ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪಕ್ಕೆ ಪ್ರಭು ಶ್ರೀರಾಮನ ಆಶೀರ್ವಾದವನ್ನು ಪಡೆಯಲು, ಸನಾತನದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ೨೦೧೯ ನೇ ಇಸ್ವಿಯಲ್ಲಿ ಅಯೋಧ್ಯೆಯ ರಾಮಲಲ್ಲಾನ ದರ್ಶನವನ್ನು ಪಡೆದಿದ್ದರು.
ಎಲ್ಲ ರಾಜ್ಯವ್ಯವಸ್ಥೆಗಳಲ್ಲಿ ‘ರಾಮರಾಜ್ಯ’ವು ಆದರ್ಶ ರಾಜ್ಯ ವ್ಯವಸ್ಥೆಯಾಗಿದೆ. ಆದರ್ಶ ರಾಜ್ಯವ್ಯವಸ್ಥೆಯಿರುವ ಮಹಾನ ಸಾಮ್ರಾಜ್ಯದ ಪ್ರತೀಕ ಮತ್ತು ಹಿಂದೂಗಳ ಆರಾಧ್ಯದೇವತೆಯ ಅವತಾರದ ಜನ್ಮಭೂಮಿಯಾಗಿರುವ ಅಯೋಧ್ಯಾ ನಗರವು ಅಂತರ್ಬಾಹ್ಯ ಹಿಂದೂ ರಾಷ್ಟ್ರ ಸ್ಥಾಪನೆಯ ದೀಪಸ್ತಂಭ ವಾಗಿದೆ. ಈ ಅಯೋಧ್ಯಾನಗರದ ದರ್ಶನವು ಹಿಂದೂ ರಾಷ್ಟ್ರ ಸ್ಥಾಪನೆಯ ನಾಂದಿಯೇ ಆಗಿದೆ.
ಅಯೋಧ್ಯೆಯ ಭೂಮಿಯು ರಾಮಲಲ್ಲಾನ ಭವ್ಯ ದೇವಸ್ಥಾನವನ್ನು ನೋಡಲು ಆತುರಗೊಂಡಿತ್ತು, ಅನೇಕ ಶಿಲೆ, ಇಟ್ಟಿಗೆ, ಸುಂದರ ಕೆತ್ತನೆ ಕೆಲಸ ಮಾಡಿದ ಕಂಬಗಳು ಇಂತಹ ಸಾಹಿತ್ಯಗಳು ರಾಮಮಂದಿರದ ನಿರ್ಮಿತಿಯ ಕಾರ್ಯದಲ್ಲಿ ಸಮರ್ಪಿತಗೊಳ್ಳಲು ಉತ್ಸುಕಗೊಂಡಿದ್ದವು. ಇಂದು ಅದು ಸಾರ್ಥಕವಾಗಿದೆ. ಅಯೋಧ್ಯೆಯ ಕಾರಸೇವಕಪುರಮ್ ಎಂದರೆ ಶ್ರೀರಾಮಮಂದಿರದ ನಿರ್ಮಾಣ ಕಾರ್ಯದ ಕಾರ್ಖಾನೆಯಾಗಿದೆ. ಅಲ್ಲಿ ಅನೇಕಾನೇಕ ವರ್ಷಗಳಿಂದ ರಾಮರಾಯನ ಆಗಮನದ ದಾರಿಯನ್ನು ಕಾಯುತ್ತಿದ್ದ ಶಿಲೆಗಳಿಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಈ ಅತ್ಯಂತ ಪ್ರೀತಿಯ ಸ್ಪರ್ಶವು, ಅನೇಕ ವರ್ಷಗಳಿಂದ ಭೂಮಿಯನ್ನು ಮುಕ್ತ ಮಾಡಲು ಹೋರಾಡಿದ ರಾಮಭಕ್ತರು, ‘ರಾಮಮಂದಿರ ಖಂಡಿತ ನಿರ್ಮಾಣವಾಗಲಿದೆ’, ಎಂಬ ಶ್ರದ್ಧೆಯಿಂದ ಶಿಲೆಗಳನ್ನು ರೂಪಿಸುವ ಎಲ್ಲರಿಗೆ ಮಾಡಿದ ಅಭಿವಾದನೆ ಆಗಿದೆ !