ಸನಾತನದ ಆಶ್ರಮದಲ್ಲಿ ಪ್ರತಿಷ್ಠಾಪಿಸಿದ ‘ಶ್ರೀರಾಮ ಸಾಲಿಗ್ರಾಮ’ದಲ್ಲಿ ಹೇರಳ ಚೈತನ್ಯ ಇರುವುದು

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಯು.ಎ.ಎಸ್. (ಯುನಿವರ್ಸಲ್‌ ಔರಾ ಸ್ಕ್ಯಾನರ್) ಉಪಕರಣದಿಂದ ಮಾಡಿದ ವೈಜ್ಞಾನಿಕ ಪರಿಶೀಲನೆ

ಸೌ. ಮಧುರಾ ಧನಂಜಯ ಕರ್ವೆ

ಜನವರಿ ೨೨ ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಉದ್ಘಾಟನೆ ನಡೆಯಲಿದೆ. ಆ ಪ್ರಯುಕ್ತ ಸಪ್ತರ್ಷಿಗಳ ಆಜ್ಞೆಗನುಸಾರ ಗೋವಾದ ರಾಮನಾಥಿಯ ಸನಾತನ ಆಶ್ರಮದಲ್ಲಿ ಶ್ರೀರಾಮ ಸಾಲಿಗ್ರಾಮದ (ಟಿಪ್ಪಣಿ) ಪ್ರತಿಷ್ಠಾಪನೆಯನ್ನು ಚೈತನ್ಯಮಯ ವಾತಾವರಣದಲ್ಲಿ ಮಾಡಲಾಯಿತು. ೧೪ ಮತ್ತು ೧೫ ಜುಲೈ ೨೦೨೨ ಈ ಎರಡು ದಿನ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಜನ್ಮನಕ್ಷತ್ರ ಉತ್ತರಾಷಾಢ ಇರುವಾಗ ಸಂಕಲ್ಪ, ಗಣಪತಿಪೂಜೆ, ಪುಣ್ಯಾಹವಾಚನ, ಪೀಠಸ್ಥಾಪನೆ, ಬ್ರಹ್ಮಾದಿಮಂಡಲ ದೇವತೆಗಳ ಆವಾಹನೆ ಮತ್ತು ಪೂಜೆಯನ್ನು ಮಾಡಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ವಂದನೀಯ ಉಪಸ್ಥಿತಿಯಲ್ಲಿ ಶ್ರೀರಾಮ ಸಾಲಿಗ್ರಾಮವನ್ನು ಪ್ರತಿಷ್ಠಾಪಿಸಲಾಯಿತು. ಸಪ್ತರ್ಷಿಗಳ ಆಜ್ಞೆಯಂತೆ ಪ್ರತಿಷ್ಠಾಪನೆಯ ನಂತರ ಶ್ರೀರಾಮ ಸಾಲಿಗ್ರಾಮದ ಮೇಲೆ ಗುಲಾಬಿ ಜಲ ಮತ್ತು ಹಾಲಿನ ಅಭಿಷೇಕ ಮಾಡಲಾಯಿತು. ಪ್ರಭು ಶ್ರೀರಾಮರಿಗಾಗಿ ಹವನವನ್ನೂ ಮಾಡಲಾಯಿತು. ಜುಲೈ ೧೫ ರಂದು ಪೂರ್ಣಾಹುತಿಯೊಂದಿಗೆ ಈ ವಿಧಿಯನ್ನು ಸಂಪನ್ನಗೊಳಿಸಲಾಯಿತು. ಈ ಸಮಯದಲ್ಲಿ ಯು.ಎ.ಎಸ್. ಉಪಕರಣದಿಂದ ಸಂಶೋಧನೆಯನ್ನೂ ಮಾಡಲಾಯಿತು. ಅದನ್ನು ಮುಂದೆ ಕೊಡಲಾಗಿದೆ.

ಯು.ಎ.ಎಸ್. ಉಪಕರಣ ದಿಂದ ಪರೀಕ್ಷಿಸುತ್ತಿರುವ ಶ್ರೀ. ಆಶೀಷ ಸಾವಂತ
ಟಿಪ್ಪಣಿ – ಶ್ರೀರಾಮ ಸಾಲಿಗ್ರಾಮ : ನೇಪಾಳದಲ್ಲಿ ಹಿಮಾಲಯದ ಉತ್ತರದಲ್ಲಿ ಅನ್ನಪೂರ್ಣಾ ಪರ್ವತಗಳ ಶ್ರೇಣಿಯಿದೆ. ಈ ಅನ್ನಪೂರ್ಣಾ ಪರ್ವತಗಳ ಶ್ರೇಣಿ ಯಲ್ಲಿ ದಾಮೋದರ ಕುಂಡ ಎಂಬ ಹೆಸರಿನ ಸಿಹಿನೀರಿನ ಸರೋವರವಿದೆ. ಈ ದಾಮೋದರ ಕುಂಡ ಸರೋವರವೇ ಶ್ರೀರಾಮ ಸಾಲಿಗ್ರಾಮದ ಉತ್ಪತ್ತಿ ಸ್ಥಾನವಾಗಿದೆ. ೧೦.೪.೨೦೨೨ ರ ಶ್ರೀರಾಮನವಮಿಯ ದಿನ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರಿಗೆ ಶ್ರೀರಾಮ ಸಾಲಿಗ್ರಾಮ ಸಿಕ್ಕಿತು.

೧. ಪರಿಶೀಲನೆಯಲ್ಲಿನ ನಿರೀಕ್ಷಣೆಗಳ ವಿವೇಚನೆ : ಅಡಿಯಲ್ಲಿನ ಕಟ್ಟೆ ಮತ್ತು ಪೀಠಕ್ಕೆ ಬಣ್ಣವನ್ನು ಹಚ್ಚುವ ಮೊದಲು, ಬಣ್ಣವನ್ನು ಹಚ್ಚಿದ ನಂತರ ಮತ್ತು ಅವುಗಳ ಪೂಜೆಯನ್ನು ಮಾಡಿದ ನಂತರ ಹೀಗೆ ಒಟ್ಟು ೩ ಹಂತಗಳಲ್ಲಿ ಅವುಗಳ ಛಾಯಾಚಿತ್ರಗಳನ್ನು ತೆಗೆದು ಯು.ಎ.ಎಸ್. ಉಪಕರಣದಿಂದ ಅವುಗಳ ಪರಿಶೀಲನೆಯನ್ನು ಮಾಡಲಾಯಿತು. ಶ್ರೀರಾಮ ಸಾಲಿಗ್ರಾಮದ ಪ್ರತಿಷ್ಠಾಪನೆ ಮಾಡುವ ಮೊದಲು, ಪ್ರತಿಷ್ಠಾಪನೆ ಮಾಡಿದ ನಂತರ ಮತ್ತು ಅಭಿಷೇಕ ಮಾಡಿದ ನಂತರ ಹೀಗೆ ೩ ಹಂತಗಳಲ್ಲಿ ಛಾಯಾಚಿತ್ರಗಳನ್ನು ತೆಗೆದು ಅವುಗಳನ್ನು ಪರಿಶೀಲನೆ ಮಾಡಲಾಯಿತು.

೧ ಅ. ಪೂಜೆಯ ನಂತರ ಅಡಿಯಲ್ಲಿನ ಕಟ್ಟೆ ಮತ್ತು ಪೀಠದ ಸಕಾರಾತ್ಮಕ ಊರ್ಜೆ ಹೆಚ್ಚಾಗುವುದು; ಶ್ರೀರಾಮ ಸಾಲಿಗ್ರಾಮವನ್ನು ಪ್ರತಿಷ್ಠಾಪಿಸುವ ಮೊದಲೇ ಅದರಲ್ಲಿ ಹೇರಳ ಪ್ರಮಾಣದಲ್ಲಿ ಊರ್ಜೆ (ಚೈತನ್ಯ) ಇತ್ತು : ಪರಿಶೀಲನೆ ಯಲ್ಲಿನ ಛಾಯಾಚಿತ್ರಗಳಲ್ಲಿ ನಕಾರಾತ್ಮಕ ಊರ್ಜೆ ಸ್ವಲ್ಪವೂ ಕಂಡುಬರಲಿಲ್ಲ. ಅವುಗಳಲ್ಲಿ ಹೇರಳ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇತ್ತು. ಬಣ್ಣವನ್ನು ಹಚ್ಚಿದ ನಂತರ ಮತ್ತು ಪೂಜೆಯ ನಂತರ ಅಡಿಯಲ್ಲಿನ ಕಟ್ಟೆ ಮತ್ತು ಪೀಠದಲ್ಲಿನ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು. ಶ್ರೀರಾಮ ಸಾಲಿಗ್ರಾಮದಲ್ಲಿ ಪೂಜೆಯ ಮೊದಲೇ ಹೇರಳ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇತ್ತು. ಪ್ರತಿಷ್ಠಾಪನೆ ಮತ್ತು ಅಭಿಷೇಕ ಮಾಡಿದ ನಂತರವೂ ಶ್ರೀರಾಮ ಸಾಲಿಗ್ರಾಮದಲ್ಲಿ ಹೇರಳ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇತ್ತು; ಆದರೆ ಜಾಗ ಕಡಿಮೆ ಇದ್ದುದರಿಂದ ಅದರ ಸಂಪೂರ್ಣ ಪ್ರಭಾವಲಯವನ್ನು ಅಳೆಯಲು ಸಾಧ್ಯವಾಗಲಿಲ್ಲ, ಎಂಬುದು ಕೆಳಗೆ ನೀಡಿರುವ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

ಟಿಪ್ಪಣಿ – ಈ ಛಾಯಾಚಿತ್ರಗಳಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯಗಳನ್ನು ೨೩೩೭ ಮೀಟರ್‌ಗಳ ವರೆಗೆ ಮಾತ್ರ ಅಳೆಯಲು ಸಾಧ್ಯವಾಯಿತು; ಏಕೆಂದರೆ ಅಳೆಯಲು ಮುಂದೆ ಹೋಗಲು ಜಾಗ ಇರಲಿಲ್ಲ.

೨. ಪರಿಶೀಲನೆಯಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ಅಡಿಯಲ್ಲಿನ ಕಟ್ಟೆ ಮತ್ತು ಪೀಠಕ್ಕೆ ಬಣ್ಣ ಹಚ್ಚಿದ ನಂತರ, ಹಾಗೆಯೇ ಅವುಗಳ ಪೂಜೆಯನ್ನು ಮಾಡಿದ ನಂತರ ಅವುಗಳಲ್ಲಿನ ಸಕಾರಾತ್ಮಕ ಊರ್ಜೆ (ಚೈತನ್ಯ) ಹೆಚ್ಚಾಗುವುದು : ಶ್ರೀರಾಮ ಸಾಲಿಗ್ರಾಮವನ್ನು ಸ್ಥಾಪಿಸಲು ತಯಾರಿಸಿದ ಅಡಿಯಲ್ಲಿನ ಕಟ್ಟೆ ಮತ್ತು ಪೀಠಕ್ಕೆ ಬಣ್ಣವನ್ನು ಹಚ್ಚಿದ ನಂತರ, ಹಾಗೆಯೇ ಅವುಗಳ ಪೂಜೆಯನ್ನು ಮಾಡಿದ ನಂತರ ಅವುಗಳಲ್ಲಿನ ಚೈತನ್ಯ ಹೆಚ್ಚಾಯಿತು. ಇದು ಬಣ್ಣವನ್ನು ಹಚ್ಚುವ ಸಾಧಕ ಮತ್ತು ಪೂಜೆಯನ್ನು ಮಾಡುವ ಪುರೋಹಿತರು ಈ ಕೃತಿಯನ್ನು ಸೇವಾಭಾವದಿಂದ ಮತ್ತು ಭಾವಪೂರ್ಣವಾಗಿ ಮಾಡಿರುವುದರ ಪರಿಣಾಮವಾಗಿದೆ.

೨ ಆ. ಶ್ರೀರಾಮ ಸಾಲಿಗ್ರಾಮದಲ್ಲಿ ಹೇರಳ ಪ್ರಮಾಣದಲ್ಲಿ ಚೈತನ್ಯವಿದೆ : ಶ್ರೀವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪಾವನ ವಾಸ್ತವ್ಯದಿಂದ ರಾಮನಾಥಿಯಲ್ಲಿನ ಸನಾತನದ ಆಶ್ರಮವು ಭೂವೈಕುಂಠವೇ ಆಗಿದೆ. ಈ ಆಶ್ರಮಕ್ಕೆ ವಿವಿಧ ದೇವತೆಗಳ ಆಶೀರ್ವಾದ ಪ್ರಾಪ್ತವಾಗಿದೆ. ಸನಾತನದ ಆಶ್ರಮದಲ್ಲಿ ಶ್ರೀರಾಮ ಸಾಲಿಗ್ರಾಮದ ರೂಪದಲ್ಲಿ ಸಾಕ್ಷಾತ್‌ ಶ್ರೀ ಮಹಾವಿಷ್ಣುವಿನ ಆಗಮನವಾಗಿದೆ. ಸಾಲಿಗ್ರಾಮವು ಶ್ರೀ ಮಹಾವಿಷ್ಣುವಿನ ನಿರ್ಗುಣ ರೂಪವಾಗಿದೆ. ಪ್ರತಿಷ್ಠಾಪನೆ ಆಗುವ ಮೊದಲೂ ಶ್ರೀರಾಮ ಸಾಲಿಗ್ರಾಮದಲ್ಲಿ ಹೇರಳ ಪ್ರಮಾಣ ದಲ್ಲಿ ಸಕಾರಾತ್ಮಕ ಊರ್ಜೆಯಿತ್ತು. ಆದರೆ ಸ್ಥಳದ ಅಭಾವದಿಂದ ೨ ಸಾವಿರದ ೩೩೭ ಮೀಟರ್‌ಗಿಂತ ಹೆಚ್ಚು ಪ್ರಭಾವಲಯವಿದ್ದರೂ ಅದನ್ನು ಅಳೆಯಲು ಸಾಧ್ಯವಾಗಲಿಲ್ಲ. ಪ್ರತಿಷ್ಠಾಪನೆಯ ನಂತರ, ಹಾಗೆಯೇ ಅಭಿಷೇಕದ ನಂತರ ಶ್ರೀರಾಮ ಸಾಲಿಗ್ರಾಮದ ಚೈತನ್ಯದಲ್ಲಿ ತುಂಬಾ ಹೆಚ್ಚಳವಾಯಿತು. ಆದರೆ ಸ್ಥಳದ ಅಭಾವದಿಂದ ೨೩೩೭ ಮೀಟರಗಿಂತ ಪ್ರಭಾವಲಯ ಇದ್ದರೂ ಅದನ್ನು ಅಳೆಯಲು ಸಾಧ್ಯವಾಗಲಿಲ್ಲ (ಸಾಮಾನ್ಯ ವ್ಯಕ್ತಿ ಅಥವಾ ವಸ್ತುಗಳಲ್ಲಿ ಸಕಾರಾತ್ಮಕ ಊರ್ಜೆ ಇದ್ದೇ ಇರುತ್ತದೆ ಎಂದೇನಿಲ್ಲ. ಸಾತ್ತ್ವಿಕ ವ್ಯಕ್ತಿ ಅಥವಾ ವಸ್ತುವಿನ ಸಾತ್ತ್ವಿಕತೆಯ ಪ್ರಮಾಣಕ್ಕನುಸಾರ ಸಕಾರಾತ್ಮಕ ಊರ್ಜೆ ಕಂಡು ಬರುತ್ತದೆ.) ಈ ಸಂಶೋಧನೆಯಿಂದ ಸನಾತನದ ಆಶ್ರಮದಲ್ಲಿ ಪ್ರತಿಷ್ಠಾಪನೆ ಮಾಡಿದ ಶ್ರೀರಾಮ ಸಾಲಿಗ್ರಾಮದಲ್ಲಿ ಹೇರಳ ಪ್ರಮಾಣದಲ್ಲಿ ಚೈತನ್ಯವಿದೆ, ಎಂಬುದು ಗಮನಕ್ಕೆ ಬರುತ್ತದೆ. ಅದೇ ರೀತಿ ಶ್ರೀರಾಮ ಸಾಲಿಗ್ರಾಮದ ಆಧ್ಯಾತ್ಮಿಕ ಮಹತ್ವವೂ ಗಮನಕ್ಕೆ ಬರುತ್ತದೆ.

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೩.೩.೨೦೨೨)

ವಿ-ಅಂಚೆ : [email protected]