|
ನವದೆಹಲಿ – ಇತ್ತೀಚಿನ ದಿನಗಳಲ್ಲಿ, ಅನೇಕರಿಗೆ ಮೊಬೈಲ್ ಮೂಲಕ ಸಂಪರ್ಕಿಸುತ್ತಾರೆ ಮತ್ತು ತಾವು ಏನಾದರೂ ಗಂಭೀರ ಅಪರಾಧ ಮಾಡಿದ್ದೇವೆ ಎಂದು ಬಿಂಬಿಸುವ ಮೂಲಕ ತಮ್ಮನ್ನು ಬಂಧಿಸಬಹುದು ಎಂದು ಭಯ ತೋರಿಸುತ್ತಾರೆ. ಬಂಧನವನ್ನು ತಪ್ಪಿಸಲು, ನಿರ್ದಿಷ್ಟ ಬ್ಯಾಂಕ್ ಖಾತೆಗೆ ಸ್ವಲ್ಪ ಮೊತ್ತವನ್ನು ಜಮಾ ಮಾಡಲು ಕೇಳಲಾಗುತ್ತದೆ. ಈ ಮೂಲಕ ಸಾರ್ವಜನಿಕರನ್ನು ವಂಚಿಸಿ ‘ಡಿಜಿಟಲ್ ಅರೆಸ್ಟ್’ ಬೆದರಿಕೆ ಹಾಕುವ ಮೂಲಕ ಸೈಬರ್ ಅಪರಾಧಗಳನ್ನು ಎಸಗಲಾಗುತ್ತಿದೆ. ಈ ಬಗ್ಗೆ ಪ್ರಧಾನಿ ಮೋದಿಯವರು ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾರಿಗಾದರೂ ಇಂತಹ ಬೆದರಿಕೆಗಳು ಎದುರಾದರೆ, ಎಲ್ಲ ನಾಗರಿಕರು ‘ನಿಲ್ಲಿ, ಯೋಚಿಸಿ ನಂತರ ಕಾರ್ಯನಿರ್ವಹಿಸಿ’ ಎಂಬ ಮಂತ್ರವನ್ನು ಬಳಸಬೇಕು ಎಂದು ಹೇಳಿದರು. ಅಂತಹ ಹೆಜ್ಜೆ ಇಟ್ಟರೆ ನಾಗರಿಕರಿಗೆ ‘ಡಿಜಿಟಲ್ ಭದ್ರತೆ’ ಸಿಗಲಿದೆ.
ಪ್ರಧಾನಿ ಮೋದಿಯವರು ಮಾತು ಮುಂದುವರೆಸಿ, ಇಂತಹ ಸೈಬರ್ ಬೆದರಿಕೆಗಳಿಗೆ ಪ್ರತ್ಯುತ್ತರ ನೀಡಲು ಸೈಬರ್ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಆದರೂ ಇಂತಹ ಅಪರಾಧಗಳಿಂದ ರಕ್ಷಿಸಿಕೊಳ್ಳಲು ನಾಗರಿಕರಿಗೆ ಜಾಗೃತಿ ಅಗತ್ಯ. ಯಾವುದೇ ತನಿಖಾ ಸಂಸ್ಥೆಯು ಅಂತಹ ವಿಚಾರಣೆಯನ್ನು ದೂರವಾಣಿ ಅಥವಾ ‘ವೀಡಿಯೋ ಕರೆ’ ಮೂಲಕ ಮಾಡುವುದಿಲ್ಲ. ಈ ರೀತಿಯಲ್ಲಿ ನಿಮ್ಮನ್ನು ಯಾರಾದರೂ ಸಂಪರ್ಕಿಸಿದರೆ, ದಯವಿಟ್ಟು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ ‘1930’ ಅನ್ನು ಸಂಪರ್ಕಿಸಿ ಮತ್ತು ಅದನ್ನು http://www.cybercrime.gov.in ವೆಬ್‌ಸೈಟ್‌ಗೆ ವರದಿ ಮಾಡಿ ಎಂದು ಹೇಳಿದರು.