೬ ಡಿಸೆಂಬರ್ ೧೯೯೨ ರಲ್ಲಿ ಕಾರಸೇವೆಯನ್ನು ನಿಶ್ಚಿತಗೊಳಿಸಲಾಗಿತ್ತು. ೧೯೯೦ ರ ಕಾರಸೇವೆಯ ಪ್ರಕಾರ ಪುನಃ ಗುಂಪುಗಳನ್ನು ರಚಿಸಲಾಯಿತು. ನಮ್ಮ ಗುಂಪು ೩೦ ನವೆಂಬರ್ ೧೯೯೨ ರಂದು ನಿರ್ಗಮಿಸಿತು. ನಮ್ಮ ರೈಲು ಮೊದಲು ನಿಂತ ಸ್ಥಳದ ಹೆಸರು ಶ್ರೀರಾಮಪುರ !
ಇದ್ದಕ್ಕಿದ್ದಂತೆ ಬೀದಿ ಬದಿ ವ್ಯಾಪಾರಿಗಳ ಗುಂಪು ನಮ್ಮ ಕಡೆಗೆ ಓಡಿಬಂತು. ಅವರು ನಿಂದಿಸುತ್ತ ಬಾಗಿಲು ತೆರೆಯಲು ಪ್ರಯತ್ನಿಸುತ್ತಿದ್ದರು. ಬಾಗಿಲು ತೆರೆಯುವಲ್ಲಿ ವಿಫಲರಾದಾಗ, ಅವರು ಕಿಟಕಿಯ ಮೂಲಕ ಚೂಪಾದ ಕಬ್ಬಿಣದ ಸರಳುಗಳನ್ನು ಹಾಕಲು ಪ್ರಾರಂಭಿಸಿದರು. ಆ ಸರಳುಗಳಿಂದ ನಮ್ಮನ್ನು ನಾವು ರಕ್ಷಿಸಿಕೊಂಡು ನಿಂತಿದ್ದೆವು. ಆ ೭-೮ ನಿಮಿಷಗಳು ನಮಗೆ ೭-೮ ಗಂಟೆಗಳಂತೆ ಭಾಸವಾಗುತ್ತಿತ್ತು.
ಅಯೋಧ್ಯೆ ರೈಲು ನಿಲ್ದಾಣದಿಂದ ನಮ್ಮನ್ನು ಬಾಬರಿ ಕಟ್ಟಡದ ಸ್ಥಳದಲ್ಲಿ ನಿರ್ಮಿಸಲಾದ ಡೇರೆಗಳಿಗೆ ಕರೆದೊಯ್ಯಲಾಯಿತು. ಕೊನೆಗೂ ಡಿಸೆಂಬರ್ ೬ ನೇ ತಾರೀಖು ಬಂದಿತು. ಸಾಂಕೇತಿಕ ಕಾರಸೇವೆ ನಡೆಸುವಂತೆ ನಮ್ಮನ್ನು ಕೇಳಲಾಯಿತು. ಬೆಳಗ್ಗೆ ೯.೩೦ ಕ್ಕೆ ಕಾರಸೇವೆ ಆರಂಭವಾಗಬೇಕಿತ್ತು. ಲಕ್ಷಗಟ್ಟಲೆ ಕಾರಸೇವಕರು ಕೈಯಲ್ಲಿ ಹೂವು, ಹಣ್ಣು, ಸಿಹಿತಿಂಡಿ ಹಿಡಿದು ವಿವಿಧ ಸಾಲುಗಳಲ್ಲಿ ನಿಂತಿರುವಂತೆ ತೋರುತ್ತಿತ್ತು. ಅದು ಬೆಳಗ್ಗೆ ೧೧.೩೦ ರ ಸಮಯವಾಗಿತ್ತು, ಆಗ ಒಬ್ಬೊಬ್ಬ ಕಾರಸೇವಕನು ಒಂದೊಂದು ಇಟ್ಟಿಗೆಯನ್ನು ತೆಗೆದುಕೊಂಡು ಪುನಃ ಹಿಂದೆ ಓಡಿ ಬರುತ್ತಿದ್ದನು. ಅವರನ್ನು ಕೇಳಿದಾಗ, ಬಾಬರಿ ಕಟ್ಟಡವನ್ನು ಕೆಡವಲಾಗುತ್ತಿದೆ ಮತ್ತು ನಾವು ಅದರ ಪ್ರತಿಯೊಂದು ಇಟ್ಟಿಗೆಯನ್ನು ನೆನಪಿಗಾಗಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂಬುದು ತಿಳಿಯಿತು. ಸ್ವಲ್ಪ ಸಮಯದಲ್ಲೇ ನಾವು ಬಾಬರಿ ಕಟ್ಟಡದ ಬಳಿ ತಲುಪಿದೆವು. ಅಲ್ಲಿ ಉಪಸ್ಥಿತರಿದ್ದ ಕಾರಸೇವಕರು ಕಟ್ಟಡದ ಮೇಲೆ ನಿಂತು, ಎಲ್ಲಾ ರೀತಿಯಲ್ಲಿ ಅದನ್ನು ಕೆಡವಲು ಪ್ರಯತ್ನಿಸುತ್ತಿದ್ದರು. ಕಟ್ಟಡವನ್ನು ಕೆಳಗಿನಿಂದ ಕೆಡವಲು ಪ್ರಯತ್ನಿಸುವಂತೆ ಸಾಧ್ವಿಯೊಬ್ಬರು ಮೈಕ್ರೊಫೋನ್‌ನಲ್ಲಿ ಸಮಯಪ್ರಜ್ಞೆಯಿಂದ ಕರೆ ನೀಡಿದ್ದು ನನಗೆ ಚೆನ್ನಾಗಿ ನೆನಪಿದೆ. ಅದೂ ಪರಿಣಾಮವನ್ನು ಬೀರಲಿಲ್ಲ. ಕಟ್ಟಡವನ್ನು ರಕ್ಷಿಸಲು ಪೊಲೀಸರು ೨೦ ಅಡಿ ಉದ್ದದ ಪೈಪ್‌ಗಳನ್ನು ಒಳಗೊಂಡಿರುವ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಿದರು. ೨೦ ಕ್ಕೂ ಹೆಚ್ಚು ಕಾರಸೇವಕರು ಆ ಪೈಪ್‌ಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಿ ಕಟ್ಟಡದ ಗೋಡೆಗೆ ಹೊಡೆದರು. ಈ ಯೋಜನೆಯು ಸಫಲವಾಯಿತು. ಕಾರಸೇವಕರು ಆನಂದದಿಂದ ಅಪ್ಪಿಕೊಂಡು ಕುಣಿದಾಡತೊಡಗಿದರು. ಇದೆಲ್ಲದರ ನಡುವೆ ರಾಮಲಾಲ್ಲಾ ವಿಗ್ರಹವನ್ನು ಮೊದಲೇ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಗಿತ್ತು. ಈ ಇಡೀ ಘಟನೆಯಲ್ಲಿ ಪ್ರತಿಯೊಬ್ಬ ಕಾರಸೇವಕನೂ ಪ್ರಭು ಶ್ರೀರಾಮನ ಅನುಭೂತಿಯನ್ನು ಪಡೆಯುತ್ತಿದ್ದನು. ಎಲ್ಲಾ ಮೂರು ಗುಮ್ಮಟಗಳು ನೇರವಾಗಿ ಕೆಳಗೆ ಬರುತ್ತಿದ್ದವು. ಒಂದೆಡೆ ಬಿದ್ದಿದ್ದರೆ ಹಲವು ಕಾರಸೇವಕರಿಗೆ ಗಾಯಗಳಾಗುವ ಆತಂಕವಿತ್ತು. ಇದು ಪವಾಡವೇ ಆಗಿತ್ತು. ಕತ್ತಲಾಗುತ್ತಿದ್ದಂತೆ ನಾವು
ನಮ್ಮ ನಮ್ಮ ಟೆಂಟ್‌ಗಳಿಗೆ ಹೋಗಿ ಊಟ ಮಾಡಿದೆವು. ಅನಂತರ ಶ್ರೀರಾಮನ ವಿಗ್ರಹಕ್ಕೆ ತಾತ್ಕಾಲಿಕ ಮಂದಿರ ನಿರ್ಮಿಸಬೇಕು ಎಂಬ ಸಂದೇಶ ಬಂತು. ಒಬ್ಬರಿಗೊಬ್ಬರು ಇಟ್ಟಿಗೆಗಳನ್ನು ಕೊಟ್ಟು ದೇವಾಲಯವನ್ನು ನಿರ್ಮಿಸಿ ಅದರಲ್ಲಿ ರಾಮಲಾಲ್ಲಾನನ್ನು ಪ್ರತಿಷ್ಠಾಪಿಸಲಾಯಿತು. ಅಷ್ಟರೊಳಗೆ ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಿ.ಬಿ.ಸಿ. ಸುದ್ದಿವಾಹಿನಿಯು ಅದನ್ನು ಉಪಗ್ರಹ ಛಾಯಾಚಿತ್ರಗಳ ಮಾಧ್ಯಮದಿಂದ ಬಿತ್ತರಿಸಿತು. ಡಿಸೆಂಬರ್ ೭ ರಂದು ನಮಗೆ ಸಾಧ್ಯವಾದಷ್ಟು ಬೇಗ ನಗರವನ್ನು ತೊರೆಯುವಂತೆ ಆದೇಶಿಸಲಾಯಿತು.
– ಅನಿರ್ಬಾನ್ ನಿಯೋಗಿ, ಸಂಸ್ಥಾಪಕ ಅಧ್ಯಕ್ಷರು, ಭಾರತೀಯ ಸಾಧಕ ಸಮಾಜ, ಬಂಗಾಳ.