ವಾಂತಿ (Vomiting) ಈ ಕಾಯಿಲೆಗಾಗಿ ಹೋಮಿಯೋಪಥಿ ಔಷಧಗಳ ಮಾಹಿತಿ

ಮನೆಯಲ್ಲಿಯೆ ಮಾಡಬಹುದಾದ ‘ಹೋಮಿಯೋಪಥಿ ಉಪಚಾರ !, (ಲೇಖನಮಾಲೆ ೧೩) !

ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ. ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿಯೇ ಈ ಚಿಕಿತ್ಸೆಯನ್ನು ಹೇಗೆ ಮಾಡಬಹುದು ? ಹೋಮಿಯೋಪತಿ ಔಷಧಿಗಳನ್ನು ಯಾವ ರೀತಿ ತಯಾರಿಸಬೇಕು ? ಅವುಗಳನ್ನು ಹೇಗೆ ಸಂಗ್ರಹಿಸಬೇಕು ? ಇಂತಹ ವಿಷಯಗಳ ಮಾಹಿತಿಯನ್ನು ಈ ಲೇಖನದಲ್ಲಿ ಕೊಡುತ್ತಿದ್ದೇವೆ.

ಸಂಕಲನಕಾರರು : ಹೋಮಿಯೋಪಥಿ ಡಾ. ಪ್ರವೀಣ ಮೆಹತಾ, ಡಾ. ಅಜಿತ ಭರಮಗುಡೆ ಮತ್ತು ಡಾ. (ಸೌ.) ಸಂಗೀತಾ ಭರಮಗುಡೆ.

ಡಾ. ಪ್ರವೀಣ ಮೆಹೆತಾ

ಹೊಟ್ಟೆಯಲ್ಲಿನ ಆಹಾರ ತಾನಾಗಿಯೇ ಬಾಯಿಯಿಂದ ರಭಸದಿಂದ ಹೊರಗೆ ಬರುವುದು, ಇದಕ್ಕೆ ‘ವಾಂತಿಯಾಗುವುದು’, ಎನ್ನುತ್ತಾರೆ. ಸಾಮಾನ್ಯವಾಗಿ ಹೊಟ್ಟೆಯ ಕ್ಷಮತೆಗಿಂತ ಹೆಚ್ಚು ಊಟ ಮಾಡುವುದು, ಹಳಸಿದ (ದೂಷಿತ) ಆಹಾರವನ್ನು ಸೇವಿಸುವುದು ಇತ್ಯಾದಿಗಳಿಂದ ವಾಂತಿಯಾಗುತ್ತದೆ. ವಾಂತಿಯು ಹೊಟ್ಟೆಯಲ್ಲಿನ ತೊಂದರೆ ದಾಯಕ ಘಟಕಗಳನ್ನು ಹೊರಗೆ ಹಾಕುವ ನೈಸರ್ಗಿಕ ಪ್ರಕ್ರಿಯೆ ಆಗಿದೆ. ವಾಕರಿಕೆಯು ವಾಂತಿಯ ಮೊದಲಿನ ಲಕ್ಷಣವಾಗಿದೆ. ಅತಿಯಾಗಿ ಆಹಾರವನ್ನು ಸೇವಿಸುವುದು, ಇಂತಹ ಕಾರಣದಿಂದ ವಾಂತಿಯಾದರೆ ಅದಕ್ಕೆ ಔಷಧ ತೆಗೆದುಕೊಳ್ಳುವುದರ ಅವಶ್ಯಕತೆಯಿಲ್ಲ. ಆಹಾರವನ್ನು ತೆಗೆದು ಕೊಳ್ಳದಿರುವುದು ಅಥವಾ ಕಡಿಮೆ ಊಟ ಮಾಡುವುದು; ಎಣ್ಣೆಯ, ಮಸಾಲೆಯುಕ್ತ ಪದಾರ್ಥ, ಕಾಫಿ ಇತ್ಯಾದಿ ಸೇವಿಸದಿರುವುದು, ಇದರಿಂದ ಹೊಟ್ಟೆಗೆ ವಿಶ್ರಾಂತಿ ಕೊಡುವುದಷ್ಟೆ ಸಾಕಾಗುತ್ತದೆ. ಅದರ ಜೊತೆಗೆ ವಾಂತಿ ನಿಂತ ಮೇಲೆ ೨ ಗಂಟೆಯ ನಂತರ ನೀರು, ಸೌಮ್ಯ ಪಾನೀಯ (ಸೂಪ್) ಹಾಗೂ ಹಣ್ಣುಗಳ ರಸವನ್ನು ಸೇವಿಸಬಹುದು. ವಾಂತಿ ಯಾವುದೇ ವಿಶಿಷ್ಟ ಕಾಯಿಲೆಯಿಂದ, ಉದಾ. ಅರೆತಲೆನೋವು (migಡಿಚಿiಟಿe), ಮೂತ್ರಪಿಂಡದ ಕಾಯಿಲೆ ಇತ್ಯಾದಿಗಳಿಂದ ಆಗುತ್ತಿದ್ದರೆ, ಆಯಾ ಕಾಯಿಲೆಗೆ ವಿಶಿಷ್ಟ ಚಿಕಿತ್ಸೆ ಮಾಡಬೇಕಾಗುತ್ತದೆ. ವಾಂತಿಯಾಗುವುದು, ಈ ಲಕ್ಷಣದ ಹೊರತು ಯಾವುದಾದರೂ ವಿಶಿಷ್ಟ ಲಕ್ಷಣಗಳಿದ್ದರೆ ಆ ಔಷಧವನ್ನು ತೆಗೆದುಕೊಳ್ಳಬೇಕು, ಆ ಲಕ್ಷಣಗಳನ್ನು ಹೋಮಿಯೋಪತಿ ಔಷಧಗಳ ಮುಂದೆ ಕೊಡಲಾಗಿದೆ.

೧. ಹೋಮಿಯೋಪಥಿ ಔಷಧಗಳು

ಡಾ. ಅಜಿತ್ ಭರ್ಮಗುಡೆ

೧ ಅ. ಇಪಿಕ್ಯಾಕುಆನ್ಹಾ (Ipecacuanha)

೧. ಆಹಾರದಲ್ಲಿ ಬದಲಾವಣೆಯಾದಾಗ ಹೊಟ್ಟೆಯ ತೊಂದರೆಗಳು ಆರಂಭವಾಗುವುದು, ಪ್ರತಿಯೊಂದು ತೊಂದರೆಯ ಜೊತೆಗೆ ವಾಕರಿಕೆ ಹಾಗೂ ಒಣ ತೇಗು ಬರುವುದು

೨. ಬಾಯಿಯಲ್ಲಿ ತುಂಬಾ ಲಾಲಾರಸ (ಜೊಲ್ಲು) ಸಂಗ್ರಹವಾಗುವುದು

೩. ವಾಂತಿ ಆದನಂತರ ಆರಾಮ ಅನಿಸದಿರುವುದು

೪. ನಾಲಿಗೆಯ ಮೇಲೆ ಯಾವುದೇ ಪದರು ಇಲ್ಲದಿರುವುದು

೧ ಆ. ಆರ್ಸೆನಿಕಮ್ ಆಲ್ಬಮ್ (Arsenicum Album)

೧. ಎದೆಯಲ್ಲಿ ಉರಿಯುವುದು

೨. ಆಹಾರದ ವಾಸನೆ ಸಹನೆ ಯಾಗದಿರುವುದು

೩. ವಾಂತಿಯ ಮೂಲಕ ಆಹಾರ ಮತ್ತು ಪಿತ್ತ ಹೊರಗೆ ಬರುವುದು

೪. ಸತತವಾಗಿ ಸ್ವಲ್ಪಸ್ವಲ್ಪ ನೀರು ಕುಡಿಯುತ್ತಾ ಇರುವುದು

ಡಾ. ಸೌ. ಸಂಗೀತಾ

೧ ಇ. ಫಾಸ್ಫೋರಸ್ (Phosphorus) : ವಾಕರಿಕೆ ಬರುತ್ತಿರುವಾಗ ತಣ್ಣೀರು ಕುಡಿಯಬೇಕೆಂದು ಅನಿಸುವುದು, ತಣ್ಣೀರು ಕುಡಿದಾಗ ವಾಕರಿಕೆ ಕಡಿಮೆ ಆಗುವುದು; ಆದರೆ ಕೆಲವು ನಿಮಿಷಗಳಲ್ಲಿಯೆ ಹೊಟ್ಟೆಯಲ್ಲಿ ಉರಿಯಾಗಿ ತಕ್ಷಣ ವಾಂತಿಯಾಗುವುದು

೧ ಈ. ಎಂಟಿಮೊನಿಯಮ್ ಕ್ರೂಡಮ್ (Antimonium Crudum)

೧. ಅತಿಯಾಗಿ ತಿನ್ನುವುದು ಅಥವಾ ಜೀರ್ಣವಾಗಲು ಜಡವಾಗಿರುವ ಪದಾರ್ಥಗಳನ್ನು ತಿನ್ನುವುದು, ಬಿಸಿಲಿನ ತಾಪ ಹೆಚ್ಚಾದ ಕಾರಣ ವಾಂತಿಯಾಗುವುದು

೨. ಆಹಾರ ಅಥವಾ ಪಾನೀಯವನ್ನು ಸೇವಿಸಿದ ನಂತರ ತಕ್ಷಣ ವಾಂತಿ ಆಗುವುದು

೩. ನಾಲಿಗೆಯ ಮೇಲೆ ದಪ್ಪ ಬಿಳಿ ಪದರು ಬಂದಿರುವುದು

೧ ಉ. ಎಥುಸಾ ಸಿನಾಪಿಯಮ್ (Aethusa Cynapium) : ಚಿಕ್ಕ ಮಕ್ಕಳಲ್ಲಿ ಹಾಲು ಕುಡಿದನಂತರ ತಕ್ಷಣ ವಾಂತಿ ಯಾಗುವುದು, ಮಗುವಿಗೆ ಆಯಾಸವಾಗುವುದು

೧ ಊ. ಕಾಕ್ಯುಲಸ್ ಇಂಡಿಕಸ್ (Cocculus Indicus) : ಯಾವುದೇ ಮಾರ್ಗದಿಂದ (ರಸ್ತೆ, ಸಮುದ್ರ, ಆಕಾಶ ಮಾರ್ಗ) ಪ್ರವಾಸ ಮಾಡುವುದರಿಂದ (moಣioಟಿ siಛಿಞಟಿess) ವಾಂತಿಯಾಗುವುದು

೨. ಹನ್ನೆರಡುಕ್ಷಾರ ಔಷಧಗಳು

ನೆಟ್ರಮ್ ಫಾಸ್ಫೋರಿಕಮ್ ( Natrum Phosphoricum) : ವಾಕರಿಕೆ ಹಾಗೂ ವಾಂತಿಯಾಗುವುದು

‘ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪತಿ’ ಉಪಾಯ !’ 

ಈ ಮುಂಬರುವ ಗ್ರಂಥದಲ್ಲಿನ ಆಯ್ದ ಭಾಗಗಳನ್ನು ಪ್ರತಿ ವಾರದ ಸಂಚಿಕೆಯಲ್ಲಿ ಲೇಖನಗಳ ಸ್ವರೂಪದಲ್ಲಿ  ಪ್ರಕಟಿಸಲಾಗುತ್ತಿದೆ. ಆದರೂ ಸ್ವಉಪಾಯದ ದೃಷ್ಟಿಯಿಂದ ಸಾಧಕರು, ವಾಚಕರು, ರಾಷ್ಟ್ರ-ಧರ್ಮಪ್ರೇಮಿಗಳು, ಹಿತಚಿಂತಕರು, ಅರ್ಪಣೆದಾರರು ಈ ಲೇಖನಗಳನ್ನು  ಆಪತ್ಕಾಲದ ದೃಷ್ಟಿಯಿಂದ ಸಂಗ್ರಹಿಸಿ ಇಡಬೇಕು. ಆಪತ್ಕಾಲದಲ್ಲಿ ಡಾಕ್ಟರರು, ವೈದ್ಯರು ದೊರಕದಿದ್ದರೆ, ಅಂತಹ ಸಮಯದಲ್ಲಿ ಈ ಲೇಖನಗಳನ್ನು ಓದಿ ತಮ್ಮ ಮೇಲೆ ಉಪಾಯ ಮಾಡಿಕೊಳ್ಳಬಹುದು.