ಜೋ ಬಾಯಡೆನ ಇವರು ಹಿಂದುಗಳ ಬೆಂಬಲ ಪಡೆಯುವುದಕ್ಕಾಗಿ ಪ್ರಯತ್ನಿಸುವುದು ಆವಶ್ಯಕ !

  • ಮೇ ದಿಂದ ಸೆಪ್ಟೆಂಬರ್ ೨೦೨೪ ರಲ್ಲಿ ಅಮೆರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನದ ಚುನಾವಣೆ !

  • ಡೆಮಾಕ್ರಟಿಕ್ ಪಕ್ಷದ ವರದಿಯಲ್ಲಿನ ಮಾಹಿತಿ

ನ್ಯೂಯಾರ್ಕ್ (ಅಮೇರಿಕಾ) – ಅಮೇರಿಕಾದಲ್ಲಿ ಮುಂದಿನ ವರ್ಷ ನಡೆಯುವ ರಾಷ್ಟ್ರಾಧ್ಯಕ್ಷ ಸ್ಥಾನದ ಚುನಾವಣೆಗಾಗಿ ನಾಗರಿಕರ ವಿಚಾರಗಳ ಅಧ್ಯಯನ ಮಾಡಲಾಗುತ್ತದೆ. ಒಂದು ಕಡೆ ಜೋ ಬಾಯಡೆನ ಇವರು ಹಮಾಸ್ ಇಸ್ರೇಲ್ ಯುದ್ಧದಲ್ಲಿ ಇಸ್ರೇಲಿಗೆ ಬಹಿರಂಗವಾಗಿ ಬೆಂಬಲ ನೀಡಿರುವುದರಿಂದ ಅಮೆರಿಕ ಮುಸಲ್ಮಾನರು ಅವರ ಮೇಲೆ ಮುನಿಸಿಕೊಂಡಿದ್ದಾರೆ ಹಾಗೂ ಇನ್ನೊಂದು ಕಡೆಗೆ ಯುಕ್ರೇನ್ ರಷ್ಯಾದ ಯುದ್ಧದಲ್ಲಿ ಅಮೇರಿಕಾದ ನಿಲುವಿನ ಪರಿಣಾಮ ಕೂಡ ಚುನಾವಣೆಯ ಮೇಲೆ ಆಗಬಹುದು. ಈ ಮಾಹಿತಿ ಡೆಮೊಕ್ರಟಿಕ್ ಪಕ್ಷದ ಆಂತರಿಕ ವರದಿಯಲ್ಲಿ ನೀಡಲಾಗಿದೆ.

ಈ ವರದಿಯ ಪ್ರಕಾರ ವಿಸ್ಕಾನ್ಸಿನ್ , ಜಾರ್ಜಿಯ, ಪೆನ್ಸಿಲ್ವೇನಿಯ ಮತ್ತು ಏರಿಜ್ಹೊನ್ ಈ ೪ ರಾಜ್ಯಗಳಲ್ಲಿನ ಹಿಂದುಗಳು ಮಹತ್ವದ ಸ್ಥಾನ ಪಡೆದಿದ್ದಾರೆ. ಬಾಯಡೆನ ಇವರಿಗೆ ೫೦ ಕೋಟಿ ಡಾಲರ್ (ಅಂದಾಜು ೪ ಸಾವಿರದ ೧೦೦ ಕೋಟಿ ರೂಪಾಯಿ) ಜಮೆ ಮಾಡುವುದಿದೆ. ಇದರಲ್ಲಿ ಕೂಡ ಹಿಂದುಗಳು ಮುಂದೆ ಇರುವರು. ಹಿಂದೂ ಸಾಂಪ್ರದಾಯಿಕ ದೃಷ್ಟಿಯಿಂದ ಡೆಮೊಕ್ರಟಿಕ್ ಪಕ್ಷದ ಬೆಂಬಲಿಗರೆಂದು ತಿಳಿಯಲಾಗುತ್ತದೆ; ಆದರೆ ಕಳೆದ ಕೆಲವು ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಪರವಾಗಿ ಅವರು ವಾಲುತ್ತಿದ್ದಾರೆ. ಡೆಮಾಕ್ರಟಿಕ್ ಸೆನೆಟೋರಿಯಲ್ ಅಭಿಯಾನ ಸಮಿತಿಯ ವಕ್ತಾರರು ಟಾಮಿ ಗಾರ್ಸಿಯ ಇವರು, ಸ್ವತಃ ಪ್ರಧಾನಮಂತ್ರಿ ಮೋದಿ ಇವರಿಗೆ ತಮ್ಮ ಸ್ನೇಹಿತರೆಂದು ಹೇಳಿ ವಿವಿಧ ಮರೆಮಾಚುವಿಕೆ ನಡೆಸಿ ಡೊನಾಲ್ಡ್ ಟ್ರಂಪ್ ಇವರು ಕೆಲವು ಭಾರತೀಯರ ಮತಗಳನ್ನು ಗಳಿಸುವಲ್ಲಿ ಯಶಸ್ಸು ಪಡೆದಿದ್ದಾರೆ, ಹೀಗೆ ಇದ್ದರೂ ಕೂಡ ಡೆಮಾಕ್ರಟಿ ಪಕ್ಷ ಯಾವಾಗಲೂ ಹಿಂದುಗಳ ಬೆಂಬಲಕ್ಕೆ ಮಹತ್ವ ನೀಡುತ್ತಿದೆ. ಅವರು ನಮಗಾಗಿ ಮಹತ್ವದವರಾಗಿದ್ದಾರೆ ಎಂದು ನಂಬಲಾಗಿದೆ. ಈ ದೃಷ್ಟಿಕೋನದಿಂದ ೨೦೨೪ ರ ಸಾರ್ವತ್ರಿಕ ಚುನಾವಣೆಯ ಮೊದಲು ಬಾಯಡೆನ್ ಇವರು ಹಿಂದುಗಳ ಜೊತೆಗೆ ಸಂಪರ್ಕಿಸುವುದು ಆವಶ್ಯಕವಾಗಿದೆ.

ಇನ್ನೊಂದು ಕಡೆಗೆ ‘ಅಮೇರಿಕಾದ ಉಪರಾಷ್ಟ್ರಾಧ್ಯಕ್ಷ ಕಮಲ ಹ್ಯಾರಿಸ್ ಇವರು ಜಾರ್ಜಿಯ ಮತ್ತು ಹ್ವರ್ಜಿನಿಯ ಈ ರಾಜ್ಯದಲ್ಲಿನ ಹಿಂದೂ ವಿರೋಧಿ ನಿಲುವು ಸುಧಾರಿಸುವುದಕ್ಕಾಗಿ ದೇವಸ್ಥಾನಗಳಿಗೆ ಭೇಟಿ ನೀಡುವುದು ಆವಶ್ಯಕವಾಗಿದೆ ಎಂದು ಕ್ಯಾಲಿಫೋರ್ನಿಯದಲ್ಲಿನ ಓರ್ವ ಡೆಮೋಕ್ರಟಿಕ್ ಮುಖಂಡರು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಅಮೇರಿಕಾದಲ್ಲಿನ ಕೋಟ್ಯಾಂತರ ಹಿಂದುಗಳು ಈಗ ತಮ್ಮ ಮತದ ಮಹತ್ವ ತಿಳಿದು ಪ್ರಭಾವಿ ಗುಂಪುಒತ್ತಡ ನಿರ್ಮಾಣ ಮಾಡುವುದು ಆವಶ್ಯಕ ! ‘ಖಲಿಸ್ತಾನಿ ಪ್ರವೃತ್ತಿಯಗಳಿಗೆ ಮಣ್ಣುಮುಕ್ಕಿಸುವುದಿದ್ದರೆ ಮತ್ತು ಭಾರತದ ಜೊತೆಗೆ ಒಳ್ಳೆಯ ಸಂಬಂಧ ಪ್ರಸ್ತಾಪಿಸುವ ನೀತಿಯನ್ನು ಅಂಗೀಕರಿಸುವ ಪಕ್ಷಕ್ಕೆ ಬೆಂಬಲ ನೀಡುವೆವು ಎಂದು ಅಮೇರಿಕಾದಲ್ಲಿನ ಹಿಂದುಗಳು ಮತ್ತು ರಿಪಬ್ಲಿಕ್ ಪಕ್ಷಗಳಿಗೆ ದೃಢವಾಗಿ ಹೇಳಬೇಕು.