‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪಥಿ ಉಪಚಾರ !’ (ಲೇಖನಮಾಲೆ ೨೦) !
ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ. ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿಯೇ ಈ ಚಿಕಿತ್ಸೆ ಯನ್ನು ಹೇಗೆ ಮಾಡಬಹುದು? ಹೋಮಿಯೋಪಥಿ ಔಷಧಿಗಳನ್ನು ಯಾವ ರೀತಿ ತಯಾರಿಸಬೇಕು ? ಅವುಗಳನ್ನು ಹೇಗೆ ಸಂಗ್ರಹಿಸಬೇಕು ? ಇಂತಹ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇವೆ.
ಮೂಗೇಟು (ಒಳಪೆಟ್ಟು)/ಗಾಯ (Bruise/Injury)
ಬೀಳುವುದು, ಅಪ್ಪಳಿಸುವುದು ಅಪಘಾತ ಇವುಗಳಿಂದ ಶರೀರಕ್ಕೆ ಮೂಗೇಟು (ಒಳಪೆಟ್ಟು) ಆಗಬಹುದು. ಬಾಹ್ಯ ಘಟಕದಿಂದಾಗುತ್ತಿದ್ದು ಅಥವಾ ಗೊತ್ತಿಲ್ಲದೇ ದೇಹದ ವಿವಿಧ ಭಾಗಕ್ಕಾಗುವ ಹಾನಿಗೆ ‘ಮೂಗೇಟು’ ಎಂದು ಹೇಳುತ್ತಾರೆ. ಗಾಯದ ವ್ಯಾಪ್ತಿಗನುಸಾರ ವಿಶ್ರಾಂತಿ ಪಡೆಯುವುದು, ಗಾಯ ವಾಗಿರುವ ಭಾಗದ ಮೇಲೆ ೩-೪ ಸಲ ೧೦ ನಿಮಿಷಗಳ ವರೆಗೆ ಮಂಜುಗಡ್ಡೆ(ಐಸ್) ಇಡುವುದು ಮುಂತಾದ ಉಪಚಾರಗಳನ್ನು ಮಾಡಬೇಕು. ಒಂದು ವೇಳೆ ಗಾಯವಾಗಿದ್ದರೆ, ಅದನ್ನು ಸ್ವಚ್ಛಗೊಳಿಸಬೇಕು; ಗಾಯ ದೊಡ್ಡದಾಗಿದ್ದು, ಆಳದ ವರೆಗೆ ಹೋಗಿದ್ದರೆ ಗಾಯಕ್ಕೆ ಮುಲಾಮುಪಟ್ಟಿಯನ್ನು ಹಾಕಬೇಕು. ಗಾಯಕ್ಕೆ ದುರ್ವಾಸನೆ ಬರುತ್ತಿದೆಯೇ, ಅದರಲ್ಲಿ ಕೀವು ಆಗಿದೆಯೇ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಗಾಯ ಬಹಳ ದೊಡ್ಡದಿದ್ದರೆ, ಅಲ್ಲಿ ಹೊಲಿಗೆ ಹಾಕಬೇಕಾಗಬಹುದು. ಅದಕ್ಕಾಗಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾಗುವುದು.
೧. ಆರ್ನಿಕಾ ಮೊಂಟಾನಾ (Arnica Montana) : ಎಲ್ಲಾ ರೀತಿಯ ಗಾಯಗಳು (injury), ಮೂಗೇಟುಗಳು (bruise), ಅಪಘಾತಗಳಲ್ಲಿ ಸ್ನಾಯುಗಳಿಗೆ ಗಾಯಗಳಾಗುವುದು (post traumatic soft tissue injury).
ಅರ್ಧ ಕಪ್ ನೀರಿನಲ್ಲಿ ಔಷಧಿಯ ಮೂಲಾರ್ಕದ (mother tincture ನ) ೪ ರಿಂದ ೫ ಹನಿಗಳನ್ನು ಹಾಕಬೇಕು ಮತ್ತು ಆ ಮಿಶ್ರಣದಲ್ಲಿ ಮೆತ್ತಗಿನ ಬಟ್ಟೆಯ ಪಟ್ಟಿಯನ್ನು ನೆನೆಸಿ ಮೂಗೇಟು ತಗಲಿದ ಸ್ಥಳದ ಮೇಲಿಡಬೇಕು, ಹಾಗೆಯೇ ಹೊಟ್ಟೆಗೆ ೩೦ ಪೋಟೆನ್ಸಿಯ ಇದೇ ಔμÀಧಿಯನ್ನು ತೆಗೆದುಕೊಳ್ಳಬೇಕು. ಇದರಿಂದ ಊತವು ಶೀಘ್ರ ಗತಿಯಲ್ಲಿ ಕಡಿಮೆಯಾಗುತ್ತದೆ.
೨. ಬೆಲಿಸ ಪೆರೆನ್ನಿಸ (Bellis Perennis) : ಮೂಗೇಟು ಹೆಚ್ಚು ಆಳವಾಗಿರುವುದು.
೩. ಕ್ಯಾಲೆಂಡುಲಾ ಅಫಿಸಿನಾಲಿಸ್(Calendula Officinalis) : ಗಾಯವಾಗುವುದು (wound)
೪. ಎಕಿನೇಶಿಯಾ ಎಂಗಸ್ಟಿಫೋಲಿಯಾ (Echinacea Angustifolia) : ಹುಣ್ಣು (ulcer), ಗಾಯದಿಂದ ದುರ್ವಾಸನೆ ಬರುವುದು
೫. ನ್ಯಾಟ್ರಮ್ ಸಲ್ಫ್ಯೂರಿಕಮ್ (Natrum Sulphuricum) : ತಲೆಗೆ ಪೆಟ್ಟಾಗುವುದು
೬. ಹೈಪೇರಿಕಮ್ ಪರ್ಫೊರೇಟಮ್ (Hypericum Perforatum) : ನರಗಳು (nerves), ಬೆರಳುಗಳ ತುದಿಗಳು, ಬೆನ್ನುಮೂಳೆಯ ಕೊನೆ (coccyx), ಬೆನ್ನು ಮೂಳೆ (spine) ಇವುಗಳಿಗೆ ಪೆಟ್ಟಾಗುವುದು
೭. ರುಟಾ ಗ್ರೇವಿಯೋಲೆನ್ಸ್ (Ruta Graveolens) : ಇತರರು ಗುದ್ದಿದ್ದರಿಂದ (ಬಡಿದಿದ್ದರಿಂದ) ಆಗಿರುವ ಮೂಗೇಟು ಅಥವಾ ಮೊಂಡು ಆಯುಧದಿಂದ ಉಂಟಾಗುವ ಮೂಗೇಟು, ಚರ್ಮ ನೀಲಿಗಪ್ಪಾಗುವುದು
೮. ಲೆಡಮ್ ಪಾಲುಸ್ರ್ಟೆ (Ledum Palustre) : ಇಲಿ, ಬೆಕ್ಕು, ನಾಯಿ ಕಚ್ಚುವುದರಿಂದ, ಹಾಗೆಯೇ ಮೊಳೆ (ನೇಲ್) ಅಥವಾ ಇತರ ಹರಿತವಾದ ಆಯುಧಗಳಿಂದ ಉಂಟಾಗುವ ಗಾಯಗಳು.
೯. ಸ್ಟಾಫಿಸಾಗ್ರಿಯಾ (Staphysagria) : ಹರಿತವಾದ ಆಯುಧ ಗಳಿಂದ ಹಾಗೂ ಶಸ್ತ್ರಚಿಕಿತ್ಸೆಯಿಂದ ಉಂಟಾಗುವ ಗಾಯಗಳು,
೧೦. ಸಿಂಫೈಟಮ್ ಅಫಿಷಿನಾಲಿಸ್ (Symphytum Officinalis) : ಮೂಳೆಗಳು, ಕಣ್ಣುಗಳು ಸ್ನಾಯುರಜ್ಜುಗಳು (Ligaments), ಅಸ್ಥಿರಜ್ಜುಗಳು (Tendons), ಮೊಣಕೈ (tennis elbow) ಈ ಸ್ಥಳಗಳಿಗೆ ಪೆಟ್ಟಾಗುವುದು.
೧೧. ಪೈರೋಜೆನಿಯಮ್ (Pyrogenium) : ಗಾಯ ಮಲೀನವಾಗಿ ಅದರಲ್ಲಿ ಕೀವು ಆಗುವುದು.
ಉಳುಕುವುದು (Sprain)
ಸಂಧಿಗಳ ಸುತ್ತಲಿನ ಅಸ್ಥಿರಜ್ಜುಗಳಿಗೆ (ಟೈಗ್ಚಿಮೆಟಿಣಸ್) ಆಗಿರುವ ಮೂಗೇಟುಗಳಿಗೆ ‘ಉಳುಕುವುದು’ ಎಂದು ಹೇಳಲಾಗುತ್ತದೆ. ಉಳುಕಿರುವ ಜಾಗದಲ್ಲಿ ವೇದನೆಗಳು ಆಗುತ್ತವೆ ಮತ್ತು ಊತ (ಬಾವು) ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಯಾವ ಕೃತಿಗಳಿಂದ ಅಥವಾ ಚಲನವಲನದಿಂದ ಆ ಜಾಗದಲ್ಲಿ ಹೆಚ್ಚು ವೇದನೆಗಳು ಆಗುತ್ತಿದ್ದಲ್ಲಿ ಆ ಕೃತಿಗಳನ್ನು ಮಾಡಬಾರದು, ಅಲ್ಲಿ ಹೆಚ್ಚು ಭಾರವನ್ನು ಹಾಕಬಾರದು. ಇಂತಹ ಕೃತಿಗಳನ್ನು ಸಾಧ್ಯವಾದμÀಟ್Ä ಮಾಡಬಾರದು. ಉಳುಕಿರುವ ಭಾಗಕ್ಕೆ ಸಂಪೂರ್ಣ ವಿಶ್ರಾಂತಿ ನೀಡಬೇಕು. ಆ ಭಾಗದಲ್ಲಿ ಮಂಜುಗಡ್ಡೆಯನ್ನು ಸವರುವುದರಿಂದ ಅಲ್ಲಿನ ಊತವು ಬೇಗನೇ ಕಡಿಮೆಯಾಗುತ್ತದೆ ಮತ್ತು ವೇದನೆಗಳೂ ಕೂಡ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತವೆ. ಸ್ಥಿತಿಸ್ಥಾಪಕ ಬ್ಯಾಂಡೇಜನೊಂದಿಗೆ (ಎಟಚಿಸ್ಣೈಛಿ ಬ್ಚಿಟಿಜಚಿಗೆ) ಉಳುಕಿರುವ ಭಾಗವನ್ನು ಬಿಗಿಯಾಗಿ ಕಟ್ಟಿ ಇಡುವುದೂ ಕೂಡ ಪ್ರಯೋಜನಕಾರಿಯಾಗಿದೆ. ಉಳುಕಿರುವ ಮೇಲಿನ ಲಕ್ಷಣಗಳ ಹೊರತಾಗಿ, ಇನ್ನಿತರ ಭಿನ್ನವಾದ ಲಕ್ಷಣಗಳಿದ್ದರೆ, ತೆಗೆದುಕೊಳ್ಳಬೇಕಾಗಿರುವ ಔμÀಧಿಗಳ ಹೆಸರುಗಳನ್ನು ಕೆಳಗೆ ನೀಡಲಾಗಿದೆ.
೧. ಆರ್ನಿಕಾ ಮೊಂಟಾನಾ (Arnica Montana) : ಉಳುಕಿರುವ ಭಾಗವು ನೀಲಿಗಪ್ಪಾಗಿ ಅಸಹನೀಯ ವೇದನೆಗಳು ಆಗತೊಡಗಿದಾಗ ಈ ಔಷಧಿಯನ್ನು ಮೊದಲು ತೆಗೆದುಕೊಳ್ಳಬೇಕು
೨. ರಸ್ ಟಾಕ್ಸಿಕೋಡೆಂಡ್ರಾನ್ (Rhus Toxicodendron)
೨ ಅ. ಭಾರವಾದ ವಸ್ತುವನ್ನು ಎತ್ತಿದಾಗ ಉಳುಕುವುದರಿಂದ ನಿರಂತರ ಬೆನ್ನುನೋವು, ಸೊಂಟನೋವು ಬರುವುದು
೨ ಆ. ಬಸ್ಸಿನಲ್ಲಿ ಹಲವು ಗಂಟೆಗಳ ಕಾಲ, ಕೈಗಳಿಂದ ಆಧಾರವನ್ನು ಹಿಡಿದುಕೊಂಡು ನಿಲ್ಲುವುದರಿಂದ ಮುಂಗೈ ನೋಯುವುದು, ಕುಸ್ತಿ ಪಟುಗಳ (ಬ್ವಾಕ್ಸರ) ಮುಂಗೈಗಳು ನೋಯಿಸುವುದು, ಓಡುವಾಗ ಮೊಣಕಾಲು ಉಳುಕುವುದು ಹಾಗೂ ಕೂಲಿ ಕಾರ್ಮಿಕರ ಬೆನ್ನಿನ ಸ್ನಾಯುಗಳ ನೋವು.
೩. ಬೆಲ್ಲಿಸ್ ಪೆರೆನ್ನಿಸ್ (Bellis Perennis) : ವಾಹನ ಅಥವಾ ರೈಲುಗಾಡಿಯ ಅಪಘಾತದಲ್ಲಿ ಬೆನ್ನಿನ ಮೇರುದಂಡ (ಸ್ಠೀಟಿಎ) ನೋಯುವುದು, ಒಳಗಿನ ಸ್ನಾಯುಗಳಿಗೆ ಗಾಯವಾಗುವುದು (injury to deeper tissues), ಸ್ನಾಯುಗಳು ಬಹಳ ಬಿಗಿತ ಗೊಳ್ಳುವುದು (marked stiffness).