ಶಿಕ್ಷಣಕ್ಕೆ ಹೆಸರಾಗಿರುವ ಪುಣೆ ನಗರ ಈಗ ಮಾದಕ ವಸ್ತುಗಳ ತವರುಮನೆಯಾಗಲಿದೆ ! – ನಟ ರಮೇಶ ಪರದೇಶಿಯವರಿಂದ ಆಕ್ರೋಶದ ಪ್ರತಿಕ್ರಿಯೆ !
ಪುಣೆ – ಇಲ್ಲಿ ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಲಲಿತ ಪಾಟೀಲನನ್ನು ಬಂಧಿಸಿದ ಬಳಿಕ ನಗದರಲ್ಲಿ ಮಾದಕ ವಸ್ತುಗಳ ಕಳ್ಳಸಾಗಾಣಿಕೆಯ ಬಹಳಷ್ಟು ಮಾಹಿತಿ ಬಹಿರಂಗವಾಗಿತ್ತು. ಸಿಕ್ಕ ಮಾಹಿತಿಯನುಸಾರ ಸಾಂಸ್ಕೃತಿಕ ನಗರಿಯಾಗಿರುವ ಪುಣೆ ಮಾದಕ ವಸ್ತುಗಳ ಕೇಂದ್ರವಾಗತೊಡಗಿದೆ. ‘ಮುಳಶಿ ಪ್ಯಾಟರ್ನ್’ ಈ ಚಲನಚಿತ್ರದ ನಟ ರಮೇಶ ಪರದೇಶಿ ಉರ್ಫ ಪಿಟ್ಯಾ ಭಾಯಿ ಇವನು ಪುಣೆಯ ವೆತಾಳ ಗುಡ್ಡದ ಮೇಲೆ ನಶೆಯ ಮತ್ತಿನಲ್ಲಿದ್ದ ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೋದಲ್ಲಿ ಓರ್ವ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಮತ್ತೊಬ್ಬ ಯುವತಿ ಮಾದಕ ವಸ್ತು ಸೇವಿಸಿದ್ದರಿಂದ ನಶೆಯಲ್ಲಿ ಗೊಣಗುತ್ತಿರುವುದನ್ನು ಕಾಣಬಹುದು. ‘ಪ್ರತಿಯೊಬ್ಬ ಪುಣೆಯವನು ಯೋಚಿಸಬೇಕಾದ ಸಮಯ ಬಂದಿದೆ. ಇಲ್ಲದಿದ್ದರೆ ಶಿಕ್ಷಣದ ಕೇಂದ್ರವಾಗಿರುವ ಪುಣೆ ನಗರ ಮಾದಕ ವಸ್ತುಗಳ ಸೇವನೆಯ ಕೇಂದ್ರವಾಗಲಿದೆ’, ಎಂದು ನಟ ರಮೇಶ್ ಪರದೇಶಿ ಹೇಳಿದ್ದಾರೆ.
ಪುಣೇಯವರಿಗೆ ವೆತಾಳ ಗುಡ್ಡ ನಗರದ ಪ್ರಮುಖ ಸ್ಥಳವಾಗಿದೆ. ಅದೇ ಗುಡ್ಡವನ್ನು ರಕ್ಷಿಸಲು ಪುಣೆಯ ಜನರು ಆಂದೋಲನ ಮಾಡಿದ್ದಾರೆ. ಅನೇಕ ಜನರು ತಿರುಗಾಡಲು ವೇತಾಳ ಗುಡ್ಡದ ಮೇಲೆ ನಿಯಮಿತವಾಗಿ ಬರುತ್ತಾರೆ; ಆದರೆ ಈಗ ಗುಡ್ಡದ ಮೇಲೆ ನಡೆಯುತ್ತಿರುವುದನ್ನು ನೋಡಿದಾಗ ಪುಣೆಯ ಜನರಿಗೆ ಆಘಾತವಾಗಿದೆ. ಪುಣೆಯ ಜನರ ಭಾವನೆಯನ್ನು ಮರಾಠಿ ರಮೇಶ ಪರದೇಶಿಯವರು ಬಹಿರಂಗಪಡಿಸಿದ್ದಾರೆ. ಒಬ್ಬ ಪೋಷಕ, ನಾಗರಿಕ, ಸಹೋದರ, ಸಹೋದರಿ ಎಂದು ನೀವು ಇದನ್ನು ಗಂಭೀರವಾಗಿ ಪರಿಗಣಿಸುತ್ತೀರಾ ಅಥವಾ ಇಲ್ಲವೇ?’, ಎಂದು ರಮೇಶ ಪರದೇಶಿ ಅವರು ಕೇಳಿದ್ದಾರೆ.
ಸಂಪಾದಕೀಯ ನಿಲುವುಇಂದಿನ ಬಹುಸಂಖ್ಯಾತ ಯುವ ಪೀಳಿಗೆಯ ಅಮಲು ಪದಾರ್ಥಗಳ ಜಾಲದಲ್ಲಿ ಸಿಲುಕಿದೆ. ತನಿಖಾ ದಳ ಮತ್ತು ಭದ್ರತಾ ಇಲಾಖೆ ಮಾದಕ ವಸ್ತುಗಳ ಅಕ್ರಮ ಕಳ್ಳಸಾಗಣೆ ನಿಲ್ಲಿಸಲು ಪ್ರಯತ್ನ ಮಾಡುತ್ತಿವೆ; ಆದರೆ ಅದು ಕಡಿಮೆಯಾಗುತ್ತಿದೆ. ಕಳ್ಳಸಾಗಾಣಿಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಮಾತ್ರ ಮಾದಕ ವಸ್ತುಗಳ ಭಸ್ಮಾಸುರ ಹದ್ದುಬಸ್ತಿಗೆ ಬರಬಹುದು. |