ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೆಸರಿನಲ್ಲಿ ವಂಚನೆ ! – ವಿಶ್ವ ಹಿಂದೂ ಪರಿಷತ್ತಿನಿಂದ ಪೊಲೀಸರಿಗೆ ದೂರು

ಲಕ್ಷ್ಮಣಪುರಿ (ಉತ್ತರಪ್ರದೇಶ) – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಹೆಸರಿನಲ್ಲಿ ಕ್ಯೂಆರ್ ಕೋಡ್ (‘ಕ್ವೀಕ್ ರೆಸ್ಪಾನ್ಸ್ ಕೋಡ್’ ಎಂದರೆ ಬಾರ್ ಕೊಡನಂತೆ ಇರುವ ಒಂದು ರೀತಿಯ ಸಾಂಕೇತಿಕ ಭಾಷೆ) ಮೂಲಕ ಅನೇಕರನ್ನು ವಂಚಿಸಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ತು ಉತ್ತರಪ್ರದೇಶದ ಪೊಲೀಸರಿಗೆ ದೂರು ನೀಡಿದೆ.

ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರರು ವಿನೋದ ಬನ್ಸಲ್ ಇವರು, ಕೆಲವು ಜನರು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೆಸರಿನಲ್ಲಿ ಯಾವುದೇ ಮಾನ್ಯತೆ ಪಡೆಯದೆ ಹಣ ಕೇಳುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಗೃಹ ಸಚಿವಾಲಯಕ್ಕೆ ಈ ಸಂದರ್ಭದಲ್ಲಿ ದೂರ ನೀಡಲಾಗಿದ್ದು ಅವರಿಂದ ತಕ್ಷಣ ಕ್ರಮ ಕೈಗೊಳ್ಳಲು ವಿನಂತಿಸಲಾಗಿದೆ. ಜನರಿಗೆ ಕ್ಯೂಆರ್ ಕೋಡ್ ಕಳುಹಿಸಿ ಮತ್ತು ಅದರ ಮೂಲಕ ಹಣ ಪಡೆದು ಜನರಿಗೆ ವಂಚಿಸಲಾಗುತ್ತಿದೆ, ಎಂದು ಹೇಳಿದರು.