ಭಾರತದಲ್ಲಿನ ಮತಾಂತರದ ಷಡ್ಯಂತ್ರ ಮತ್ತು ಅದರ ಹಿಂದಿರುವ ‘ಡೀಪ್ ಸ್ಟೇಟ್ನ ಕೈವಾಡ !

(ಡೀಪ್ ಸ್ಟೇಟ್ ಅಂದರೆ ಸರಕಾರಿ ವ್ಯವಸ್ಥೆ ಮತ್ತು ಖಾಸಗಿ ಸಂಸ್ಥೆಗಳ ನಡುವಿನ ಗುಪ್ತಜಾಲ. ಈ ವ್ಯವಸ್ಥೆಯ ಮೂಲಕ ಸರಕಾರಿ ನಿಲುವುಗಳನ್ನು ಖಾಸಗಿ ಸಂಸ್ಥೆಗಳಿಗೆ ಅನುಕೂಲಗೊಳಿಸಲಾಗುತ್ತದೆ)

 

ಶ್ರೀ. ರಮೇಶ ಶಿಂದೆ

ಜಗತ್ತಿನ ವಿವಿಧ ಧರ್ಮಗಳನ್ನು ಅಭ್ಯಾಸ ಮಾಡಿದ ಸ್ವಾಮಿ ವಿವೇಕಾನಂದರು ಭಾರತದಲ್ಲಿ ನಡೆಯುತ್ತಿರುವ ಮತಾಂತರದ ಸಮಸ್ಯೆಯನ್ನು ಗುರುತಿಸಿ ಮುಂದಿನಂತೆ ಹೇಳಿದ್ದಾರೆ, ‘ಹಿಂದೂಗಳ ಮತಾಂತರವೆಂದರೆ, ಹಿಂದೂ ಧರ್ಮದ ಕೇವಲ ಒಬ್ಬ ಹಿಂದೂ ಕಡಿಮೆಯಾಗುವುದಲ್ಲ, ಹಿಂದೂ ಧರ್ಮದ ಒಬ್ಬ ಶತ್ರು ಹೆಚ್ಚಾದಂತಾಗುತ್ತದೆ.

ಮತಾಂತರದಿಂದ ಹಿಂದೂ ಗಳು ಅಲ್ಪಸಂಖ್ಯಾತರಾದ ಕಾಶ್ಮೀರ, ಮಣಿಪುರ, ನಾಗಾಲ್ಯಾಂಡ್ ಇವು ಭಾರತದ ರಾಜ್ಯಗಳು ಮತ್ತು ಪಾಕಿಸ್ತಾನ, ಬಾಂಗ್ಲಾದೇಶದಂತಹ ದೇಶಗಳಲ್ಲಿ ಇಂದು ಕೂಡ ನಾವು ಇದನ್ನು ಪ್ರತ್ಯಕ್ಷ ಅನುಭವಿಸುತ್ತಿದ್ದೇವೆ. ಇಂದು ದೇಶದಾದ್ಯಂತ ಭಾರತವಿರೋಧಿ ಪ್ರತ್ಯೇಕತಾವಾದಿ ಗಳ ಚಳುವಳಿ ಆರಂಭವಾಗಿವೆ ಹಾಗೂ ಅವರಿಗೆ ಬಲ ನೀಡುವ ಕೆಲಸವನ್ನು ಮತಾಂತರ ಮಾಡುವ ಸಂಘಟನೆ ಗಳು ಮಾಡುತ್ತಿವೆ. ತಮ್ಮನ್ನು ‘ಸೆಕ್ಯುಲರ್ವಾದಿ (ಜಾತ್ಯತೀತ) ಗಳೆಂದು ಹೇಳಿಸಿಕೊಳ್ಳುವ ರಾಜಕಾರಣಿಗಳಿಂದ ಅವರಿಗೆ ಬೆಂಬಲ ಸಿಗುತ್ತದೆ. ಆದುದರಿಂದ ಮೇಲ್ನೋಟಕ್ಕೆ ಕಾಣಿಸುವ ಮತಾಂತರದ ಹಿಂದೆ ‘ಡೀಪ್‌ಸ್ಟೇಟ್ ಇದೆ, ಎಂಬ ನಿಷ್ಕರ್ಷ ವನ್ನು ನಾವು ತೆಗೆಯಬಹುದು.

ಕಳೆದ ವಾರದ ಸಂಚಿಕೆಯಲ್ಲಿ ನಾವು ‘ಚರ್ಚ್‌ನ ಪ್ರಭಾವದಲ್ಲಿ ಕ್ರೈಸ್ತ ದೇಶಗಳ ಪಂಥವಿಸ್ತಾರಕ್ಕಾಗಿ ಜಗತ್ತಿನಾದ್ಯಂತದ ದೇಶಗಳ ಮೇಲೆ ಆಕ್ರಮಣ ಮತ್ತು ಅಲ್ಲಿನ ಮೂಲ ಸಂಸ್ಕೃತಿಯನ್ನು ನಾಶಗೊಳಿಸುವುದು ಹಾಗೂ ವ್ಯಾಪಾರದ ಜೊತೆಗೆ ಕ್ರೈಸ್ತೀಕರಣಕ್ಕಾಗಿ ಪ್ರಯತ್ನ’, ಈ ವಿಷಯವನ್ನು ಓದಿದೆವು. ಈ ವಾರ ಅದರ ಮುಂದಿನ ಭಾಗವನ್ನು ನಿಮ್ಮ ಮುಂದಿಡುತ್ತಿದ್ದೇವೆ.

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ