Flight Bomb Threat : ಒಂದೇ ದಿನದಲ್ಲಿ 95 ವಿಮಾನಗಳಿಗೆ ಬಾಂಬ್ ಬೆದರಿಕೆ: ಭದ್ರತಾ ಮಂಡಳಿ ಎಚ್ಚರ !

ನವದೆಹಲಿ – ದೇಶಾದ್ಯಂತ 95 ವಿಮಾನಗಳಿಗೆ ಬಾಂಬ್‌ ಬೆದರಿಕೆಗಳು ಬಂದಿವೆ. 20 ಏರ್ ಇಂಡಿಯಾ, 20 ಇಂಡಿಗೋ, 20 ವಿಸ್ತಾರಾ ಮತ್ತು 25 ಆಕಾಶ್ ವಿಮಾನಗಳಿಗೆ ಈ ಬೆದರಿಕೆಗಳು ಬಂದಿವೆ. ಇದಲ್ಲದೇ ಸ್ಪೈಸ್ ಜೆಟ್ ನ 5 ವಿಮಾನಗಳು ಮತ್ತು ಅಲಯನ್ಸ್ ಏರ್‌ನ 5 ವಿಮಾನಗಳಿಗೂ ಬೆದರಿಕೆಗಳು ಬಂದಿವೆ. ಈ ಬೆದರಿಕೆಗಳಿಂದ ಭದ್ರತಾ ಮಂಡಳಿ ಅಲರ್ಟ್ ಆಗಿವೆ. ಇದಕ್ಕೂ ಮುನ್ನ 90ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಬೆದರಿಕೆ ಹಾಕಿದ್ದ ಪ್ರಕರಣಗಳಲ್ಲಿ ದೆಹಲಿ ಪೊಲೀಸರು 8 ಪ್ರಕರಣಗಳನ್ನು ದಾಖಲಿಸಿದ್ದರು.

ಓರ್ವ ಹಿರಿಯ ಪೊಲೀಸ್ ಅಧಿಕಾರಿಯ ಹೇಳಿಕೆ ಪ್ರಕಾರ, ಈ ಬೆದರಿಕೆಯ ಸಂದೇಶವು ‘ಎಕ್ಸ್’ ನಲ್ಲಿ ಬಂದಿವೆ. ‘ಎಕ್ಸ್’ ನಲ್ಲಿ ಬೆದರಿಕೆ ನೀಡುವ ಖಾತೆಯ ಬಗ್ಗೆ ಪೊಲೀಸರು ಮಾಹಿತಿ ಕೇಳಿದ್ದಾರೆ. ಒಂದು ವಾರಕ್ಕಿಂತಲೂ ಕಡಿಮೆ ಅವಧಿಯಲ್ಲಿ 250ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ‘ಸೈಬರ್ ಸೆಲ್’ ಮತ್ತು ದೆಹಲಿ ಪೊಲೀಸರು ಈ ಬೆದರಿಕೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.