ಅಯೋಧ್ಯೆಯಂತೆ ಸಂಪೂರ್ಣ ಭಾರತಕ್ಕೆ ರಾಮರಾಜ್ಯದಂತೆ ಗತವೈಭವ ಸಿಗುವಂತೆ ಮಾಡಬೇಕು !
ಶ್ರೀರಾಮಲಲ್ಲಾನ ಭವ್ಯ ದೇವಸ್ಥಾನದಿಂದಾಗಿ ಅಯೋಧ್ಯೆಗೆ ಗತವೈಭವ ಪ್ರಾಪ್ತವಾಗಿದೆ. ಈಗ ನಾವು ಭಾರತದ ಗತವೈಭವ ವನ್ನು ವಾಪಾಸು ಪಡೆಯಲು ಪ್ರಯತ್ನಿಸಬೇಕಾಗಿದೆ. ಈಗಲೂ ರಾಮರಾಜ್ಯವನ್ನು ಆದರ್ಶ ರಾಜ್ಯವೆಂದು ನೋಡಲಾಗುತ್ತದೆ. ಪ್ರಭು ಶ್ರೀರಾಮನ ಕಾಲದಲ್ಲಿ ಪ್ರಜೆಗಳೆಲ್ಲರೂ ಪೂರ್ಣ ಧರ್ಮಪಾಲಕರು ಮತ್ತು ರಾಮಭಕ್ತರಾಗಿದ್ದರು; ಆದ್ದರಿಂದ ಅವರಿಗೆ ಶ್ರೀರಾಮನಂತೆ ಧರ್ಮಪಾಲಕ ರಾಜ ಹಾಗೂ ರಾಮರಾಜ್ಯ ಸಿಕ್ಕಿತು. ಭಾರತಕ್ಕೂ ಪುನಃ ರಾಮರಾಜ್ಯದಂತೆ ಗತವೈಭವ ಸಿಗಲು ಹಿಂದೂ ಸಮಾಜಕ್ಕೆ ಧರ್ಮಪಾಲನೆ ಮತ್ತು ರಾಮಭಕ್ತಿ ಮಾಡಿ ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸಬೇಕಾಗಬಹುದು.’
– ಶ್ರೀಸತ್‌ಶಕ್ತಿ ಸೌ. ಬಿಂದಾ ನೀಲೇಶ ಸಿಂಗಬಾಳ (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಉತ್ತರಾಧಿಕಾರಿಗಳಲ್ಲಿ ಒಬ್ಬರು)
ಶ್ರೀರಾಮಮಂದಿರದ ನಂತರ ಎಲ್ಲೆಡೆಗೂ ರಾಮರಾಜ್ಯ ಸ್ಥಾಪಿಸುವುದೇ ನಮ್ಮ ಧ್ಯೇಯವಾಗಿರಲಿದೆ !
‘ಕಳೆದ ೫೦೦ ವರ್ಷಗಳಿಂದ ರಾಮಭಕ್ತರನ್ನು ಅವರ ದೇವರಿಂದ ದೂರ ಇಟ್ಟಿದ್ದ ಇಸ್ಲಾಮೀ ಆಕ್ರಮಣಕಾರರು ಕೊನೆಗೂ ಸೋಲುಂಡರು. ಭಕ್ತಿ, ಜ್ಞಾನ ಮತ್ತು ಕರ್ಮ ಹೀಗೆ ಮೂರು ಹಂತಗಳಲ್ಲಿ ಅಂದರೆ ಎಲ್ಲಾ ರೀತಿಯಲ್ಲೂ ಹಿಂದೂಗಳು ಜಯಶಾಲಿಯಾದರು. ಈ ಸುದೀರ್ಘ ಸಂಘರ್ಷದ ಅವಧಿಯಿಂದ ಹೋರಾಡಿದ ಹಿಂದೂ ಜನಸಮುದಾಯವು ಶ್ರೀರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ಈ ದಿವ್ಯ ಕ್ಷಣದಲ್ಲಿ ಹಿಂದೂ ಧರ್ಮದ ರಕ್ಷಣೆಗಾಗಿ ನಿರಂತರ ಕಾರ್ಯ ಮಾಡುವುದಾಗಿ ನಮ್ಮ ಆರಾಧ್ಯ ಪ್ರಭು ಶ್ರೀರಾಮನಲ್ಲಿ ಪ್ರತಿಜ್ಞೆ ಮಾಡಬೇಕು. ಶ್ರೀರಾಮಮಂದಿರದ ನಂತರ ಎಲ್ಲೆಡೆ ರಾಮರಾಜ್ಯವನ್ನು ಸ್ಥಾಪಿಸುವುದೇ ನಮ್ಮ ಧ್ಯೇಯವಾಗಿರಲಿದೆ !’
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಉತ್ತರಾಧಿಕಾರಿಗಳಲ್ಲಿ ಒಬ್ಬರು)