|
ನವ ದೆಹಲಿ – ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದು ಮುಖ್ಯವಾಗಿದ್ದರೂ, ಅದು ಜೀವನದ ಅತ್ಯಂತ ಮಹತ್ವದ ವಿಷಯವಲ್ಲ. ಇದನ್ನು ಐಐಟಿ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಲು ಪ್ರಯತ್ನಿಸಿರಿ. ಅತ್ಯುತ್ತಮ ಕಾರ್ಯವನ್ನು ಮಾಡುವ ಒತ್ತಡಕ್ಕೆ ಬಲಿ ಬೀಳದೇ ಅತ್ಯುತ್ತಮ ಸಾಧನೆಯನ್ನು ಮಾಡಲು ಸಾಧ್ಯವಿದೆಯೆಂದು ದೆಹಲಿ ಉಚ್ಚ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ‘ಐಐಟಿ ದೆಹಲಿ’ಯು ಭಾರತದ ಪ್ರತಿಷ್ಠಿತ ಎಂಜಿನಿಯರಿಂಗ್ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ನ್ಯಾಯಾಲಯವು ಮೇಲಿನ ಹೇಳಿಕೆಯನ್ನು ನೀಡಿದೆ. ನ್ಯಾಯಮೂರ್ತಿ ರಜನೀಶ ಭಟ್ನಾಗರ ಅವರು ಅರ್ಜಿಯ ವಿಚಾರಣೆ ನಡೆಸಿದರು.
ಈ ಸಮಯದಲ್ಲಿ ನ್ಯಾಯಮೂರ್ತಿಗಳು ಮಾತನಾಡಿ, ಯುವಕರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡುವುದಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು. ಇದರಿಂದ ವಿದ್ಯಾರ್ಥಿ ಜೀವನದಲ್ಲಿ ಅವರಿಗೆ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಆತ್ಮವಿಶ್ವಾಸ ಸಿಗಬಹುದು.
ಕಳೆದ ವರ್ಷ ‘ಐಐಟಿ’ ದೆಹಲಿಯ ಇಬ್ಬರು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ಅವರ ಪೋಷಕರು ಸಂಸ್ಥೆಗೆ ಜಾತಿ ತಾರತಮ್ಯದ ಆರೋಪ ಹೊರಿಸಿದ್ದರು ಮತ್ತು ಸಂಸ್ಥೆಯ ವಿರುದ್ಧ ದೂರು ದಾಖಲಿಸಿದ್ದರು. ಹಾಗೆಯೇ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು. ಈ ಪ್ರಕರಣದ ತನಿಖೆಯ ನಂತರ, ‘ಐಐಟಿ ದೆಹಲಿ’ಯಲ್ಲಿ ಜಾತಿ ತಾರತಮ್ಯದ ಯಾವುದೇ ಸಾಕ್ಷಿಗಳು ಕಂಡುಬಂದಿಲ್ಲ. ಆದರೆ ಇನ್ನೊಂದೆಡೆ ವಿದ್ಯಾರ್ಥಿಗಳು ಹಲವು ವಿಷಯಗಳಲ್ಲಿ ಅನುತ್ತೀರ್ಣರಾಗುತ್ತಿರುವುದು ಕಂಡುಬಂದಿದೆ. ಅವರ ಮೇಲೆ ಉತ್ತಮ ಸಾಧನೆ ಮಾಡಬೇಕೆಂಬ ಒತ್ತಡವಿತ್ತು ಎಂದು ಪೊಲೀಸರು ಹೇಳಿದರು. ಇದಕ್ಕೆ ಉಚ್ಚ ನ್ಯಾಯಾಲಯವು, ಜಾತಿ ತಾರತಮ್ಯ ಪ್ರಕರಣದಲ್ಲಿ ಯಾವುದೇ ರೀತಿಯ ತನಿಖೆಗೆ ಆದೇಶಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.
ಸಂಪಾದಕೀಯ ನಿಲುವು‘ಐಐಟಿ’ಯ ವಿದ್ಯಾರ್ಥಿಗಳನ್ನು `ಕ್ರೀಮ ಆಫ್ ದಿ ಕಂಟ್ರಿ’, ಅಂದರೆ ‘ದೇಶದ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳು’ ಎಂದು ಹೇಳಲಾಗುತ್ತದೆ. ಸಹಜವಾಗಿಯೇ ತಮ್ಮ ತಮ್ಮ ಕ್ಷೇತ್ರದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿಗಳು ಇಲ್ಲಿ ಒಂದೇ ಕಡೆ ಸೇರುತ್ತಿರುತ್ತಾರೆ. ಆದ್ದರಿಂದ, ಅಂತಹ ಸಮಯದಲ್ಲಿ ಅತ್ಯುತ್ತಮ ಕಾರ್ಯವನ್ನು ಮಾಡಬೇಕೆಂದು ಸಹಜವಾಗಿಯೇ ಸ್ವತಃ ಅವರಿಗೆ ಅಪೇಕ್ಷೆಗಳಿರುತ್ತದೆ. ಸ್ಪರ್ಧೆಗಿಂತ ತಮ್ಮಿಂದ ಸರ್ವೋತ್ತಮ, ಆದರೆ ನಿರಪೇಕ್ಷ ಕಾರ್ಯನಿರ್ವಹಿಸುವುದು ಅತ್ಯಂತ ಆವಶ್ಯಕವಿರುತ್ತದೆ. ಇಲ್ಲಿಯೇ ಅಧ್ಯಾತ್ಮದ ಮಹತ್ವ ಗಮನಾರ್ಹವಾಗುತ್ತದೆ. ವಿದ್ಯಾರ್ಥಿಗಳಿಂದ ಚಿಕ್ಕ ವಯಸ್ಸಿನಿಂದಲೇ ಸಾಧನೆಯನ್ನು ಮಾಡಿಸಿಕೊಳ್ಳುವುದು ಏಕೆ ಆವಶ್ಯಕವಿದೆಯೆನ್ನುವುದು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳಿಂದ ಗಮನಕ್ಕೆ ಬರುತ್ತದೆ. |