ಅಯೋಧ್ಯೆ ತೀರ್ಪು ನೀಡುವ ಮುನ್ನ ನಾನು ದೇವರೆದುರು ಕುಳಿತಾಗ ದೇವರೇ ಮಾರ್ಗ ತೋರಿಸಿದ ! – ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ

ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಇವರಿಂದ ಮಾಹಿತಿ

ಪುಣೆ – ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿರುವಾಗ ಎಷ್ಟೋ ಸಾರಿ ಬಗೆಹರಿಸಲು ಕಠಿಣವಾಗುವಂತಹ ಪ್ರಕರಣಗಳು ಎದುರಿಗೆ ಬರುತ್ತವೆ. ಅಯೋಧ್ಯ ಪ್ರಕರಣದಲ್ಲೂ ಇದೇ ಸ್ಥಿತಿ ಇತ್ತು, ಮೊಕದ್ದಮೆ ನನ್ನ ಮುಂದೆ ನಡೆಯುತ್ತಿತ್ತು. ೩ ತಿಂಗಳು ನಾವು ಅದರ ವಿಚಾರಣೆ ನಡೆಸುತ್ತಿದ್ದೆವು. ನೂರಾರು ವರ್ಷಗಳ ವಿವಾದ ಯಾರು ಬಗೆಹರಿಸಲು ಸಾಧ್ಯವಾಗದಿರುವ ಪ್ರಕರಣ ನಮ್ಮ ಮುಂದೆ ಬಂದು ನಿಂತಿತ್ತು. ಆ ಸಮಯದಲ್ಲಿ ‘ಹೇಗೆ ಪರಿಹಾರ ಕಂಡುಕೊಳ್ಳುವುದು ?,’ ಎಂಬ ಪ್ರಶ್ನೆ ನಮಗೆ ಎದುರಾಗುತ್ತಿತ್ತು. ನಾನು ಈ ಮೊಕದ್ದಮೆಯ ತೀರ್ಪು ನೀಡುವ ಮೊದಲು ದೇವರಲ್ಲಿ ಸಹಾಯ ಕೇಳಿದ್ದೆ. ನಾನು ಪ್ರತಿದಿನ ಬೆಳಿಗ್ಗೆ ದೇವರ ಪೂಜೆ ಮಾಡುತ್ತೇನೆ, ಹಾಗೆಯೇ ಅಂದು ಕೂಡ ಪೂಜೆ ಮಾಡುತ್ತಿದ್ದೆ.

ನಾನು ಭಗವಂತನ ಮುಂದೆ ಕುಳಿತು, “ಈಗ ನೀನೇ ನನಗೆ ದಾರಿ ಹುಡುಕಿ ಕೊಡು”. ನಿಮಗೆ ಇದರ ಕುರಿತು ವಿಶ್ವಾಸ ಇದ್ದರೆ; ನಿಮಗೆ ಶ್ರದ್ಧೆ ಇದ್ದರೇನೇ, ದೇವರು ದಾರಿ ಹುಡುಕಿ ಕೊಡುತ್ತಾನೆ. ದೇವರೇ ನನಗೂ ಕೂಡ ದಾರಿ ತೋರಿಸಿದನು, ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ್ ಇವರು ಇಲ್ಲಿಯ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಮಾಹಿತಿ ನೀಡಿದರು. ನವಂಬರ್ ೯, ೨೦೧೯ ರಂದು ಈ ಪ್ರಕರಣದ ಕುರಿತು ಅಂದಿನ ಮುಖ್ಯ ನ್ಯಾಯಮೂರ್ತಿ ರಂಜನ ಗೊಗೋಯಿ, ಶರದ ಬೊಬಡೆ, ಧನಂಜಯ ಚಂದ್ರಚೂಡ, ಅಶೋಕ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ಈ ೫ ನ್ಯಾಯಾಧೀಶರ ಪೀಠವು ತೀರ್ಪು ನೀಡಿದ್ದರು.

ಚಂದ್ರಚೂಡ ಇವರು, ನಾನು ದೇಶಾದ್ಯಂತ ಎಲ್ಲಾ ಕಡೆಗೆ ಸುತ್ತಿದ್ದೇನೆ. ಅನೇಕ ಸ್ಥಳಗಳಿಗೆ ಹೋಗಿದ್ದೇನೆ, ಅಲ್ಲಿಯ ದೇವಸ್ಥಾನಗಳನ್ನು ನೋಡಿದ್ದೇನೆ; ಆದರೆ ಕನ್ಹೆರಸರದ ಶ್ರೀ ಯಮಾಯಿ ದೇವಿಯ ದೇವಸ್ಥಾನ ನನಗೆ ಬಹಳ ಹಿಡಿಸಿದೆ. ಇಷ್ಟೊಂದು ಸುಂದರ ದೇವಸ್ಥಾನ ನಾನು ದೇಶದಲ್ಲಿ ಎಲ್ಲಿಯೂ ಕೂಡ ನೋಡಿಲ್ಲ. ಪೂರ್ವಜರ ಪುಣ್ಯದಿಂದ ನಾನು ಇಲ್ಲಿಯವರೆಗೆ ಪ್ರವಾಸ ಮಾಡಲು ಸಾಧ್ಯವಾಯಿತು ಮತ್ತು ಶ್ರೀ ಯಮಾಯಿ ದೇವಿಯ ಕೃಪೆಯಿಂದಲೇ ನಾನು ಭಾರತದ ಮುಖ್ಯ ನ್ಯಾಯಮೂರ್ತಿಯಾದೆ. ಇಲ್ಲಿಯ ಜನರು ನನ್ನನ್ನು ಸತ್ಕರಿಸಿದರು, ಅದಕ್ಕಾಗಿ ನಾನು ಎಲ್ಲರಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.