Ram Mandir Construction Delayed: ಕಾರ್ಮಿಕರ ಕೊರತೆಯಿಂದ ಬಾಕಿ ಉಳಿದಿರುವ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿ 3 ತಿಂಗಳು ವಿಳಂಬ !

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದ ಸಂಪೂರ್ಣ ನಿರ್ಮಾಣವು ಜೂನ್ 2025 ರೊಳಗೆ ಪೂರ್ಣಗೊಳ್ಳದೆ, ಸಪ್ಟೆಂಬರ್ 2025 ರಲ್ಲಿ ಪೂರ್ಣಗೊಳ್ಳಲಿದೆ. ಪರಕೋಟಾ (ದೇವಾಲಯವನ್ನು ಪ್ರದಕ್ಷಿಣೆ ಹಾಕಲು ನಿರ್ಮಿಸಿದ ಮಾರ್ಗ) ನಿರ್ಮಾಣವು ಒಂದು ಕಿಲೋಮೀಟರ್ ಸುತ್ತಳತೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 6 ದೇವಾಲಯಗಳನ್ನು ನಿರ್ಮಿಸಲಾಗುವುದು. ಇದರಲ್ಲಿ ಅಂದಾಜು 8.50 ಲಕ್ಷ ಕ್ಯೂಬಿಕ್ ಅಡಿ ಬನ್ಶಿ ಪಹಾರ್ಪುರ್ ಕಲ್ಲಿನ ಅಗತ್ಯವಿದೆ. ಕಲ್ಲುಗಳೂ ಬಂದಿವೆ; ಆದರೆ 200 ಕಾರ್ಮಿಕರ ಕೊರತೆಯಿಂದ ನಿರ್ಮಾಣ ವಿಳಂಬವಾಗುತ್ತಿದೆ ಎಂದು ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದರು.

ನೃಪೇಂದ್ರ ಮಿಶ್ರಾ ಇವರು ಮಾತು ಮುಂದುವರೆಸಿ, ಶ್ರೀರಾಮ ಮಂದಿರದಲ್ಲಿ ಅಳವಡಿಸಲಾಗಿರುವ ಮಾರ್ಬಲ್ ಕಲ್ಲುಗಳು ಹಲವೆಡೆ ದುರ್ಬಲವಾಗಿ ಕಾಣುತ್ತಿವೆ. ಇದರಿಂದಾಗಿ ದುರ್ಬಲವಾದ ಮಾರ್ಬಲ್ ತೆಗೆದು ಮಕ್ರಾನ ಮಾರ್ಬಲ್ ಅಳವಡಿಸಲು ನಿರ್ಧರಿಸಲಾಗಿದೆ. ಶ್ರೀರಾಮ ಮಂದಿರದ ನೆಲ ಮಹಡಿಯಲ್ಲಿರುವ ಗುಡಿ ಮಂಟಪದ ಗೋಡೆಗಳು ಮತ್ತು ಕಂಬಗಳ ಮೇಲೆ ಬಿಳಿ ಅಮೃತಶಿಲೆಯನ್ನು ಬಳಸಲಾಗಿದೆ ಮತ್ತು ಗರ್ಭಗುಡಿ ಹೊರತುಪಡಿಸಿ ದೇವಾಲಯದ ಮೊದಲ ಮಹಡಿಯಲ್ಲಿ ಅಮೃತಶಿಲೆಯನ್ನು ಸ್ಥಾಪಿಸಲಾಗಿದೆ.