Amazing Ayodhya Book Launch: ‘ಅದ್ಭುತ ಅಯೋಧ್ಯೆ : ಪ್ರಭು ಶ್ರೀ ರಾಮನ ದಿವ್ಯ ನಗರ’ ಪುಸ್ತಕದ ಮೂಲಕ ಅಯೋಧ್ಯೆಯ ಆಳವಾದ ಮಹತ್ವ ಬೆಳಕಿಗೆ !

ದೆಹಲಿಯಲ್ಲಿನ ಹಿಂದುತ್ವನಿಷ್ಠ ನೀನಾ ರಾಯ ಇದರ ಲೇಖಕಿ !

ನವ ದೆಹಲಿ : ಪ್ರಭು ಶ್ರೀರಾಮನು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಹಿಂತಿರುಗಿದ ನಂತರ, ಎಂದರೆ ೫೦೦ ವರ್ಷದ ನಂತರದ ಇದು ಮೊದಲನೆಯ ದೀಪಾವಳಿ ಆಗಿದೆ. ಇಂತಹದರಲ್ಲಿ ‘ಶ್ರೀರಾಮನ ಅಯೋಧ್ಯೆ ಏಕೆ ಎಷ್ಟೊಂದು ವಿಲಕ್ಷಣವಾಗಿದೆ ? ಇದರಲ್ಲಿ ಅಂತಹ ವಿಶೇಷತೆ ಏನಿತ್ತು ಎಂದು ಅದನ್ನು ಕಾಪಾಡಲು ಅಸಂಖ್ಯ ಹಿಂದುಗಳು ತಮ್ಮ ಸರ್ವಸ್ವವನ್ನೇ ಪಣಕ್ಕೆ ಇಟ್ಟಿದ್ದರು.’ಈ ಪ್ರಶ್ನೆಗಳ ಉತ್ತರಗಳು ‘ಅದ್ಭುತ ಅಯೋಧ್ಯ : ಪ್ರಭು ಶ್ರೀರಾಮನ ದಿವ್ಯ ನಗರ’ ಈ ಪುಸ್ತಕದಲ್ಲಿ ನೀಡಲಾಗಿದೆ. ಪುಸ್ತಕದ ಲೇಖಕಿ ನೀನಾ ರಾಯ ಇವರು ಈ ಸಂದರ್ಭದಲ್ಲಿ ಇತ್ತೀಚಿಗೆ ‘ಸನಾತನ ಪ್ರಭಾತ್’ ಜೊತೆಗೆ ಚರ್ಚಿಸಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು .

ರಾಯ ಇವರು, ‘ಪುಸ್ತಕ ಓದುವಾಗ ನಿಮಗೆ ಅಯೋಧ್ಯೆಯ ಆಳವಾದ ಮಹತ್ವ ತಿಳಿಯುವುದರ ಜೊತೆಗೆ ನಿಮ್ಮ ಹೃದಯದಲ್ಲಿ ‘ಹಿಂದೂ’ ಆಗಿರುವುದರ ಅಭಿಮಾನದ ಒಂದು ನೂತನ ಮತ್ತು ಉತ್ಸಾಹಪೂರ್ಣ ಭಾವ ಪ್ರಜ್ವಲಿತವಾಗುವುದು.’ ಎಂದು ಹೇಳಿದರು.

ಈ ಪುಸ್ತಕದ ಪ್ರಕಾಶನವನ್ನು ‘ಬ್ಲೂಮ್ಸಬರಿ ಇಂಡಿಯಾ’ ಮಾಡಿದೆ. ಪುಸ್ತಕದ ಬೆಲೆ ೩೩೫ ರೂಪಾಯಿ ಆಗಿದ್ದೂ ಅದು ಅಮೆಜಾನ್ ನಲ್ಲಿ ಖರೀದಿಗಾಗಿ ಲಭ್ಯವಿದೆ. ಈ ಪುಸ್ತಕ ಹಿಂದಿ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಲಭ್ಯವಿದೆ. ‘ಅಮೇಜಿಂಗ್ ಅಯೋಧ್ಯ : ದ ಸ್ಪ್ಲೇನ್ಡೇಡ್ ಇನ್ಶಂಟ್ ಸಿಟಿ ಆಫ್ ಲಾರ್ಡ್ ರಾಮ’ ಹೀಗೆ ಇಂಗ್ಲೀಷ್ ಪುಸ್ತಕದ ಹೆಸರಾಗಿದೆ.

ರಾಯ್ ಇವರು ಮಾತು ಮುಂದುವರೆಸಿ,

೧. ಭಾರತದ ಪವಿತ್ರ ಭೂಮಿಯಲ್ಲಿನ ಸಾಮ್ರಾಟರ ನಾಶ ಮಾಡಿದ ನಂತರ ಮೊಘಲ ಬಾದಶಾಹ ಬಾಬರನು ಅಮಾಯಕ ಹಿಂದುಗಳ ಮೇಲೆ ಭಯಾನಕ ದೌರ್ಜನ್ಯ ಮಾಡಿದನು. ಅವನು ನಿಷ್ಪಾಪ ಹಿಂದೂಗಳ ವಿರುದ್ಧ ಹೇಯ ಕೃತ್ಯಗಳನ್ನು ಮಾಡಿದನು. ಆದ್ದರಿಂದ ಅವನಿಗೆ ‘ಗಾಝಿ’ ಈ ಹೆಸರು ನೀಡಲಾಯಿತು. ಇದರ ಅರ್ಥ – ಕಾಫೀರರಿಂದ ‘ಜಾರ’ (ಆಸ್ತಿ), ‘ಜೋರು’ (ಸ್ತ್ರೀಯರು), ‘ಜಮೀನ್’ (ಭೂಮಿ), ಲೂಟಿ ಮಾಡುವವ !’ ಎಂದಾಗಿದೆ

೨. ಬಾಬರನಿಗೆ, ಎಲ್ಲಿಯವರೆಗೆ ಶ್ರೀರಾಮ ಜನ್ಮ ಭೂಮಿಯಲ್ಲಿ ದೇವಸ್ಥಾನ ಇರುವುದು ಮತ್ತು ಭಗವಂತ ಶ್ರೀ ರಾಮನನ್ನು ಪೂಜಿಸಲಾಗುವುದು, ಅಲ್ಲಿಯವರೆಗೆ ಈ ಹಿಂದೂ ಕಾಫಿರ ಇಸ್ಲಾಂ ಸ್ವೀಕರಿಸುವುದಿಲ್ಲ ಎಂದು ಚೆನ್ನಾಗಿ ತಿಳಿದಿತ್ತು. ಆದಕಾರಣ ೧೫೨೮ ರಲ್ಲಿ ಅವನು ಈ ದೇವಸ್ಥಾನ ಧ್ವಂಸ ಮಾಡಿ ಅದರ ಅವಶೇಷಗಳ ಮೇಲೆ ಬಾಬ್ರಿ ಕಟ್ಟಿದನು.

೩. ಇಷ್ಟೊಂದು ವಿನಾಶಕಾರಿ ವಿಧ್ವಂಸವಾದರೂ ಹಿಂದುಗಳು ತಮ್ಮ ಶ್ರದ್ದೆಯನ್ನು ಬಿಡಲಿಲ್ಲ. ಅದರ ಬದಲು ಅವರು ಅಯೋಧ್ಯೆಯಲ್ಲಿನ ದೀಪ ಬೆಳಗುತ್ತಿರಲು ಸ್ವಂತ ಇಚ್ಛೆಯಿಂದ ಬೆಂಕಿ ಪಟ್ಟಣದಲ್ಲಿನ ಕಡ್ಡಿಯಂತೆ ತಮ್ಮ ಪ್ರಾಣಾರ್ಪಣೆ ಮಾಡಿದರು.

೪. ಪ್ರಭು ಶ್ರೀರಾಮನ, ದೇವಸ್ಥಾನ ಮತ್ತು ಅಯೋಧ್ಯೆಯ ತೇಜ ಕೋಟ್ಯಾಂತರ ಜನರ ಹೃದಯದಲ್ಲಿ ಪ್ರಜ್ವಲಿಸುತ್ತಿರುವುದಕ್ಕಾಗಿ ಕೇವಲ ಸಾಮಾನ್ಯ ಹಿಂದುಗಳು ಪ್ರಾಣಾರ್ಪಣೆ ಮಾಡಿದರು ಹೀಗೆ ಇಲ್ಲ, ಅಸಂಖ್ಯ ಕವಿಗಳು ಮತ್ತು ಲೇಖಕರು ಇವರು ಕೂಡ ಅಖಂಡ ಲೇಖನ ಮತ್ತು ಗಾಯನದಿಂದ ತಮ್ಮ ಅಸ್ತಿತ್ವವನ್ನು ಸಮರ್ಪಿಸಿದರು.

ಅಮೆಜಾನ್ ಮೂಲಕ ಹಿಂದಿ ಪುಸ್ತಕ ಖರೀದಿಸಲು ಲಿಂಕ್ : https://www.amazon.in/-/hi/Neena-Rai/dp/9356409072

ಅಮೆಜಾನ್ ಮೂಲಕ ಇಂಗ್ಲಿಷ್ ಪುಸ್ತಕ ಖರೀದಿಸಲು ಲಿಂಕ್ : https://www.amazon.in/Amazing-Ayodhya-Splendid-Ancient-City/dp/9390358876/

ಲೇಖಕಿ ನೀನಾ ರಾಯ ಇವರ ಪರಿಚಯ !

ನೀನಾ ರಾಯ ಇವರು ನವದೆಹಲಿಯ ಪ್ರಸಿದ್ಧ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಎಜುಕೇಶನ್’ ಇಲ್ಲಿಂದ ಪತ್ರಿಕೋದ್ಯಮದ ಶಿಕ್ಷಣ ಪಡೆದ ನಂತರ ಅವರು ಅನೇಕ ವರ್ಷಗಳು ಮಧ್ಯ ಪೂರ್ವದಲ್ಲಿ ಪತ್ರಕರ್ತೆಯಾಗಿ ಕಾರ್ಯನಿರತವಾಗಿದ್ದರು. ಸುಮಾರು ೧೦ ವರ್ಷದ ನಂತರ ದೇಶ ಸೇವೆಗಾಗಿ ಅವರು ಭಾರತಕ್ಕೆ ಹಿಂತಿರುಗಿದರು. ಅವರದು ದೆಹಲಿಯಲ್ಲಿ ವ್ಯವಸಾಯವಿದ್ದೂ ಹಿಂದೂ ಧರ್ಮದ ಅಧ್ಯಯನಕಾರರು ಕೂಡ ಆಗಿದ್ದಾರೆ.