ರಷ್ಯಾದಿಂದ ಉಕ್ರೇನಿನ ಮೇಲೆ ಎಲ್ಲಕ್ಕಿಂತ ದೊಡ್ಡ ದಾಳಿ ! 

೩೧ ಜನರ ಸಾವು ಹಾಗೂ ೧೨೦ ಜನರಿಗೆ ಗಾಯ !

ಮಾಸ್ಕೋ (ರಷ್ಯಾ) – ರಷ್ಯಾದಿಂದ ಡಿಸೆಂಬರ್ ೨೯ ರಂದು ಉಕ್ರೇನ ಮೇಲೆ ಮತ್ತೊಮ್ಮೆ ತೀವ್ರ ದಾಳಿ ನಡೆಸಿದೆ. ರಷ್ಯಾದಿಂದ ಉಕ್ರೇನ್ ಮೇಲೆ ಅನೇಕ ಕ್ಷಿಪಣಿಗಳು ಬಿಡಲಾಗಿದೆ. ಹಾಗೂ ಡ್ರೋನ್ ಮೂಲಕ ಅನೇಕ ನಗರಗಳ ಮೇಲೆ ದಾಳಿ ಮಾಡಲಾಗಿದೆ. ಉಕ್ರೇನ್ ನ ವ್ಯವಸ್ಥೆಯು ನೀಡಿರುವ ಮಾಹಿತಿ ಪ್ರಕಾರ ಯುದ್ಧದ ಆರಂಭದಿಂದ ರಷ್ಯಾದಿಂದ ನಡೆಸಲಾದ ಇದು ಎಲ್ಲಕ್ಕಿಂತ ದೊಡ್ಡ ದಾಳಿಯಾಗಿದೆ. ಈ ದಾಳಿಯಿಂದ ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೇನ್ ಇವರು ರಷ್ಯಾವನ್ನು ಖಂಡಿಸಿದ್ದಾರೆ. ವಿಶೇಷ ಎಂದರೆ ಅಮೇರಿಕಾದ ರಕ್ಷಣಾ ಸಚಿವಾಲಯದಿಂದ ಉಕ್ರೇನ್ ಗೆ ಬೃಹತ್ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಮತ್ತು ಇತರ ಸಹಾಯ ಮಾಡುವ ಘೋಷಣೆಯ ನಂತರ ರಷ್ಯಾದಿಂದ ಈ ದಾಳಿ ನಡೆದಿದೆ.

೧. ಈ ದಾಳಿಯ ಬಗ್ಗೆ ಜೋ ಬಾಯಡೆನ್ ಇವರು, ”ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ಉಕ್ರೇನ್ ಮೇಲೆ ಭೀಕರ ದಾಳಿ ಮಾಡಿರುವುದರಿಂದ ‘ಅದಕ್ಕೆ ಉಕ್ರೇನನ್ನು ಧ್ವಂಸ ಮಾಡುವುದಿದೆ’, ಎಂದು ಕಾಣುತ್ತಿದೆ. ಆದ್ದರಿಂದ ಪುತಿನ್ ಅವರನ್ನು ಈಗ ತಡೆಯುವ ಆವಶ್ಯಕತೆ ಇದೆ. ರಷ್ಯಾದಿಂದ ಬಿಡಲಾಗಿರುವ ಅನೇಕ ಕ್ಷಿಪಣಿಗಳು ಮತ್ತು ಡ್ರೋನ್ ಉಕ್ರೇನ್ ಗಾಳಿಯಲ್ಲೇ ನಾಶ ಮಾಡಿದೆ. ಅಮೇರಿಕಾ ಮತ್ತು ಸಹಯೋಗಿ ದೇಶಗಳಿಂದ ಉಕ್ರೇನಿಗೆ ಪೂರೈಸಲಾದ ವಾಯು ಸುರಕ್ಷಾ ವ್ಯವಸ್ಥೆಯನ್ನು ಯೋಗ್ಯ ಉಪಯೋಗ ಉಕ್ರೇನ್ ಮಾಡಿಕೊಂಡಿದೆ.” ಎಂದು ಹೇಳಿದರು.

೨. ಈ ದಾಳಿಯ ಬಗ್ಗೆ ಉಕ್ರೇನ್ ರಾಷ್ಟ್ರಾಧ್ಯಕ್ಷ ಝೆಲಕ್ಸಿ ಇವರು, ರಷ್ಯಾದಿಂದ ಈ ವರ್ಷದಲ್ಲಿ ಎಲ್ಲಕ್ಕಿಂತ ದೊಡ್ಡದಾಳಿ ಮಾಡಿದೆ. ಅದು ಉಕ್ರೇನ್ ಮೇಲೆ ಸುಮಾರು ೧೧೦ ಕ್ಷಿಪಣಿಗಳನ್ನು ಬಿಟ್ಟಿದೆ. ಈ ದಾಳಿಯಲ್ಲಿ ೩೧ ಜನರು ಸಾವನ್ನಪ್ಪಿದ್ದು ೧೨೦ ಜನರು ಗಾಯಗೊಂಡಿದ್ದಾರೆ.