ಅಯೋಧ್ಯೆಯಿಂದ ‘ಸನಾತನ ಪ್ರಭಾತ’ದ ವಿಶೇಷ ಕವರೇಜ್
ಅಯೋಧ್ಯೆ ಜನವರಿ ೧೯(ವಾರ್ತೆ) – ಅಯೋಧ್ಯೆಯಲ್ಲಿನ ಭವ್ಯ ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುವುದರಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಜನವರಿ ೧೯ ರಂದು ಸಿದ್ಧತೆಯ ಪರಿಶೀಲನೆ ನಡೆಸಿದರು. ಸೂತ್ರಗಳಿಂದ ದೊರೆತಿರುವ ಮಾಹಿತಿಯ ಪ್ರಕಾರ ಈ ಸಮಯದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಮಂದಿರ ಮತ್ತು ಮಂದಿರ ಪರಿಸರದಲ್ಲಿ ನಡೆಯುವ ವಿವಿಧ ಕಾರ್ಯದ ವರದಿ ಪಡೆದರು ಹಾಗೂ ಬಾಕಿ ಇರುವ ಕಾರ್ಯ ತಕ್ಷಣ ಪೂರ್ಣಗೊಳಿಸುವ ಆದೇಶ ನೀಡಿದರು. ಈ ಸಮಯದಲ್ಲಿ ಮುಖ್ಯಮಂತ್ರಿಗಳ ಜೊತೆಗೆ ಅನೇಕ ಉನ್ನತ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀರಾಮಲಲ್ಲನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಸಿದ್ಧತೆಯ ಕೊನೆಯ ಹಂತದಲ್ಲಿ
ಅಯೋಧ್ಯೆಯಲ್ಲಿನ ಭವ್ಯ ಶ್ರೀ ರಾಮಮಂದಿರದ ಉದ್ಘಾಟನೆ ಮತ್ತು ಶ್ರೀ ರಾಮಲಲ್ಲಾನ ಪ್ರತಿಷ್ಠಾಪನೆಯ ಸಮಾರಂಭದ ಸಿದ್ಧತೆ ಕೊನೆಯ ಹಂತಕ್ಕೆ ಬಂದಿದೆ. ಈ ಸಮಾರಂಭದ ಪ್ರಯುಕ್ತ ಸಂಪೂರ್ಣ ಅಯೋಧ್ಯೆನಗರ ಅಲಂಕರಿಸಲಾಗಿದೆ. ಭಕ್ತರಲ್ಲಿ ಅತ್ಯಂತ ಉತ್ಸಾಹವಿದೆ.
೧. ಈ ಸಮಾರಂಭದ ಪ್ರಯುಕ್ತ ದೇವಸ್ಥಾನದ ಪರಿಸರದಲ್ಲಿನ ಗೋಡೆಗಳನ್ನು ಚಂಡು ಹೂವಿನ ಮಾಲೆಯಿಂದ ಅಲಂಕರಿಸಿದ್ದಾರೆ. ಇದಕ್ಕಾಗಿ ಅನೇಕ ಟೆಂಪೋ ತುಂಬಾ ಹೂವುಗಳು ತಂದಿದ್ದಾರೆ. ದೇವಸ್ಥಾನದ ಪರಿಸರದಲ್ಲಿ ಪ್ರವೇಶ ಮಾಡುತ್ತಲೇ ಹೂವಿನ ಮಾಲೆಗಳಿಂದ ಅಲಂಕರಿಸಿರುವ ಗೋಡೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಈ ಎಲ್ಲಾ ಹೂಗಳು ಅಯೋಧ್ಯೆಯಲ್ಲಿನ ‘ನ್ಯೂ ಸಾಕೆತ ಫ್ಲವರ್ ಡೆಕೋರೇಟರ್ಸ್’ ಇವರು ಪೂರೈಸಿದ್ದಾರೆ.
೨. ಬಿಸಿಲು ಮತ್ತು ಮಳೆಯಿಂದ ಭಕ್ತರಿಗೆ ತೊಂದರೆ ಆಗಬಾರದೆಂದು, ಮಂದಿರದ ಪ್ರವೇಶ ದ್ವಾರದಿಂದ ಮಂದಿರದ ಮುಖ್ಯ ಮಂದಿರದವರೆಗೆ ಶಾಶ್ವತ ಶೆಡ್ ಗಳು ನಿರ್ಮಿಸಿದ್ದರೆ. ಈ ಶೆಡ್ ನಲ್ಲಿ ಭಕ್ತರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಕೂಡ ಮಾಡಿದ್ದಾರೆ.
೩. ಈ ಶೆಡ್ ನಲ್ಲಿ ಚಿಕ್ಕ ಆಕಾರದಲ್ಲಿನ ಅಲಂಕಾರದ ಕುಸರಿ ಕೆಲಸ ಇರುವ ಕಂಬಗಳ ಮತ್ತು ಬಣ್ಣದ ಕೆಲಸ ಪೂರ್ಣಗೊಂಡಿದೆ. ಮಂದಿರ ಪರಿಸರದಲ್ಲಿನ ಎಲ್ಲಾ ರಸ್ತೆಗಳು ಮತ್ತು ಪುಟಪಾತ ತೊಳೆದು ಸ್ವಚ್ಛ ಮಾಡಲಾಗಿದೆ.
೪. ಜನವರಿ ೨೦ ರ ನಂತರ ಮಂದಿರದಲ್ಲಿ ಸಾಮಾನ್ಯ ಭಕ್ತರ ದರ್ಶನ (ಧರ್ಮದರ್ಶನ) ನಿಲ್ಲಿಸುವರು. ಅದರ ಜೊತೆಗೆ ಇತರ ಕೆಲವು ಸಣ್ಣಪುಟ್ಟ ಅಂತಿಮ ಕೆಲಸ ನಡೆಯುವುದು.