೧. ನಾಮಜಪಕ್ಕಿಂತ ಸಮಷ್ಟಿ ಸೇವೆಗೆ ಹೆಚ್ಚು ಮಹತ್ವವಿರುವುದರಿಂದ ಸೇವೆಯನ್ನು ಮಾಡುವಾಗ ಈಶ್ವರನ ಸ್ಮರಣೆ ಹೆಚ್ಚಾಗುತ್ತದೆ !
ಆಧುನಿಕ ವೈದ್ಯೆ (ಸೌ.) ಸಂಗೀತಾ ಚೌಧರಿ : ಗುರುದೇವರೇ, ನಾನು ಈಗ ಉಪಾಯವೆಂದು ೩-೪ ಗಂಟೆಗಳ ಕಾಲ ನಾಮಜಪವನ್ನು ಮಾಡಲು ಕುಳಿತುಕೊಳ್ಳುತ್ತೇನೆ; ಆದರೆ ನನಗೆ ಸೇವೆಯ ಮೂಲಕ ಈಶ್ವರನ ಅನುಸಂಧಾನದಲ್ಲಿರಲು ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ನನ್ನಿಂದ ನಾಮಜಪವನ್ನು ಮಾಡುವಾಗ ಈಶ್ವರನ ಅನುಸಂಧಾನದಲ್ಲಿರಲು ಅಥವಾ ಈಶ್ವರನನ್ನು ಅನುಭವಿಸಲು ಆಗುವುದಿಲ್ಲ. ಸೇವೆಯನ್ನು ಮಾಡುವಾಗ ನನಗೆ ಈಶ್ವರನ ಸ್ಮರಣೆ ಹೆಚ್ಚಾಗುತ್ತದೆ ಮತ್ತು ‘ಸೇವೆಯ ಮಾಧ್ಯಮದಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ’, ಎಂದು ಸಹ ನನಗೆ ಅರಿವಾಗುತ್ತದೆ. ಈ ಪ್ರಕ್ರಿಯೆ ಹೇಗಿದೆ ?
ಪರಾತ್ಪರ ಗುರು ಡಾ. ಆಠವಲೆ : ‘ನಾಮ, ಸತ್ಸಂಗ ಮತ್ತು ಸತ್ಸೇವೆ…’, ಹೀಗೆ ಸಾಧನೆಯ ಸ್ತರಗಳಿವೆ. ಸೇವೆಯು ಮುಂದಿನ ಮೆಟ್ಟಿಲಾಗಿದೆ. ಹೊಸ ಸಾಧಕರಿಗೆ ‘ನಾಮಜಪವನ್ನು ಮಾಡಿರಿ’, ಎಂದು ಹೇಳಲಾಗುತ್ತದೆ. ಸಮಷ್ಟಿ ಸೇವೆಯನ್ನು ಮಾಡುವುದರಿಂದ ಎಷ್ಟೋ ಪಟ್ಟುಗಳಲ್ಲಿ ಲಾಭವಾಗುತ್ತದೆ, ಉದಾ. ವ್ಯಷ್ಟಿ ಸಾಧನೆಯಿಂದ ಶೇ. ೨೫ ರಷ್ಟು ಲಾಭವಾದರೆ, ಸಮಷ್ಟಿ ಸಾಧನೆಯಿಂದ ಶೇ. ೭೫ ರಷ್ಟು ಲಾಭವಾಗುತ್ತದೆ. ಆದುದರಿಂದ ಇಂತಹ ಅನುಭೂತಿ ಬರುತ್ತದೆ.
೨. ಸಾಧಕನು ಆಶ್ರಮದಲ್ಲಿ ೧೨ ವರ್ಷಗಳ ಕಾಲ ಶಾರೀರಿಕ ಸೇವೆಯನ್ನು ಮಾಡಿದುದರಿಂದ ಅವನ ಸಾಧನೆಯ ಅಡಿಪಾಯ ಗಟ್ಟಿಯಾಯಿತು !
ಶ್ರೀ. ಜ್ಞಾನೇಶ್ವರ ಗಾವಡೆ : ನಾನು ಆಶ್ರಮಕ್ಕೆ ಬಂದು ೧೨ ವರ್ಷಗಳಾದವು; ಆದರೆ ‘ನನ್ನಲ್ಲಿ ಇಂದಿಗೂ ಯಾವುದೇ ಬದಲಾವಣೆಯಾಗಿಲ್ಲ’, ಎಂದು ನನಗೆ ಅನಿಸುತ್ತದೆ. ನನ್ನ ಮನಸ್ಸಿನಲ್ಲಿ ವಿಚಾರಗಳು ಬರುತ್ತಿರುತ್ತವೆ ಮತ್ತು ನನ್ನಿಂದ ಸಾಧನೆಯ ಪ್ರಯತ್ನಗಳು ಅಂತಮುರ್ಖತೆಯಿಂದ ಆಗುವುದಿಲ್ಲ.
ಪರಾತ್ಪರ ಗುರು ಡಾ. ಆಠವಲೆ : ೧೨ ವರ್ಷಗಳ ಕಾಲ ಆಶ್ರಮದಲ್ಲಿ ಇದ್ದೀರಿ. ‘ಇಲ್ಲಿಂದ ಮನೆಗೆ ಹೋಗಬೇಕು ಮತ್ತು ನೌಕರಿ ಅಥವಾ ಉದ್ಯೋಗವ್ಯಾಪಾರ ಮಾಡಬೇಕು’, ಎಂಬ ವಿಚಾರ ನಿಮ್ಮ ಮನಸ್ಸಿನಲ್ಲಿ ನಡುನಡುವೆ ಬರುತ್ತದೆಯೇ ?
ಶ್ರೀ. ಜ್ಞಾನೇಶ್ವರ ಗಾವಡೆ : ಅಂತಹ ವಿಚಾರಗಳು ನನ್ನ ಮನಸ್ಸಿನಲ್ಲಿ ಬರುವುದಿಲ್ಲ.
ಪರಾತ್ಪರ ಗುರು ಡಾ. ಆಠವಲೆ : ಆಶ್ರಮದಲ್ಲಿದ್ದು ಕಟ್ಟಡ ಕಾಮಗಾರಿಯ ಸೇವೆಯನ್ನು ಮಾಡುತ್ತಿದ್ದಿಯಾ. ಅದರಿಂದ ನಿನ್ನ ಶರೀರದ ಸಾಧನೆಯಾಯಿತು. ನೀನು ಶರೀರವನ್ನು ಅರ್ಪಿಸಿರುವೆ ಮತ್ತು ಶರೀರದ ತ್ಯಾಗ ಮಾಡಿರುವೆ. ಅನಂತರ ಮನಸ್ಸಿನ ತ್ಯಾಗವಾಗಲು ಅಖಂಡ ನಾಮಜಪವಾಗಬೇಕಾಗುತ್ತದೆ. ಅದಕ್ಕಾಗಿ ಮನಸ್ಸಿಗೆ ಸ್ವಯಂಸೂಚನೆ ಗಳನ್ನು ಕೊಡಬೇಕಾಗುತ್ತದೆ. ಇದು ಮುಂದಿನ ಹಂತವಾಗಿದೆ. ಅದು ೧-೨ ವರ್ಷಗಳಲ್ಲಿ ಆಗಬಹುದು. ತನು, ಮನ ಮತ್ತು ಬುದ್ಧಿ ಮತ್ತು ಅನಂತರ ಚಿತ್ತ ಹಾಗೂ ಅಂತರ್ಮನ ! ಹಂತಹಂತವಾಗಿ ಮುಂದೆ ಹೋಗಬೇಕು. ಅಖಂಡ ನಾಮಜಪ ಮತ್ತು ಅಖಂಡ ಸೇವೆಯನ್ನು ಮಾಡಿದರೆ, ನಿನ್ನ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ. ನೀನು ೧೨ ವರ್ಷ ಶಾರೀರಿಕ ಸೇವೆಯನ್ನು ಮಾಡಿರುವೆ, ಇದು ಅತ್ಯಂತ ಮಹತ್ವದ್ದಾಗಿದೆ. ಅದರಿಂದ ‘ಸಾಧನೆಯ ಅಡಿಪಾಯ ಗಟ್ಟಿಯಾಯಿತು’, ಎಂದು ತಿಳಿ ! ಸ್ವಲ್ಪವೂ ಚಿಂತಿಸಬೇಡ. ಬೇಗನೆ ಮುಂದೆ ಹೋಗುವೆ. ಇನ್ನೇನು ಬೇಕು ?
ಶ್ರೀ. ಜ್ಞಾನೇಶ್ವರ ಗಾವಡೆ : ಏನೂ ಬೇಡ ಗುರುದೇವಾ !
ಪರಾತ್ಪರ ಗುರು ಡಾ. ಆಠವಲೆ : ಚೆನ್ನಾಗಿದೆ !
೩. ಸಂತಸೇವೆಯನ್ನು ಮಾಡುವಾಗ ಸಂತರು ಏನು ಹೇಳುತ್ತಾರೆಯೋ, ಅದರ ಆಜ್ಞಾಪಾಲನೆ ಮಾಡುವುದು ಮಹತ್ವದ್ದಾಗಿರುತ್ತದೆ !
ಕು. ಗುಲಾಬಿ ಧುರಿ : ಕೆಲವೊಮ್ಮೆ ಪೂ. ಅಜ್ಜಿಯವರು (ಸನಾತನ ಸಂಸ್ಥೆಯ ೮೬ ನೇ ಸಂತರಾದ ಪೂ. (ದಿ.) ಶ್ರೀಮತಿ ಶಾಲಿನಿ ಮಾಯೀಣಕರ ಅಜ್ಜಿ) ಧ್ಯಾನಾವಸ್ಥೆಯಲ್ಲಿ ಇರುತ್ತಾರೆ. ಅವರಿಗೆ ಊಟ ಮಾಡಿಸುವುದಿರುತ್ತದೆ, ಆಗ ನಾನು ಅವರಿಗೆ, “ಇದೆಲ್ಲವನ್ನೂ ನೀವು ಊಟ ಮಾಡಿ ಮುಗಿಸಬೇಕು”, ಎಂದು ಹೇಳುತ್ತೇನೆ. ಕೆಲವೊಮ್ಮೆ ಅವರು ಬಾಯಿ ತೆರೆಯುತ್ತಾರೆ. ನಾನು ಅವರ ಬಾಯಿಯಲ್ಲಿ ತುತ್ತು ಹಾಕುತ್ತೇನೆ; ಆದರೆ ಅವರು ತಿನ್ನುವುದಿಲ್ಲ. ಆ ಸಮಯದಲ್ಲಿ ‘ಏನು ಮಾಡಬೇಕು ?’, ಎಂಬ ಪ್ರಶ್ನೆ ಬರುತ್ತದೆ. ಅವರಿಗೆ ಈ ರೀತಿ ಮೇಲಿಂದ ಮೇಲೆ ಹೇಳಬೇಕಾಗುತ್ತದೆ. ಅವರ ಸ್ಥಿತಿಯ ಬಗ್ಗೆ ನನಗೆ ವಿವರಿಸಲು ಬರುವುದಿಲ್ಲ. ಆ ಸಮಯದಲ್ಲಿ ನಾನೇನು ಮಾಡಬೇಕು ?
ಪರಾತ್ಪರ ಗುರು ಡಾ. ಆಠವಲೆ : ಅವರು ಸಂತರಾಗಿದ್ದಾರಲ್ಲ ! ಅವರು ‘ಊಟ ಮಾಡುವುದಿಲ್ಲ’, ಎಂದು ಹೇಳಿದರೆ ಅವರಿಗೆ ಊಟವನ್ನು ಕೊಡಬಾರದು.
ಕು. ಗುಲಾಬಿ ಧುರಿ : ಒಂದು ಸಲ ನಾನು ಹಾಗೆ ಮಾಡಿದ್ದೆ. ಅವರಿಗೆ ಊಟ ಬೇಕಾಗಿರಲಿಲ್ಲ. ‘ಅವರಿಗೆ ಮಲಗುವುದಿತ್ತು, ಆದುದರಿಂದ ಮಲಗಲು ಬಿಡಬೇಕು’, ಎಂದು ವಿಚಾರ ಮಾಡಿದೆನು. ಆಗ ಅವರು ಮಲಗಿದರು.
ಪರಾತ್ಪರ ಗುರು ಡಾ. ಆಠವಲೆ : ಸರಿ ಇದೆ, ಸಂತರು ಧ್ಯಾನಾವಸ್ಥೆಯಲ್ಲಿದ್ದರೆ, ಅವರನ್ನು ಎಬ್ಬಿಸಲು ಪ್ರಯತ್ನಿಸ ಬಾರದು. ಒಂದು ಸಲ ಅವರನ್ನು ಸ್ಪರ್ಶಿಸಿ, “ಪೂ ಅಜ್ಜಿ, ಊಟ ಮಾಡುವಿರಾ ?” ಎಂದು ಕೇಳಬೇಕು. ಅವರು ಏನೂ ಉತ್ತರ ಕೊಡದಿದ್ದರೆ, ಬಿಟ್ಟು ಬಿಡಬೇಕು. ಕೆಲವು ಗಂಟೆಗಳ ನಂತರ ಪುನಃ ಕೇಳಬೇಕು.’ (ಸೆಪ್ಟೆಂಬರ್ ೨೦೨೦)