ಸಿಕ್ಖ್‌ರಲ್ಲಿ ಶೌರ್ಯವನ್ನು ಮೂಡಿಸಲು ಪ್ರಭು ಶ್ರೀರಾಮನ ಚರಿತ್ರೆಯನ್ನು ಬರೆದ ರಾಮಭಕ್ತ ಗುರು ಗೋವಿಂದಸಿಂಹ !

ಗುರುಗೋವಿಂದ ಸಿಂಗ್

‘ಗುರು ತೇಗಬಹಾದೂರ್‌ ಇವರು ಧರ್ಮರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದರು. ಅವರ ಪುತ್ರರೇ ಶ್ರೀರಾಮಭಕ್ತ, ವೀರಪುರುಷ, ಖಾಲ್ಸಾ ಪಂಥದ ಸಂಸ್ಥಾಪಕ ಮತ್ತು ಸಿಕ್ಖ್‌ರ ೧೦ ನೇ ಗುರು ಗೋವಿಂದಸಿಂಹ ! ಇವರೇ ಸಿಕ್ಖ್ ಪಂಥವನ್ನು ಪುನರ್ನಿರ್ಮಿಸಿದರು. ಇಂತಹ ಗುರು ಗೋವಿಂದಸಿಂಹರು ಹೇಗೆ ಶ್ರೀರಾಮಭಕ್ತರಾಗಿದ್ದರು ? ಮತ್ತು ಅವರು ಹಿಂದೂ ಧರ್ಮಕ್ಕಾಗಿ ಮಾಡಿದ ಕಾರ್ಯದ ಸಂಕ್ಷಿಪ್ತ ವರದಿಯನ್ನು ಇಲ್ಲಿ ನೀಡುತ್ತಿದ್ದೇವೆ.

ಶ್ರೀ. ದುರ್ಗೇಶ ಜಯವಂತ ಪರೂಳಕರ

೧. ಔರಂಗಜೇಬ್‌ನಿಂದ ಗುರು ತೇಗಬಹಾದೂರರ ಶಿರಚ್ಛೇದದ ಆದೇಶ

ಔರಂಗಜೇಬ್‌ನು ಸಿಕ್ಖ್‌ರ ೯ ನೇ ಗುರು ತೇಗಬಹಾದೂರ ಇವರನ್ನು ಕಣ್ಗಾವಲಿನಲ್ಲಿಟ್ಟಿದ್ದನು. ಅವರಿಗೆ ಇಸ್ಲಾಮ್‌ ಧರ್ಮವನ್ನು ಸ್ವೀಕರಿಸಲು ಬಹಳ ಹಿಂಸಿಸಲಾಯಿತು. ಆದರೂ ಅವರು ಹಿಂದೂ ಧರ್ಮವನ್ನು ಬಿಟ್ಟು ಇಸ್ಲಾಮ್‌ ಪಂಥ ವನ್ನು ಸ್ವೀಕರಿಸಲಿಲ್ಲ. ಅವರು ಮತ್ತು ಅವರ ೪ ಪ್ರೀತಿಯ ಶಿಷ್ಯರು ಮುಸಲ್ಮಾನರ ದೌರ್ಜನ್ಯಕ್ಕೆ ಶರಣಾಗಲಿಲ್ಲ. ವಿವಿಧ ರೀತಿಯಲ್ಲಿ ಹಿಂಸೆ ನೀಡಿದ ನಂತರವೂ ಗುರು ತೇಗಬಹಾದೂರ್‌ ಇವರು ಮುಸ್ಲಿಂ ಧರ್ಮವನ್ನು ಸ್ವೀಕರಿಸದಿದ್ದಾಗ, ಔರಂಗಜೇಬನು ಅವರೊಂದಿಗೆ ಧರ್ಮಚರ್ಚೆ ನಡೆಸುವಂತೆ ನಟಿಸಿದನು. ಆ ಸಮಯದಲ್ಲಿ ಗುರು ತೇಗಬಹಾದೂರ್‌ ಇವರು ಔರಂಗಜೇಬನಿಗೆ ಕುರಾನ್‌ ನಲ್ಲಿನ ಸತ್ಯವನ್ನು ಹೇಳಿದ ತಕ್ಷಣ ಅವನಿಗೆ ಸಿಟ್ಟು ಬಂದಿತು ಮತ್ತು ಅವನು ಗುರು ತೇಗಬಹಾದೂರ್‌ ಇವರ ಶಿರಚ್ಛೇದದ ಆದೇಶ ನೀಡಿದನು. ಔರಂಗಜೇಬ್‌ನ ಸೇವಕರು ಅವನ ಆಜ್ಞೆಯನ್ನು ತಕ್ಷಣ ಪಾಲಿಸಿದರು. ಇಂದು ದೆಹಲಿಯ ಚಾಂದನಿ ಚೌಕದಲ್ಲಿ ಗುರುದ್ವಾರಾ ಸೀಸಗಂಜ್‌ ಈ ಭೀಕರ ಸತ್ಯವನ್ನು ಇಡೀ ಜಗತ್ತಿಗೆ ಸಾರುತ್ತಿದೆ. ಗುರು ತೇಗ ಬಹಾದೂರ್‌ ಇವರನ್ನು ಎಲ್ಲಿ ದಹನ ಮಾಡಲಾಯಿತೋ, ಅಲ್ಲಿ ರಕಾಬಗಂಜ್‌ ಗುರುದ್ವಾರವಿದೆ. ಅದು ಇಸ್ಲಾಮ್‌ನ ಕ್ರೌರ್ಯ ಮತ್ತು ಸಿಕ್ಖರ ಶೌರ್ಯದ ಸಾಕ್ಷಿಯನ್ನು ನೀಡುತ್ತ್ತದೆ. ಇಂತಹ ಇಸ್ಲಾಮಿಕ್‌ ದೌರ್ಜನ್ಯಗಳೊಂದಿಗೆ ಹೋರಾಡಲು ತನ್ನ ಅನುಯಾಯಿಗಳಿಗೆ ಶಕ್ತಿಯು ಸಿಗಬೇಕೆಂಬ ಉದ್ದೇಶದಿಂದ ಗುರು ಗೋವಿಂದಸಿಂಹರು ಸಿಕ್ಖ್ ಪಂಥದಲ್ಲಿ ಕೆಲವು ಸುಧಾರಣೆಗಳನ್ನು ಮಾಡಿದರು.
೨. ಗುರು ಗೋವಿಂದಸಿಂಹರು ‘ಬಚಿತ್ತರ ನಾಟಕ’ದ ಮೂಲಕ ತಾವು ಪ್ರಭು ರಾಮಚಂದ್ರನ ವಂಶಜರಿರುವುದಾಗಿ ಹೇಳುವುದು
ಮುಸಲ್ಮಾನರು ಹಿಂದೂಗಳನ್ನು ಶಸ್ತ್ರಬಲದಿಂದ ಮತಾಂತರಿಸುತ್ತಾರೆ, ಹಾಗೆಯೇ ಹಿಂದೂಗಳ ಸಂಪತ್ತನ್ನು ದೋಚುತ್ತಾರೆ ಮತ್ತು ಹಿಂದೂ ಸ್ತ್ರೀಯರನ್ನು ಅಪಹರಿಸುತ್ತಾರೆ. ಯಾವುದಾದರೊಬ್ಬ ಹಿಂದೂ ಇನ್ನೊಬ್ಬ ಹಿಂದೂವಿಗೆ ಆಶ್ರಯ ನೀಡಿದರೆ, ಆ ಆಶ್ರಯ ನೀಡಿದ ಹಿಂದೂವಿಗೆ ಔರಂಗಜೇಬನು ಗಲ್ಲುಶಿಕ್ಷೆಯನ್ನು ನೀಡುತ್ತಿದ್ದನು. ಅತ್ಯಂತ ಕ್ರೂರರಾಗಿರುವ ಶತ್ರುವಿನ ವಿರುದ್ಧ ಹೋರಾಡಲು ಸಾಹಸಬೇಕು. ಆ ಸಾಹಸವನ್ನು ತಮ್ಮ ಅನುಯಾಯಿಗಳಲ್ಲಿ ನಿರ್ಮಿಸಲು ಗುರು ಗೋವಿಂದಸಿಂಹರು ೧೪ ಅಧ್ಯಾಯಗಳ ‘ಬಚಿತ್ತರ ನಾಟಕ’ವನ್ನು ಬರೆದರು. ಆ ನಾಟಕವೆಂದರೆ ಅವರ ಸಂಘರ್ಷಮಯ ಜೀವನದ ಕಥೆಯಾಗಿದೆ. ಈ ನಾಟಕದಲ್ಲಿನ ಒಂದು ಅಧ್ಯಾಯದಲ್ಲಿ ಅವರು ನಾವು ‘ಮರ್ಯಾದಾ ಪುರುಷೋತ್ತಮ ಪ್ರಭು ರಾಮಚಂದ್ರನ ವಂಶಜರಾಗಿದ್ದೇವೆ’ ಎಂದು ಹೇಳಿದ್ದಾರೆ. ಈ ನಾಟಕದಲ್ಲಿ ಅವರು ಶ್ರೀರಾಮನು ಮಾಡಿದ ಹೋರಾಟಗಳ ಬಗ್ಗೆ ವರ್ಣಿಸಿದ್ದಾರೆ. ‘ಶ್ರೀರಾಮನÀ ಶೌರ್ಯ ಮತ್ತು ಹೋರಾಟದ ಪರಂಪರೆಯನ್ನು ಕಲಿಯುಗದಲ್ಲಿ ಸೋಢಿ ಮತ್ತು ಬೇಢಿ ಇವೆರಡು ಕುಲಗಳು ಮುಂದೆ ನಡೆಸಿದವು’, ಎಂದು ಗುರು ಗೋವಿಂದಸಿಂಹರು ಬರೆದಿದ್ದಾರೆ. ಬೇಢಿ ಮನೆತನ ದಲ್ಲಿ ಗುರುನಾನಕ, ಗುರು ಅಂಗದದೇವ ಮತ್ತು ಗುರು ಅಮರದಾಸ ಈ ಸಿಕ್ಖ್ ಪಂಥದ ಮೊದಲು ೩ ಜನ ಗುರುಗಳ ಜನ್ಮವಾಯಿತು. ಅನಂತರ ಸಿಕ್ಖ್ ಪಂಥದ ಮುಂದಿನ ೭ ಜನ ಗುರುಗಳು ಅನುಕ್ರಮವಾಗಿ ಗುರು ರಾಮದಾಸ, ಗುರು ಅರ್ಜುನದೇವ, ಗುರು ಹರಗೋವಿಂದರಾಯ, ಗುರು ಹರಿರಾಯ, ಗುರು ಹರಿಕಿಶನ್, ಗುರು ತೇಗಬಹಾದ್ದೂರ್‌ ಮತ್ತು ಗುರು ಗೋವಿಂದಸಿಂಹ ಇವರ ಜನ್ಮ ಸೋಢಿ ಮನೆತನದಲ್ಲಾಯಿತು.

೩. ಗುರು ಗೋವಿಂದಸಿಂಹರು ಶಿಷ್ಯರಲ್ಲಿ ಹೋರಾಡುವ ವೃತ್ತಿಯನ್ನು ಹೆಚ್ಚಿಸಿ ಧರ್ಮ ಮತ್ತು ರಾಷ್ಟ್ರದ ರಕ್ಷಣೆಗಾಗಿ ಮಾಡಿದ ಪರಿಹಾರೋಪಾಯ

ಸಿಕ್ಖ್ ಸಂಪ್ರದಾಯದಲ್ಲಿ ಆ ಸಮಯದಲ್ಲಿ ಹೋರಾಡುವ ಉತ್ಸಾಹ ಕುಂಠಿತವಾಗಿತ್ತು. ‘ಮುಸ್ಲಿಂರೊಂದಿಗೆ ಧರ್ಮಯುದ್ಧ ಮಾಡುವ ಪ್ರಸಂಗ ಬಂದರೆ, ಅವರೊಂದಿಗೆ ಹೋರಾಡುವ ಕ್ಷಮತೆಯಿರುವ ವೀರರು ತಯರಾಗುವುದಿಲ್ಲ’, ಎಂಬ ಕಾಳಜಿ ಅವರಿಗಿತ್ತು; ಆದುದರಿಂದ ಅವರು ತಮ್ಮ ಶಿಷ್ಯರಲ್ಲಿ ಯುದ್ಧ ಪ್ರಿಯತೆಯೊಂದಿಗೆ ಹೋರಾಡುವ ವೃತ್ತಿಯನ್ನು ಮೂಡಿಸುವ ಉದ್ದೇಶದಿಂದ ಪರಿಹಾರವನ್ನು ಮಾಡಿದರು. ಗುರು ಗೋವಿಂದ ಸಿಂಹರ ಶಿಷ್ಯರಿಗೆ ಇದು ಒಪ್ಪಿಗೆಯಾಗಲಿಲ್ಲ. ಅವರು ಗುರುದೇವರ ತಾಯಿ ಗುಜರಿದೇವಿಯರಿಗೆ ಇದರ ಬಗ್ಗೆ ಹೇಳಿದರು ಮತ್ತು ಅವರ ಮನಸ್ಸನ್ನು ಹೊರಳಿಸಲು ವಿನಂತಿಸಿದರು. ತಾಯಿ ಗುಜರೀದೇವಿಯು ಗೋವಿಂದಸಿಂಹರಿಗೆ ತಿಳಿಸಿ ಹೇಳಲು ಪ್ರಯತ್ನಿಸಿದಳು; ಆದರೆ ಯಾವುದೇ ಉಪಯೋಗವಾಗಲಿಲ್ಲ. ಅವರು ಅವರ ತಾಯಿಗೆ, ‘ನಾನು ಏನೆಲ್ಲ ಮಾಡುತ್ತಿದ್ದೇನೆಯೋ, ಅದು ಧರ್ಮ ಮತ್ತು ರಾಷ್ಟ್ರದ ರಕ್ಷಣೆಗಾಗಿ ಮಾಡುತ್ತಿದ್ದೇನೆ. ನನ್ನ ತಂದೆ ನಮ್ಮೆಲ್ಲರ ಶ್ರದ್ಧಾಸ್ಥಾನವಾಗಿದ್ದಾರೆ, ಹಾಗೆಯೇ ಗುರುನಾನಕರು ನಮ್ಮೆಲ್ಲರ ಬೆಂಬಲಕ್ಕಿದ್ದಾರೆ. ಅವರು ಮಾಡಿದ ಸಂಸ್ಕಾರ ಗಳಿಗನುಸಾರ ಕೇವಲ ಧರ್ಮಕಾರ್ಯ ಮಾತ್ರ ನನ್ನ ಕಣ್ಣುಗಳ ಮುಂದಿದೆ. ‘ದುಷ್ಟ ದುರ್ಜನರ ನಾಶವನ್ನು ಮಾಡಿರಿ ಧರ್ಮದ ರಕ್ಷಣೆಯನ್ನು ಮಾಡಿರಿ’, ಎಂದು ಗುರು ಹರಗೋವಿಂದಜಿ ಇವರ ಆದೇಶವಿದೆ. ಅವರ ಈ ಆಜ್ಞೆಯನ್ನು ಉಲ್ಲಂಘಿಸಲು ನನ್ನಿಂದ ಸಾಧ್ಯವಿಲ್ಲ. ಅವರು ಮಾಡಿದ ಆಜ್ಞೆಯನ್ನು ಪಾಲಿಸಲು ಎರಡು ರೀತಿಯ ಖಡ್ಗಗಳ ಆವಶ್ಯಕತೆ ಇದೆ. ಅದರಲ್ಲಿ ಒಂದು ಧರ್ಮರಕ್ಷಣೆಗಾಗಿ ಮತ್ತು ಇನ್ನೊಂದು ರಾಷ್ಟ್ರರಕ್ಷಣೆಗಾಗಿ. ಅನ್ಯಾಯ ಮತ್ತು ಅತ್ಯಾಚಾರಗಳನ್ನು ಸಹಿಸುವವರ ಬಗ್ಗೆ ನನಗೆ ಸಿಟ್ಟು ಬರುತ್ತದೆ. ಅದಕ್ಕಾಗಿಯೇ ನಾನು ನನ್ನ ಸಹೋದರರ (ಶಿಷ್ಯರ) ಸಂಘಟನೆಯನ್ನು ಮಾಡುತ್ತಿದ್ದೇನೆ. ಅವರ ಬಲವನ್ನು ಹೆಚ್ಚಿಸುತ್ತಿದ್ದೇನೆ. ಯಾರೂ ನಮ್ಮ ಮಾನಹಾನಿಯನ್ನು ಮಾಡುವ ಧೈರ್ಯವನ್ನು ತೋರಿಸಬಾರದು, ಎಂಬುದಕ್ಕಾಗಿಯೇ ನನ್ನ ಈ ಪ್ರಯತ್ನಗಳು ನಡೆಯುತ್ತಿವೆ.’

೪. ಧ್ಯೇಯವನ್ನು ಸಾಧಿಸಲು ಗುರು ಗೋವಿಂದಸಿಂಹರು ಮಾಡಿದ ಗ್ರಂಥಗಳ ಅಧ್ಯಯನ

ಗುರು ಗೋವಿಂದಸಿಂಹರ ಜೀವನದಲ್ಲಿನ ೧೬೭೫ ರಿಂದ ೧೬೯೯ ಈ ಎರಡು ತಪಗಳ ಕಾಲವನ್ನು ಅನೇಕ ಚರಿತ್ರಕಾರರು ‘ಉದ್ಯೋಗಪರ್ವ’ವೆಂದು ರೇಖಾಂಕಿತ ಮಾಡಿದ್ದಾರೆ. ಗುರು ಗೋವಿಂದಸಿಂಹರ ಜ್ಞಾನ ಲಾಲಸೆ (ಜ್ಞಾನ ಪಡೆಯುವ ಇಚ್ಛೆ ಅಗಾಧವಾಗಿತ್ತು ಧ್ಯೇಯವನ್ನು ಸಾಧಿಸಲು ಅವರು ಯಾವುದೇ ರೀತಿಯ ತೊಂದರೆ ಗಳನ್ನು ಸಹಿಸಲು ತಯಾರಿದ್ದರು. ಅವರು ಈ ಕಾಲಾವಧಿಯಲ್ಲಿ ಪ್ರಾಚೀನ ಭಾರತೀಯ ಸಂಸ್ಕೃತ ಭಾಷೆಯಲ್ಲಿನ ಶ್ರೇಷ್ಠ ಗ್ರಂಥಗಳನ್ನು ಉದಾ. ಪುರಾಣ, ರಾಮಾಯಣ, ಮಹಾಭಾರತ, ಇಂತಹ ಅನೇಕ ಗ್ರಂಥಗಳನ್ನು ವಿವರವಾಗಿ ಅಧ್ಯಯನ ಮಾಡಿದರು. ಈ ಅಧ್ಯಯನವನ್ನು ಮಾಡುವಾಗ ಅವರು ಸ್ವಾಭಿಮಾನ, ಶೌರ್ಯ ಮತ್ತು ಪರಾಕ್ರಮಗಳ ಕಥೆ ಈ ವಿಷಯಗಳ ಕಡೆಗೆ ವಿಶೇಷ ಗಮನ ನೀಡಿದರು.ಅವರು ಕಾವ್ಯರಚನೆಯನ್ನೂ ಮಾಡಿದ್ದಾರೆ. ಪಂಜಾಬಿ ಮತ್ತು ಹಿಂದಿ ಹೀಗೆ ಮಿಶ್ರ ಭಾಷೆಯಲ್ಲಿ ಅವರು ಕಾವ್ಯರಚನೆಯನ್ನು ಮಾಡುತ್ತಿದ್ದರು. ಅವರ ಕಾವ್ಯದ ವಿಷಯವೆಂದರೆ, ಶ್ರೀರಾಮನು ರಾವಣನ ಮತ್ತು ಇತರ ರಾಕ್ಷಸರನ್ನು ಸೋಲಿಸಿದ, ಶ್ರೀಕೃಷ್ಣನು ಕಂಸನನ್ನು ವಧಿಸಿದ, ಕುರುಕ್ಷೇತ್ರದಲ್ಲಿ ಪಾಂಡವರು ಮಾಡಿದ ದುಷ್ಟರ ಸಂಹಾರ, ದುರ್ಗಾಭವಾನಿಯ ಅದ್ಭುತ ಲೀಲೆಗಳು ಮತ್ತು ಅವಳು ಮಹಿಷಾಸುರನಿಗೆ ನೀಡಿದ ಶಿಕ್ಷೆ ಇತ್ಯಾದಿ.

೫. ಗುರು ಗೋವಿಂದಸಿಂಹರು ‘ಖಾಲ್ಸಾ ಪಂಥ’ವನ್ನು ಸ್ಥಾಪಿಸುವುದು

ಶತ್ರುಗಳನ್ನು ದಂಡಿಸಲೆಂದೇ ಅವರು ‘ಖಾಲ್ಸಾ ಪಂಥ’ವನ್ನು ಸ್ಥಾಪಿಸಿದರು. ‘ಖಾಲ್ಸಾ’ ಈ ಶಬ್ದವು ‘ಖಾಲಿಸ್’ ಈ ಅರಬಿ ಶಬ್ದದಿಂದ ಬಂದಿದೆ. ‘ಖಾಲಿಸ್’ ಈ ಪದದ ಅರ್ಥ ಎಲ್ಲ ಬಗೆಯ ಕಷ್ಟನಷ್ಟಗಳನ್ನು ಸಹಿಸಿ ಗೆದ್ದವನು, ಅತ್ಯಂತ ಶುದ್ಧ ಎಂದಾಗಿದೆ ! ‘ಮತಾಂಧ ವೃತ್ತಿಯ ಇಸ್ಲಾಮಿ ಆಳ್ವಿಕೆಯನ್ನು ನಾಶ ಮಾಡುವುದೇ ಖಾಲ್ಸಾವನ್ನು ಸ್ಥಾಪಿಸುವ ಹಿಂದಿನ ಅವರ ಉದ್ದೇಶವಾಗಿತ್ತು.’ ಈ ಖಾಲ್ಸಾ ಪಂಥದಲ್ಲಿ ಅವರು ಪಂಚಕಕಾರಗಳ ಮೇಲೆ ವಿಶೇಷ ಒತ್ತು ನೀಡಿರುವುದು ಕಂಡು ಬರುತ್ತದೆ.

ಅವು ಮುಂದಿನಂತಿವೆ :

ಅ. ಕೂದಲು : ಕೂದಲು ಕತ್ತರಿಸಬಾರದು. ಅವುಗಳನ್ನು ರಕ್ಷಿಸಬೇಕು.
ಆ. ಕಂಘ (ಬಾಚಣಿಗೆ) : ಕೂದಲುಗಳು ಸ್ವಚ್ಛವಾಗಿರಬೇಕೆಂದು ಬಾಚಣಿಗೆಯನ್ನು ಇಟ್ಟುಕೊಳ್ಳಬೇಕು.
ಇ. ಕಛ : ಶರೀರದ ರಕ್ಷಣೆಗೆ ಚಿಕ್ಕ ಪ್ಯಾಂಟ್‌ ಅನ್ನು ಧರಿಸಬೇಕು.
ಈ. ಕಡಾ : ಪ್ರತಿಯೊಬ್ಬ ಸಿಕ್ಖ್‌ನ ಕೈಯಲ್ಲಿ ಕಬ್ಬಿಣದ ಕಡಗ ಇರಬೇಕು.
ಉ. ಕೃಪಾಣ : ಸ್ವರಕ್ಷಣೆಗಾಗಿ ಕಿರುಗತ್ತಿಯಂತಹ ಚಿಕ್ಕ ಆಯುಧ ವನ್ನು ಪ್ರತಿಯೊಬ್ಬ ಪುರುಷ ಅಥವಾ ಸ್ತ್ರೀಯು ಯಾವಾಗಲೂ ತಮ್ಮೊಂದಿಗೆ ಇಟ್ಟುಕೊಳ್ಳಬೇಕು.

ಪ್ರತಿಯೊಬ್ಬ ಸಿಕ್ಖ್‌ನು ನಮಸ್ಕರಿಸುವಾಗ ‘ವಾಹೆ ಗುರುಕಾ ಖಾಲ್ಸಾ’ (ನಾನು ನನ್ನ ಗುರುಗಳ ಸತ್‌ಶಿಷ್ಯನಾಗಲು ನಿರ್ಧರಿಸುವ ಓರ್ವ ಅನುಯಾಯಿಯಾಗಿದ್ದೇನೆ.) ಮತ್ತು ಇದಕ್ಕೆ ಉತ್ತರವೆಂದು ಇನ್ನೊಬ್ಬನು ‘ವಾಹೆ ಗುರುಕಿ ಫತೆಹ’ (ನಿಮ್ಮ ಗುರುಗಳ ವಿಜಯ ಎಲ್ಲೆಡೆ ನಿಶ್ಚಿತವಿದೆ), ಎಂದು ಹೇಳಬೇಕು.

೬. ಗುರು ಗೋವಿಂದಸಿಂಹರು ರಾಮಕಥೆಯ ಬಗೆಗಿನ ‘ಗೋವಿಂದ ರಾಮಾಯಣ’ವನ್ನು ಬರೆಯುವುದು

ಗುರು ಗೋವಿಂದಸಿಂಹರ ರಾಮಭಕ್ತಿ ವಿಲಕ್ಷಣವಾಗಿತ್ತು. ಅವರು ಅನೇಕ ರೀತಿಯ ಕಾವ್ಯರಚನೆಯನ್ನು ಮಾಡಿದರು; ಆದರೆ ಅವರಿಗೆ ‘ಶ್ರೀ ರಾಮಾಯಣ’ವನ್ನು ಬರೆದ ನಂತರ ಪೂರ್ಣ ಸಮಾಧಾನವಾಯಿತು. ‘ಹಿಂದೂಗಳಲ್ಲಿ ಸಹಿಷ್ಣುತೆ ಮತ್ತು ಸದಾಚಾರದ ಸಾಮರ್ಥ್ಯ ರಾಮಾಯಣದಿಂದಾಗಿಯೇ ಹೆಚ್ಚಾಗುತ್ತದೆ’, ಎಂದು ಅವರಿಗೆ ದೃಢ ವಿಶ್ವಾಸವಿತ್ತು. ರಾಮಾಯಣದಂತಹ ಐತಿಹಾಸಿಕ ಮಹಾಕಾವ್ಯದಿಂದಾಗಿಯೇ ಖಾಲ್ಸಾ ಪಂಥವು ಬಲಿಷ್ಠವಾಯಿತು, ಎಂದು ಅವರು ಹೇಳಿದ್ದಾರೆ. ಅವರು ವಿವಿಧ ರಾಮಕಥೆಗಳನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಿದರು ಮತ್ತು ಅನಂತರ ಅವರು ಒಂದು ಸ್ವತಂತ್ರ ರಾಮಾಯಣವನ್ನು ರಚಿಸಿದರು. ‘ತುಳಸಿ ರಾಮಾಯಣ’, ಶಂಕರ ರಾಮಾಯಣ’, ‘ಗಿರಿಧರ ರಾಮಾಯಣ’ ಹೀಗೆ ಆ ಕಾಲದಲ್ಲಿನ ರಾಮಾಯಣಗಳ ಹೆಸರುಗಳು ಪ್ರಚಲಿತವಾಗಿದ್ದವು. ಆ ಹೆಸರುಗಳಂತೆಯೇ ಅವರು ತಾವು ರಚಿಸಿದ ರಾಮಕಥೆಗೆ ‘ಗೋವಿಂದ ರಾಮಾಯಣ’ ಎಂಬ ಹೆಸರನ್ನು ನೀಡಿದರು.

ಅವರು ಬರೆದ ರಾಮಾಯಣದಲ್ಲಿ ಒಟ್ಟು ೨೨ ಕಥೆಗಳಿವೆ. ಈ ಕಥೆಗಳಲ್ಲಿ ೭ ಕಥೆಗಳು ಯುದ್ಧ ನಿರೂಪಣೆಗೆ ಸಂಬಂಧಿಸಿವೆ. ಈ ಕಥೆಗಳಲ್ಲಿ ಯುದ್ಧದ ಘಟನೆಗಳನ್ನು ವಿಸ್ತಾರವಾಗಿ ವರ್ಣಿಸಿದ್ದಾರೆ. ರಾಮಕಥೆಯನ್ನು ಬರೆಯುವಾಗ ಅವರು ರಘುಕುಲದ ಮಹಾಪುರುಷರ ಗುಣವೈಶಿಷ್ಟ್ಯಗಳ ವರ್ಣನೆಯನ್ನು ಮಾಡಿಲ್ಲ. ಅವರು ತಮ್ಮ ಕಥೆಯಲ್ಲಿ ಶ್ರೀರಾಮನನ್ನು ‘ವಿಷ್ಣುವಿನ ಸಗುಣ ಅವತಾರ’ವೆಂದು ಬಣ್ಣಿಸಿಲ್ಲ. ‘ನರನು ತನ್ನ ಪ್ರಯತ್ನಗಳಿಂದ ಅಧರ್ಮವನ್ನು ನಾಶ ಮಾಡಬೇಕು ಮತ್ತು ನಾರಾಯಣನಾಗ ಬೇಕು’, ಎಂದು ಅವರಿಗೆ ಜನರ ಮನಸ್ಸಿನ ಮೇಲೆ ಬಿಂಬಿಸುವುದಿದೆ.

ಈ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡೇ ಅವರು ರಾಮಕಥೆಗಳನ್ನು ಬರೆದಿದ್ದಾರೆ. ‘ಏಕವಚನಿ, ಪರಮಪ್ರತಾಪಿ, ಸರ್ವಸಾಮಾನ್ಯರನ್ನು ಉದ್ಧರಿಸುವವನು, ಭಕ್ತರ ಮನೋರಥವನ್ನು ಪೂರ್ಣಗೊಳಿಸುವವನು, ದುಷ್ಟರನ್ನು ಸಂಹರಿಸಿ ಅಧರ್ಮವನ್ನು ನಾಶ ಮಾಡಿ ಧರ್ಮಸ್ಥಾಪಿಸುವ ರಾಮ’, ಇವನೇ ಅಖಿಲ ಮನುಕುಲದ ಆದರ್ಶ ಪುರುಷನಾಗಿದ್ದಾನೆ. ‘ಶ್ರೀರಾಮನ ಈ ರೂಪವು ಜನರ ಮನಸ್ಸಿನಲ್ಲಿರಬೇಕು’, ಎಂಬ ಉದ್ದೇಶದಿಂದ ಅವರು ರಾಮಕಥೆಯನ್ನು ಬರೆದಿದ್ದಾರೆ.

೭. ಗುರು ಗೋವಿಂದಸಿಂಹರು ಪ್ರಭು ಶ್ರೀರಾಮ ಮತ್ತು ಭಗವಾನ ಶ್ರೀಕೃಷ್ಣ ಇವರ ಚರಿತ್ರೆಗಳನ್ನು ಬರೆಯುವುದರ ಹಿಂದಿನ ಕಾರ್ಯಕಾರಣಭಾವ

ಸಿಕ್ಖ್ ಸಂಪ್ರದಾಯದಲ್ಲಿನ ಗುರು ಗೋವಿಂದಸಿಂಹರ ಇತಿಹಾಸವನ್ನು ಸಹಜವಾಗಿ ಓದಿದರೂ, ಗುರು ಗೋವಿಂದಸಿಂಹರು ಶ್ರೀರಾಮನ ಕಥೆಯ ಆಧಾರದ ಮೇಲೆ ಅವರ ವೀರವೃತ್ತಿಯನ್ನು ಹೆಚ್ಚು ಬಲಪಡಿಸಲು ಪ್ರಯತ್ನಿಸಿದರು ಎಂಬುದು ಅರಿವಾಗುತ್ತದೆ. ‘ಗುರು ಗೋವಿಂದಸಿಂಹರು ತಮ್ಮ ಜನರ ಹತ್ಯೆಯನ್ನು ಪ್ರತ್ಯಕ್ಷ ನೋಡಿದ್ದಾರೆ. ಈ ಕ್ರೌರ್ಯವನ್ನು ನಾಶ ಮಾಡಲು ಶೌರ್ಯದ ಆವಶ್ಯಕತೆ ಇದೆ’, ಎಂಬ ಸಿದ್ಧಾಂತವನ್ನು ಹೇಳಿ ಅವರು ಪ್ರಭು ಶ್ರೀರಾಮ ಮತ್ತು ಭಗವಾನ ಶ್ರೀಕೃಷ್ಣರ ಚರಿತ್ರೆಯನ್ನು ಬರೆದಿದ್ದಾರೆ. ಅವರ ಚರಿತ್ರೆಯಿಂದ ಪ್ರೇರಣೆ ಪಡೆದು ದುಷ್ಟರ ನಾಶ ಮಾಡುವ ಸಾಮರ್ಥ್ಯವನ್ನು ಗುರು ಗೋವಿಂದಸಿಂಹರು ಶಿಷ್ಯರಲ್ಲಿ ನಿರ್ಮಿಸಿದರು. ಶ್ರೀರಾಮ ಮತ್ತು ಶ್ರೀಕೃಷ್ಣ ಇವರು ವಿಶ್ವಕಲ್ಯಾಣದ ಸಂದೇಶವನ್ನು ನೀಡಿದ್ದಾರೆ. ‘ದುಷ್ಟರನ್ನು ನಾಶ ಮಾಡದೇ ವಿಶ್ವ ಕಲ್ಯಾಣವಾಗದು’, ಎಂದು ಶ್ರೀರಾಮ-ಕೃಷ್ಣರ ಬೋಧನೆ, ರಾಮಕಥೆ ಮತ್ತು ಶ್ರೀಕೃಷ್ಣನ ಕಥೆಯ ಮೂಲಕ ತಮ್ಮ ಪ್ರಭಾವಿ ಬರವಣಿಗೆಯಲ್ಲಿ ಪ್ರಸ್ತುತಪಡಿಸಿದ್ದಾರೆ.’

– ಶ್ರೀ. ದುರ್ಗೇಶ ಜಯವಂತ ಪರುಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು, ಡೊಂಬಿವಲಿ (೧೭.೧.೨೦೨೪)