ಅಯೋಧ್ಯೆಯಿಂದ ‘ಸನಾತನ ಪ್ರಭಾತ’ದಿನಪತ್ರಿಕೆಯ ವಿಶೇಷ ವರದಿ
1 ಸಾವಿರ 200 ‘ರಕ್ಷಕರು’ ಹೂವಿನ ಮಾಲೆಗಳ ಭದ್ರತೆಯನ್ನು ಮಾಡುತ್ತಿದ್ದಾರೆ!
ಅಯೋಧ್ಯೆ, ಜನವರಿ 19 (ಸುದ್ದಿ) – ಅಯೋಧ್ಯಾ ನಗರದಲ್ಲಿ ಜನವರಿ 22 ರಂದು ನಡೆಯಲಿರುವ ಶ್ರೀ ರಾಮ ಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಸಮಾರಂಭಕ್ಕಾಗಿ ದೇವಸ್ಥಾನದ ಸಂಪೂರ್ಣ ಆವರಣವನ್ನು ಚೆಂಡುಹೂವಿನಿಂದ ಆಕರ್ಷಕವಾಗಿ ಅಲಂಕರಿಸಲಾಗಿದೆ. ಮಂದಿರಕ್ಕೆ ಹೋಗುವ ಮುಖ್ಯ ರಸ್ತೆಯಿಂದ ಮಂದಿರದ ಪ್ರವೇಶ ದ್ವಾರದವರೆಗೆ ಇರುವ ಗೋಡೆಗಳ ಮೇಲೆ ಚೆಂಡು ಹೂವಿನ ಮಾಲೆಗಳಿಂದ ಅಲಂಕರಿಸಲಾಗಿದೆ. ಅಯೋಧ್ಯೆಯ ‘ನ್ಯೂ ಸಾಕೇತ್ ಫ್ಲವರ್ ಡೆಕೋರೇಟರ್ಸ್’ಗೆ ಈ ಕೆಲಸ ನೀಡಲಾಗಿದೆ. ಆದಾಗ್ಯೂ` ನ್ಯೂ ಸಾಕೇತ ಫ್ಲಾವರ ಡೆಕೊರೇಟರ್ಸ’ ಇವರು 1 ಸಾವಿರ 200 `ರಕ್ಷಕರನ್ನು’ ನೇಮಿಸಿದ್ದು, ಅವರು ಕೈಯಲ್ಲಿ , `ಕವಣೆ ಹಿಡಿದುಕೊಂಡು ಈ ಹೂವಿನ ರಕ್ಷಣೆಗಾಗಿ ಹಗಲಿರುಳು ಕಾವಲು ಕಾಯುತ್ತಿದ್ದಾರೆ. ಈ ರಕ್ಷಕರ ಗಮನವು ಸ್ವಲ್ಪವಾದರೂ ಬೇರೆಡೆಗೆ ಹೋದರೆ ಮಂಗಗಳ ಗುಂಪಿಗೆ ಗುಂಪೇ ಬಂದು ಹೂವುಗಳ ಮಾಲೆಗಳನ್ನು ತುಂಡು ಮಾಡಿ ಹೂವುಗಳನ್ನು ತಿಂದು ಹಾಕುತ್ತಿವೆ.
(ಸೌಜನ್ಯ – Sanatan Prabhat)
ಸಮಸ್ಯೆ ಅದಲ್ಲ! – ಶ್ರೀ. ಮೋಹಿತ್, ಮುಖ್ಯಸ್ಥರು, ‘ನ್ಯೂ ಸಾಕೇತ್ ಫ್ಲವರ್ ಡೆಕೋರೇಟರ್ಸ್’
ಈ ವಿಷಯದ ಬಗ್ಗೆ ‘ನ್ಯೂ ಸಾಕೇತ್ ಫ್ಲವರ್ ಡೆಕೋರೇಟರ್ಸ್’ ಮುಖ್ಯಸ್ಥ ಶ್ರೀ. ಮೋಹಿತ ಇವರನ್ನು ವಿಚಾರಿಸಿದಾಗ, ಅವರು ಮಾತನಾಡಿ, ಇದು ಸಮಸ್ಯೆಯಲ್ಲ. ಮಂಗಗಳ ನೈಸರ್ಗಿಕ ಖಾದ್ಯವೇ ಹೂಗಳಾಗಿವೆ. ದೇವಸ್ಥಾನದ ಪರಿಸರದಲ್ಲಿ ಸಾವಿರಾರು ಮಂಗಗಳು ಇವೆ. ಆದುದರಿಂದ ನಾವು ಮುಖ್ಯ ಸಮಾರಂಭವಾಗುವವರೆಗೆ ಅವುಗಳಿಂದ ಹೂಗಳ ರಕ್ಷಣೆ ಮಾಡುತ್ತಿದ್ದೇವೆ. ಅದಕ್ಕಾಗಿ ನಾವು 1 ಸಾವಿರ 200 ನೌಕರರನ್ನು ನಿಯುಕ್ತಿಗೊಳಿಸಿದ್ದೇವೆ. ಈ ಹೂಗಳು ಬಹಳ ವಿಶೇಷವಾಗಿದ್ದು, ಅದು 8 ದಿನಗಳ ವರೆಗೆ ನಳನಳಿಸುತ್ತಿರುತ್ತವೆ.