ಶ್ರೀರಾಮರೂಪಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪಾಶೀರ್ವಾದದಿಂದ ಅವರ ಅನನ್ಯ ಭಕ್ತಿಯನ್ನು ಮಾಡೋಣ !

ಶ್ರೀರಾಮನ ಭಕ್ತರಾದ ಹನುಮಂತ, ಸುಗ್ರೀವ, ಲಕ್ಷ್ಮಣ, ಭರತ, ಶತ್ರುಘ್ನ, ವಿಭೀಷಣ, ಜಾಂಬವಂತ, ನಾವಿಕ, ಸುಮಂತ್ರ, ಶಬರಿ ಹೀಗೆ ಅನೇಕ ಭಕ್ತರ ಹೆಸರುಗಳನ್ನು ನಾವು ರಾಮಾಯಣದಲ್ಲಿ ಕೇಳುತ್ತೇವೆ. ಶ್ರೀರಾಮಾವತಾರದಲ್ಲಿ ಘಟಿಸಿದ ಒಂದು ಅಮೂಲ್ಯ ಪ್ರಸಂಗವನ್ನು ಶಿವನು ಪಾರ್ವತಿಗೆ ಹೇಳಿದನು ಮತ್ತು ಕಲಿಯುಗದಲ್ಲಿ ಗೋಸ್ವಾಮಿ ತುಳಸಿದಾಸರು ಅದನ್ನು ರಾಮಚರಿತಮಾನಸದಲ್ಲಿ ಬರೆದಿದ್ದಾರೆ, ಅದನ್ನು ನಾವು ಇಂದು ತಿಳಿದುಕೊಳ್ಳೋಣ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

೧. ಶ್ರೀರಾಮ ಮತ್ತು ರಾವಣ ಇವರಲ್ಲಿ ಯುದ್ಧ ನಡೆಯುತ್ತಿರುವಾಗ ಮೇಘನಾದನು ನಾಗಪಾಶದಿಂದ ಶ್ರೀರಾಮ ಮತ್ತು ಲಕ್ಷ್ಮಣನನ್ನು ಬಂಧಿಸುವುದು, ಹನುಮಂತನು ಮಾಡಿದ ಪ್ರಾರ್ಥನೆಯಿಂದ ಗರುಡನು ತನ್ನ ಕೊಕ್ಕೆಯಿಂದ ನಾಗಪಾಶವನ್ನು ಮುರಿಯುವುದು ಮತ್ತು ಗರುಡನು ಸಹಾಯ ಮಾಡಿದ ಬಗ್ಗೆ ಶ್ರೀರಾಮನು ಕೃತಜ್ಞತೆಯನ್ನು ವ್ಯಕ್ತಪಡಿಸುವುದು

‘ಶ್ರೀರಾಮ ಮತ್ತು ರಾವಣನ ಸೈನ್ಯಗಳಲ್ಲಿ ಯುದ್ಧ ನಡೆಯುತ್ತಿರುತ್ತದೆ. ಆಗ ರಾವಣನ ಪುತ್ರÀ ಮೇಘನಾದನು ತನ್ನ ನಾಗಪಾಶದಿಂದ ಶ್ರೀರಾಮ ಮತ್ತು ಲಕ್ಷ್ಮಣನನ್ನು ಬಂಧಿಸುತ್ತಾನೆ. ಶ್ರೀರಾಮ ಮತ್ತು ಲಕ್ಷ್ಮಣರನ್ನು ಮೂರ್ಛಿತಾವಸ್ಥೆಯಲ್ಲಿ ನೋಡಿ ಎಲ್ಲರೂ ಚಿಂತಾಕ್ರಾಂತರಾಗುತ್ತಾರೆ. ಅಷ್ಟರಲ್ಲಿ ಹನುಮಂತನು ವೈಕುಂಠಕ್ಕೆ ಹೋಗಿ ಶ್ರೀವಿಷ್ಣುವಿನ ವಾಹನವಾದ ಗರುಡನನ್ನು ಕರೆದುಕೊಂಡು ಬರುತ್ತಾನೆ. ಹನುಮಂತನ ಪ್ರಾರ್ಥನೆಯಂತೆ ಗರುಡನು ತನ್ನ ಕೊಕ್ಕಿ ನಿಂದ ಶ್ರೀರಾಮ ಮತ್ತು ಲಕ್ಷ್ಮಣನನ್ನು ಬಂಧಿಸಿದ ನಾಗ ಪಾಶವನ್ನು ಮುರಿಯುತ್ತಾನೆ. ಶ್ರೀರಾಮ ಮತ್ತು ಲಕ್ಷ್ಮಣ ನಿದ್ರೆಯಿಂದ ಎದ್ದಂತೆ ಎದ್ದು ಕುಳಿತುಕೊಳ್ಳುತ್ತಾರೆ. ‘ಶ್ರೀರಾಮನು ಕೈಜೋಡಿಸಿ ಗರುಡನಿಗೆ ‘ಕೃತಜ್ಞತೆ’ಯನ್ನು ವ್ಯಕ್ತಪಡಿಸುತ್ತಾನೆ. ಆಗ ಶ್ರೀರಾಮನು, ‘ನನ್ನ ಮತ್ತು ನಿಮ್ಮ ಪರಿಚಯವಿಲ್ಲದಿದ್ದರೂ ನೀವು ನನಗೆ ಸಹಾಯ ಮಾಡಿದ್ದ ಕ್ಕಾಗಿ ನಾನು ಚಿರಋಣಿಯಾಗಿದ್ದೇನೆ’ ಎಂದು ಹೇಳುತ್ತಾನೆ.

೨ ಶ್ರೀರಾಮನ ನಾಮಸ್ಮರಣೆಯಿಂದ ಮನುಷ್ಯನು ಭವಬಂಧನದಿಂದ (ಭವಸಾಗರದಿಂದ) ಮುಕ್ತನಾಗುತ್ತಾನೆ; ಆದರೆ ಅವನು ಸ್ವತಃ ನಾಗಪಾಶದಲ್ಲಿ ಹೇಗೆ ಸಿಲುಕಿದನು ?’, ಎಂಬ ಪ್ರಶ್ನೆ ಗರುಡನ ಮನಸ್ಸಿನಲ್ಲಿ ಬರುತ್ತದೆ

ವೈಕುಂಠಕ್ಕೆ ಮರಳಿ ಹೋಗುವಾಗ ಗರುಡನ ಮನಸ್ಸಿನಲ್ಲಿ ಮುಂದಿನ ವಿವಿಧ ಪ್ರಶ್ನೆಗಳು ಬರುತ್ತವೆ, ‘ಶ್ರೀರಾಮನು ಸ್ವಯಂ ಶ್ರೀವಿಷ್ಣುವಿನ ಅವತಾರನಾಗಿದ್ದಾನೆ, ಆದರೆ ಅವನು ನನ್ನ ಸಹಾಯವನ್ನು ಏಕೆ ಪಡೆಯಬೇಕಾಯಿತು ?’, ಶ್ರೀರಾಮನು ಸ್ವತಃ ಪರಬ್ರಹ್ಮನಾಗಿದ್ದಾನೆ. ಅವನು ಸ್ವಯಂ ಮೋಹಮಾಯೆಯ ಆಚೆಗಿದ್ದಾನೆ, ಅವನು ಸರ್ವಜ್ಞ ಮತ್ತು ಸರ್ವಶಕ್ತಿವಂತನಾಗಿದ್ದಾನೆ, ‘ಅವನು ಅವತಾರಿಯಾಗಿದ್ದಾನೆ’, ಎಂದು ಎಲ್ಲರೂ ಹೇಳುತ್ತಾರೆ; ಆದರೆ ಅವನ ವರ್ತನೆಯಿಂದ ನನಗೆ ಎಲ್ಲಿಯೂ ‘ಅವನು ಅವತಾರಿಯಾಗಿದ್ದಾನೆ’, ಎಂದೇಕೆ ಅನಿಸುವುದಿಲ್ಲ ? ಅವನ ನಾಮಸ್ಮರಣೆಯಿಂದ ಮನುಷ್ಯನು ಭವಬಂಧನದಿಂದ ಮುಕ್ತನಾಗುತ್ತಾನೆ. ‘ಇಂದು ಅವನು ಸ್ವತಃ ನಾಗಪಾಶದ ಬಂಧನದಲ್ಲಿದ್ದನು, ಇದು ಹೇಗೆ ?’

೩. ಗರುಡನ ಮನಸ್ಸಿನಲ್ಲಿನ ಸಂದೇಹಗಳ ಉತ್ತರಗಳನ್ನು ಕೇವಲ ಕಾಕಭುಷುಂಡಿ ಮಹರ್ಷಿಗಳೇ ಹೇಳಬಲ್ಲರು ಮತ್ತು ಶಿವನು ಗರುಡನಿಗೆ ಅವರಿಗೆ ಶರಣಾಗಿ ಮನಸ್ಸಿನಲ್ಲಿನ ಎಲ್ಲ ಸಂದೇಹಗಳನ್ನು ಕೇಳಲು ಹೇಳುವುದು

ಗರುಡನ ಮನಸ್ಸಿನಲ್ಲಿ ಸಂದೇಹವಿರುವುದರಿಂದ ಅವನಿಗೆ ಏನು ಮಾಡಿದರೂ ಸಮಾಧಾನವಾಗುತ್ತಿರಲಿಲ್ಲ. ಏನೂ ಮಾಡಲು ಇಷ್ಟವಾಗುತ್ತಿರಲಿಲ್ಲ. ‘ನನ್ನ ಮನಸ್ಸಿನಲ್ಲಿ ಸಂದೇಹವಿದೆ, ಎಂದು ನಾನು ‘ನನ್ನ ಸ್ವಾಮಿ ಶ್ರೀಹರಿಗೆ ಹೇಗೆ ಕೇಳಲಿ ?’, ಎಂಬ ವಿಚಾರವನ್ನು ಮಾಡುತ್ತ ಕೊನೆಗೆ ಗರುಡನು ಮಹರ್ಷಿ ನಾರದರ ಬಳಿ ಹೋಗುತ್ತಾನೆ. ಮಹರ್ಷಿ ನಾರದರು ಗರುಡನನ್ನು ಬ್ರಹ್ಮದೇವನ ಬಳಿ ಕಳುಹಿಸುತ್ತಾರೆ ಮತ್ತು ಬ್ರಹ್ಮದೇವರು ಗರುಡನನ್ನು ಶಿವನ ಬಳಿ ಕಳುಹಿಸುತ್ತಾರೆ. ಆಗ ಶಿವನು, ‘ಈ ಪ್ರಶ್ನೆಗೆ ಉತ್ತರವನ್ನು ಕೇವಲ ಕಾಕಭುಷುಂಡಿ ಮಹರ್ಷಿಗಳು ಮಾತ್ರ ನೀಡಲು ಸಾಧ್ಯ ! ನೀನು ಅವರ ಆಶ್ರಮಕ್ಕೆ ಹೋಗಿ ಅವರಿಗೆ ಶರಣಾಗು, ಅವರಿಗೆ ನಿನ್ನ ಮನಸ್ಸಿನಲ್ಲಿನ ಎಲ್ಲ ಸಂದೇಹಗಳನ್ನು ಹೇಳು’, ಎಂದು ಹೇಳಿದನು.

ಶ್ರೀ. ವಿನಾಯಕ ಶಾನಭಾಗ

೪. ‘ಕಾಕಭುಷುಂಡಿ’ ಋಷಿಗಳು ಕಾಗೆಯ ರೂಪದಲ್ಲಿರುವುದು ಮತ್ತು ಪ್ರಳಯಕಾಲದಲ್ಲಿಯೂ ಅವರಿಗೆ ಏನು ತೊಂದರೆಯಾಗದೇ ಅವರು ಪ್ರಳಯವನ್ನು ನೋಡಿದ ಏಕೈಕ ಋಷಿಗಳಾಗಿರುವುದು ಹಾಗೂ ಅವರು ಪ್ರತಿಯೊಂದು ಶ್ರೀರಾಮಾವತಾರದಲ್ಲಿ ಶ್ರಿರಾಮನ ಬಾಲಲೀಲೆಯನ್ನು ನೋಡಲು ಅಯೋಧ್ಯೆಯಲ್ಲಿ ನೆಲೆಸುವುದು

‘ಕಾಕಭುಷುಂಡಿ’ ಎಂಬ ಹೆಸರಿನ ಓರ್ವ ಋಷಿಗಳಿದ್ದಾರೆ. ಅವರಿಗೆ ಭಗವಂತನ ವರದಾನ ಪ್ರಾಪ್ತವಾಗಿದೆ. ಅವರು ಕಾಗೆಯ ರೂಪದಲ್ಲಿರುತ್ತಾರೆ. ಪ್ರಳಯಕಾಲದಲ್ಲಿಯೂ ಅವರಿಗೆ ಏನು ತೊಂದರೆ ಆಗದೇ ಅವರು ಪ್ರಳಯವನ್ನು ನೋಡುವ ಏಕೈಕ ಋಷಿಗಳಾಗಿದ್ದಾರೆ. ನೀಲ ಪರ್ವತವು ಅವರ ಸ್ಥಾನವಾಗಿದೆ. ನಾಲ್ಕು ಯುಗಗಳ ಕಾಲಾವಧಿಗೆ ನಾವು ‘ಮನ್ವಂತರ’ ಎಂದು ಕರೆಯುತ್ತೇವೆ. ನಾಲ್ಕು ಯುಗಗಳು ಮುಗಿದ ನಂತರ ಮನ್ವಂತರ ಮುಗಿಯುತ್ತದೆ ಮತ್ತು ಪ್ರಳಯವಾಗಿ ಹೊಸ ಮನ್ವಂತರ ಪ್ರಾರಂಭವಾಗುತ್ತದೆ. ಪ್ರತಿಯೊಂದು ಮನ್ವಂತರದಲ್ಲಿ ಪುನಃ ಶ್ರೀರಾಮ ಮತ್ತು ಶ್ರೀಕೃಷ್ಣರು ಅವತಾರ ತಾಳುತ್ತಾರೆ. ಕಾಕಭುಷುಂಡಿ ಋಷಿಗಳು ಇದುವರೆಗೆ ಅನೇಕ ಬಾರಿ ಶ್ರೀರಾಮ ಮತ್ತು ಶ್ರೀಕೃಷ್ಣನ ಅವತಾರವನ್ನು ನೋಡಿದ್ದಾರೆ ಹಾಗೂ ಪ್ರತಿಯೊಂದು ಶ್ರೀರಾಮಾವತಾರದಲ್ಲಿ ಅವರು ಶ್ರೀರಾಮನ ಬಾಲಲೀಲೆಯನ್ನು ನೋಡಲು ಅಯೋಧ್ಯೆಯಲ್ಲಿ ನೆಲೆಸುತ್ತಾರೆ.

೫. ಕಾಗೆಯ ರೂಪದಲ್ಲಿರುವ ಕಾಕಭುಷುಂಡಿ ಋಷಿಗಳ ಬಳಿ ಹೋಗಿ ಮನಸ್ಸಿನ ಸಂದೇಹಗಳನ್ನು ಕೇಳಿದ ನಂತರ ಗರುಡನ ಅಹಂಕಾರ ದೂರವಾಗಿ ಅವನ ಮನಸ್ಸಿಗೆ ಸಮಾಧಾನವಾಗುವುದು, ಆದ್ದರಿಂದ ಕಾಕಭುಷುಂಡಿ ಋಷಿಗಳ ಬಳಿಗೆ ಕಳುಹಿಸಿರುವೆ ಎಂದು ಶಿವನು ಪಾರ್ವತಿಗೆ ಹೇಳುವುದು

ಗರುಡನು ಪಕ್ಷಿಗಳ ರಾಜನಾಗಿದ್ದಾನೆ ಮತ್ತು ಸಾಕ್ಷಾತ್‌ ಶ್ರೀವಿಷ್ಣುವಿನ ವಾಹನನಾಗಿದ್ದಾನೆ. ಆಗ ಪಾರ್ವತಿಯು ಶಿವನಿಗೆ, ‘ದೇವಾ, ‘ನಿಮಗೆ ಉತ್ತರ ಗೊತ್ತಿದ್ದರೂ ನೀವು ಗರುಡನನ್ನು ಕಾಕಭುಷುಂಡಿ ಋಷಿಗಳ ಬಳಿ ಏಕೆ ಕಳುಹಿಸಿ ದ್ದೀರಿ ?’, ಎಂದು ಕೇಳಿದಳು. ಆಗ ಶಿವನು, ‘ಅಹಂಕಾರದಿಂದ ಗರುಡನ ಮನಸ್ಸಿನಲ್ಲಿ ಶ್ರೀರಾಮನ ಬಗ್ಗೆ ವಿಕಲ್ಪ ಬಂದಿದೆ. ಗರುಡನು ಪಕ್ಷಿಗಳ ರಾಜನಾಗಿದ್ದಾನೆ ಮತ್ತು ಕಾಗೆಯ ರೂಪದಲ್ಲಿರುವ ಕಾಕಭುಷುಂಡಿ ಋಷಿಗಳ ಬಳಿ ಹೋಗಿ ಮನಸ್ಸಿನ ಸಂದೇಹವನ್ನು ಕೇಳುವುದರಿಂದ ಗರುಡನ ಅಹಂಕಾರವು ದೂರವಾಗುವುದು. ಕಾಕಭುಷುಂಡಿಯ ಆಶ್ರಮದಲ್ಲಿ ಯುಗಯುಗಳಿಂದ ಶ್ರೀರಾಮನ ಕೀರ್ತನೆ ನಡೆಯುತ್ತಿದೆ. ಆ ಶ್ರೀರಾಮಮಯ ವಾತಾವರಣದ ಪರಿಣಾಮದಿಂದ ಗರುಡನ ಮನಸ್ಸಿಗೆ ಸಮಾಧಾನ ವಾಗುವುದು’ ಎಂದು ಹೇಳಿದನು.

೬. ಮಹರ್ಷಿ ಕಾಕಭುಷುಂಡಿಯವರು ಗರುಡನ ಮನಸ್ಸಿನಲ್ಲಿನ ಎಲ್ಲ ಸಂದೇಹಗಳನ್ನು ಪರಿಹರಿಸುವುದು

೬ ಅ. ಆಶ್ರಮದಲ್ಲಿನ ಶ್ರೀರಾಮ ಭಕ್ತಿಯ ವಾತಾವರಣದಿಂದ ಗರುಡನ ಮೇಲೆ ತುಂಬಾ ಪರಿಣಾಮವಾಗಿ ಅವನು ಮನಸ್ಸಿನÀ ಎಲ್ಲ ಸಂದೇಹಗಳನ್ನು ಕಾಕಭುಷುಂಡಿಯವರಿಗೆ ಕೇಳುವುದು : ಗರುಡನು ನೀಲ ಪರ್ವತದ ಮೇಲೆ ಕಾಕಭುಷುಂಡಿಯವರ ಆಶ್ರಮವನ್ನು ತಲುಪುತ್ತಾನೆ. ಗರುಡನಿಗೆ ‘ನಾನು ಪಕ್ಷಿಗಳ ರಾಜನಾಗಿದ್ದೇನೆ, ಆದರೆ ಕಾಗೆಯನ್ನು ಹೇಗೆ ಕೇಳಲಿ ?’, ಎಂದು ಅನಿಸುತ್ತಿರುತ್ತದೆ. ಕಾಕಭುಷುಂಡಿ ಮಹರ್ಷಿಗಳು ತ್ರಿಕಾಲದರ್ಶಿಯಾಗಿರುತ್ತಾರೆ. ಅವರು ಗರುಡನನ್ನು ಗೌರವ ದಿಂದ ಆಶ್ರಮದಲ್ಲಿ ಕರೆದುಕೊಳ್ಳುತ್ತಾರೆ. ಕಾಕಭುಷುಂಡಿ ಋಷಿಗಳ ಆಶ್ರಮದಲ್ಲಿನ ಶ್ರೀರಾಮ ಭಕ್ತಿಯ ವಾತಾವರಣದ ಗರುಡನ ಮೇಲೆ ತುಂಬಾ ಪರಿಣಾಮ ಬೀರುತ್ತದೆ ಮತ್ತು ಗರುಡನು ಲೀನಭಾವದಿಂದ ಮಹರ್ಷಿ ಕಾಕಭುಷುಂಡಿಗಳಿಗೆ ಮನಸ್ಸಿನಲ್ಲಿನ ಎಲ್ಲ ಸಂದೇಹಗಳನ್ನು ಕೇಳುತ್ತಾನೆ.

೬ ಆ. ಶ್ರೀರಾಮನು ಸ್ವತಃ ಸಂಪೂರ್ಣ ಜಗತ್ತಿಗೆ ಆಧಾರ ವಾಗಿದ್ದು ನಾಗಪಾಶವನ್ನು ಮುರಿಯುವ ಮಾಧ್ಯಮದಿಂದ ಗರುಡನಿಗೆ ಸೇವೆಯನ್ನು ಮಾಡುವ ಅವಕಾಶ ನೀಡುವುದು ಮತ್ತು ಈ ಸಂದೇಹವನ್ನುಂಟು ಮಾಡಿ ಶ್ರೀರಾಮನೇ ಲೀಲೆ ಮಾಡಿರುವನೆಂದು ಕಾಕಭುಷುಂಡಿ ಮಹರ್ಷಿಗಳು ಗರುಡನಿಗೆ ಹೇಳುವುದು : ನಿರಂತರ ಶ್ರೀರಾಮನ ಭಕ್ತಿಯಲ್ಲಿ ಲೀನ ವಾಗಿರುವ ಕಾಕಭುಷುಂಡಿ ಮಹರ್ಷಿಗಳು, ‘ಪಕ್ಷಿರಾಜನೇ, ಶ್ರೀರಾಮನು ನಿನಗೆ ನಾಗಪಾಶವನ್ನು ಮುರಿಯುವ ಮಾಧ್ಯಮದಿಂದ ಅವನ ಸೇವೆಯ ಅವಕಾಶವನ್ನು ನೀಡಿದನು. – ಶ್ರೀ. ವಿನಾಯಕ ಶಾನಬಾಗ ರಾಮನಿಗೆ ಸಹಾಯವನ್ನು ಮಾಡುವವರು ನಾವ್ಯಾರು ? ಶ್ರೀರಾಮನು ಸಂಪೂರ್ಣ ಜಗತ್ತಿನ ಆಧಾರವಾಗಿದ್ದಾನೆ. ನಿನಗೆ ‘ಶ್ರೀರಾಮನಿಗೆ ಸಹಾಯ ಮಾಡಿದ ಕೀರ್ತಿ ಸಿಗ ಬೇಕು’, ಎಂದು ಮನುಷ್ಯರೂಪದ ಆ ಶ್ರೀರಾಮನು ಸ್ವತಃ ಬಂಧನದಲ್ಲಿ ಸಿಲುಕಲು ಸಿದ್ಧನಾದನು. ಸೇವಕನಿಗಾಗಿ ಅವನ ಸ್ವಾಮಿಯು ಸಾಮಾನ್ಯ ಮನುಷ್ಯನ ಸ್ತರದಲ್ಲಿ ಬಂದು ಸೇವಕನಿಗೆ ಸೇವೆಯ ಅವಕಾಶವನ್ನು ನೀಡುತ್ತಾನೆ, ಇದೇ ಅವನ ಪ್ರೀತಿ ಮತ್ತು ಈಗ ನಿನ್ನ ಮನಸ್ಸಿನಲ್ಲಿ ಈ ಸಂದೇಹ ವನ್ನುಂಟು ಮಾಡಿ ಶ್ರೀರಾಮನೇ ಈ ಲೀಲೆಯನ್ನು ಮಾಡಿ ದನು ಮತ್ತು ನಿನ್ನನ್ನು ನನ್ನ ಬಳಿ ಕಳುಹಿಸಿದನು’ ಎನ್ನುತ್ತಾರೆ.

೬ ಇ. ‘ಪ್ರತಿಯೊಂದು ಅವತಾರದಲ್ಲಿ ಶ್ರೀರಾಮನ ಲೀಲೆಯು ವಿಭಿನ್ನವಾಗಿದ್ದು ಆ ಲೀಲೆಗಳ ‘ಆನಂದವನ್ನು ಪಡೆಯುವುದು ಮತ್ತು ಭಗವಂತನಿಗೆ ಶರಣಾಗುವುದು’ ಇಷ್ಟೇ ಮಾಡಲು ಸಾಧ್ಯ ಎಂದು ಕಾಕಭುಷುಂಡಿ ಮಹರ್ಷಿಗಳು ಗರುಡನಿಗೆ ಹೇಳುವುದು : ಶ್ರೀರಾಮನಿಗೆ ಈಗ ನಿನ್ನ ಮಾಧ್ಯಮದಿಂದ ನನ್ನನ್ನೂ ಮುಂದೆ ತರುವುದಿದೆ. ಇದೆಲ್ಲವೂ ಶ್ರೀರಾಮನ ಲೀಲೆಯಾಗಿದೆ. ಆ ಶ್ರೀಹರಿಯು ಈಗ ಮನುಷ್ಯರೂಪದಲ್ಲಿದ್ದಾನೆ. ಒಬ್ಬ ಕಲಾವಿದನು ತನ್ನ ಪಾತ್ರವನ್ನು ಮಾಡುತ್ತಿರುವಾಗ ನಾಟಕದಲ್ಲಿನ ಪಾತ್ರದೊಂದಿಗೆ ಹೇಗೆ ಏಕರೂಪ ನಾಗುತ್ತಾನೆಯೋ, ಭಗವಂತನ ನಡವಳಿಕೆಯೂ ಅದೇ ರೀತಿಯಿದೆ. ಮನುಷ್ಯರೂಪದಲ್ಲಿನ ಶ್ರೀರಾಮನು ಸಾಕ್ಷಾತ್‌ ಭಗವಂತನಾಗಿದ್ದಾನೆ; ಏಕೆಂದರೆ ಅವನು ಸ್ವತಂತ್ರನಾಗಿದ್ದಾನೆ ಮತ್ತು ಉಳಿದವರೆಲ್ಲರೂ ಪಾರತಂತ್ರ್ಯದಲ್ಲಿದ್ದಾರೆ. ಹೇ ಗರುಡನೇ, ನೀನು ಈ ಮನ್ವಂತರದಲ್ಲಿನ ಶ್ರೀರಾಮಾವತಾರ ವನ್ನು ನೋಡಿರುವೆ. ನಾನು ಬೇರೆಬೇರೆ ಮನ್ವಂತರಗಳಲ್ಲಿನ ಮತ್ತು ಬ್ರಹ್ಮಾಂಡದಲ್ಲಿನ ಶ್ರೀರಾಮಾವತಾರಗಳನ್ನು ನೋಡಿದ್ದೇನೆ. ಪ್ರತಿಯೊಂದು ಅವತಾರದಲ್ಲಿ ಅವನ ಲೀಲೆಯು ಭಿನ್ನವಾಗಿರುತ್ತದೆ. ಆ ಲೀಲೆಗಳ ‘ಆನಂದವನ್ನು ಪಡೆಯುವುದು ಮತ್ತು ಭಗವಂತನಿಗೆ ಶರಣಾಗುವುದು’ ಇಷ್ಟನ್ನೇ ನಾವು ಮಾಡಬಲ್ಲೆವು.’

೭. ಭಗವಂತನ ಹತ್ತಿರವಿದ್ದರೂ ಗರುಡನ ಮನಸ್ಸಿನಲ್ಲಿ ಉಂಟಾದ ಸಂದೇಹವು ಭಗವಂತನ ಭಕ್ತ ಕಾಕಭುಷುಂಡಿ ಋಷಿಗಳ ಸತ್ಸಂಗದಿಂದ ದೂರವಾಗುವುದು

ಅನಂತರ ಕಾಕಭುಷುಂಡಿ ಋಷಿಗಳು ಶ್ರೀರಾಮನ ವಿವಿಧ ಅವತಾರಗಳಲ್ಲಿ ಶ್ರೀರಾಮನು ತಮ್ಮೊಂದಿಗೆ ಮಾಡಿದ ಸಂಭಾಷಣೆಗಳನ್ನು ಗರುಡನಿಗೆ ಹೇಳಿದರು. ಶ್ರೀರಾಮನ ಪರಬ್ರಹ್ಮಸ್ವರೂಪವನ್ನು ವರ್ಣಿಸಿದರು. ಶಿಷ್ಯನಾದ ಗರುಡನ ಮನಸ್ಸಿನಲ್ಲಿನ ಸಂದೇಹಗಳು ಗುರುಗಳಾದ ಕಾಕಭುಷುಂಡಿ ಋಷಿಗಳ ಸತ್ಸಂಗದಿಂದ ದೂರವಾಗುತ್ತವೆ. ವಿಶೇಷವೆಂದರೆ ಪಕ್ಷಿರಾಜ ಗರುಡನು ಮತ್ತು ಮಹರ್ಷಿ ಕಾಕಭುಷುಂಡಿ ಇವರಿಬ್ಬರೂ ಶ್ರೇಷ್ಠ ಹರಿಭಕ್ತರಾಗಿದ್ದಾರೆ. ಗರುಡನು ಸಾಕ್ಷಾತ್‌ ಭಗವಂತನ ಸಾನಿಧ್ಯದಲ್ಲಿರುತ್ತಾನೆ ಮತ್ತು ಕಾಕಭುಷುಂಡಿ ಋಷಿಗಳು ಭಗವಂತನ ಭಕ್ತಿಯನ್ನು ಮಾಡುತ್ತ ಏನೂ ತಿಳಿಯದಂತೆ ಇರುತ್ತಾರೆ. ಭಗವಂತನ ಹತ್ತಿರ ಇದ್ದರೂ ಗರುಡನ ಮನಸ್ಸಿನಲ್ಲಿ ಸಂದೇಹ ಉಂಟಾಗುತ್ತದೆ. ಈ ಸಂದೇಹವನ್ನು ವೈಕುಂಠದಿಂದ ದೂರವಿರುವ ಅಜ್ಞಾತ ಸ್ಥಳದಲ್ಲಿರುವ ಭಗವಂತನ ಭಕ್ತನಾದ ಕಾಕಭುಷುಂಡಿ ಋಷಿಗಳು ಪರಿಹರಿಸುತ್ತಾರೆ. ಆದ್ದರಿಂದ ದೇವರು ಈ ಮಾಧ್ಯಮದಿಂದ ‘ಕೇವಲ ದೇವರ ಹತ್ತಿರವಿರುವುದು, ಇಷ್ಟೇ ಸಾಕಾಗುವುದಿಲ್ಲ’ ಎಂಬುದನ್ನು ತೋರಿಸಿಕೊಟ್ಟನು.

೮. ಭಗವಂತನ ಲೀಲೆಯಲ್ಲಿ ಸಮಷ್ಟಿಯ ಕಲ್ಯಾಣ ಅಡಗಿರುವುದು; ಆದರೆ ಭಗವಂತನ ಬಗ್ಗೆ ಮನಸ್ಸಿನಲ್ಲಿ ವಿಕಲ್ಪಗಳು ಉಂಟಾದರೆ ಅನೇಕ ವರ್ಷಗಳ ಶ್ರದ್ಧೆಯ ಪರೀಕ್ಷೆ ಆಗುವುದು

ಮನುಷ್ಯನ ರೂಪದಲ್ಲಿ ಬಂದು ಭಗವಂತನು ಯಾವ ಕಾರ್ಯವನ್ನು ಮಾಡುತ್ತಿರುತ್ತಾನೆಯೋ, ಅದಕ್ಕೆ ನಾವು ‘ಲೀಲೆ’ ಎನ್ನುತ್ತೇವೆ, ಅದರಲ್ಲಿ ಸಮಷ್ಟಿಯ ಉದ್ಧಾರ ಅಡಗಿರುತ್ತದೆ. ಭಗವಂತನ ಲೀಲೆಯನ್ನು ತಿಳಿದುಕೊಳ್ಳಲು ಘಟಾನುಘಟಿಗಳಿಗೇ ಸಾಧ್ಯವಾಗಲಿಲ್ಲ. ನಾವಂತೂ ಸಾಮಾನ್ಯ ಸಾಧಕರಾಗಿದ್ದೇವೆ. ಸಾಮಾನ್ಯ ಸಾಧಕನಿಗೆ ಭಗವಂತನ ಪ್ರೀತಿ ದೊರಕಿದರೆ, ಅದರಲ್ಲಿಯೇ ಅವನು ತೃಪ್ತನಾಗುತ್ತಾನೆ; ಆದರೆ ಅದೇ ಸಾಧಕರಲ್ಲಿ ಭಗವಂತನ ಬಗ್ಗೆ ಮನಸ್ಸಿನಲ್ಲಿ ಅನೇಕ ರೀತಿಯ ವಿಕಲ್ಪಗಳು ಉಂಟಾದರೆ, ಅದರಿಂದ ಸಾಧಕನ ಅನೇಕ ವರ್ಷಗಳ ಶ್ರದ್ಧೆಯ ಪರೀಕ್ಷೆಯನ್ನು ಕೊಡಬೇಕಾಗುತ್ತದೆ. ಸಾಧನೆಯ ಅಡಿಪಾಯ ಅಲುಗಾಡತೊಡಗುತ್ತದೆ ಮತ್ತು ಭಗವಂತನ ಕೃತಿಯು ಅವನಿಗೆ ‘ಲೀಲೆ’ಯ ರೂಪದಲ್ಲಿ ಕಾಣಿಸುವುದಿಲ್ಲ.

೯. ‘ಮನಸ್ಸಿನಲ್ಲಿ ವಿಕಲ್ಪ ಬಂದರೆ ಅದಕ್ಕೆ ಸಮಾಧಾನ ಹುಡುಕಿ ಗುರುಭಕ್ತಿ ಹೆಚ್ಚಿಸುವುದು’, ಇದೇ ಅದರ ಪರ್ಯಾಯವಾಗಿದೆ

ನಾವೆಲ್ಲ ಸನಾತನ ಸಂಸ್ಥೆಯ ಸಾಧಕರು ಭಾಗ್ಯವಂತ ರಾಗಿದ್ದೇವೆ. ನಮಗೆಲ್ಲರಿಗೂ ಶ್ರೀವಿಷ್ಣುವಿನ ಅವತಾರ ವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ಸಾನಿಧ್ಯ ಲಭಿಸಿದೆ. ಸಾವಿರಾರು ಸಾಧಕರು ಗುರುದೇವರನ್ನು ಹತ್ತಿರದಿಂದ ನೋಡಿದ್ದಾರೆ. ಅವರ ಸತ್ಸಂಗದ ಲಾಭ ಸಿಕ್ಕಿದೆ. ಈಗಾಗಲೇ ಸನಾತನ ಸಂಸ್ಥೆಯ ಸ್ಥಾಪನೆಯಾಗಿ ೨೪ ವರ್ಷಗಳು ಆದವು. ೨೦೨೪ ರಲ್ಲಿ ಸನಾತನ ಸಂಸ್ಥೆಗೆ ೨೫ ವರ್ಷಗಳು ಪೂರ್ಣವಾಗುವವು. ಹಿಂದೂ ರಾಷ್ಟ್ರದ ಸ್ಥಾಪನೆಯ ಘಳಿಗೆ ಸಮೀಪಿಸುತ್ತಿದೆ. ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರು ಸಾಧಕರಿಗೆ ಆಪತ್ಕಾಲಕ್ಕಾಗಿ ಸಿದ್ಧತೆಯನ್ನು ಮಾಡಿ’, ಎಂದು ಹೇಳಿ ಕೆಲವು ವರ್ಷಗಳು ಉರುಳಿದರೂ ‘ಆಪತ್ಕಾಲ ಇನ್ನೂ ಏಕೆ ಬರಲಿಲ್ಲ ?’, ಎಂದು ಕೆಲವೊಂದು ಸಾಧಕರ ಮನಸ್ಸಿನಲ್ಲಿ ಪ್ರಶ್ನೆ ಬಂದಿರಬಹುದು. ‘ನಾವು ಗುರ್ವಾಜ್ಞಾಪಾಲನೆ ಎಂದು ಆಪತ್ಕಾಲಕ್ಕಾಗಿ ಮಾಡಿದ ಸಿದ್ಧತೆಯು ಯೋಗ್ಯವಾಗಿದೆಯಲ್ಲ ?’, ಹೀಗೂ ಕೆಲವೊಂದು ಸಾಧಕರ ಮನಸ್ಸಿನಲ್ಲಿ ಬಂದಿರಬಹುದು. ಹೇಳುವ ಮುಖ್ಯ ವಿಷಯವೆಂದರೆ, ನಮ್ಮ ‘ಮನಸ್ಸಿನಲ್ಲಿ ವಿಕಲ್ಪಗಳು ಬರುವುದೇ ಇಲ್ಲ’, ಇದು ನಮ್ಮ ಕೈಯಲ್ಲಿಲ್ಲ; ಆದರೆ ಅದರ ಮೇಲೆ ಸಮಾಧಾನ ಹುಡುಕಿ ಗುರುಭಕ್ತಿಯನ್ನು ಹೆಚ್ಚಿಸುವುದು’, ಅದರ ಮೇಲಿನ ಪರ್ಯಾಯವಾಗಿದೆ.’

೧೦. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗಾಗಿ ವಿವಿಧ ಸೇವೆಗಳನ್ನು ಮತ್ತು ಉಪಕ್ರಮಗಳನ್ನು ನೀಡಿದ್ದು ಸಾಧಕರಿಗೆ ದೊರಕಿದ ಸೇವೆಯನ್ನು ಅವರು ಭಕ್ತಿಭಾವದಿಂದ ಮತ್ತು ಶ್ರದ್ಧೆಯಿಂದ ಮಾಡಬೇಕು

ಶ್ರೀವಿಷ್ಣುವು ಈಗ ಪೃಥ್ವಿಯ ಮೇಲೆ ಗುರುರೂಪದಲ್ಲಿ ಬಂದಿದ್ದಾನೆ. ಸನಾತನ ಸಂಸ್ಥೆಯ ಸಾಧಕರಿಗೆ ಅವನು ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದಾನೆ. ಶ್ರೀವಿಷ್ಣುವಿನ ಲೀಲೆ ಅಗಾಧ ಮತ್ತು ಲೋಕಕಲ್ಯಾಣಕ್ಕಾಗಿದೆ. ಮನುಷ್ಯನರೂಪದಲ್ಲಿರುವ ಶ್ರೀವಿಷ್ಣುವಿನ ಸೇವೆಯನ್ನು ಮಾಡಲು ಸಾಧ್ಯವಾಗಬೇಕೆಂದು, ಗುರುದೇವರು ಸಾಧಕರಾದ ನಮಗೆಲ್ಲರಿಗಾಗಿ ವಿವಿಧ ಸೇವೆಗಳ ಮಾರ್ಗ ಮತ್ತು ಉಪಕ್ರಮಗಳನ್ನು ನೀಡಿದ್ದಾರೆ. ನಮಗೆ ದೊರಕಿದ ಸೇವೆಯನ್ನು ಭಕ್ತಿಭಾವದಿಂದ ಮತ್ತು ಶ್ರದ್ಧೆಯಿಂದ ಮಾಡುವುದು, ಇಷ್ಟೇ ನಮ್ಮ ಕೈಯಲ್ಲಿದೆ. ಗುರುದೇವರ ಮಾತು ಮತ್ತು ಅವರು ತೆಗೆದುಕೊಂಡ ನಿರ್ಣಯಗಳ, ಅವುಗಳ ಕೃತಿಗಳ ಬಗ್ಗೆ ಬುದ್ಧಿಯಿಂದ ವಿಚಾರಮಾಡಿ ಅವುಗಳ ಕಾರ್ಯಕಾರಣಭಾವವನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದು ವ್ಯರ್ಥವಾಗಿದೆ.

‘ಹೇ ಶ್ರೀಹರಿ, ಹೇ ಗುರುದೇವಾ, ನಮ್ಮೆಲ್ಲ ಸಾಧಕರಿಗೆ ಈ ವಿಜಯದಶಮಿಯ ನಿಮಿತ್ತ ಭಕ್ತಿರೂಪಿ ಆಶೀರ್ವಾದವನ್ನು ನೀಡಿರಿ. ‘ಕಾಲ ಹೇಗೇ ಇರಲಿ, ಪರಿಸ್ಥಿತಿ ಹೇಗೇ ಇರಲಿ’, ನಮಗೆ ನಿಮ್ಮ ನಿರಂತರ ಭಕ್ತಿಯನ್ನು ಮಾಡುವಂತಾಗಲಿ. ನಾವೆಲ್ಲ ಸಾಧಕರು ಪರಸ್ಪರರಿಂದ ಕಲಿಯುತ್ತಾ ಮತ್ತು ಸತತವಾಗಿ ಸಂಘಟಿತರಾಗಿದ್ದು ನೀವು ಹೇಳಿದ ಸಾಧನೆಯ ಮಾರ್ಗದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಮಾರ್ಗದರ್ಶನಕ್ಕನುಸಾರ ಸತತವಾಗಿ ಸೇವೆಯನ್ನು ಮಾಡುವಂತಾಗಲಿ’, ಇದೇ ತಮ್ಮ ಚರಣಗಳಲ್ಲಿ ಪ್ರಾರ್ಥನೆ.’

ಶ್ರೀ. ವಿನಾಯಕ ಶಾನಭಾಗ (ಆಧ್ಯಾತ್ಮಿಕ ಮಟ್ಟ ಶೇ. ೬೭, ವಯಸ್ಸು ೪೦) ದೆಹಲಿ, (೧೭.೯.೨೦೨೩)