Hoax Bomb Threats : ವಿಮಾನಗಳ ನಂತರ, ಈಗ ರೆಸ್ಟೋರೆಂಟ್ ಗಳಿಗೆ ಬಾಂಬ್ ಬೆದರಿಕೆ

  • ಆಂಧ್ರಪ್ರದೇಶದಲ್ಲಿ 13, ಉತ್ತರ ಪ್ರದೇಶದಲ್ಲಿ 9 ಮತ್ತು ಗುಜರಾತ್‌ನಲ್ಲಿ 10 ರೆಸ್ಟೋರೆಂಟ್‌ಗಳಿಗೆ ಬೆದರಿಕೆ

  • ಎಲ್ಲಾ ಬೆದರಿಕೆಗಳು ಸುಳ್ಳು ಎಂದು ತಿಳಿಯಿತು

ತಿರುಪತಿ (ಆಂಧ್ರಪ್ರದೇಶ) – ಅಕ್ಟೋಬರ್ 27 ರಂದು ಇಲ್ಲಿನ 2 ರೆಸ್ಟೋರೆಂಟ್ ಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿತ್ತು. ಬಳಿಕ ಎರಡೂ ರೆಸ್ಟೋರೆಂಟ್‌ಗಳನ್ನು ತೆರವುಗೊಳಿಸಲಾಯಿತು. ಬಾಂಬ್ ಪತ್ತೆ ದಳ ಮತ್ತು ಶ್ವಾನದಳದ ತನಿಖೆಯ ನಂತರ ಬೆದರಿಕೆ ಸುಳ್ಳು ಎಂದು ತಿಳಿದುಬಂದಿದೆ. ತಿರುಪತಿಯ ಪೊಲೀಸ್ ವರಿಷ್ಠಾಧಿಕಾರಿ ಎಲ್. ಸುಬ್ಬರಾಯುಡು ಮಾತನಾಡಿ, ಈ ಬಗ್ಗೆ ಸೈಬರ್ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ. ಕಳೆದ 3 ದಿನಗಳಲ್ಲಿ ತಿರುಪತಿಯ 7 ರೆಸ್ಟೋರೆಂಟ್‌ಗಳಿಗೆ ಸುಳ್ಳು ಬಾಂಬ್ ಬೆದರಿಕೆ ಬಂದಿತ್ತು ಎಂದು ಹೇಳಿದ್ದಾರೆ.

ಲಕ್ಷ್ಮಣಪುರಿಯ 9 ರೆಸ್ಟೋರೆಂಟ್‌ಗಳಿಗೆ ಸುಳ್ಳು ಬಾಂಬ್ ಬೆದರಿಕೆ

ಅಕ್ಟೋಬರ್ 28 ರಂದು ಉತ್ತರ ಪ್ರದೇಶದ ರಾಜಧಾನಿ ಲಕ್ಷ್ಮಣಪುರಿಯಲ್ಲಿರುವ 9 ರೆಸ್ಟೋರೆಂಟ್‌ಗಳಿಗೆ ಬಾಂಬ್ ಸ್ಫೋಟದ ಬೆದರಿಕೆ ಬಂದಿತ್ತು. ಬೆಳಗ್ಗೆ 10 ಗಂಟೆಗೆ ರೆಸ್ಟೋರೆಂಟ್‌ಗೆ ಬೆದರಿಕೆಯ ಇ-ಮೇಲ್ ಬಂದಿತ್ತು. ಅದರಲ್ಲಿ, ನಿಮ್ಮ ರೆಸ್ಟೋರೆಂಟ್ ಮೈದಾನದಲ್ಲಿ ಕಪ್ಪು ಬ್ಯಾಗ್ ನಲ್ಲಿ ಬಾಂಬ್ ಇದೆ ಎಂದು ಹೇಳಲಾಗಿತ್ತು. 5 ಸಾವಿರದ 50 ಲಕ್ಷ ರುಪಾಯಿ ಕಳುಹಿಸಿ ಇಲ್ಲವಾದರೆ ನಾನು ರೆಸ್ಟೋರೆಂಟ್ ಅನ್ನು ಬಾಂಬ್‌ನಿಂದ ಸ್ಫೋಟಿಸುತ್ತೇನೆ. ರಕ್ತ ಎಲ್ಲೆಡೆ ಹರಡುತ್ತದೆ. ಬಾಂಬ್ ನಿಷ್ಕ್ರಿಯಗೊಳಿಸುವ ಯಾವುದೇ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಬರೆಯಲಾಗಿತ್ತು. ಪರಿಶೀಲನೆಯ ನಂತರ ಬೆದರಿಕೆಗಳು ಸುಳ್ಳು ಎಂದು ತಿಳಿದುಬಂದಿದೆ. ಲಕ್ಷ್ಮಣಪುರಿಯಲ್ಲಿರುವ ಫಾರ್ಚೂನ್ ರೆಸ್ಟೋರೆಂಟ್‌ಗೆ ಸತತ 3 ದಿನಗಳಿಂದ ಬಾಂಬ್ ಬೆದರಿಕೆ ಬಂದಿತ್ತು.

ಗುಜರಾತ್‌ನ 10 ರೆಸ್ಟೋರೆಂಟ್‌ಗಳಿಗೆ ಬೆದರಿಕೆ !

ಅಕ್ಟೋಬರ್ 26 ರಂದು ರಾಜ್‌ಕೋಟ್‌ನ 10 ರೆಸ್ಟೋರೆಂಟ್‌ಗಳಿಗೆ ಬೆದರಿಕೆ ಇಮೇಲ್‌ ಬಂದಿತ್ತು. ಇದು ಇಂಪೀರಿಯಲ್ ಪ್ಯಾಲೇಸ್, ಸಯಾಜಿ ಹೋಟೆಲ್, ಸೀಸನ್ಸ್ ಹೋಟೆಲ್, ಹೋಟೆಲ್ ಗ್ರ್ಯಾಂಡ್ ರೀಜೆನ್ಸಿಯಂತಹ ಪಂಚತಾರಾ ರೆಸ್ಟೋರೆಂಟ್‌ಗಳನ್ನು ಸಹ ಒಳಗೊಂಡಿದೆ. ತನಿಖೆಯ ನಂತರ ಈ ಎಲ್ಲಾ ಬೆದರಿಕೆಗಳು ಸುಳ್ಳು ಎಂದು ತಿಳಿದುಬಂದಿದೆ.

ಸಂಪಾದಕೀಯ ನಿಲುವು

ದೇಶದಲ್ಲಿ ಭಯ ಮತ್ತು ಅಸ್ಥಿರತೆಯನ್ನು ಉಂಟುಮಾಡಲು ಜಿಹಾದಿ ಭಯೋತ್ಪಾದಕರು ಅಥವಾ ಖಲಿಸ್ತಾನಿಗಳ ಕೈವಾಡ ಇರಬಹುದು ! ಇಂತಹವರನ್ನು ಹದ್ದುಬಸ್ತಿನಲ್ಲಿಡಲು ನಮ್ಮ ಭದ್ರತಾ ಪಡೆ ಸಮರ್ಥರಾಗಿದ್ದಾರೆ ಎಂಬುದು ಬೆದರಿಕೆ ನೀಡುವವರು ಗಮನದಲ್ಲಿಟ್ಟುಕೊಳ್ಳಬೇಕು !