ಶ್ರೀಲಂಕಾ ನಿರಾಕರಿಸಿದನಂತರ ಮಾಲ್ಡಿವ್ಸ್ ಗೆ ಹೊರಟ ಚೀನಾದ ಬೇಹುಗಾರಿಕೆ ನೌಕೆ !

ನೌಕೆಯ ಮೇಲೆ ನಿಗಾವಹಿಸಿದ ಭಾರತೀಯ ನೌಕಾದಳ ! 

ನವ ದೆಹಲಿ – ಚೀನಾದ ಬೇಹುಗಾರಿಕೆ ನೌಕೆ ಜಿಯಾಂಗ್ ಯಾಂಗ್ ಹಾಂಗ್ ೦3 ಇಂಡೋನೇಷಿಯಾದ ಹತ್ತಿರದ ಹಿಂದೂ ಮಹಾಸಾಗರದಲ್ಲಿ ಇಳಿದಿದೆ ಮತ್ತು ಅದು ಈಗ ಮಾಲ್ಡಿವ್ಸ್ ಕಡೆಗೆ ಹೊರಟಿದೆ. ಶ್ರೀಲಂಕಾ ತನ್ನ ಯಾವುದೇ ಬಂದರದಲ್ಲಿ ನಿಲ್ಲಲು ಅವಕಾಶ ಕೊಡದಿದ್ದರಿಂದ ಅದು ಮಾಲ್ಡಿವ್ಸ್ ಕಡೆಗೆ ಹೊರಟಿದೆ. ಅದು ಫೆಬ್ರವರಿಯ ಮೊದಲ ವಾರದಲ್ಲಿ ಮಾಲ್ಡಿವ್ಸ್ ನ ರಾಜಧಾನಿ ಮಾಲೆ ಬಂದರ ತಲುಪಬಹುದು ಎಂದು ಭಾರತೀಯ ನೌಕಾದಳದ ಓರ್ವ ಅಧಿಕಾರಿಗಳು ಈ ಮಾಹಿತಿ ನೀಡಿದರು. ಚೀನಾದ ಈ ನೌಕೆಯ ಮೇಲೆ ಭಾರತೀಯ ನೌಕಾದಳ ಗಮನ ಇರಿಸಿದೆ.

ಚೀನಾದ ಈ ನೌಕೆ ೨೦೧೯ ರಂದು ಮತ್ತು ೨೦೨೦ ರಲ್ಲಿ ಮಾಲೆ ಬಂದರದಲ್ಲಿ ಕೆಲವು ದಿನ ನಿಂತಿತ್ತು. ತಜ್ಞರ ಹೇಳಿಕೆಯ ಪ್ರಕಾರ, ಚೀನಾ ಈ ನೌಕೆ ಭಾರತದ ಮುಖ್ಯ ನೌದಳದ ಕೇಂದ್ರಗಳು ಮತ್ತು ಅಣುಸ್ಥಾವರಗಳ ಬೇಹುಗಾರಿಕೆ ಮಾಡಲು ಕಳುಹಿಸಿದೆ. ಈ ನೌಕೆ ಅತ್ಯಧುನಿಕ ಉಪಕರಣಗಳಿಂದ ಸುಸಜ್ಜಿತವಾಗಿದೆ. ಇದರಿಂದ ಭಾರತದ ಪೂರ್ವ ತೀರದ ಮೇಲೆ ಇರುವ ಭಾರತದ ನೌಕಾದಳದ ಕೇಂದ್ರ ಈ ನೌಕೆಯ ಬೇಹುಗಾರಿಕೆಯ ಕಕ್ಷೆಗೆ ಬರುತ್ತದೆ. ಒರಿಸ್ಸಾದಲ್ಲಿನ ಚಾಂದಿಪುರದಲ್ಲಿನ ಕ್ಷಿಪಣಿ ಪ್ರಕ್ಷೇಪಣ ಕೇಂದ್ರದ ಬೇಹುಗಾರಿಕೆ ಕೂಡ ಮಾಡಲು ಸಾಧ್ಯವಾಗುತ್ತದೆ. ಚೀನಾದ ಹತ್ತಿರ ಅನೇಕ ಬೇಹುಗಾರಿಕೆ ನೌಕೆಗಳು ಇವೆ. ಅವು ಸಂಪೂರ್ಣ ಪ್ರಶಾಂತ, ಅಟಲಾಂಟಿಕಾ ಮತ್ತು ಹಿಂದೂ ಮಹಾಸಾಗರದಲ್ಲಿ ಕಾರ್ಯ ಮಾಡಲು ಸಕ್ಷಮವಾಗಿವೆ. ಈ ನೌಕೆ ಎಲ್ಲಾ ಮಾಹಿತಿ ಬೀಜಿಂಗನಲ್ಲಿನ ಕೇಂದ್ರಕ್ಕೆ ಕಳುಹಿಸುತ್ತದೆ. ಭಾರತ ಅಥವಾ ಇತರ ಯಾವುದೇ ದೇಶ ಕ್ಷಿಪಣಿಯ ಪರೀಕ್ಷಣೆ ನಡೆಸುತ್ತರುವಾಗ ಈ ನೌಕೆ ಚಲನವಲನ ಆರಂಭಿಸುತ್ತದೆ.