ಭಾರತದ ೮ ಮಾಜಿ ನೌಕಾ ಸೈನಿಕರ ಗಲ್ಲು ಶಿಕ್ಷೆ ರದ್ದು ಪಡಿಸಿದ ಕತಾರ !

ನವ ದೆಹಲಿ – ಕತಾರದಲ್ಲಿ ಕಥಿತ ಬೇಹುಗಾರಿಕೆಯ ಪ್ರಕರಣದಲ್ಲಿ ಅಲ್ಲಿಯ ನ್ಯಾಯಾಲಯವು ಭಾರತದ ೮ ಮಾಜಿ ನೌಕಾ ಸೈನಿಕರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಅಲ್ಲಿಯ ನ್ಯಾಯಾಲಯವು ಈಗ ಅದನ್ನು ರದ್ದುಪಡಿಸಿ ಅವರಿಗೆ ಜೈಲು ಶಿಕ್ಷೆ ವಿಧಿಸಿದೆ. ಜೈಲು ಶಿಕ್ಷೆಯ ಕಾಲಾವಧಿ ಮಾತ್ರ ಇನ್ನು ಸ್ಪಷ್ಟವಾಗಿಲ್ಲ. ಕತಾರದ ಅಪಿಲ ನ್ಯಾಯಾಲಯವು ಈ ತೀರ್ಪು ನೀಡಿದೆ. ಈ ವಿಚಾರಣೆಯ ವೇಳೆ ಭಾರತದ ರಾಯಭಾರಿ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು. ಹಾಗೂ ಮಾಜಿ ಸೈನಿಕರ ಕುಟುಂಬದವರು ಕೂಡ ಉಪಸ್ಥಿತರಿದ್ದರು. ಭಾರತವು ಈ ಸೈನಿಕರಿಗೆ ಕಾನೂನು ರೀತಿ ಸಹಾಯ ದೊರೆಯುವುದಕ್ಕಾಗಿ ಒಂದು ಸಮಿತಿಯ ಸ್ಥಾಪನೆ ಕೂಡ ಮಾಡಿತ್ತು.

ಭಾರತೀಯ ವಿದೇಶಾಂಗ ಸಚಿವಾಲಯದಿಂದ ಇದರ ಸಂದರ್ಭದಲ್ಲಿ ಒಂದು ಲಿಖಿತ ಮನವಿ ಪ್ರಸಾರ ಮಾಡಿದೆ. ಇದರಲ್ಲಿ ಈ ವಿಚಾರಣೆಯ ಮಾಹಿತಿ ನೀಡಲಾಗಿದೆ. ಇದರಲ್ಲಿ, ಕತಾರದ ಅಪೀಲ ನ್ಯಾಯಾಲಯವು ‘ದಹರಾ ಗ್ಲೋಬಲ್’ ಮೊಕ್ಕದಮೆಯಲ್ಲಿ ಭಾರತದ ೮ ಮಾಜಿ ನೌಕಾ ಸೈನಿಕರಿಗೆ ಗಲ್ಲು ಶಿಕ್ಷೆ ಕಡಿಮೆ ಮಾಡಿದೆ. ನಿರ್ಣಯದ ವರದಿಯ ಪ್ರತಿಕ್ಷೆ ಇದೆ. ನಾವು ನಮ್ಮ ನಾಗರೀಕರ ಸುರಕ್ಷತೆಗಾಗಿ ಮೊದಲಿನಿಂದಲೂ ಬೆಂಬಲಕ್ಕೆ ಇದ್ದೇವೆ. ಮತ್ತು ಭವಿಷ್ಯದಲ್ಲಿ ಕೂಡ ಎಲ್ಲಾ ರೀತಿಯ ಸಹಾಯ ಮಾಡುವೆವು. ಇದಲ್ಲದೆ ನಾವು ಈ ಅಂಶಗಳ ಬಗ್ಗೆ ಕತಾರದ ಜೊತೆಗೆ ಚರ್ಚೆ ಮುಂದುವರೆಸುವೆವು ಎಂದು ಹೇಳಿದೆ.

ಕತಾರದ ಬೆಹುಕಾರ ಸಂಸ್ಥೆಯ ರಾಜ್ಯ ಸುರಕ್ಷಾ ಇಲಾಖೆಯಿಂದ ಆಗಸ್ಟ್ ೩೦, ೨೦೨೨ ರಲ್ಲಿ ಈ ಮಾಜಿ ಸೈನಿಕರನ್ನು ಬಂಧಿಸಿದ್ದು ಮತ್ತು ಇದರ ಮಾಹಿತಿ ಭಾರತೀಯ ರಾಯಭಾರಿ ಕಚೇರಿಗೆ ಸಪ್ಟೆಂಬರ್ ೧೫ ರ ನಂತರ ನೀಡಿತ್ತು. ಕ್ಯಾಪ್ಟನ್ ನವತೇಜ ಸಿಂಹ ಗಿಲ, ಕ್ಯಾಪ್ಟನ್ ಸೌರಭ ವಸಿಷ್ಠ, ಕ್ಯಾಪ್ಟನ್ ವೀರೇಂದ್ರ ಕುಮಾರ್ ವರ್ಮ, ಕಮಾಂಡರ್ ಪೂರ್ಣೆಂದು ತಿವಾರಿ, ಕಮಾಂಡರ್ ಸುಗನಾಕರ ಪಕಾಲ, ಕಮಾಂಡರ್ ಸಂಜೀವ ಗುಪ್ತ, ಕಮಾಂಡರ್ ಅಮಿತ ನಾಗಪಾಲ ಮತ್ತು ನಾವಿಕ ರಾಗೇಶ ಎಂದು ಈ ಮಾಜಿ ಸೈನಿಕರ ಹೆಸರುಗಳಾಗಿವೆ.