ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣದ ನಂತರ ಮೊದಲ ದೀಪಾವಳಿ

  • ಹೂವಿನಿಂದ ಅಲಂಕರಿಸಿದ ಶ್ರೀರಾಮ ದೇವಾಲಯ

  • ಶ್ರೀರಾಮ ಮಂದಿರದ ಪ್ರದೇಶದಲ್ಲಿ ದೀಪಗಳ ಪ್ರಕಾಶ

  • ಸರಯೂ ತೀರದಲ್ಲಿ 28 ಲಕ್ಷ ಹಣತೆ ದೀಪ

ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಶ್ರೀರಾಮಜನ್ಮ ಭೂಮಿಯಲ್ಲಿ ಭವ್ಯವಾದ ಶ್ರೀರಾಮ ಮಂದಿರವನ್ನು ನಿರ್ಮಿಸಿದ ನಂತರ ಮೊದಲ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ದೀಪಾಲಂಕಾರ ಮಾಡಲಾಗಿದೆ. ಅಲ್ಲದೆ, ಇಲ್ಲಿನ ಸರಯೂ ನದಿಯ ದಡದಲ್ಲಿರುವ ರಾಮ್ ಕಿ ಪೌಡಿಯಲ್ಲಿ ಪ್ರತಿ ನಿತ್ಯ 28 ಲಕ್ಷ ಹಣತೆ ದೀಪ ಹಚ್ಚಲಾಗುವುದು.

55 ಘಾಟ್‌ಗಳಲ್ಲಿ ದೀಪಗಳನ್ನು ಹಚ್ಚಲಾಗುವುದು. ಅಕ್ಟೋಬರ್ 30 ರಿಂದಲೇ ಇದನ್ನು ಆರಂಭಿಸಲಾಗಿದೆ. ಹಾಗೆಯೇ ಇಲ್ಲಿ ‘ಲೇಸರ್ ಶೋ’ ಅನ್ನೂ ಆಯೋಜಿಸಲಾಗಿದೆ. ಈ ದೀಪೋತ್ಸವಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ತಿತರಿರುತ್ತಾರೆ.

ಅಕ್ಟೋಬರ್ 30 ರಿಂದ ರಸ್ತೆಗಳಲ್ಲಿ ಅನೇಕ ಸ್ಥಳಗಳಲ್ಲಿ ಚಿತ್ರರಥಗಳನ್ನು ಪ್ರದರ್ಶಿಸಲಾಗುತ್ತಿದೆ. ಇದರಲ್ಲಿ ಉತ್ತರ ಪ್ರದೇಶ ಸೇರಿದಂತೆ ದೇಶದ ಇತರೆ ರಾಜ್ಯಗಳ ಕಲಾವಿದರು ತಮ್ಮ ಕಲೆಯನ್ನು ಪ್ರಸ್ತುತಪಡಿಸುತ್ತಿದ್ದಾರೆ. ಶ್ರೀರಾಮ ಮಂದಿರದ ಮುಂದೆ ಬೃಹತ್ ರಂಗೋಲಿ ಬಿಡಿಸಲಾಗಿದೆ. ಇದರಲ್ಲಿ ಬಣ್ಣಗಳನ್ನಲ್ಲ, ಬಗೆ ಬಗೆಯ ಹೂಗಳನ್ನು ಬಳಸಲಾಗಿದೆ.