ದೇವಸ್ಥಾನದ ಮೇಲೆ ಪ್ರೀತಿಯನ್ನು ಪ್ರದರ್ಶಿಸುತ್ತಿರುವ ಕಾಂಗ್ರೆಸ್‌ !

ಫಲಕ ಪ್ರಸಿದ್ಧಿಗಾಗಿ

೧. ದೇವಸ್ಥಾನದ ಮೇಲೆ ಪ್ರೀತಿಯನ್ನು ಪ್ರದರ್ಶಿಸುತ್ತಿರುವ ಕಾಂಗ್ರೆಸ್‌ !

‘ಜನವರಿ ೨೨ ರಂದು ಶ್ರೀರಾಮ ಮಂದಿರ ಉದ್ಘಾಟನಾ ಸಂದರ್ಭದಲ್ಲಿ ರಾಜ್ಯದ ೩೪ ಸಾವಿರ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲು ಆದೇಶಿಸಲಾಗಿದೆ’ ಎಂದು ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದರು.

೨. ಹಿಂದೂಗಳೇ, ಶ್ರೀರಾಮಮಂದಿರದ ನಂತರ, ಸ್ವರಕ್ಷಣೆಗಾಗಿ ಈಗ ಹಿಂದೂ ರಾಷ್ಟ್ರವನ್ನೂ ಸ್ಥಾಪಿಸಿ !

ಶಾಜಾಪುರದಲ್ಲಿ (ಮಧ್ಯಪ್ರದೇಶ) ಶ್ರೀರಾಮಮಂದಿರದ ಉದ್ಘಾಟನೆಗೆ ಆಹ್ವಾನಿಸಲು ಅಕ್ಷತೆಗಳನ್ನು ಹಂಚುತ್ತಿದ್ದ ಹಿಂದೂ ಸಂಘಟನೆಗಳ ಶ್ರೀರಾಮ ಫೇರಿಯ ಮೇಲೆ ಮತಾಂಧರು ಕತ್ತಿಯಿಂದ ದಾಳಿ ನಡೆಸಿದರು ಮತ್ತು ಕಲ್ಲು ತೂರಾಟವನ್ನೂ ನಡೆಸಿದರು. ಈ ಘಟನೆಯಲ್ಲಿ ೬ ಹಿಂದೂಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

೩. ದೇಶದಲ್ಲಿರುವ ಎಲ್ಲಾ ಅಕ್ರಮ ಗೋರಿಗಳನ್ನು ತೆಗೆದುಹಾಕಿ !

ದೆಹಲಿಯ ಆಜಾದ್‌ಪುರ ಉಡ್ಡಾಣ ಸೇತುವೆಯಲ್ಲಿ ಅಕ್ರಮವಾಗಿ ನಿರ್ಮಿಸಲಾದ ಮುಸಲ್ಮಾನರ ಗೋರಿ (ಮಜರ್‌)ಗಳನ್ನು ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಂಡು ನೆಲಸಮಗೊಳಿಸಿದೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

೪. ಚೀನಾ ಬೆಂಬಲಿತ ಮಾಲ್ದೀವ್‌ಗೆ ತಕ್ಕ ಪಾಠ ಕಲಿಸಲೇ ಬೇಕು !

‘ಮಾಲ್ದೀವನ ಆಂತರಿಕ ವ್ಯವಹಾರಗಳಲ್ಲಿ ಇತರ ದೇಶಗಳು ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದರೆ, ಚೀನಾ ಅವರನ್ನು ಪೂರ್ಣ ಬಲದಿಂದ ವಿರೋಧಿಸುವುದು’ ಎಂದು ಚೀನಾ ಮಾಲ್ದೀವಗೆ ಆಶ್ವಾಸನೆ ನೀಡಿದೆ. ಈ ಮೂಲಕ ಚೀನಾವು ಭಾರತಕ್ಕೆ ಪರೋಕ್ಷವಾಗಿ ಬೆದರಿಕೆಯೊಡ್ಡಿದೆ.

೫. ಎಲ್ಲೆಡೆಯೂ ಇಂತಹ ಬೇಡಿಕೆ ಮಾಡಬೇಕು !

ಅಜ್ಮೇರನಲ್ಲಿರುವ ‘ಢಾಯಿ ದಿನ್‌ ಕಾ ಝೋಪಡಾ’ ಎಂಬ ಮಸೀದಿಯು ಹಿಂದೆ ಅದು ದೇವಾಲಯವಾಗಿದ್ದು, ಅದನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು’, ಎಂದು ಭಾಜಪ ಸಂಸದ ರಾಮ್‌ ಚರಣ್‌ ಬೊಹ್ರಾ ಇವರು ಕೇಂದ್ರ ಸಚಿವ ಜಿ. ಕಿಶನ್‌ ರೆಡ್ಡಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.