೧. ಕೆಟ್ಟ ಶಕ್ತಿಗಳ ತೊಂದರೆ ಕಡಿಮೆಯಾದ ನಂತರ ಭಾವನೆ ನಾಶವಾಗಿ ಭಾವದ ಅನುಭೂತಿ ಬರುತ್ತದೆ !
ಸೌ. ವೈಷ್ಣವಿ ಪಿಸೋಳಕರ : ಕೆಲವೊಮ್ಮೆ ನನ್ನ ಮನಸ್ಥಿತಿ ಹೇಗಿರುತ್ತದೆ ಎಂದರೆ, ಭಾವನೆಯು ಹೋಗಿದೆ; ಆದರೆ ಆ ಸಮಯದಲ್ಲಿ ಆವಶ್ಯಕವಿರುವಂತಹ ಭಾವದ ಸ್ಥಿತಿಗೆ ನಾನಿನ್ನೂ ತಲುಪಿಲ್ಲ.
ಪರಾತ್ಪರ ಗುರು ಡಾ. ಆಠವಲೆ : ಸಮಯ ಬರಬೇಕಾಗುತ್ತದೆಯಲ್ಲ ! ಭಾವನೆಯು ಮಾನಸಿಕ ಸ್ತರದ್ದಾಗಿರುತ್ತದೆ. ಭಾವವು ಆಧ್ಯಾತ್ಮಿಕ ಸ್ತರದ್ದಾಗಿರುತ್ತದೆ. ಕೆಟ್ಟ ಶಕ್ತಿಗಳ ಎಲ್ಲ ತೊಂದರೆಗಳು ಕಡಿಮೆಯಾದ ನಂತರ ಅಥವಾ ದೂರವಾದ ನಂತರ, ಭಾವದ ಸ್ಥಿತಿಯ ಅನುಭೂತಿ ಬರುತ್ತದೆ. ಈಗ ಆ ವಿಚಾರವನ್ನು ಮಾಡಬಾರದು.
೨. ಓಡಾಟದ ಸೇವೆಗಿಂತ ಕುಳಿತುಕೊಂಡು ಸೇವೆ ಮಾಡುವಾಗ ಭಾವವನ್ನಿಟ್ಟುಕೊಳ್ಳಲು ಸುಲಭ; ಆದರೆ ನಿಧಾನವಾಗಿ ಓಡಾಟದ ಸೇವೆಯಲ್ಲಿಯೂ ಭಾವವನ್ನಿಟ್ಟುಕೊಳ್ಳಲು ಸಾಧ್ಯವಾಗಬಹುದು !
ಓರ್ವ ಸಾಧಕಿ : ಗುರುದೇವರೇ, ಮೊದಲು ನಾನು ಅಡುಗೆಮನೆಯಲ್ಲಿ ಸೇವೆಯನ್ನು ಮಾಡುತ್ತಿದ್ದೆ. ಆಗ ನಾನು ಒಂದು ಸ್ಥಳದಲ್ಲಿ ಕುಳಿತು ಸೇವೆಯನ್ನು ಮಾಡುತ್ತಿದ್ದೆ. ಆ ಸಮಯದಲ್ಲಿ ನನಗೆ ಭಾವವನ್ನಿಟ್ಟುಕೊಂಡು ಸೇವೆಯನ್ನು ಮಾಡಲು ಸಾಧ್ಯವಾಗುತ್ತಿತ್ತು; ಆದರೆ ಈಗ ನನಗೆ ಓಡಾಟದ ಸೇವೆ ಇರುತ್ತದೆ. ಆದುದರಿಂದ ನನಗೆ ಭಾವವನ್ನು ಇಡಲು ಸಾಧ್ಯವಾಗುತ್ತಿಲ್ಲ. ಸೇವೆಯು ಪೂರ್ಣಗೊಂಡ ನಂತರ ಅದು ನನ್ನ ಗಮನಕ್ಕೆ ಬರುತ್ತದೆ ಮತ್ತು ‘ಈ ಸೇವೆಯಲ್ಲಿ ಭಾವವಿಡಲು ಸಾಧ್ಯವಾಗಲಿಲ್ಲ’, ಎಂದು ನನಗೆ ಕೆಟ್ಟದೆನಿಸುತ್ತದೆ.
ಪರಾತ್ಪರ ಗುರು ಡಾ. ಆಠವಲೆ : ಕುಳಿತುಕೊಂಡು ಸೇವೆ ಯನ್ನು ಮಾಡುವಾಗ ಭಾವವನ್ನು ಇಟ್ಟುಕೊಳ್ಳಲು ಸುಲಭ
ವಾಗುತ್ತದೆ. ನಡೆಯುವಾಗ-ತಿರುಗಾಡುವಾಗ, ಎರಡನೇ ಅಥವಾ ಮೂರನೇ ಮಹಡಿಗೆ ಹೋಗುವಾಗ, ನಮ್ಮ ಗಮನ ಅಲ್ಲಿಯೇ ಇರುತ್ತದೆ. ಕ್ರಮೇಣ ಅದೂ ಸಾಧ್ಯವಾಗಬಹುದು.
೩. ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ತಲುಪುವಷ್ಟು ಸಾಧನೆ ಇಲ್ಲದಿರುವಾಗಲೂ ಅವರು ತಮ್ಮವರನ್ನಾಗಿ ಮಾಡಿಕೊಂಡ ಬಗ್ಗೆ ಸಾಧಕನಿಗೆ ಕೃತಜ್ಞತೆ ಅನಿಸುವುದು
ಶ್ರೀ. ರಾಜೇಶ ದೋಂತುಲ : ಗುರುದೇವರೇ, ‘ಭಾರತದಾದ್ಯಂತ ಇರುವ ಸನಾತನದ ಸಾಧಕರೆಲ್ಲರೂ ಬಹಳ ಭಾಗ್ಯ ವಂತರಾಗಿದ್ದಾರೆ. ವಿಷ್ಣುಲೋಕದ ‘ಜಯ’ ಮತ್ತು ‘ವಿಜಯ’ ಇವರಿಗೆ, ಅವರು ‘ದ್ವಾರಪಾಲಕ’ರಾದುದರಿಂದ ಶ್ರೀವಿಷ್ಣುವಿನ ದ್ವಾರದ ಬಳಿಯೇ ನಿಲ್ಲಬೇಕಾಗುತ್ತಿತ್ತು. ಅವರಷ್ಟು ಸಾಧನೆ ನಮ್ಮಲ್ಲಿ ಯಾರದ್ದೂ ಇಲ್ಲ ಮತ್ತು ಅಷ್ಟು ಸಾಧನೆಯನ್ನು ಮಾಡಲೂ ನಮ್ಮಿಂದ ಸಾಧ್ಯವಿಲ್ಲ, ಆದರೂ ‘ನೀವು ತಾವಾಗಿ ನಮ್ಮನ್ನು ನಿಮ್ಮ ಚರಣಗಳಲ್ಲಿ ಇಟ್ಟುಕೊಂಡಿರುವಿರಿ’, ಈ ವಿಚಾರದಿಂದ ನನಗೆ ಬಹಳ ಕೃತಜ್ಞತೆ ಅನಿಸುತ್ತದೆ.
ಪರಾತ್ಪರ ಗುರು ಡಾ. ಆಠವಲೆ (ಸಾಧಕರನ್ನು ಉದ್ದೇಶಿಸಿ) : ಇತರ ಸಾಧಕರಲ್ಲಿ ಅಹಂಭಾವವಿರುತ್ತದೆ. ‘ಆದರ್ಶ ಸಾಧಕ’ ಹೇಗಿರುತ್ತಾನೆ, (ಶ್ರೀ. ರಾಜೇಶ ದೋಂತುಲ ಇವರನ್ನು ಉದ್ದೇಶಿಸಿ) ಹೀಗೆ ! ಅವರಲ್ಲಿ ನಮ್ರತೆ ಇರುತ್ತದೆ ಮತ್ತು ಅಹಂ ಇರುವುದಿಲ್ಲ. ತುಂಬಾ ಚೆನ್ನಾಗಿದೆ !
೪. ನಾಮಜಪ ಮತ್ತು ಇತರ ಉಪಾಯಗಳನ್ನು ಮಾಡುವಾಗ ಯಾರ ಬಗ್ಗೆ ಮನಸ್ಸಿನಲ್ಲಿ ದೃಢ ಶ್ರದ್ಧೆ ಮತ್ತು ಭಾವವಿದೆಯೋ, ಅವರ ಸ್ಮರಣೆಯನ್ನು ಮಾಡಿದಾಗ ಕೆಟ್ಟ ಶಕ್ತಿಗಳು ಓಡಿ ಹೋಗುತ್ತವೆ !
ಶ್ರೀ. ರಾಜೇಶ ದೋಂತುಲ : ಮೊನ್ನೆ ನನಗೆ ಬಹಳ ನಿರಾಶೆ ಬಂದಿತ್ತು ಮತ್ತು ನನಗೆ ‘ಮಲಗಿಕೊಂಡಿರಬೇಕು, ಸೇವೆ ಯನ್ನು ಮಾಡಬಾರದು’, ಎಂಬ ವಿಚಾರ ಮನಸ್ಸಿನಲ್ಲಿ ಬರುತ್ತಿತ್ತು. ಆಗ, ‘ಬೇರೆ ಯಾರೋ ನನ್ನ ಮನ್ಸಸಿನಲ್ಲಿ ವಿಚಾರವನ್ನು ಹಾಕುತ್ತಿದ್ದಾರೆ’, ಎಂದು ನನ್ನ ಗಮನಕ್ಕೆ ಬಂದಿತು. ನಾನು ೧-೨ ಗಂಟೆ ಮಲಗಿದೆ. ನಂತರ ಎದ್ದು ಸದ್ಗುರು ಕಾಕಾರವರ (ಸದ್ಗುರು ಡಾ. ಮುಕುಲ ಗಾಡಗೀಳ ಇವರ) ಬಳಿಗೆ ಹೋದೆನು. ಆಗ ಸದ್ಗುರು ಕಾಕಾ ಇವರು ನನಗೆ, ”ಈಗ ನೀವು ಸಮಷ್ಟಿ ಕಾರ್ಯವನ್ನು ಮಾಡುತ್ತಿರುವಿರಲ್ಲವೇ ! ನೀವು ಸಾಧನೆಯಲ್ಲಿ ಮುಂದೆ ಹೋಗುತ್ತಿರುವಿರಿ. ಆದುದರಿಂದ ಕೆಟ್ಟ ಶಕ್ತಿಗಳು ನಿಮ್ಮನ್ನು ಹಿಂದೆ ಸೆಳೆಯಲು ಪ್ರಯತ್ನಿಸುತ್ತವೆ !” ಎಂದು ಹೇಳಿದರು. ಅವರು ನನಗೆ ಅದಕ್ಕೆ ನಾಮಜಪಾದಿ ಉಪಾಯವನ್ನು ಹೇಳಿದರು. ‘ಕೆಟ್ಟ ಶಕ್ತಿಗಳು ನನ್ನ ಬಳಿಗೆ ಬಂದಾಗ, ಅವು ಗಳಿಗೆ ನೀವೇ(ಗುರುದೇವರು) ಕಾಣಿಸುತ್ತೀರಿ ನಿಮ್ಮನ್ನು (ಗುರುದೇವರು) ನೋಡಿ ಅವು ದೂರದಿಂದಲೇ ಓಡಿ ಹೋಗುತ್ತವೆ. ಅವು ನನ್ನ ಬಳಿ ಬರುವುದೇ ಇಲ್ಲ’, ಎಂದು ನನಗೆ ಅನಿಸುತ್ತದೆ. ನಾನು ನಾಮಜಪ ಮುಂತಾದ ಉಪಾಯಗಳನ್ನು ಮಾಡಿದರೂ ಅಥವಾ ಮಾಡದಿದ್ದರೂ, ಈಗ ನನಗೆ ಒಳ್ಳೆಯದೆನಿಸುತ್ತದೆ. ಆದುದರಿಂದ ‘ಸಮಷ್ಟಿ ಸಾಧನೆಯಲ್ಲಿ ದೊರಕುವ ಆನಂದವೇ ನನ್ನದೆಲ್ಲವೂ ಆಗಿದೆ’, ಎಂಬ ವಿಚಾರ ನನ್ನ ಮನಸ್ಸಿನಲ್ಲಿ ಬರುತ್ತದೆ. ಪರಾತ್ಪರ ಗುರು ಡಾ. ಆಠವಲೆ : ನೀವು ನಾಮಜಪ ಮುಂತಾದ ಉಪಾಯಗಳನ್ನು ಮಾಡುವ ಸಮಯದಲ್ಲಿ, ನಿಮ್ಮ ಮನಸ್ಸಿನಲ್ಲಿ ಯಾರ ಬಗ್ಗೆ ಶ್ರದ್ಧೆ ಮತ್ತು ಭಾವವಿದೆಯೋ, ಅವರ ವಿಚಾರವೇ ಮನಸ್ಸಿನಲ್ಲಿ ಬಂದರೆ, ಕೆಟ್ಟ ಶಕ್ತಿಗಳು ದೂರ ಓಡಿ ಹೋಗುತ್ತವೆ.’