2025 Censes : ಮುಂದಿನ ವರ್ಷ ಜನಗಣತಿ ಸಾಧ್ಯತೆ !

ನವ ದೆಹಲಿ – ಕಳೆದ 4 ವರ್ಷಗಳಿಂದ ಬಾಕಿ ಉಳಿದಿರುವ ದೇಶದ ಜನಗಣತಿಯು ಮುಂದಿನ ವರ್ಷ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಕೇಂದ್ರ ಸರಕಾರ 2025ರಲ್ಲಿ ಜನಗಣತಿ ಆರಂಭಿಸಿ 2026ಕ್ಕೆ ಪೂರ್ಣಗೊಳಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಯೋಜನೆ ಆರಂಭಿಸಿದೆ ಎನ್ನಲಾಗಿದೆ. ಈ ಬಗ್ಗೆ ಕೇಂದ್ರ ಸರಕಾರ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ದೇಶದಲ್ಲಿ 10 ವರ್ಷಗಳಿಗೊಮ್ಮೆ ಜನಗಣತಿ ನಡೆಸಲಾಗುತ್ತಿತ್ತು. ಜನಗಣತಿಯನ್ನು 2021 ರಲ್ಲಿ ನಡೆಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು; ಆದರೆ ಕೊರೊನಾದಿಂದಾಗಿ ಅದು ಸಾಧ್ಯವಾಗಲಿಲ್ಲ ಮತ್ತು ನಂತರವೂ ಅದು ಆಗಲಿಲ್ಲ.

ಜನಗಣತಿ ನಂತರ ದೇಶದ ಒಟ್ಟು ಜನಸಂಖ್ಯೆ ಎಷ್ಟು ಎಂಬುದು ಗೊತ್ತಾಗಲಿದೆ. ಯಾವ ಧರ್ಮದ ಎಷ್ಟು ಪ್ರಜೆಗಳಿದ್ದಾರೆ?, ಎಂಬುದು ಕೂಡ ಸ್ಪಷ್ಟವಾಗಲಿದೆ. ಈ ಜನಗಣತಿಯ ನಂತರ ಲೋಕಸಭಾ ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮಾಡಬಹುದು. ಈ ಗಣತಿಯಲ್ಲಿ ಜಾತಿವಾರು ಗಣತಿಗೆ ಆಗ್ರಹಿಸಲಾಗುತ್ತಿದೆ. ಆಗುತ್ತದೋ ಇಲ್ಲವೋ ಎಂಬುದು ಕೂಡ ಆ ವೇಳೆಗೆ ಸ್ಪಷ್ಟವಾಗಲಿದೆ.