಮತ್ತು ದೊಡ್ಡ ದೊಡ್ಡ ವೃಕ್ಷಗಳ ನಡುವೆ ದಾರಿ ಮಾಡಿಕೊಳ್ಳುತ್ತಾ ದತ್ತಭಕ್ತರು ಪ್ರದಕ್ಷಿಣೆ ಹಾಕುತ್ತಾರೆ. ದಟ್ಟವಾದ ಈ ಅರಣ್ಯದಿಂದ ಹೋಗುವ ಈ ಮಾರ್ಗ ಕಲ್ಲು-ಮುಳ್ಳುಗಳಿಂದ ಆವರಿಸಿಕೊಂಡಿದೆ, ಆದರೂ ಭಕ್ತರು ಶ್ರದ್ಧೆಯಿಂದ ಈ ಮಾರ್ಗವನ್ನು ಸುಲಭಗೊಳಿಸುತ್ತಾರೆ.
೫. ಗಿರ್‌ನಾರ್ ಪರ್ವತದ ಪ್ರದಕ್ಷಿಣೆ ಮಾಡುವಾಗ ಹಾಗೂ ಗುರುಶಿಖರದ ೧೦ ಸಾವಿರ ಮೆಟ್ಟಿಲುಗಳನ್ನು ಹತ್ತುವಾಗ ಅರಿವಾದ ಭಾವಾರ್ಥ !
೫ ಅ. ಪ್ರದಕ್ಷಿಣೆಯ ಮಾರ್ಗದಲ್ಲಿನ ಮೂರು ಪರ್ವತಗಳು : ಪ್ರದಕ್ಷಿಣೆಯ ಮಾರ್ಗದಲ್ಲಿ ೩ ಪರ್ವತಗಳಿದ್ದು ಅವುಗಳನ್ನು ಹತ್ತಿ ಇಳಿಯುವಾಗ ಕೆಲವು ಕಡೆಗಳಲ್ಲಿ ಅತೀ ತೀವ್ರ ಇಳಿಜಾರು ಇದೆ. ಪ್ರದಕ್ಷಿಣೆಯ ಈ ೩ ಪರ್ವತಗಳು ಮಾನವನ ಜೀವನದಲ್ಲಿನ ಮೂರು ಹಂತಗಳನ್ನು ಸೂಚಿಸುತ್ತವೆ. ಆ ಹಂತವೆಂದರೆ, ‘ಬಾಲ್ಯಾವಸ್ಥೆ’, ‘ತಾರುಣ್ಯ’ ಹಾಗೂ ‘ವೃದ್ಧಾವಸ್ಥೆ’ !
೫ ಅ ೧. ಬಾಲ್ಯಾವಸ್ಥೆ : ಮೊದಲ ಬೆಟ್ಟವನ್ನು ಹತ್ತಿಯಾಗಿದೆ, ಎಂಬುದು ನಮಗೆ ತಿಳಿಯುವುದೇ ಇಲ್ಲ; ಏಕೆಂದರೆ ಅದನ್ನು ಸಹಜ ಹತ್ತಬಹುದು, ಹಾಗೆಯೆ ನಮ್ಮ ಬಾಲ್ಯಾವಸ್ಥೆ ಆಗಿದೆ, ಅದು ಸಹಜ ಹಾಗೂ ಪಾರದರ್ಶಕ ಆಗಿರುತ್ತದೆ.
೫ ಅ ೨. ತಾರುಣ್ಯ : ಎರಡನೆಯ ಬೆಟ್ಟ ತುಂಬಾ ಎತ್ತರವಾಗಿತ್ತು ಹಾಗೂ ಹತ್ತಲು ಕಠಿಣವಾಗಿತ್ತು. ಆ ಬೆಟ್ಟ ತಾರುಣ್ಯ ಜೀವನದ ಸಂಘರ್ಷವನ್ನು ದರ್ಶಿಸುತ್ತದೆ.
೫ ಅ ೩. ವೃದ್ಧಾವಸ್ಥೆ : ಮೂರನೇ ಹಾಗೂ ಕೊನೆಯ ಬೆಟ್ಟ ಹತ್ತಲು ಕಠಿಣವಿಲ್ಲ. ಅದರ ಇಳಿಯುವಿಕೆ ತೀವ್ರವಾಗಿರುತ್ತದೆ. ಅದು ಜೀವನದಲ್ಲಿನ ಕೊನೆಯ ಹಂತ ವೃದ್ಧತ್ವವನ್ನು ದರ್ಶಿಸುತ್ತದೆ.
೫ ಆ. ಗುರುಶಿಖರದ ೧೦ ಸಾವಿರ ಮೆಟ್ಟಿಲುಗಳನ್ನು ಹತ್ತುವುದೆಂದರೆ, ಸ್ವಭಾವದೋಷ ಮತ್ತು ಅಹಂಅನ್ನು ತ್ಯಜಿಸುವುದು, ಅನಂತರವೆ ಶ್ರೀ ದತ್ತಾತ್ರೇಯರ ದರ್ಶನವಾಗುತ್ತದೆ : ಗುರುಶಿಖರದವರೆಗೆ ತಲುಪಲು ೧೦ ಸಾವಿರ ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಾಗುತ್ತದೆ. ಪ್ರತಿಯೊಂದು ಮೆಟ್ಟಿಲು ಹತ್ತುವಾಗ ನಮ್ಮಲ್ಲಿನ ಅನೇಕ ದುರ್ಗುಣಗಳನ್ನು ತ್ಯಜಿಸಿ ಹತ್ತಬೇಕಾಗುತ್ತದೆ ಹಾಗೂ ಎಲ್ಲಕ್ಕಿಂತ ಕೊನೆಯ ಮೆಟ್ಟಿಲಿನಲ್ಲಿ ತ್ಯಾಗವನ್ನೂ ತ್ಯಜಿಸಬೇಕಾಗುತ್ತದೆ. ಇದರಿಂದ ‘ನಮ್ಮಲ್ಲಿನ ಎಲ್ಲ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಆಗುತ್ತದೆ, ಅದೇ ಕ್ಷಣದಲ್ಲಿ ಶ್ರೀ ದತ್ತಾತ್ರೇಯರ ದರ್ಶನವಾಗುತ್ತದೆ. ಎಷ್ಟರವರೆಗೆ ನಮ್ಮಲ್ಲಿರುವ ‘ನಾನು’ ನಷ್ಟವಾಗುವುದಿಲ್ಲವೊ, ಅಷ್ಟರವರೆಗೆ ಮನಸ್ಸಿನ ಗರ್ಭಗುಡಿ ಸಂಪೂರ್ಣ ಪವಿತ್ರವಾಗುವುದಿಲ್ಲ’, ಎಂದು ನನಗನಿಸುತ್ತದೆ.
೬. ಪ್ರದಕ್ಷಿಣೆಯ ಸಮಯದಲ್ಲಿ ಬಂದಿರುವ ಅನುಭೂತಿ
೬ ಅ. ಅಖಂಡ ನಾಮಜಪ ಆಗುವುದು : ಸಂಪೂರ್ಣ ಪ್ರದಕ್ಷಿಣೆಯಲ್ಲಿ ನನ್ನ ‘ಶ್ರೀ ಗುರುದೇವ ದತ್ತ |’ ನಾಮಜಪ ಅಖಂಡ ನಡೆಯುತ್ತಿತ್ತು. ಆದ್ದರಿಂದ ‘ಪ್ರದಕ್ಷಿಣೆಯ ಪರಿಸರ ಅಥವಾ ಪ್ರದಕ್ಷಿಣೆಯಲ್ಲಿ ಏನೆಲ್ಲ ನೋಡಿದೆ’, ಎಂಬುದು ನನಗೆ ನೆನಪಾಗುತ್ತಿರಲಿಲ್ಲ. ಅದರಿಂದ ನನಗೆ ದತ್ತಗುರುವಿನ ನಾಮಜಪದ ನಿಜವಾದ ಶಕ್ತಿ ತಿಳಿಯಿತು.
೬ ಆ. ಪರಾತ್ಪರ ಗುರು ಡಾಕ್ಟರರಿಗೆ ಸಂಪೂರ್ಣ ಶರಣಾಗುವುದು ಹಾಗೂ ಅವರು ಆಶೀರ್ವಾದ ನೀಡುತ್ತಿದ್ದಾರೆ ಎಂದು ಅನಿಸುವುದು : ಸಂಪೂರ್ಣ ಪ್ರದಕ್ಷಿಣೆಯಲ್ಲಿ ನಾನು ಪರಾತ್ಪರ ಗುರು ಡಾಕ್ಟರರಿಗೆ ಪೂರ್ಣ ಶರಣಾಗಿದ್ದೆನು. ಆಗ ‘ಗುರುದೇವರು ಸತತ ನನಗೆ ಆಶೀರ್ವದಿಸುತ್ತಿದ್ದಾರೆ’, ಎಂದು ಅನಿಸಿತು. ಆಗ ನನ್ನ ಮನಸ್ಸು ಎಲ್ಲ ಭೌತಿಕ ಇಚ್ಛೆಗಳಿಂದ ಮುಕ್ತವಾಗಿತ್ತು. ಪ್ರದಕ್ಷಿಣೆಯಲ್ಲಿ ಅರಿವಾದ ಒಂದು ವಿಷಯವೆಂದರೆ, ನಮ್ಮ ತಿಳುವಳಿಕೆಗೆ ನಿಲುಕದ ಒಂದು ದೈವೀ ಶಕ್ತಿ ಇದೆ, ಅದನ್ನು ಕೇವಲ ಅನುಭವಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಕೇವಲ ‘ಇಷ್ಟೇ ಹೇಳಬೇಕು’, ಎಂದು ಅನಿಸುತ್ತದೆ.
ಉಸಿರಿರುವ ತನಕ ದತ್ತನಾಮ ಹೇಳಬೇಕು. ನಾಮಜಪಿಸುತ್ತಲೇ ಗುರುದತ್ತ ನನ್ನ ಹೃದಯದಲ್ಲಿ ನೆಲೆಸಬೇಕು
– ಶ್ರೀ. ಮಯುರೇಶ ಅನಗರಕರ್ (ವಯಸ್ಸು ೪೦ ವರ್ಷ), ಪುಣೆ. (೧೦.೩.೨೦೨೪)