ಅಯೋಧ್ಯೆ – ಈ ವರ್ಷದ ಜನವರಿಯಲ್ಲಿ ಅಯೋಧ್ಯೆಯಲ್ಲಿ ನಡೆದ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನಾ ಸಮಾರಂಭಕ್ಕೆ 113 ಕೋಟಿ ಖರ್ಚಾಗಿದೆ. ‘ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಸಭೆಯಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಈ ಮಾಹಿತಿ ನೀಡಿದರು. ಜನವರಿ 16 ರಿಂದ 22 ರವರೆಗೆ ಪ್ರಾಣಪ್ರತಿಷ್ಠಾಪನಾ ಸಮಾರಂಭ ನಡೆಯಿತು.
ಈ ಸಮಾರಂಭದಲ್ಲಿ ವಿಶೇಷ ಅತಿಥಿಗಳು ಬಂದು-ಹೋಗುವ ಮತ್ತು ವಸತಿಗಾಗಿ ವಿಶೇಷ (ಭವ್ಯ) ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅಂದಾಜು 8 ಸಾವಿರ ಗಣ್ಯರನ್ನು ಆಹ್ವಾನಿಸಲಾಗಿತ್ತು. ವಾರಣಾಸಿಯ ಅನೇಕ ವಿದ್ವಾಂಸರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದಲ್ಲದೇ ಶ್ರೀರಾಮ ಭಕ್ತರಿಗಾಗಿ ಪ್ರತ್ಯೇಕ ‘ಟೆಂಟ್ ಸಿಟಿ’ (ತಾತ್ಕಾಲಿಕ ನಗರ) ನಿರ್ಮಿಸಲು ಹಣ ಖರ್ಚು ಮಾಡಲಾಯಿತು. ಭಕ್ತರ ಅನ್ನಸಂತರ್ಪಣೆಗಾಗಿ 5 ಕೋಟಿ ರೂಪಾಯಿ ಖರ್ಚು ಮಾಡಲಾಯಿತು.