ನ್ಯೂಯಾರ್ಕ್ (ಅಮೇರಿಕಾ) – ಲಷ್ಕರ್-ಎ-ತೋಯ್ಬಾ ದ ಮುಖ್ಯಸ್ಥ ಹಾಫಿಜ್ ಸಯಿದ್ ಪಾಕಿಸ್ತಾನದ ಜೈಲಿನಲ್ಲಿ ೭೮ ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದಾನೆ, ಎಂದು ವಿಶ್ವಸಂಸ್ಥೆಯ ನಿಷೇಧಿತ ಸಮಿತಿಯಿಂದ ನೀಡಲಾಗಿದೆ. ಹಾಫಿಜ್ ಸಯಿದ್ ಫೆಬ್ರುವರಿ ೧೨, ೨೦೨೦ ರಿಂದ ಜೈಲಿನಲ್ಲಿದ್ದಾನೆ. ಒಟ್ಟು ೭ ಭಯೋತ್ಪಾದಕ ಚಟುವಟಿಕೆಯ ಪ್ರಕರಣದಲ್ಲಿ ಅವನು ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ, ಎಂದು ವಿಶ್ವ ಸಂಸ್ಥೆಯಿಂದ ನೀಡಲಾಗಿದೆ. ಭಾರತ ಸರಕಾರ ಹಾಫಿಜ್ ಸಯಿದ್ ನನ್ನು ಭಾರತಕ್ಕೆ ಒಪ್ಪಿಸಲು ಬೇಡಿಕೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ವಿಶ್ವ ಸಂಸ್ಥೆಯಿಂದ ಈ ಮಾಹಿತಿ ಪ್ರಸಾರ ಮಾಡಲಾಗಿದೆ. ಪಾಕಿಸ್ತಾನದ ವಿಶೇಷ ಉಗ್ರ ನಿಗ್ರಹ ವಿರೋಧಿ ನ್ಯಾಯಾಲಯದಿಂದ ಸಯೀದ್ ಇವನಿಗೆ ಶಿಕ್ಷೆ ವಿಧಿಸಿತ್ತು.
(ಸೌಜನ್ಯ – oneindia news)